'ಯುಐ' ಬಳಿಕ ರಜನಿಕಾಂತ್‌ಗೆ ಉಪ್ಪಿ ಆಕ್ಷನ್ ಕಟ್? ರಿಯಲ್ ಸ್ಟಾರ್ ಬಿಟ್ಟುಕೊಟ್ಟ ಆ ಸುಳಿವೇನು?

ರಿಯಲ್‌ಸ್ಟಾರ್ ಉಪೇಂದ್ರ 'ಯುಐ' ಸಿನಿಮಾ ರಿಲೀಸ್‌ಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. 9 ವರ್ಷಗಳ ಬಳಿಕ ನಿರ್ದೇಶಿಸುತ್ತಿರುವ ಉಪ್ಪಿ ಸಿನಿಮಾ ನೋಡುವುದಕ್ಕೆ ಅಭಿಮಾನಿಗಳು ತುದಿಗಾಲಲ್ಲಿ ನಿಂತಿದ್ದಾರೆ. ಉಪ್ಪಿ ಡೈರೆಕ್ಷನ್ ಅಂದರೆ ಅಲ್ಲೊಂದು ಪ್ರತ್ಯೇಕ ಫ್ಯಾನ್ ಬೇಸ್ ಇರುತ್ತೆ. ಹೀಗಾಗಿ 'ಯುಐ' ಅಡ್ವಾನ್ಸ್ ಬುಕಿಂಗ್ ಕೂಡ ಪ್ರತಿಕ್ರಿಯೆ ಸಖತ್ ಆಗಿಯೇ ಸಿಕ್ಕಿದೆ.

ಬೆಳಗ್ಗೆ 6.30ಕ್ಕೆ ಉಪೇಂದ್ರ 'ಯುಐ' ಫ್ಯಾನ್ಸ್ ಶೋ ಅರೇಂಜ್ ಮಾಡಿದೆ ತಂಡ. ಇದೇ ಖುಷಿಯಲ್ಲಿ ಉಪ್ಪಿ ಅಭಿಮಾನಿಗಳಿಗೆ ಮತ್ತೊಂದು ಖುಷಿ ವಿಷಯವಿದೆ. ಸೂಪರ್‌ ಸ್ಟಾರ್ ರಜನಿಕಾಂತ್‌ರನ್ನು ಕನ್ನಡಕ್ಕೆ ಕರೆದುಕೊಂಡು ಬರುವ ಪ್ರಯತ್ನ ನಡೆಯುತ್ತಿದೆ. ಆ ಸುಳಿವನ್ನು 'ಯುಐ' ಪ್ರಚಾರದ ವೇಳೆ ಚಿಕ್ಕದೊಂದು ಸುಳಿವು ಕೊಟ್ಟಿದ್ದಾರೆ. ಇದೇ ಸುದ್ದಿ ಉಪ್ಪಿ ಫ್ಯಾನ್ಸ್‌ ಬಳಗದಲ್ಲಿ ಓಡಾಡುತ್ತಿದೆ.

Upendra is planning to direct Kannada film with Rajinikanth after UI here are the details

ಉಪೇಂದ್ರ ನಿರ್ದೇಶನದ ಸಿನಿಮಾಗಳಿಗೆ ಸೂಪರ್‌ ಸ್ಟಾರ್ ರಜನಿಕಾಂತ್ ಕೂಡ ಅಭಿಮಾನಿ. ಈ ಹಿಂದೆ ಕೂಡ ಉಪ್ಪಿ ನಿರ್ದೇಶನದ ಬಗ್ಗೆ ರಜನಿಕಾಂತ್ ಮೆಚ್ಚುಗೆ ಪಟ್ಟಿದ್ದರು. ಉಪೇಂದ್ರ ನಿರ್ದೇಶನ ಮಾಡುವ ಶೈಲಿಯನ್ನು ರಜನಿಕಾಂತ್ ಅದ್ಯಾವಾಗೋ ಮೆಚ್ಚಿಕೊಂಡಿದ್ದಾರೆ. ಈಗ ಅವರಿಗೆ ಸಿನಿಮಾ ಮಾಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಹಾಗಿದ್ದರೆ ಸೂಪರ್‌ಸ್ಟಾರ್‌ಗೆ ಉಪ್ಪಿ ಆಕ್ಷನ್ ಕಟ್ ಹೇಳೋದು ಯಾವಾಗ? ಯಾವ ಸಂದರ್ಶನದಲ್ಲಿ ನಿರ್ದೇಶನ ಮಾಡುವ ಬಗ್ಗೆ ಹೇಳಿದ್ದಾರೆ? ತಿಳಿಯಲು ಮುಂದೆ ಓದಿ.

'ಯುಐ' ರಿಲೀಸ್ ಆಗುತ್ತಿರುವ ಈ ಸಂದರ್ಭದಲ್ಲಿ ದಕ್ಷಿಣ ಭಾರತವನ್ನು ಸುತ್ತುತ್ತಿದ್ದಾರೆ. ಇತ್ತೀಚೆಗೆ ಚೆನ್ನೈನಲ್ಲಿ 'ಯುಐ' ಇವೆಂಟ್ ಮಾಡಿದ್ದರು. ಆ ವೇಳೆ ಚೆನ್ನೈಗೆ ತೆರಳಿದ್ದಾಗ ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಿದ್ದರು. ಈ ವೇಳೆ ರಜನಿಕಾಂತ್‌ ಸಿನಿಮಾ ನಿರ್ದೇಶನ ಮಾಡುವ ಸುಳಿವನ್ನು ನೀಡಿದ್ದಾರೆ. ಇದು ಉಪ್ಪಿ ಅಭಿಮಾನಿಗಳಿಗೆ ಖುಷಿಯನ್ನು ದುಪ್ಪಟ್ಟು ಮಾಡಿದೆ. ಒಂದ್ಕಡೆ ಕಡೆ 'ಯುಐ' ರಿಲೀಸ್ ಆಗುತ್ತಿದ್ದರೆ, ಇನ್ನೊಂದು ಕಡೆ ರಜನಿ ಮೂವೀ ಬಗ್ಗೆ ಉಪ್ಪಿ ಪ್ಲ್ಯಾನ್ ಕೇಳಿ ಥ್ರಿಲ್ ಆಗಿದ್ದಾರೆ.

Upendra is planning to direct Kannada film with Rajinikanth after UI here are the details

'ಸಿನೆಯುಳಗಂ'ಗೆ ನೀಡಿದ ಸಂದರ್ಶನದಲ್ಲಿ ಮುಂದಿನ ಪ್ರಾಜೆಕ್ಟ್‌ಗಳ ಬಗ್ಗೆ ಮಾತಾಡಿದ್ದಾರೆ. ಈ ವೇಳೆ ರಜನಿಕಾಂತ್ ಸಿನಿಮಾ ಬಗ್ಗೆನೂ ಸುಳಿವನ್ನು ನೀಡಿದ್ದಾರೆ. ಒಂದು ವೇಳೆ ಈ ಪ್ರಾಜೆಕ್ಟ್ ಟೇಕಾಫ್ ಆಗಿದ್ದೇ ಆದಲ್ಲಿ ನಾಲ್ಕು ದಶಕಗಳ ಬಳಿಕ ಸೂಪರ್‌ಸ್ಟಾರ್ ರಜನಿಕಾಂತ್ ಅವರನ್ನು ಕನ್ನಡ ಚಿತ್ರರಂಗಕ್ಕೆ ಕರೆದುಕೊಂಡು ಬಂದಂತೆ ಆಗುತ್ತೆ. ಕನ್ನಡಿಗರು ಕೂಡ ರಜನಿಕಾಂತ್ ಕನ್ನಡ ಸಿನಿಮಾದಲ್ಲಿ ನಟಿಸಬೇಕು ಅಂತ ಬಹಳ ದಿನಗಳಿಂದ ಬಯಸಿದ ಆಸೆಯೂ ಈಡೇರಿದಂತೆ ಆಗಲಿದೆ.

ಸೂಪರ್‌ಸ್ಟಾರ್ ರಜನಿಕಾಂತ್ ನಟಿಸುತ್ತಿರುವ 'ಕೂಲಿ' ಸಿನಿಮಾದಲ್ಲಿ ಉಪೇಂದ್ರ ನಟಿಸುತ್ತಿರುವುದರಿಂದ ಅಲ್ಲಿ ಈ ಮಾತುಕತೆ ನಡೆದಿರಬಹುದು. ಉಪ್ಪಿ ಕೂಡ ರಜನಿಕಾಂತ್ ತಮ್ಮ ಆಸೆಯನ್ನು ವ್ಯಕ್ತಪಡಿಸಿರಬಹುದು ಎಂದು ಅಭಿಮಾನಿಗಳು ಅಂದಾಜಿಸುತ್ತಿದ್ದಾರೆ. ಆದರೆ, 'ಕೂಲಿ' ಬಳಿಕ ರಜನಿಕಾಂತ್ 'ಜೈಲರ್ 2' ಸಿನಿಮಾ ಶೂಟಿಂಗ್‌ನಲ್ಲಿ ಭಾಗಿಯಾಗಲಿದ್ದಾರೆ. ಹೀಗಾಗಿ ಉಪ್ಪಿಗೆ ಯಾವಾಗ ಗ್ರೀನ್ ಸಿಗ್ನಲ್ ಕೊಡಬಹುದು ಎಂಬ ಕುತೂಹಲವಿದೆ.

ಒಂದು ವೇಳೆ ಉಪೇಂದ್ರ ಸಿನಿಮಾ 'ಯುಐ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸದ್ದು ಮಾಡಿದರೆ, ಉಪ್ಪಿ- ರಜನಿಕಾಂತ್ ಕಾಂಬಿನೇಷನ್ ಪಕ್ಕ ಎಂದೇ ಭಾವಿಸಬಹುದೇನೋ? 'ಎ', 'ಉಪೇಂದ್ರ', 'H2O'ಅಂತಹ ಶೈಲಿಯ ಸಿನಿಮಾಗಳನ್ನು ಮಾಡಿರುವ ಉಪ್ಪಿ ಸೂಪರ್‌ಸ್ಟಾರ್ ರಜನಿಕಾಂತ್‌ಗೆ ಸಿನಿಮಾ ಮಾಡಿದರೆ ಹೇಗಿರುತ್ತೆ? ಸಿನಿಪ್ರಿಯರಿಗೆ ಬ್ಲಾಕ್‌ ಬಸ್ಟರ್ ಸಿನಿಮಾ ಸಿಗೋದು ಗ್ಯಾರಂಟಿ.

More from Filmibeat

English summary
Upendra is planning to direct Kannada film with Rajinikanth after UI. Here are the details;
Read more about: upendra rajinikanth sandalwood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X