Upendra Box Office: ಉಪೇಂದ್ರ ರೀ ರಿಲೀಸ್‌ಗೆ ಹೇಗಿದೆ ರೆಸ್ಪಾನ್ಸ್? 2ನೇ ದಿನ ಗಳಿಸಿದ್ದೆಷ್ಟು?
ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶನದ ಸಿನಿಮಾ ಅಂದರೆ ಕೇಳ್ಬೇಕಾ? ಸಿನಿಮಾ ನೋಡುವುದಕ್ಕೆ ಜನರು ಸಾಲು ಗಟ್ಟಿ ನಿಲ್ಲುತ್ತಾರೆ. ಅದರಲ್ಲೂ ಉಪ್ಪಿ ನಿರ್ದೇಶಿಸಿದ ಸಿನಿಮಾಗಳು ಮರು ಬಿಡುಗಡೆಯಾದರೆ, ಅದನ್ನು ನೋಡುವುದಕ್ಕೆ ಪ್ರತ್ಯೇಕವಾದ ಫ್ಯಾನ್ ಬೇಸ್ ಇರುತ್ತೆ. 'ಉಪೇಂದ್ರ' ಸಿನಿಮಾಗೂ ಅಷ್ಟೇ ದೊಡ್ಡ ಫ್ಯಾನ್ ಬೇಸ್ ಇದೆ.
'ಉಪೇಂದ್ರ' ಸಿನಿಮಾ ರಿಲೀಸ್ ಆಗಿ 25 ವರ್ಷಗಳನ್ನು ಪೂರೈಸಿರುವ ಬೆನ್ನಲ್ಲೇ ರೀ ರಿಲೀಸ್ ಆಗಿದೆ. ಸೆಪ್ಟೆಂಬರ್ 20ರಂದು ಕರ್ನಾಟಕದಾದ್ಯಂತ ಈ ಸಿನಿಮಾವನ್ನು ಆಯ್ದ ಚಿತ್ರಮಂದಿರಗಳಲ್ಲಿ ಮರು ಬಿಡುಗಡೆ ಮಾಡಲಾಗಿದೆ. ಮೊದಲ ದಿನ ಬೆಳ್ಳಂಬೆಳಗ್ಗೆ ಫ್ಯಾನ್ ಶೋ ಅನ್ನೂ ಆಯೋಜನೆ ಮಾಡಲಾಗಿತ್ತು.

ಮೊದಲ ದಿನ ಡಿಸೆಂಟ್ ಓಪನಿಂಗ್ ಪಡೆದುಕೊಂಡಿದ್ದ ಸಿನಿಮಾ ಎರಡನೇ ದಿನವೂ ಕೂಡ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆದಿದೆ. ಎರಡನೇ ದಿನದ ಬಾಕ್ಸಾಫೀಸ್‌ನಲ್ಲಿ 'ಉಪೇಂದ್ರ' ಸಿನಿಮಾ ಎಷ್ಟು ಕಲೆಕ್ಷನ್ ಮಾಡಿದೆ? ಚಿತ್ರಮಂದಿರಕ್ಕೆ ಬಂದು ಸಿನಿಮಾ ನೋಡಿದವರು ಯಾರು? ತಿಳಿಯಲು ಮುಂದೆ ಓದಿ.
2ನೇ ದಿನ ಹೇಗಿದೆ ಕಲೆಕ್ಷನ್?
ರಿಯಲ್ ಸ್ಟಾರ್ ನಟಿಸಿ, ನಿರ್ದೇಶಿಸಿದ ಬ್ಲಾಕ್ ಬಸ್ಟರ್ ಸಿನಿಮಾ 'ಉಪೇಂದ್ರ' ರೀ ರಿಲೀಸ್ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಬಾಕ್ಸಾಫೀಸ್‌ನಲ್ಲಿ ದೊಡ್ಡ ಮೊತ್ತವನ್ನು ಕಲೆ ಹಾಕಲು ಸಾಧ್ಯವಾಗದೇ ಇದ್ದರೂ, ಅಂದುಕೊಂಡಿದ್ದ ಪ್ರೇಕ್ಷಕರ ವರ್ಗವನ್ನು ಚಿತ್ರಮಂದಿರಕ್ಕೆ ಸೆಳೆದಿದೆ. ಮೊದಲನೇ ದಿನದಂತೆ ಎರಡನೇ ದಿನವೂ 10 ರಿಂದ 15 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯ ಹೇಳುತ್ತಿದೆ. ಎರಡು ದಿನಗಳಿಂದ 25 ರಿಂದ 30 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿರಬಹುದೆಂದು ಅಂದಾಜಿಸಲಾಗಿದೆ.

ವೀಕೆಂಡ್ ಕಲೆಕ್ಷನ್ ಹೇಗಿದೆ?
'ಉಪೇಂದ್ರ' ಸಿನಿಮಾ ವೀಕೆಂಡ್‌ನಲ್ಲಿ ಮಸ್ತ್ ಕಲೆಕ್ಷನ್ ಮಾಡಬಹುದು ಎಂಬ ನಿರೀಕ್ಷೆಯಿದೆ. ನಿನ್ನೆಗಿಂತ (ಸೆಪ್ಟೆಂಬರ್ 21) ಇಂದು ಉಪ್ಪಿ ಸಿನಿಮಾ ನೋಡುವುದಕ್ಕೆ ಪ್ರೇಕ್ಷಕರು ಹೆಚ್ಚಿನ ಸಂಖ್ಯೆಯಲ್ಲಿ ಬರಬಹುದೆಂಬ ನಿರೀಕ್ಷೆಯಿದೆ. ಆದರೆ, ಬುಕ್ ಮೈ ಶೋನಲ್ಲಿ ಉಪೇಂದ್ರ ಸಿನಿಮಾ ನೋಡುವುದಕ್ಕೆ ಸಾಧಾರಣ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ನೇರವಾಗಿ ಥಿಯೇಟರ್‌ಗೆ ಹೋಗಿ ಟಿಕೆಟ್ ಖರೀದಿ ಮಾಡುತ್ತಿರಬಹುದೆಂಬ ನಿರೀಕ್ಷೆಯಿದೆ.
ಯುವಕರ ಫೇವರಿಟ್ 'ಉಪೇಂದ್ರ'
'ಉಪೇಂದ್ರ' ಸಿನಿಮಾ ಯುವಕರ ಫೇವರಿಟ್. 25 ವರ್ಷಗಳ ಹಿಂದೆ ಸಿನಿಮಾ ನೋಡದವರು ಈಗ ಥಿಯೇಟರ್‌ನಲ್ಲಿ ಸಿನಿಮಾ ನೋಡುವುದಕ್ಕೆ ಮುಂದಾಗುತ್ತಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಉಪೇಂದ್ರ ಅಭಿಮಾನಿಗಳು ಹಾಗೂ ಯುವಕರೇ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಬಹುಶ: ಫ್ಯಾಮಿಲಿ ಆಡಿಯನ್ಸ್ ಥಿಯೇಟರ್‌ಗೆ ಬಾರದೆ ಇರೋದು ಒಂದು ಕಾರಣ ಇರಬಹುದು.
ವಿವಾದ ಸೃಷ್ಟಿಸಿದ ಸಿನಿಮಾ
25 ವರ್ಷಗಳ ಹಿಂದೆ ಉಪೇಂದ್ರ ಸಿನಿಮಾವನ್ನು ಕೆಲವು ಮಂದಿ ವಿರೋಧಿಸಿದ್ದರು. ಆಗಿನ ಕಾಲಕ್ಕೆ ಈ ಸಿನಿಮಾ ಕಥೆ ಸಿಕ್ಕಾಪಟ್ಟೆ ಬೋಲ್ಡ್ ಆಗಿತ್ತು. ಹೀಗಾಗಿ ಈ ಸಿನಿಮಾದ ವಿರುದ್ಧ ಕಿಡಿಕಾರಿದ್ದರು. ಆದರೆ, 25 ವರ್ಷಗಳ ಬಳಿಕವೂ 'ಉಪೇಂದ್ರ' ಸಿನಿಮಾ ಪ್ರಸ್ತುತ ಅಂತ ಅನಿಸುತ್ತಿದೆ. ಈ ಕಾರಣಕ್ಕೆ 'ಉಪೇಂದ್ರ' ಇಂದಿನ ಯುವಕರನ್ನೂ ಸೆಳೆಯುತ್ತಿದೆ.


Click it and Unblock the Notifications











