ಕೊನೆಗೂ ಅನೌನ್ಸ್ ಆಗೇ ಬಿಡ್ತು 'UI' ರಿಲೀಸ್ ಡೇಟ್; ಕಿಚ್ಚ ಸುದೀಪ್ 'MAX' ಕಥೆಯೇನು?

ರಿಯಲ್‌ಸ್ಟಾರ್ ಉಪೇಂದ್ರ ನಟನೆಯ 'ಯುಐ' ಸಿನಿಮಾ ನೋಡುವುದಕ್ಕೆ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದರು. ಆದರೆ, ಉಪ್ಪಿ ರಿಲೀಸ್ ಡೇಟ್‌ ಅನೌನ್ಸ್ ಮಾಡದೆ ತಮ್ಮ ಅಭಿಮಾನಿಗಳನ್ನು ಕಾಡುತ್ತಲೇ ಇದ್ದರು. ದಸರಾ ಹಬ್ಬಕ್ಕಾದರೂ, ಬಿಡುಗಡೆ ದಿನ ಘೋಷಣೆ ಆಗಬಹುದು ಎಂಬ ನಿರೀಕ್ಷೆಯಿತ್ತು. ಉಪೇಂದ್ರ ಅದೂ ಮಾಡಿರಲಿಲ್ಲ. ಈಗ ವಿಜಯದಶಮಿ ಮುಗಿಯುತ್ತಿದ್ದಂತೆ ರಿಲೀಸ್ ಡೇಟ್ ಅನೌನ್ಸ್‌ ಮಾಡಿದ್ದಾರೆ.

ಉಪ್ಪಿ ನಿರ್ದೇಶನ ಮಾಡಿದ್ದಾರೆ ಅಂದರೆ ಅದಕ್ಕೆ ತಾನಾಗೇ ಕ್ರೇಜ್ ಬಂದು ಬಿಡುತ್ತೆ. ಈ ಹಿಂದೆ ಉಪೇಂದ್ರ ನಿರ್ದೇಶಿಸಿದ ಎರಡು ಸಿನಿಮಾಗಳನ್ನು ಬಿಟ್ಟರೆ, ಉಳಿದದ್ದು ಎಲ್ಲವೂ ಇತಿಹಾಸವನ್ನೇ ಸೃಷ್ಟಿಸಿವೆ. ಈಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮತ್ತೊಂದು ಇತಿಹಾಸವನ್ನು ಸೃಷ್ಟಿಸುವುದಕ್ಕೆ 'ಯುಐ' ಸಿನಿಮಾ ಸಜ್ಜಾಗಿ ನಿಂತಿದೆ.

Upendra Pan India movie UI releasing on December 20th what about Sudeep Max

ಉಪ್ಪಿ ನಿರ್ದೇಶಿಸಿದ 'ಯುಐ' ಇಷ್ಟರೊಳಗೆ ರಿಲೀಸ್ ಆಗಬೇಕಿತ್ತು. ಅಕ್ಟೋಬರ್ ಕೊನೆಯ ವಾರದಲ್ಲಿ ದೀಪಾವಳಿಗೆ ಸಿನಿಮಾ ರಿಲೀಸ್ ಆಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ, ಆ ವೇಳೆ ರೋರಿಂಗ್ ಸ್ಟಾರ್ ಶ್ರೀಮುರಳಿ ನಟನೆಯ 'ಬಘೀರ' ಸಿನಿಮಾ ರಿಲೀಸ್ ಆಗುತ್ತಿದೆ. ಆಗಲೇ ರಿಲೀಸ್ ಡೇಟ್ ಅನೌನ್ಸ್ ಮಾಡಿ ಸುಮ್ಮನಾಗಿದ್ದು ಯಾಕೆ? ಅನ್ನೋ ಮಾತು ಕೇಳಿಬಂದಿತ್ತು. ಈಗ ರಿಲೀಸ್ ಡೇಟ್ ಅನೌನ್ಸ್ ಆಗುತ್ತಿದ್ದಂತೆ ಕಿಚ್ಚ ಸುದೀಪ್ ಮ್ಯಾಕ್ಸ್ ಬಗ್ಗೆನೂ ಸುದ್ದಿ ಹಬ್ಬುವುದಕ್ಕೆ ಶುರುವಾಗಿದೆ.

ಸ್ಯಾಂಡಲ್‌ವುಡ್ ಕಂಡ ಕ್ರಿಯೇಟಿವ್ ಡೈರೆಕ್ಟರ್‌ಗಳ ಪೈಕಿ ರಿಯಲ್‌ಸ್ಟಾರ್ ಉಪೇಂದ್ರ ಕೂಡ ಒಬ್ಬರು. ಉಪ್ಪಿ ನಟಿಸಿದ ಸಿನಿಮಾ ನೋಡುವುದಕ್ಕೆ ಜನರು ಇಷ್ಟ ಪಡುತ್ತಾರೋ ಇಲ್ಲವೋ. ಆದರೆ, ಉಪ್ಪಿ ನಿರ್ದೇಶಿಸಿದ ಸಿನಿಮಾಗಳನ್ನು ನೋಡುವುದಕ್ಕೆ ತುದಿಗಾಲಲ್ಲಿ ನಿಂತಿರುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ಉಪ್ಪಿ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ. ಇದೇ ಡಿಸೆಂಬರ್ 20ಕ್ಕೆ 'UI' ಸಿನಿಮಾ ರಿಲೀಸ್ ಅಗಲಿದೆ. ಸ್ವತ: ಉಪ್ಪಿ ಇಂದು (ಅಕ್ಟೋಬರ್ 14) ತನ್ನ ಸೋಶಿಯಲ್ ಮೀಡಿಯಾ ಘೋಷಣೆ ಮಾಡಿದ್ದಾರೆ.

Upendra Pan India movie UI releasing on December 20th what about Sudeep Max

ಸಿನಿಪ್ರಿಯರಿಗೆ 'UI' ರಿಲೀಸ್ ಅನೌನ್ಸ್ ಮಾಡಿರುವುದು ಖುಷಿ ಕೊಟ್ಟಿದೆ. ಈ ವೇಳೆ ಯಾಕಿಷ್ಟು ತಡವಾಗಿ ರಿಲೀಸ್ ಆಗ್ತಿದೆ ಅನ್ನೋ ಪ್ರಶ್ನೆ ಕೂಡ ಎದ್ದಿದೆ. ಮೂಲಗಳ ಪ್ರಕಾರ, ಸಿನಿಮಾದಲ್ಲಿ ಗ್ರಾಫಿಕ್ಸ್ ಕೆಲಸ ಹೆಚ್ಚಿದೆ. ಸದ್ಯ ಕೇವಲ ಫಸ್ಟ್ ಹಾಫ್ ಮಾತ್ರ ಸಿಕ್ಕಿದ್ದು, ಸೆಕೆಂಡ್ ಹಾಫ್ ಗ್ರಾಫಿಕ್ಸ್ ಕೆಲಸ ಚಾಲ್ತಿಯಲ್ಲಿದೆ ಅನ್ನೋ ಮಾತು ಕೇಳಿ ಬಂದಿದೆ. ಹೀಗಾಗಿ ಸಮಯ ತೆಗೆದುಕೊಂಡು ಡಿಸೆಂಬರ್ 20ಕ್ಕೆ ರಿಲೀಸ್ ಮಾಡುವ ನಿರ್ಧಾರಕ್ಕೆ ಬಂದಿದೆ.

ಇದೇ ವೇಳೆ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಹೆಸರು ಕೂಡ ಓಡಾಡುತ್ತಿದೆ. ಕಿಚ್ಚ ಸುದೀಪ್ ನಟಿಸಿದ 'ಮ್ಯಾಕ್ಸ್' ಕೂಡ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುತ್ತೆ ಅನ್ನೋ ಸುದ್ದು ಸ್ಯಾಂಡಲ್‌ವುಡ್‌ನಲ್ಲಿ ಹರಿದಾಡುತ್ತಿ.ದೆ ಅದರಲ್ಲೂ ಡಿಸೆಂಬರ್ 20ಕ್ಕೆ ಕಿಚ್ಚ ಸುದೀಪ್ 'ಮ್ಯಾಕ್ಸ್' ಬರುತ್ತೆ ಅನ್ನೋ ಮಾತು ಕೇಳಿ ಬಂದಿತ್ತು, ಆದರೆ ಅದ್ಯಾಕೋ ಆ ಸ್ಥಾನಕ್ಕೆ 'ಯುಐ' ಬಂದು ಕೂತದೆ. ಹಾಗಿದ್ಮೇಲೆ 'ಮ್ಯಾಕ್ಸ್' ರಿಲೀಸ್ ಯಾವಾಗ.? ಅನ್ನೋ ಪ್ರಶ್ನೆಯಂತೂ ಕಾಣುತ್ತಿದೆ.

ಕಿಚ್ಚ ಸುದೀಪ್ ಪ್ಯಾನ್ ಇಂಡಿಯಾ ಸಿನಿಮಾ 'ಮ್ಯಾಕ್ಸ್' ಕೂಡ ಕನ್ನಡದ ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ. ಈ ಸಿನಿಮಾ ಬಿಡುಗಡೆಗೆ ಸುದೀಪ್ ಫ್ಯಾನ್ಸ್ ತುದಿಗಾಲಲ್ಲಿ ನಿಂತಿದ್ದಾರೆ. ಆದರೆ, ಈ ಸಿನಿಮಾ ಕೂಡ ಪೋಸ್ಟ್‌ಫೋನ್ ಆಗುತ್ತಲೇ ಇದೆ. ಈಗ ನೋಡಿದರೆ, 'ಮ್ಯಾಕ್ಸ್' ಮತ್ತೆ ಪೋಸ್ಟ್ ಪೋನ್ ಆಗುತ್ತೆ ಅನ್ನೋ ಮಾತು ಕೇಳಿ ಬರುತ್ತಿದೆ. ಒಂದು ಮೂಲದ ಪ್ರಕಾರ, ಈ ಸಿನಿಮ 2025ಕ್ಕೆ ಮುಂದೂಡಲ್ಪಟಿದೆ.

More from Filmibeat

English summary
Upendra Pan India movie UI releasing on December 20th what about Sudeep Max:
Read more about: upendra sudeep filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X