Kabzaa Box Office: ಮೊದಲ ದಿನ ಬಾಕ್ಸಾಫೀಸ್ ಕಲೆಕ್ಷನ್ ಹೇಗಿದೆ? ವಿಶ್ವದಲ್ಲಿ ₹54 ಕೋಟಿ.. ಭಾರತದಲ್ಲೆಷ್ಟು? ಕರ್ನಾಟಕದಲ್ಲೆಷ್ಟು?
2023ರ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ ಥಿಯೇಟರ್‌ಗೆ ಲಗ್ಗೆ ಇಟ್ಟಿದೆ. ಆರ್ ಚಂದ್ರ ನಿರ್ದೇಶಿಸಿದ 'ಕಬ್ಜ' ವಿಶ್ವದಾದ್ಯಂತ ಮೊದಲ ದಿನ ಸುಮಾರು 4000 ಸ್ಕ್ರೀನ್‌ಗಳಲ್ಲಿ ರಿಲೀಸ್ ಆಗಿತ್ತು. ಹೀಗಾಗಿ ಎಲ್ಲರ ಕಣ್ಣು ಈ ಸಿನಿಮಾದ ಬಾಕ್ಸಾಫೀಸ್ ಕಲೆಕ್ಷನ್ ಮೇಲಿದೆ.
ಅಂದ್ಹಾಗೆ 'ಕಬ್ಜ' ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ ಮೊದಲ ಅಧಿಕೃತ ಪ್ಯಾನ್ ಇಂಡಿಯಾ ಸಿನಿಮಾ. ಹೀಗಾಗಿ ಐದು ಭಾಷೆಗಳಲ್ಲಿ ಕಲೆಕ್ಷನ್ ಹೇಗಿದೆ? ಅನ್ನೋ ಕುತೂಹಲವಂತೂ ಇದೆ. ಇವರೊಂದಿಗೆ ಕಿಚ್ಚ ಸುದೀಪ್ ಕಿಚ್ಚು ಹಚ್ಚೋ ಆಕ್ಟಿಂಗ್. ಶಿವಣ್ಣ ಮಾಸ್ ಎಂಟ್ರಿ ಪ್ರೇಕ್ಷಕರನ್ನು ಕಿಕ್ ಕೊಟ್ಟಿದೆ. ಹಾಗೇ ಬಾಕ್ಸಾಫೀಸ್‌ನಲ್ಲೂ ಮೋಡಿ ಮಾಡಿದೆ.

ನಿನ್ನೆ (ಮಾರ್ಚ್ 17) ರಾತ್ರಿ ನಿರ್ದೇಶಕ ಆರ್.ಚಂದ್ರು ನೆಕ್ಸ್ಟ್ ಲೆವೆಲ್ ಕಲೆಕ್ಷನ್ ಆಗಿದೆ ಅಂತ ಹೇಳಿಕೆ ನೀಡಿದ್ದರು. ಅಲ್ಲದೆ ವಿತರಕರಿಂದ ಕಲೆಕ್ಷನ್ ಮಾಹಿತಿಯನ್ನು ಪಡೆದು ಮೊದಲ ದಿನದ ಕಲೆಕ್ಷನ್ ಅನ್ನು ಅಧಿಕೃತವಾಗಿ ನೀಡುವುದಾಗಿ ನೀಡುವುದಾಗಿ ಹೇಳಿದ್ದರು. ಆದ್ರೀಗ ಟ್ರೇಡ್ ಎಕ್ಸ್‌ಪರ್ಟ್‌ಗಳು ಮೊದಲ ದಿನದ ಕಲೆಕ್ಷನ್ ರಿಪೋರ್ಟ್ ಅನ್ನು ಹೊರಬಿಟ್ಟಿದ್ದಾರೆ.
'ಕಬ್ಜ' ವಿಶ್ವದಾದ್ಯಂತ ಫಸ್ಟ್ ಡೇ ಕಲೆಕ್ಷನ್ ಎಷ್ಟು?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಮೊದಲ ಕಲೆಕ್ಷನ್ ಭರ್ಜರಿಯಾಗಿದೆ ಅನ್ನೋ ಮಾತು ಕೇಳಿಬರುತ್ತಿದೆ. ವಿಶ್ವದಾದ್ಯಂತ ಸಿನಿಮಾ ತೆರೆಕಂಡಿದ್ದರಿಂದ 'ಕಬ್ಜ'ಗೆ ದೊಡ್ಡ ಮಟ್ಟದ ಕಲೆಕ್ಷನ್ ಅನ್ನು ನಿರೀಕ್ಷೆ ಮಾಡಲಾಗಿತ್ತು. ಮೂಲಗಳ ಪ್ರಕಾರ, ವಿಶ್ವದಾದ್ಯಂತ ಅದ್ಭುತ ಕಲೆಕ್ಷನ್ ಆಗಿದ್ದು, ಸುಮಾರು ₹54 ಕೋಟಿ ರೂ.ಗಳಷ್ಟು ಗಳಿಕೆ ಕಂಡಿದೆ ಎನ್ನಲಾಗಿದೆ.
ಸುಮಾರು ನಾಲ್ಕು ಸಾವಿರಕ್ಕೂ ಅಧಿಕ ಸ್ಕ್ರೀನ್‌ಗಳಿಂದ ಬಂದಿರೋ ಕಲೆಕ್ಷನ್ ಇದು. ಹಾಗೇ ಭಾರತದಾದ್ಯಂತ ಮೊದಲ ದಿನ ಕಲೆಕ್ಷನ್ ಉತ್ತಮವಾಗಿದೆ ಎನ್ನಲಾಗುತ್ತಿದೆ. ಅಲ್ಲದೆ ನಿನ್ನೆ (ಮಾರ್ಚ್ 17) ನಿರ್ದೇಶಕ ಆರ್ ಚಂದ್ರು ಕೂಡ ಉತ್ತಮ ರೆಸ್ಪಾನ್ಸ್ ಸಿಕ್ಕಿರೋದ್ರಿಂದ ಸ್ಕ್ರೀನ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ ಎಂದು ಹೇಳಿದ್ದರು. ಈಗ ಹೊರಬಿದ್ದರೋ ಕಲೆಕ್ಷನ್ ರಿಪೋರ್ಟ್ ಕಿಕ್ ಕೊಡುತ್ತಿದೆ.

ಭಾರತದಾದ್ಯಂತ 'ಕಬ್ಜ' ಕಲೆಕ್ಷನ್ ಎಷ್ಟು?
'ಕಬ್ಜ' ಭಾರತದಲ್ಲಿ ಬಿಡುಗಡೆಯಾದ ಕಡೆಗಳಲೆಲ್ಲಾ ಅದ್ಭುತ ಕಲೆಕ್ಷನ್ ಕಂಡಿದೆ ಅನ್ನೋ ಮಾಹಿತಿ ಹೊರಬಿದ್ದಿದೆ. ಕನ್ನಡ, ಹಿಂದಿ, ತೆಲುಗು ಹಾಗೂ ತಮಿಳಿನಲ್ಲಿ ಉತ್ತಮ ಕಲೆಕ್ಷನ್ ಮಾಡಿದೆ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಹೇಳುತ್ತಿದ್ದಾರೆ. ದಕ್ಷಿಣ ಭಾರತದಿಂದ ₹26 ರಿಂದ ₹27 ಕೋಟಿ ಹಾಗೂ ಹಿಂದಿ ಬೆಲ್ಟ್‌ನಿಂದ ₹9 ರಿಂದ ₹10 ಕೋಟಿ ಬಂದಿದೆ ಅನ್ನೋ ರಿಪೋರ್ಟ್ ಇದೆ. ಭಾರತದಲ್ಲಿ ಎಲ್ಲೆಲ್ಲಿ ಎಷ್ಟೆಷ್ಟು ಕಲೆಕ್ಷನ್ ಆಗಿದೆ ಅನ್ನೋ ಡಿಟೈಲ್ಸ್ ಹೀಗಿದೆ.
ಭಾರತದ 'ಕಬ್ಜ' ಕಲೆಕ್ಷನ್ (ಅಂದಾಜು)
ಕರ್ನಾಟಕ ₹20 ಕೋಟಿ (ಅಂದಾಜು)
ಹಿಂದಿ (ಬೆಲ್ಡ್) ₹9 ಕೋಟಿ (ಅಂದಾಜು)
ತೆಲುಗು ₹4 ಕೋಟಿ (ಅಂದಾಜು)
ತಮಿಳು ₹2 ಕೋಟಿ (ಅಂದಾಜು)
ಮಲಯಾಳಂ ₹1 ಕೋಟಿ (ಅಂದಾಜು)
ಒಟ್ಟು ₹36 ಕೋಟಿ (ಅಂದಾಜು)
ವಿದೇಶದ ಕಲೆಕ್ಷನ್ 'ಕಬ್ಜ' ₹8 ಕೋಟಿ?
'ಕಬ್ಜ' ಓವರ್‌ಸೀಸ್‌ನಲ್ಲೂ ಉತ್ತಮ ಕಲೆಕ್ಷನ್ ಮಾಡಿದಯಂತೆ. ಮೂಲಗಳ ಪ್ರಕಾರ, ಓವರ್‌ಸೀನ್‌ನಿಂದ ಸುಮಾರು ₹8 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ ಎಂದು ಹೇಳಲಾಗುತ್ತಿದೆ. ಸುಮಾರು ನಾಲ್ಕು ದೇಶಗಳಲ್ಲಿ ಈ ಸಿನಿಮಾ ಗಳಿಸಿದ ಕಲೆಕ್ಷನ್ ರಿಪೋರ್ಟ್ ಇದಾಗಿದ್ದು, ಇನ್ನೂ ಚಿತ್ರತಂಡ ಅಧಿಕೃತವಾಗಿ ಕಲೆಕ್ಷನ್ ರಿಪೋರ್ಟ್ ಅನ್ನು ಹೊರ ಹಾಕಬೇಕಿದೆ.
ಇನ್ನು ಎರಡನೇ ದಿನವೂ 'ಕಬ್ಜ'ಗೆ ರೆಸ್ಪಾನ್ಸ್ ಉತ್ತಮವಾಗಿದೆ ಎಂದು ಚಿತ್ರತಂಡ ಹೇಳುತ್ತಿದೆ. ವೀಕೆಂಡ್‌ನಲ್ಲಿ 'ಕಬ್ಜ' ಕಲೆಕ್ಷನ್ ಅದ್ಭುತವಾಗಿದ್ದರೆ, ಇನ್ನು ಎರಡು ದಿನಗಳಲ್ಲಿ ಈ ಸಿನಿಮಾದ ಗಳಿಕೆ ₹100 ಕೋಟಿ ಸಾಧ್ಯತೆ ಎಂದು ಟ್ರೇಡ್ ಅನಲಿಸ್ಟ್‌ಗಳು ಭವಿಷ್ಯ ನುಡಿಯುತ್ತಿದ್ದಾರೆ. ಹಾಗೇನಾದರೂ 'ಕಬ್ಜ' ₹100 ಕೋಟಿಯ ಗಡಿ ದಾಟಿದರೆ, ಉಪೇಂದ್ರ ಕರಿಯರ್‌ನಲ್ಲಿ ಅತೀ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂದಾಗಲಿದೆ.


Click it and Unblock the Notifications











