"ಓನ್ಲಿ ಒನ್ ನೇಮ್.. ನೇಮ್ ಈಸ್ ರಜನಿಕಾಂತ್ ಅಷ್ಟೆ"; ಸೂಪರ್‌ಸ್ಟಾರ್ ಸಿನಿಮಾದಲ್ಲಿ ರಿಯಲ್‌ಸ್ಟಾರ್ ಖದರ್

ರಿಯಲ್ ಸ್ಟಾರ್ ಉಪೇಂದ್ರ ಅಭಿಮಾನಿಗಳು ಯಾವಾಗ 'ಯುಐ' ಬರುತ್ತೋ ಅಂತ ಕಾದು ಕೂತಿದ್ದಾರೆ. ಬಹಳ ದಿನಗಳ ಬಳಿಕ ಉಪ್ಪಿ ನಿರ್ದೇಶನಕ್ಕೆ ಇಳಿದಿದ್ದು, ಆ ಸಿನಿಮಾವನ್ನು ಕಣ್ತುಂಬಿಕೊಳ್ಳುವುದಕ್ಕೆ ಫ್ಯಾನ್ಸ್ ಎದುರು ನೋಡುತ್ತಿದ್ದಾರೆ. ಎಲ್ಲರೂ 'ಯುಐ' ಬಗ್ಗೆ ಇನ್ನೇನು ಅಪ್‌ಡೇಟ್ ಕೊಡುತ್ತಾರೆ ಅಂತ ಕಾದು ಕೂತಿದ್ದವರಿಗೆ ಉಪ್ಪಿ ಬಿಗ್ ಸರ್ಪ್ರೈಸ್ ಅನ್ನೇ ಕೊಟ್ಟಿದ್ದಾರೆ.

ಸೂಪರ್‌ಸ್ಟಾರ್ ರಜನಿಕಾಂತ್ 'ಕೂಲಿ' ಸಿನಿಮಾದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ನಟಿಸುತ್ತಿರುವುದು ಗೊತ್ತೇ ಇದೆ. ಈಗಾಗಲೇ ಚಿತ್ರತಂಡವೇ ಈ ವಿಷಯವನ್ನು ಬಹಿರಂಗಪಡಿಸಿದೆ. ಉಪೇಂದ್ರ 'ಕೂಲಿ' ಸಿನಿಮಾ ಕಾಲೀಶ ಅನ್ನೋ ಪಾತ್ರದಲ್ಲಿ ನಟಿಸುತ್ತಿದ್ದು, ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಲಾಗಿದೆ. ಈ ಕಾರಣಕ್ಕೆ ಉಪೇಂದ್ರ ಅಭಿಮಾನಿಗಳು ಡಬಲ್ ಖುಷಿಯಲ್ಲಿದ್ದಾರೆ.

Upendra open up about how he got role for Superstar Rajinikanth movie Coolie movie

ಆದರೆ, ಸೂಪರ್‌ಸ್ಟಾರ್ ಸಿನಿಮಾಗೆ ಉಪ್ಪಿನೇ ಆಯ್ಕೆ ಆಗಿದ್ದೇಕೆ? ಸೂಪರ್‌ಸ್ಟಾರ್ ಜೊತೆ ನಟಿಸುವುದಕ್ಕೆ ರಿಯಲ್‌ಸ್ಟಾರ್‌ಗೆ ಅವಕಾಶ ಸಿಕ್ಕಿದ್ದು ಹೇಗೆ? ಲೋಕೇಶ್ ಕನಕರಾಜ್ ಬಂದು ಕಥೆ ಹೇಳಿದಾಗ ಉಪೇಂದ್ರ ಹೇಳಿದ್ದೇನು? ಈ ಪ್ರಶ್ನೆಗಳಿಗೆ ಉಪ್ಪಿಯಿಂದಾನೇ ಉತ್ತರ ಸಿಕ್ಕಿದೆ. ನ್ಯೂಸ್ ಪ್ಲಸ್ ಕರ್ನಾಟಕ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಉಪ್ಪಿ ಈ ಇಂಟ್ರೆಸ್ಟಿಂಗ್ ವಿಷಯಗಳನ್ನು ರಿವೀಲ್ ಮಾಡಿದ್ದಾರೆ.

"ಕೂಲಿ ಸಿನಿಮಾಗಾಗಿ ಒಂದು ದಿನದ ಶೂಟಿಂಗ್ ಮಾಡಿದ್ದೇನೆ. ಅಕ್ಟೋಬರ್ ಮೇಲೆ ಶೂಟಿಂಗ್ ಇದೆ. ಚೆನ್ನೈನಲ್ಲಿ ಯುಐ ಸಿನಿಮಾದ ಫೈನಲ್ ಮಿಕ್ಸಿಂಗ್ ನಡೆಯುತ್ತಿದೆ. ಅಲ್ಲೇ ಒಂದು ಮೆಸೇಜ್ ಬಂತು. ಫೋನ್ ಮಾಡಬಹುದಾ ಅಂತ. ಮಾಡಿದ್ಮೇಲೆ ಅವರು ಹೇಳಿದರು. ಹೀಗೆದೆ, ಹಿಂಗೆ ಡೈರೆಕ್ಟರ್ ಬಂದು ಮೀಟ್ ಮಾಡುತ್ತಾರೆ ಅಂತ ಹೇಳಿದ್ರು. ಅಲ್ಲಿಗೆ ಬಂದ್ರು. ಅಲ್ಲಿ ಬಂದು ಒಂದು ಲೈನ್ ಹೇಳಿದ್ರು. ನನಗೆ ಏನೂ ಹೇಳಬೇಡಿ. ಅವರ ಜೊತೆ ಸೈಡಿಗೆ ನಿಂತರೆ ಸಾಕು. ಅಂತಹ ದೊಡ್ಡ ಅಭಿಮಾನಿ ಅಂತ ಹೇಳಿದೆ." ಎಂದು ಉಪ್ಪಿ ಪ್ರತಿಕ್ರಿಯೆ ನೀಡಿದ್ದಾರೆ.

ಸೂಪರ್‌ಸ್ಟಾರ್ ಜೊತೆ ನಟಿಸಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಹಾಗೇ ನಾನು ಅವರ ಅಭಿಮಾನಿಯಾಗಿದ್ದು, ಅವರೊಂದಿಗೆ ನಟಿಸಬೇಕು ಅನ್ನೋ ಆಸೆ ನನಗೂ ಇತ್ತು ಎಂದು ಹೇಳಿದ್ದಾರೆ. "ಅವರ ಜೊತೆ ಆಕ್ಟ್ ಮಾಡಬೇಕು ಅಂತ ಆಸೆ ಯಾರಿಗೆ ಇರೋದಿಲ್ಲ ಹೇಳಿ. ಅವೆಲ್ಲ ಒಂದು ದೊಡ್ಡ ವಿಷಯ ಅಲ್ವಾ? ಒನ್ಲಿ ಒನ್ ನೇಮ್. ನೇಮ್ ಈಸ್ ರಜನಿಕಾಂತ್ ಅಷ್ಟೇ." ಎಂದಿದ್ದಾರೆ.

Upendra open up about how he got role for Superstar Rajinikanth movie Coolie movie

ಇನ್ನು ಸಿನಿಮಾರಂಗಕ್ಕೆ ಪ್ಲಾನ್ ಮಾಡಿ ಬಂದಿದ್ದಲ್ಲ. ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡುವ ದೃಷ್ಠಿಯಿಂದ ಬಂದಿದ್ದಾಗಿ ಉಪ್ಪಿ ಹೇಳಿಕೊಂಡಿದ್ದಾರೆ. "ನಾನು ಒಂದೇ ಒಂದು ಪ್ಲಾನ್ ಮಾಡಿದ್ದು ಏನಂದರೆ, ಸಮಾಜದಲ್ಲಿ ಏನಾದರೂ ಬದಲಾವಣೆ ಮಾಡಬೇಕು. ಏನೋ ಒಂದು ಹುಚ್ಚುತನ ಆ ಟೈಮ್‌ನಲ್ಲಿ. ಆ ವಯಸ್ಸಿನಲ್ಲಿ ಬಾರದೆ ಇರುವಂತಹ ಆಲೋಚನೆ ಅದು. ಆ ಟೈಮ್‌ನಲ್ಲಿ ಏನು ಮಾಡೋಣ ಅಂತ ಸಿನಿಮಾಗೆ ಬಂದಿದ್ದಷ್ಟೆ. ಸಿನಿಮಾದಲ್ಲೇನು ಪ್ಲ್ಯಾನ್ ಮಾಡಿರಲಿಲ್ಲ. ಸಿನಿಮಾದಲ್ಲಿ ಎಲ್ಲನೂ ಆಗುತ್ತಾ ಹೋಯ್ತು ಅಷ್ಟೇ." ಎಂದು ಉಪ್ಪಿ ಹೇಳಿದ್ದಾರೆ.

ಇದೇ ಸಂದರ್ಶನದಲ್ಲಿ ತಮ್ಮ ಗುರುಗಳಾದ ಕಾಶೀನಾಥ್ ಅವರ ಜೊತೆ ಮಾಡಿದ ಕೆಲಸವನ್ನು ನೆನಪಿಸಿಕೊಂಡಿದ್ದಾರೆ. ಝೀರೋದಿಂದ ಶುರುವಾಗುವ ಲೈಫ್ ಬಹಳ ಚೆನ್ನಾಗಿರುತ್ತೆ ಎಂದಿದ್ದಾರೆ. "ನಾನು ಒಂದು ಸಿನಿಮಾ ಮಾಡಬೇಕು ಅಂದಾಗ ನಾನೇನು ಪ್ರಿಫೇರ್ ಆಗಿರಲಿಲ್ಲ. ನಾನು ಕೆಲಸ ಮಾಡೋಕೆ ಶುರು ಮಾಡಿದ್ದು, ನೀವು ಹೇಳಿದ ಹಾಗೆ ಕೂಲಿ. ಅದೂ ಅಲ್ಲ. ಕಾಲೇಜು ಓದುತ್ತಿದ್ದೆ. ಯಾರ ಜೊತೆನೋ ಒಂದು ಕೆಲಸ ಮಾಡುತ್ತಿದ್ದೇನೆ ಅದೇ ನನಗೆ ಖುಷಿ. ಅಲ್ಲೇನೋ ಊಟ ಸಿಗುತ್ತೆ. ಒಂದು ಕಡೆ ಕೆಲಸ ಮಾಡುತ್ತಿದ್ದೇನೆ ಅನ್ನೋದೇ ಖುಷಿ. ಕಾಶಿಯವರಿಗೆ ಏನೋ ಬರೆದಾಗ ಅದನ್ನು ತೆಗೆದುಕೊಂಡರೆ ಖುಷಿ ನನಗೆ. ಅದಕ್ಕೆ ನಾನು ಯಾವಾಗಲೂ ಹೇಳುತ್ತಿರುತ್ತೇನೆ. ಝೀರೊದಿಂದ ಶುರುವಾಗುವ ಲೈಫ್ ಬಹಳ ಚೆನ್ನಾಗಿರುತ್ತೆ ಅಂತ." ಎಂದಿದ್ದಾರೆ.

More from Filmibeat

English summary
Upendra open up about how he got role for Superstar Rajinikanth movie Coolie movie:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X