'ಉಪೇಂದ್ರ' ರೀ- ರಿಲೀಸ್: ಕಿಕ್ಕಿರಿದ ಜನರ ಮುಂದೆ ಉಪ್ಪಿಯ ಕಾಂಟ್ರವರ್ಸಿ ಮಾತು
ರಿಯಲ್‌ಸ್ಟಾರ್ ಅಂತ ಉಪ್ಪಿಗೆ ಬಿರುದು ಕೊಟ್ಟ ಸಿನಿಮಾ 'ಉಪೇಂದ್ರ' ರೀ ರಿಲೀಸ್ ಆಗಿದೆ. ಈ ಸಿನಿಮಾ 25 ವರ್ಷಗಳನ್ನು ಪೂರೈಸಿದ ಬೆನ್ನಲ್ಲೇ ಈ ಸಿನಿಮಾವನ್ನು ನಿರ್ಮಾಪಕ ಶಿಲ್ಪಾ ಶ್ರೀನಿವಾಸ್ ಮರು ಬಿಡುಗಡೆ ಮಾಡಿದ್ದಾರೆ. ಹೊಚ್ಚ ಸಿನಿಮಾವನ್ನು ರಿಲೀಸ್ ಮಾಡುವಂತೆಯೇ 'ಉಪೇಂದ್ರ' ಸಿನಿಮಾವನ್ನು ಮರು ಬಿಡುಗಡೆ ಮಾಡಲಾಗಿದೆ.
ಬೆಳಗ್ಗೆ ಆರು ಗಂಟೆಯಿಂದಲೇ ಬೆಂಗಳೂರಿನ ನರ್ತಕಿ ಹಾಗೂ ವಿರೇಶ್ ಅಂತ ಪ್ರಮುಖ ಚಿತ್ರಮಂದಿರಗಳಲ್ಲಿ ಫ್ಯಾನ್ಸ್ ಹಾಕಲಾಗಿದೆ. 25 ವರ್ಷಗಳ ಬಳಿಕ ಸಿನಿಮಾ ರಿಲೀಸ್ ಆಗುತ್ತಿದ್ದರೂ, ಎರಡೂ ಚಿತ್ರಮಂದಿರಗಳೂ ಹೌಸ್‌ಫುಲ್ ಆಗಿದೆ. ಉಪೇಂದ್ರ ಅಭಿಮಾನಿಗಳು ಕಿಕ್ಕಿರಿದು ಸಿನಿಮಾ ನೋಡಿದ್ದಾರೆ.

ಉಪೇಂದ್ರ ಹುಟ್ಟುಹಬ್ಬದಂದು ಮಾತಉ ಕೊಟ್ಟಂತೆ ಅಭಿಮಾನಿಗಳೊಂದಿಗೆ ಕೂತು ಸಿನಿಮಾ ನೋಡಿದ್ದಾರೆ. 4K ರೆಸಲ್ಯೂಷನ್‌ನಲ್ಲಿ ಈ ಸಿನಿಮಾವನ್ನು ಮರುಬಿಡುಗಡೆ ಮಾಡಲಾಗಿದ್ದು, ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಇದೇ ಉಪ್ಪಿ 'ಉಪೇಂದ್ರ' ಸಿನಿಮಾ ಮಾಡುವಾಗ ಆಗಿ ಇದ್ದ ತಮ್ಮ ಮನಸ್ಥಿತಿ, ಕಾಂಟ್ರವರ್ಸಿ ಸೇರಿದಂತೆ ಹಲವು ವಿಷಯಗಳನ್ನು ಮಾಧ್ಯಮಗಳ ಜೊತೆ ಹಂಚಿಕೊಂಡಿದ್ದಾರೆ.
"ಇನ್ನು 20 ವರ್ಷ ನೋಡ್ತಾರೆ"
"ಈಗಲೂ ಈ ಪಿಕ್ಚರ್ ನೋಡಿದರೆ, ಇನ್ನೂ 20 ವರ್ಷ ಅಡ್ವಾನ್ಸ್ ಇದೆ ಅನಿಸುತ್ತೆ. ನೋಡಿ ಇದೆಲ್ಲ, ಆ ಟೈಮ್, ಆ ಘಳಿಗೆ, ಆ ಸಮಯದಲ್ಲಿ ನನ್ನೊಳಗೆ ಇದ್ದಂತ ಭಾವನೆಗಳು ಅದೆಲ್ಲ ಸೇರಿ ಇಂತಹ ಸಿನಿಮಾ ಮಾಡಿಸುತ್ತೆ. ನಾವು ಮಾಡಿದ್ವಿ ಅನ್ನೋದು ತಪ್ಪಾಗುತ್ತೆ. ಅದೇನೋ ಒಂದು ಟೈಮ್ ಭಗವಂತನೇ ಈ ಸಿನಿಮಾ ಮಾಡಿಸಿದ್ದಾನೆ ಅಷ್ಟೇ. ಇನ್ನೊಂದು 20 ವರ್ಷ ಇದೇ ತರ ಸಿನಿಮಾವನ್ನು ಎಂಜಾಯ್ ಮಾಡುತ್ತಾರೆ ಅನಿಸುತ್ತೆ." ಎಂದು ಉಪೇಂದ್ರ ಸಿನಿಮಾ ನೋಡಿದ ಬಳಿಕ ಪ್ರತಿಕ್ರಿಯೆ ನೀಡಿದ್ದಾರೆ.
"ಸ್ವಲ್ಪ ಕಾಂಟ್ರವರ್ಸಿನೂ ಆಯ್ತು"
ಉಪೇಂದ್ರ ಸಿನಿಮಾ ರಿಲೀಸ್ ಆದಾಗ ಸಿಕ್ಕಾಪಟ್ಟೆ ಅಡ್ವಾನ್ಸ್ ಇದೆ ಅನ್ನೋ ಮಾತು ಕೇಳಿ ಬಂದಿದ್ದವು. ಅಲ್ಲದೆ ಕೆಲವರು ಈ ಸಿನಿಮಾ ವಿರುದ್ಧವೂ ತಿರುಗಿಬಿದ್ದಿದ್ದರು. 25 ವರ್ಷಗಳ ಹಿಂದೆ ಇಂತಹ ಅಡ್ವಾನ್ಸ್ ಸಬ್ಜೆಕ್ಟ್ ಅನ್ನು ಕೆಲವು ಜನರು ವಿರೋಧಿಸಿದ್ದರು. "ಅವತ್ತು ಫಸ್ಟ್ ಟೈಮ್ ಅಲ್ವಾ? ಈತರಹದ ಸಬ್ಜೆಕ್ಟ್ ಅನ್ನು ಹೇಗೆ ತೆಗೆದುಕೊಳ್ಳುತ್ತಾರೆ ಅನ್ನೋ ಭಯ ಇತ್ತು. ಅದರಿಂದ ಸ್ವಲ್ಪ ಕಾಂಟ್ರವರ್ಸಿನೂ ಆಯ್ತು. ಯಾಕಂದ್ರೆ, ಸಿನಿಮಾ ಅಡ್ವಾನ್ಸ್ ಆಗಿ ಇದ್ದಿದ್ದರಿಂದ ಆಯ್ತು. ಈಗಲೂ ಹಾಗೇ ಅನಿಸುತ್ತೆ." ಎಂದಿದ್ದಾರೆ.

"ನನಗೆ ಏನೂ ಗೊತ್ತಿರಲಿಲ್ಲ"
ಉಪೇಂದ್ರ ಸಿನಿಮಾ ಮಾಡುವಾಗ ತಾನೇನು ಯೋಚನೆ ಮಾಡಿರಲಿಲ್ಲ. ಹಾಗೇನು ಯೋಚನೆ ಮಾಡಿದ್ದರೆ, ಈ ಸಿನಿಮಾ ಮಾಡುವುದಕ್ಕೆ ಆಗುತ್ತಿರಲಿಲ್ಲ ಎಂದು ಉಪ್ಪಿ ಹೇಳಿಕೊಂಡಿದ್ದಾರೆ. "ನಾನು ಯೋಚನೆ ಮಾಡಿದ್ರೆ ಆಗುತ್ತಿರಲಿಲ್ಲ. ಅದೇನೋ ಫ್ಲೋನಲ್ಲಿ ಮಾಡಿಬಿಟ್ಟೆ. ನನಗೆ ಗೊತ್ತಿರಲಿಲ್ಲ. ಸೆನ್ಸಾರ್ ಸಮಸ್ಯೆ ಆಗುತ್ತಾ? ಜನರು ಏನಂದು ಕೊಳ್ಳುತ್ತಾರೆ? ಅಂತ ಯೋಚನೆ ಮಾಡದೆ ಮಾಡಿದ್ದಕ್ಕೆ ಅದೊಂದು ಫ್ಲೋನಲ್ಲಿ ಬಂದಿದೆ ಈ ಪಿಕ್ಚರ್. ತುಂಬಾ ಲೆಕ್ಕಾಚಾರ ಹಾಕಿ ಈತರ ಪಿಕ್ಚರ್ ಮಾಡುವುದಕ್ಕೆ ಆಗುವುದಿಲ್ಲ." ಎಂದು ಉಪ್ಪಿ ಹೇಳಿದ್ದಾರೆ.
ಸಖತ್ ರೆಸ್ಪಾನ್ಸ್
ಉಪೇಂದ್ರ ಸಿನಿಮಾ ರೀ ರಿಲೀಸ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. 25 ವರ್ಷಗಳ ಬಳಿಕವೂ ಈ ಸಿನಿಮಾವನ್ನು ನೋಡಿ ಪ್ರೇಕ್ಷಕರು ಎಂಜಾಯ್ ಮಾಡುತ್ತಿದ್ದಾರೆ. ಬೆಳ್ಳಬೆಳಗ್ಗೆನೇ ಸಿನಿಮಾ ನೋಡುವುದಕ್ಕೆ ಜನರು ಥಿಯೇಟರ್‌ಗೆ ಬಂದಿದ್ದಾರೆ. 25 ವರ್ಷದ ಹಿಂದೆ ಹೇಗೆ ಪ್ರತಿಕ್ರಿಯೆ ಸಿಕ್ಕಿತ್ತೋ ಅದೇ ರೆಸ್ಪಾನ್ಸ್ ಈಗಲೂ ಸಿಕ್ಕಿದೆ.


Click it and Unblock the Notifications











