"ಉಪೇಂದ್ರ ಅವರಿಗೆ ನಾನು ಸಿನಿಮಾ ಮಾಡಲ್ಲ"; 'ಉಪೇಂದ್ರ' ಸಿನಿಮಾದ ನಿರ್ಮಾಪಕ

ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿದ ಎರಡು ಸಿನಿಮಾಗಳು ಇತ್ತೀಚೆಗೆ ರಿಲೀಸ್ ಆಗಿದ್ದವು. ಒಂದು 'ಯುಐ'. ಇನ್ನೊಂದು 25 ವರ್ಷಗಳ ಹಿಂದೆ ಬಿಡುಗಡೆಯಾಗಿದ್ದ 'ಉಪೇಂದ್ರ'. ಉಪ್ಪಿ ನಾಯಕನಾಗಿ ನಟಿಸಿದ್ದ ಎರಡನೇ ಸಿನಿಮಾ 'ಉಪೇಂದ್ರ' ಆಗಿತ್ತು. ಈ ಸಿನಿಮಾವನ್ನು ಕನ್ನಡದ ಜನಪ್ರಿಯ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ನಿರ್ಮಾಣ ಮಾಡಿದ್ದರು. ಅದು ಬಾಕ್ಸಾಫೀಸ್‌ನಲ್ಲಿ ಮೆಗಾ ಸಕ್ಸಸ್ ಅಂತ ಸಾಬೀತಾಗಿತ್ತು.

ಸುಮಾರು 25 ವರ್ಷಗಳ ಬಳಿಕ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮತ್ತೆ 'ಉಪೇಂದ್ರ' ಸಿನಿಮಾಗೆ ಟಿಜಿಟಲ್ ಟಚ್ ಕೊಟ್ಟು ರೀ ರಿಲೀಸ್ ಮಾಡಿದ್ದರು. ಆಗಲೂ ಉಪೇಂದ್ರ ಸಿನಿಮಾಗೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸುಮಾರು 400 ಶೋಗಳಲ್ಲಿ ಸಿನಿಮಾವನ್ನು ಪ್ರದರ್ಶನ ಮಾಡಲಾಗಿತ್ತು. ಹೊಸ ಸಿನಿಮಾ ರಿಲೀಸ್ ಆದಂತೆ ಈ ಉಪೇಂದ್ರಗೂ ಅದೇ ಕ್ರೇಜ್ ಇತ್ತು.

Upendra film producer Shilpa Srinivas said he will not produce films for Upendra anymore

ಹೀಗಿದ್ದರೂ 'ಉಪೇಂದ್ರ' ಸಿನಿಮಾದ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮತ್ತೆ ಉಪ್ಪಿಗೆ ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ. ಡೈಲಿ ಮಾಧ್ಯಮ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉಪೇಂದ್ರ ಅವರಿಗೆ ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ. ಅಷ್ಟಕ್ಕೂ ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಹೀಗೆ ಹೇಳುವುದಕ್ಕೆ ಕಾರಣವೇನು? ಅನ್ನೋದನ್ನು ತಿಳಿಯಲು ಮುಂದೆ ಓದಿ.

'ಉಪೇಂದ್ರ' ಸಿನಿಮಾ ಮರು ಬಿಡುಗಡೆ ಮಾಡಿದ ಬಳಿಕ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಹೀಗಾಗಿ ಮತ್ತೆ ಸಿನಿಮಾ ಮಾಡಬಹುದಲ್ಲ ಎಂದು ಪ್ರಶ್ನೆ ಮಾಡಲಾಗಿತ್ತು. ಆಗ ನಿರ್ಮಾಪಕ ಉಪೇಂದ್ರಗೆ ಸಿನಿಮಾ ಮಾಡುವುದಿಲ್ಲ ಎಂದಿದ್ದಾರೆ. "ಇಲ್ಲ ನಮ್ಮ ಕೈಯಲ್ಲಿ ಉಪೇಂದ್ರ ಅವರಿಗೆ ಸಿನಿಮಾ ಮಾಡುವುದಕ್ಕೆ ಆಗುವುದಿಲ್ಲ. ಉಪೇಂದ್ರ ಅವರೊಂದಿಗೆ ಸಿನಿಮಾ ಮಾಡಬೇಕು ಅಂದರೆ, ಆ ರೇಂಜ್‌ಗೆ ಮಾಡಬೇಕಲ್ಲ. ಈಗ ನಮ್ಮ ಹತ್ತಿರ ಆ ಜೋಷ್, ಫೈರ್ ಇಲ್ಲ. ಅವರು ಒಂಥರಾ ಫೈರ್ ಎಂಜಿನ್" ಎಂದಿದ್ದಾರೆ.

ಹಾಗೇ, "ಕಾಫಿಗೆ ತುಂಬಾ ಸಕ್ಕರೆ ಹಾಕಬಾರದು ಪಾಯಸ ಆಗಿಬಿಡುತ್ತೆ. ಹಾಗಂತ ಸಕ್ಕರೆ ಕಡಿಮೆ ಹಾಕಿಬಿಟ್ಟರೆ, ಕಷಾಯ ಆಗಿಬಿಡುತ್ತೆ. ಅವರು ಹೇಗೆ ಯೋಚನೆ ಮಾಡುತ್ತಾರೆ. ಆ ರೇಂಜ್‌ಗೆ ನಾವು ಒದಗಿಸಿಕೊಡಬೇಕು. ಅವರು ಸೃಷ್ಟಿ ಮಾಡುವವರು. ಅವರು ಎಫ್‌ಐಎಲ್ ಮಾತ್ರ ಯೋಚನೆ ಮಾಡುತ್ತಾರೆ. ಎಂ ಯೋಚನೆ ಮಾಡುವುದಿಲ್ಲ. ನಾವು ಅದಕ್ಕೆಲ್ಲ ರೆಡಿಯಿದ್ದು ಹೋಗಬೇಕು." ಎಂದಿದ್ದಾರೆ.

ಇದೇ ವೇಳೆ ಲೆಕ್ಕ ಹಾಕಿ ಸಿನಿಮಾ ಮಾಡೋರು ನಾವು ಎಂದು ಹೇಳುತ್ತಾ ಉಪೇಂದ್ರ ರೀ ರಿಲೀಸ್ ಸಕ್ಸಸ್ ಬಗ್ಗೆನೂ ಮಾತಾಡಿದ್ದಾರೆ. "ನಾವು ಹೇಗೆ ಅಂದರೆ ಶೆಟ್ರು ತರ ಲೆಕ್ಕಾಚಾರ ಹಾಕಿಯೇ ಸಿನಿಮಾ ಮಾಡೋದು. ನಾನು ಲೆಕ್ಕಾಚಾರ ಹಾಕದೆ ಸಿನಿಮಾ ಮಾಡಿದ್ದು ಉಪೇಂದ್ರ ಸಿನಿಮಾ. ಲೆಕ್ಕಾಚಾರ ಹಾಕಿ ಸಿನಿಮಾ ಮಾಡಿದ್ದು ಪರ್ವ. ಉಪೇಂದ್ರ ರೀ ರಿಲೀಸ್ ಮಾಡಿದ ಮೇಲೂ ಚೆನ್ನಾಗಿ ಆಯ್ತು. ಇನ್ನೊಂದು ಹತ್ತು ವರ್ಷಕ್ಕೆ ರೋಲಿಂಗ್ ಆಯ್ತು. ಹೊಸ ಪಿಕ್ಚರ್ ತರ ಬೆಳಗ್ಗೆ ಆರು ಗಂಟೆ ಫುಲ್ ಆಯ್ತು. ಚೆನ್ನಾಗಿ ಆಯ್ತು" ಎನ್ನುತ್ತಾರೆ.

ಇನ್ನು 25 ವರ್ಷಗಳ ಬಳಿಕ ಉಪೇಂದ್ರ ಸಿನಿಮಾವನ್ನು ಓಟಿಟಿ ವೇದಿಕೆ ಅಮೆಜಾನ್ ತೆಗೆದುಕೊಂಡು ಅಮೆರಿಕ ಹಾಗೂ ಯುಕೆಯಲ್ಲಿ ಸ್ಟ್ರೀಮಿಂಗ್ ಮಾಡುತ್ತಿರೋದಾಗಿ ಹೇಳಿದೆ. "ಅಮೆಜಾನ್ ಅವರು ಉಪೇಂದ್ರ ಸಿನಿಮಾ ತೆಗೆದುಕೊಂಡು ಅಮೆರಿಕ, ಯುಕೆನಲ್ಲಿ ಹಾಕಿದ್ದಾರೆ. 25 ವರ್ಷ ಆದ್ಮೇಲೆ ತೆಗೆದುಕೊಂಡಿದ್ದಾರೆ. ಅಲ್ಲಿ ಒಳ್ಳೆಯ ರಾಂಕಿಂಗ್ ಎಲ್ಲ ಬಂದರೆ, ಚೈನಾ, ಜಪಾನ್ ಎಲ್ಲಾ ಹಾಕುತ್ತಾರೆ. ಅದಾದ್ಮೇಲೆ ಭಾರತದಲ್ಲೂ ಅಮೆಜಾನ್‌ನಲ್ಲಿ ಬರಬಹುದು." ಎಂದಿದ್ದಾರೆ.

More from Filmibeat

English summary
Upendra film producer Shilpa Srinivas said he will not produce films for Upendra anymore;
Read more about: upendra sandalwood producer
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X