Upendra Box Office:'ಉಪೇಂದ್ರ' ರೀ ರಿಲೀಸ್.. ಮೊದಲನೇ ದಿನ ಸಿನಿಮಾದ ಕಲೆಕ್ಷನ್ ಎಷ್ಟು?
25 ವರ್ಷಗಳ ಹಿಂದೆ ತೆರೆಕಂಡ ರಿಯಲ್ ಸ್ಟಾರ್ ಉಪೇಂದ್ರ ಸಿನಿಮಾಗಳಿಗೆ ಇಂದಿಗೂ ಕ್ರೇಜ್ ಇದೆ. ಅದರಲ್ಲೂ ಉಪ್ಪಿ ನಿರ್ದೇಶಿಸಿ, ನಟಿಸಿದ ಸಿನಿಮಾಗಳಿಗೆ ಇಂದಿಗೂ ಬೇಡಿಕೆ ಇದೆ ಅನ್ನೋದು 'ಉಪೇಂದ್ರ' ಸಾಕ್ಷಿ. 25 ವರ್ಷಗಳ ಹಿಂದೆ ತೆರೆಕಂಡಿದ್ದ 'ಉಪೇಂದ್ರ' ಮತ್ತೆ ರೀ ರಿಲೀಸ್ ಆಗಿದೆ.
ನಿನ್ನೆ (ಸೆಪ್ಟೆಂಬರ್ 20)ರಂದು ಉಪ್ಪಿಯ ಹುಟ್ಟುಹಬ್ಬದ ಅಂಗವಾಗಿ 'ಉಪೇಂದ್ರ' ಸಿನಿಮಾವನ್ನು ರಿಲೀಸ್ ಮಾಡಲಾಗಿದೆ. ಹೊಸ ತಂತ್ರಜ್ಞಾನವನ್ನು ಅಳವಡಿಸಿ ಮತ್ತೆ ಉಪೇಂದ್ರ ಅಭಿಮಾನಿಗಳಿಗಾಗಿ ಬಿಡುಗಡೆ ಮಾಡಲಾಗಿದೆ. ಸುಮಾರು 60ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಿದೆ.

ಹೊಸ ಸಿನಿಮಾವನ್ನು ರಿಲೀಸ್ ಮಾಡುವಂತೆಯೇ ಉಪೇಂದ್ರ ಕೂಡ ರಿಲೀಸ್ ಮಾಡಲಾಗಿದೆ. ಬೆಳಗ್ಗೆ 6 ಗಂಟೆಯಿಂದಲೇ ಫ್ಯಾನ್ ಶೋ ಕೂಡ ಏರ್ಪಡಿಸಲಾಗಿತ್ತು. ಬೆಂಗಳೂರಿನ ನರ್ತಕಿ ಹಾಗೂ ವೀರೇಶ್ ಚಿತ್ರಮಂದಿರಗಳು ಹೌಸ್‌ಫುಲ್ ಆಗಿದ್ದವು. 'ಉಪೇಂದ್ರ' ಸಿನಿಮಾವನ್ನು ಅಭಿಮಾನಿಗಳು ಕಣ್ತುಂಬಿಕೊಂಡು ಕುಣಿದು ಕುಪ್ಪಳಿಸಿದ್ದಾರೆ.
'ಉಪೇಂದ್ರ' ರೀ ರಿಲೀಸ್‌ಗೇ ಹೇಗಿದೆ ರೆಸ್ಪಾನ್ಸ್?
ಉಪೇಂದ್ರ ರೀ ರಿಲೀಸ್ ಆಗುತ್ತಿದೆ ಅಂತ ಗೊತ್ತಾಗುತ್ತಿದ್ದಂತೆ ಹಾರ್ಡ್ ಕೋರ್ ಉಪ್ಪಿ ಅಭಿಮಾನಿಗಳು ಥ್ರಿಲ್ ಆಗಿದ್ದರು. ಹೀಗಾಗಿ ಮೊದಲ ದಿನ ಸಿನಿಮಾ ಡಿಸೆಂಟ್ ಕಲೆಕ್ಷನ್ ಮಾಡಿದೆ. ಬಿ ಹಾಗೂ ಸಿ ಸೆಂಟರ್‌ಗಳಲ್ಲಿ ಫಸ್ಟ್ ಡೇ ನಿರೀಕ್ಷೆಯಂತೆಯೇ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಥಿಯೇಟರ್‌ನಲ್ಲಿ ಅಂದು ಸಿನಿಮಾ ನೋಡುವುದಕ್ಕೆ ಆಗದೇ ಇದ್ದವರು. ಈಗ ಚಿತ್ರಮಂದಿರಕ್ಕೆ ಬಂದು 'ಉಪೇಂದ್ರ' ಸಿನಿಮಾ ನೋಡುತ್ತಿದ್ದಾರೆ.

ಮೊದಲ ದಿನದ ಕಲೆಕ್ಷನ್ ಎಷ್ಟು?
'ಉಪೇಂದ್ರ' ಸಿನಿಮಾ ಮೊದಲ ದಿನ ಡಿಸೆಂಟ್ ಕಲೆಕ್ಷನ್ ಮಾಡಿದೆ ಎಂದು ವಿತರಕರ ವಲಯದಲ್ಲಿ ಚರ್ಚೆಯಾಗುತ್ತಿದೆ. ಲಿಮಿಟೆಡ್ ಚಿತ್ರಮಂದಿರಗಳಲ್ಲಿ ಈ ಸಿನಿಮಾವನ್ನು ರಿಲೀಸ್ ಮಾಡಲಾಗಿತ್ತು. ಈ 25 ವರ್ಷಗಳಲ್ಲಿ 'ಉಪೇಂದ್ರ' ಸಿನಿಮಾವನ್ನು ಸಾಕಷ್ಟು ಬಾರಿ ಟಿವಿಯಲ್ಲಿ ಜನ ನೋಡಿದ್ದರೂ, ಥಿಯೇಟರ್‌ಗೆ ಬಂದು ಸಿನಿಮಾ ನೋಡುತ್ತಿದ್ದಾರೆ. ಟ್ರೇಡ್ ಎಕ್ಸ್‌ಪರ್ಟ್‌ಗಳ ಪ್ರಕಾರ, ಈ ಸಿನಿಮಾ ಮೊದಲ ದಿನ 15 ರಿಂದ 20 ಲಕ್ಷ ರೂಪಾಯಿ ಕಲೆಕ್ಷನ್ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಆದರೆ, ನಿರ್ಮಾಪಕರು ಅಧಿಕೃತ ಮಾಹಿತಿಯನ್ನು ಇನ್ನೂ ಹೊರ ಹಾಕಬೇಕಿದೆ.
ವೀಕೆಂಡ್ ರೆಸ್ಪಾನ್ಸ್ ಹೇಗಿದೆ?
ವೀಕೆಂಡ್‌ನಲ್ಲಿ 'ಉಪೇಂದ್ರ' ಸಿನಿಮಾ ರೆಸ್ಪಾನ್ ಸಾಧಾರಣವಾಗಿದೆ. ಬುಕ್ ಮೈ ಶೋನಲ್ಲಿ ಕ್ರೇಜಿಯಾಗೇನು ಟಿಕೆಟ್ ಬುಕಿಂಗ್ ಆಗುತ್ತಿಲ್ಲ. ಆದರೆ, ಹಳೆಯ ಸಿನಿಮಾ ಆಗಿದ್ದರಿಂದ ಜನರು ಥಿಯೇಟರ್‌ಗೆ ಹೋಗಿ ಟಿಕೆಟ್ ತೆಗೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಇಂದು (ಸೆಪ್ಟೆಂಬರ್ 21) ಮತ್ತು ನಾಳೆ (ಸೆಪ್ಟೆಂಬರ್ 22) ಈ ಎರಡು ದಿನ ಜನರು ಥಿಯೇಟರ್‌ಗೆ ಬಂದರೆ, ಮತ್ತೆ 'ಉಪೇಂದ್ರ' ಗೆದ್ದಂತೆ.
ಫಸ್ಟ್ ರಿಲೀಸ್ ಕಲೆಕ್ಷನ್ ಎಷ್ಟು?
ಶಿಲ್ಪಾ ಶ್ರೀನಿವಾಸ್ ನಿರ್ಮಿಸಿದ್ದ ಈ ಸಿನಿಮಾಗೆ ಆಗಿನ ಕಾಲಕ್ಕೆ 3.5 ಕೋಟಿ ರೂಪಾಯಿ ಬಜೆಟ್ ಆಗಿತ್ತು. ಬಿಡುಗಡೆ ಬಳಿಕ ಈ ಸಿನಿಮಾ ವಿವಾದಕ್ಕೆ ಸಿಲುಕಿದ್ದರೂ, ಉಪೇಂದ್ರ ಡಬಲ್ ಹಣವನ್ನೇ ಕೆಲಕ್ಷನ್ ಮಾಡಿತ್ತು. ನಿರ್ಮಾಪಕರ ಹೇಳುವಂತೆ 'ಉಪೇಂದ್ರ' ಸಿನಿಮಾ ಬಜೆಟ್‌ಗಿಂತ ಡಬಲ್ ಕಲೆಕ್ಷನ್ ಮಾಡಿತ್ತು. ಅಂದರೆ, 7 ರಿಂದ 10 ಕೋಟಿ ರೂಪಾಯಿ ಕಲೆಕ್ಷನ್ ಮಾಡಿತ್ತು.


Click it and Unblock the Notifications











