Upendra Box Office Day 3: 3ನೇ ದಿನ 'ಉಪೇಂದ್ರ' ಕಲೆಕ್ಷನ್ ಎಷ್ಟು? ಮೂರು ದಿನಗಳ ಒಟ್ಟು ಗಳಿಕೆ ಎಷ್ಟು?

ಸ್ಯಾಂಡಲ್‌ವುಡ್‌ನಲ್ಲಿ ರೀ ರಿಲೀಸ್ ಆದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಹೆಚ್ಚು ಸದ್ದು ಮಾಡುತ್ತಿವೆ. ಹೊಸ ಸಿನಿಮಾಗಳು ಬಿಡುಗಡೆ ಆಗುತ್ತಿರುವುದೇನೋ ನಿಜ. ಆದರೆ, ರೀ ರಿಲೀಸ್ ಆಗುತ್ತಿರುವ ಸಿನಿಮಾಗಳಿಗಿರುಷ್ಟು ಕ್ರೇಜ್ ಕಾಣುತ್ತಿಲ್ಲ. 'ಎ' ಸಿನಿಮಾ ಬಳಿಕ 'ಉಪೇಂದ್ರ' ಕೂಡ ಮರು ಬಿಡುಗಡೆಯಾಗಿದ್ದು, ರೀ ರಿಲೀಸ್ ಆದ ಸಿನಿಮಾಗಳಿಗೆ ಸಿಗುವಷ್ಟು ರೆಸ್ಪಾನ್ಸ್ ಸಿಕ್ಕಿದೆ.

ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ ಕ್ರೇಜ್ ಅಂತಹದ್ದು, 'ಯುಐ' ರಿಲೀಸ್‌ಗೂ ಮುನ್ನ 'ಉಪೇಂದ್ರ' ಮರು ಬಿಡುಗಡೆಯಾಗಿದ್ದು ಉಪ್ಪಿ ಅನುಕೂಲ ಆದಂತಾಗಿದೆ. ಮತ್ತೆ ಉಪ್ಪಿ ನಿರ್ದೇಶಿಸಿದ ಸಿನಿಮಾಗಳಿಗೆ ಕ್ರೇಜ್ ಹೆಚ್ಚಾಗುತ್ತಿದೆ. 25 ವರ್ಷಗಳ ಹಿಂದೆನೇ ಬೋಲ್ಡ್ ಕಂಟೆಂಟ್ ಇಟ್ಟುಕೊಂಡು ಬಂದಿದ್ದ ಸಿನಿಮಾವನ್ನು ನೋಡುವುದಕ್ಕೆ ಯುವಕ ಆಸಕ್ತಿ ತೋರಿಸಿದ್ದಾರೆ.

Upendra Kannada Movie Re Release Box Office Collection Day 3 Report

'ಉಪೇಂದ್ರ' ಸಿನಿಮಾ ರೀ ರಿಲೀಸ್ ಆಗಿ ನಾಲ್ಕನೇ ದಿನಕ್ಕೆ ಕಾಲಿಟ್ಟಿದೆ. ಕಳೆದ ಮೂರು ದಿನಗಳಲ್ಲಿಯೂ ಈ ಸಿನಿಮಾ ರೆಸ್ಪಾನ್ಸ್ ಆವರೇಜ್‌ ಆಗಿದೆ. ಆದರೂ, ಒಂದು ಹಿಟ್‌ ಸಿನಿಮಾಗೆ ಸಮಾ ಎಂದೇ ವಿತರಕರು ಲೆಕ್ಕ ಹಾಕುತ್ತಿದ್ದಾರೆ. ಅಷ್ಟಕ್ಕೂ ಕಳೆದ ಮೂರು ದಿನಗಳಲ್ಲಿ ಉಪೇಂದ್ರ ಸಿನಿಮಾಗೆ ಸಿಕ್ಕಿರೋ ರೆಸ್ಪಾನ್ಸ್ ಹೇಗಿದೆ? ಮೂರನೇ ದಿನದ ಕಲೆಕ್ಷನ್ ಎಷ್ಟು ಅನ್ನೋದನ್ನು ತಿಳಿಯಲು ಮುಂದೆ ಓದಿ..

ಮೂರನೇ ದಿನ ಕಲೆಕ್ಷನ್ ಎಷ್ಟು?

ರೀ ರಿಲೀಸ್ ಆಗುತ್ತಿರುವ ಸಿನಿಮಾಗಳ ಕಲೆಕ್ಷನ್ ಅನ್ನು ಕೋಟಿ ಲೆಕ್ಕದಲ್ಲಿ ನಿರೀಕ್ಷೆ ಮಾಡುವುದಕ್ಕೆ ಆಗುವುದಿಲ್ಲ. ಹೀಗಾಗಿ 'ಉಪೇಂದ್ರ' ಸಿನಿಮಾದ ಕಲೆಕ್ಷನ್ ಮೂರನೇ ದಿನವೂ 10 ರಿಂದ 15 ಲಕ್ಷ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್ ಲೆಕ್ಕ ಹಾಕುತ್ತಿದ್ದಾರೆ. ಲಿಮಿಟಿಡ್ ಸ್ಕ್ರೀನ್‌ಗಳಲ್ಲಿ ಸಿನಿಮಾ ರಿಲೀಸ್ ಆಗಿದ್ದರಿಂದ ಅದರ ಅನುಸಾರವಾಗಿಯೇ ಕಲೆಕ್ಷನ್ ಕೂಡ ಆಗಿದೆ.

Upendra Kannada Movie Re Release Box Office Collection Day 3 Report

ವೀಕೆಂಡ್ ಕಲೆಕ್ಷನ್ ಹೇಗಿದೆ?

'ಉಪೇಂದ್ರ' ಮೂರು ದಿನಗಳಲ್ಲಿ ನಿರೀಕ್ಷೆ ಮಾಡಿದಷ್ಟು ಕಲೆಕ್ಷನ್ ಮಾಡಿದೆ ಎನ್ನಬಹುದು. ವಿತರಕರ ವಲಯದಲ್ಲೂ ಈ ಸಿನಿಮಾ ಕಲೆಕ್ಷನ್ ಬಗ್ಗೆ ಸಮಾಧಾನವಿದೆ. 25 ವರ್ಷಗಳ ಬಳಿಕ ಸಿನಿಮಾ ಮರುಬಿಡುಗಡೆಯಾಗಿದ್ದರೂ ಈ ಮಟ್ಟಿಗೆ ಕ್ರೇಜ್ ಉಳಿಸಿಕೊಂಡಿರುವುದೇ ಹೆಚ್ಚು ಎನ್ನುತ್ತಾರೆ. ಕಳೆದ ಮೂರು ದಿನಗಳಲ್ಲಿ 45 ಲಕ್ಷದಿಂದ 50 ಲಕ್ಷ ರೂಪಾಯಿವರೆಗೂ ಕಲೆಕ್ಷನ್ ಆಗಿರಬಹುದೆಂದು ಲೆಕ್ಕ ಹಾಕಲಾಗಿದೆ. ಆದರೆ, ಈ ಬಗ್ಗೆ ಸಿನಿಮಾದ ನಿರ್ಮಾಪಕರು ಇನ್ನೂ ಅಧಿಕೃತ ಮಾಹಿತಿ ನೀಡಿಲ್ಲ.

ವಾರದ ಕಲೆಕ್ಷನ್ ನಿರೀಕ್ಷೆ ಎಷ್ಟು?

ಇತ್ತೀಚೆಗೆ ಕನ್ನಡ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ಮರು ಬಿಡುಗಡೆ ಮಾಡಲಾಗುತ್ತಿದೆ. 'ಎ', 'ಕರಿಯ', 'ಉಪೇಂದ್ರ' ಸೇರಿದಂತೆ ಕನ್ನಡದ ಸೂಪರ್‌ಸ್ಟಾರ್ ಸಿನಿಮಾಗಳು ರಿಲೀಸ್ ಆಗಿವೆ. ಹಾಗಂತ ಎಲ್ಲಾ ಸಿನಿಮಾಗಳಿಗೂ ಇಷ್ಟೊಂದು ರೆಸ್ಪಾನ್ಸ್ ಸಿಕ್ಕಿದೆ ಅಂತಲ್ಲ. ಇತ್ತೀಚೆಗೆ ತೆರೆಕಂಡಿರುವ ಸಿನಿಮಾಗಳ ಪೈಕಿ 'ಕರಿಯ', 'ಉಪೇಂದ್ರ' ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಒಂದು ವಾರದಲ್ಲಿ 75 ಲಕ್ಷ ರೂಪಾಯಿ ದಾಟಿದರೂ ಒಳ್ಳೆಯ ಕಲೆಕ್ಷನ್ ಎಂದು ಹೇಳಬಹುದು.

'ಓಂ'ಗೂ ಸಿಕ್ಕಿತ್ತು ಉತ್ತಮ ಪ್ರತಿಕ್ರಿಯೆ

'ಉಪೇಂದ್ರ' ಸಿನಿಮಾ ಈ 25 ವರ್ಷಗಳಲ್ಲಿ ಅದೆಷ್ಟೋ ಬಾರಿ ಕಿರುತೆರೆಯಲ್ಲಿ ಪ್ರಸಾರಗೊಂಡಿದೆ. ಹೀಗಿದ್ದರೂ ಸಹ ಸಿನಿಮಾವನ್ನು ಮತ್ತೆ ಚಿತ್ರಮಂದಿರಕ್ಕೆ ಬಂದು ನೋಡಿದ್ದಾರೆ. ಸಿನಿಮಾವನ್ನು ಎಂಜಾಯ್ ಮಾಡಿದ್ದಾರೆ. ಹಾಗೇ ಉಪ್ಪಿ ನಿರ್ದೇಶಿಸಿದ 'ಓಂ' ಸಿನಿಮಾ ಕೂಡ ಹಲವು ಬಾರಿ ರಿಲೀಸ್ ಆಗಿತ್ತು. ಬಿಡುಗಡೆಯಾದಾಗಲೆಲ್ಲಾ ಸಿನಿಮಾಗೆ ಮಸ್ತ್ ರೆಸ್ಪಾನ್ಸ್ ಸಿಕ್ಕಿದೆ.

More from Filmibeat

English summary
Upendra Kannada Movie Re Release Box Office Collection Day 3 Report
Read more about: upendra box office filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X