Kabzaa–Tirupati: 'ಕಬ್ಜ' ಬಿಡುಗಡೆಗೂ ಮುನ್ನ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದ ಉಪ್ಪಿ,ಚಂದ್ರು!

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ನಾಳೆ (ಮಾರ್ಚ್ 17) ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ. ಈಗಾಗಲೇ ಸಿನಿಮಾ ಬಗ್ಗೆ ಅಂದುಕೊಂಡಂತೆ ಭರ್ಜರಿ ಪ್ರಚಾರವನ್ನೂ ಮಾಡಲಾಗಿದೆ. ಇನ್ನೇನು ಸಿನಿಮಾ ಬಿಡುಗಡೆಗೆ ಇನ್ನೊಂದು ದಿನ ಬಾಕಿ ಇದೆ ಅನ್ನುವಾಗಲೇ 'ಕಬ್ಜ' ತಂಡ ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ತೆರಳಿದೆ.

'ಕಬ್ಜ' ಸಿನಿಮಾದ ಲೀಡ್ ಹೀರೊ ಉಪೇಂದ್ರ, ನಿರ್ದೇಶಕ ಆರ್ ಚಂದ್ರು, 'ಯುಐ' ಸಿನಿಮಾದ ನಿರ್ಮಾಪಕ ಕೆ ಪಿ ಶ್ರೀಕಾಂತ್ ಸೇರಿದಂತೆ ಹಲವು ಆತ್ಮೀಯರು ಚಾರ್ಟರ್ಡ್ ಫ್ಲೈಟ್ ಮೂಲಕ ತಿರುಪತಿಗೆ ತೆರಳಿದಿದ್ದಾರೆ.

Upendra, Director R Chandru And Team Visited Tirupati Before Kabzaa Movie Release

ರಿಯಲ್ ಸ್ಟಾರ್ ಉಪೇಂದ್ರ ನಟನೆಯ ಮೊದಲ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ'. ಈಗಾಗಲೇ ಮುಂಬೈ,ಹೈದರಾಬಾದ್, ಚೆನ್ನೈ ಹಾಗೂ ಬೆಂಗಳೂರಿನಲ್ಲಿ ಪ್ರಿ ರಿಲೀಸ್ ಇವೆಂಟ್ ಮೂಲಕ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡುತ್ತಿದೆ. ಹೀಗಾಗಿ ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಲುವಂತೆ ತಿಮ್ಮಪ್ಪನಿಗೆ ಮನವಿ ಮಾಡಿಕೊಳ್ಳಲು ಉಪೇಂದ್ರ, ಆರ್ ಚಂದ್ರ ಹಾಗೂ ಅವರ ತಂಡ ತಿರುಪತಿಗೆ ಪಯಣ ಬೆಳೆಸಿ ತಿಮ್ಮಪ್ಪನ ದರ್ಶನ ಪಡೆದು ಬಂದಿದ್ದಾರೆ.

'ಕಬ್ಜ' ಸಿನಿಮಾ ಭಾರತದಾದ್ಯಂತ ಸುಮಾರು 4 ಸಾವಿರ ಚಿತ್ರಮಂದಿರಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗುತ್ತಿದೆ. ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಬಿಡುಗಡೆಯಾಗುತ್ತಿದೆ. ಅಂದ್ಹಾಗೆ 2023ರಂದು ಅದ್ಧೂರಿಯಾಗಿ ಬಿಡುಗಡೆಯಾಗುತ್ತಿರುವ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಇದು. ಈ ಕಾರಣಕ್ಕೆ ಇಡೀ ಭಾರತೀಯ ಚಿತ್ರರಂಗವೇ ಕುತೂಹಲದಿಂದ ಎದುರು ನೋಡುತ್ತಿದೆ.

ಕರ್ನಾಟಕದಲ್ಲಿ 'ಕಬ್ಜ' ಸಿನಿಮಾ ಕಲೆಕ್ಷನ್ ಮೇಲೆ ಕಣ್ಣಿಟ್ಟಿದೆ. ಕೆಲವು ಚಿತ್ರಮಂದಿರಗಳಲ್ಲಿ ಐದು ಶೋಗಳನ್ನು ಆಯೋಜಿಲಾಗಿದೆ. ಒಂದೇ ಸಿನಿಮಾದಲ್ಲಿ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವರಾಜ್‌ಕುಮಾರ್ ನಟಿಸಿರುವುದರಿಂದ ಕರ್ನಾಟಕದಲ್ಲಿ ಕ್ರೇಜ್ ಜೋರಾಗಿದೆ.

Upendra, Director R Chandru And Team Visited Tirupati Before Kabzaa Movie Release

ಪ್ಯಾನ್ ಇಂಡಿಯಾ ಸಿನಿಮಾಗಳ ಮೇಜರ್ ಕಲೆಕ್ಷನ್ ಹಿಂದಿ ಬೆಲ್ಟ್‌ಗಳಲ್ಲಿಯೇ ಆಗುತ್ತೆ. ಅಲ್ಲದೆ 'ಕಬ್ಜ' ಸಿನಿಮಾವನ್ನು ಬಾಲಿವುಡ್‌ ವಿತರಕ ಆನಂದ್ ಪಂಡಿತ್ ವಿತರಣೆ ಮಾಡುತ್ತಿದ್ದಾರೆ. ಈ ಕಾರಣಕ್ಕೆ ಹಿಂದಿ ಬೆಲ್ಟ್‌ಗಳಲ್ಲಿ 'ಕಬ್ಜ' ಕಲೆಕ್ಷನ್ ಎಷ್ಟಾಗುತ್ತೆ? ಅನ್ನೋ ಲೆಕ್ಕಾಚಾರ ಹಾಕುತ್ತಿದ್ದಾರೆ.

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬದಂದೇ ಈ ವರ್ಷದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ರಿಲೀಸ್ ಆಗುತ್ತಿದೆ. ಪುನೀತ್ ರಾಜ್‌ಕುಮಾರ್ ಬರ್ತ್‌ಡೇ ಒಂದೆಡೆಯಾದರೆ, ಇನ್ನೊಂದು ಕಡೆ 'ಕಬ್ಜ' ರಿಲೀಸ್ ಸಿನಿಪ್ರಿಯರಿಗೆ ಡಬಲ್ ಸಂಭ್ರಮ ಕೊಟ್ಟಿದೆ.

More from Filmibeat

English summary
Upendra, Director R Chandru And Team Visited Tirupati Before Kabzaa Movie Release, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X