"ಪ್ರೇಕ್ಷಕರು ಅತೀ ಬುದ್ಧಿವಂತರು ಅನ್ನೋ ವಿಶ್ವಾಸದಲ್ಲಿ ಯುಐ ಸಿನಿಮಾ ಮಾಡಿದ್ದೇನೆ"; ಉಪೇಂದ್ರ
ರಿಯಲ್ ಸ್ಟಾರ್ ಉಪೇಂದ್ರಗೆ ಇಂದು (ಸೆಪ್ಟೆಂಬರ್ 18) ಹುಟ್ಟುಹಬ್ಬದ ಸಂಭ್ರಮ. 56ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರುವ ಉಪೇಂದ್ರ ಮತ್ತಷ್ಟು ಆಕ್ಟಿವ್ ಆಗಿದ್ದಾರೆ. ಇದೇ ಸಂದರ್ಭದಲ್ಲಿ ಉಪ್ಪಿ ಬಹಳ ದಿನಗಳವರೆಗೆ ನಿರ್ದೇಶಿಸಿ 'ಯುಐ' ಸಿನಿಮಾ ಬಗ್ಗೆ ಕೆಲವು ಇಂಟ್ರೆಸ್ಟಿಂಗ್ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಉಪೇಂದ್ರ 'ಯುಐ' ಸಿನಿಮಾ ಬಿಡುಗಡೆಯಾಗಿ ಪ್ರೇಕ್ಷಕರು ಎದುರು ನೋಡುತ್ತಿದ್ದಾರೆ. ಆದರೆ, ರಿಲೀಸ್ ಬಗ್ಗೆ ಉಪೇಂದ್ರ ಆಗಲಿ, ಚಿತ್ರತಂಡ ಆಗಲಿ ಕ್ಲಾರಿಟಿ ಕೊಟ್ಟಿಲ್ಲ. ಇನ್ನೂ ಅಡ್ಡಗೋಡೆ ಮೇಲೆ ದೀಪವನ್ನೇ ಇಟ್ಟು ಮಾತಾಡಿದ್ದಾರೆ. ಇಷ್ಟೇ ಅಲ್ಲದೆ, 'ಯುಐ' ಸಿನಿಮಾದ ಥೀಮ್ ಏನು? ಸಿನಿಮಾ ಕಲ್ಕಿ ಬಗ್ಗೆನಾ? ಅನ್ನೋದು ಸಂಗತಿಯನ್ನು ಬಿಟ್ಟುಕೊಟ್ಟಿಲ್ಲ.

ಉಪೇಂದ್ರ ಸಿನಿಮಾಗಳು ತಲೆಗೆ ಹುಳ ಬಿಡುತ್ತಾರೆ ಅನ್ನೋದು ಸಿನಿಪ್ರಿಯರ ಅಭಿಪ್ರಾಯ. 'ಯುಐ' ಸಿನಿಮಾ ಕೂಡ ಹಾಗೇ ತಲೆಗೆ ಹುಳ ಬಿಡುತ್ತಾರಾ? ಅನ್ನೋ ಪ್ರಶ್ನೆ ಕೂಡ ಉಪ್ಪಿಗೆ ಎದುರಾಗಿತ್ತು. ಆದರೆ, ಉಪೇಂದ್ರ ಎಂದಿನಂತೆ "ಇದು ತಲೆಯಲ್ಲಿರುವ ಹುಳ ತೆಗೆಯುವ ಸಿನಿಮಾ" ಅಂತ ಹೇಳುವ ಮೂಲಕ ಮತ್ತೆ ತಲೆಗೆ ಹುಳಬಿಟ್ಟಿದ್ದಾರೆ.
ಹುಳ ತೆಗೆಯುವ ಪಿಕ್ಚರ್
ಉಪ್ಪಿ ನಿರ್ದೇಶಿಸಿದ ಸಿನಿಮಾ ನೋಡಿ ಬಂದವರು ತಲೆಗೆ ಹುಳ ಬಿಟ್ಟಿದ್ದಾರೆ ಅನ್ನೋ ಅಭಿಪ್ರಾಯ ವ್ಯಕ್ತವಾಗುತ್ತಿತ್ತು. 'ಯುಐ' ಕೂಡ ಅಂತಹದ್ದೇ ಸಿನಿಮಾ ಅನ್ನೋ ಗುಸು ಗುಸು ಎದ್ದಿದೆ. "ಈ ಸಿನಿಮಾವನ್ನೇ ನಿಮ್ಮ ಆಲೋಚನೆಯನ್ನು ಪ್ರಚೋದಿಸುವುದಕ್ಕೆ ಅಂತಾನೇ ಮಾಡಿರುವುದು. ನನಗೆ ಯಾವಾಗಲೂ ಹೇಳುತ್ತಾರೆ. ಹುಳ ಬಿಡ್ತಾರೆ. ಹುಳ ಬಿಡ್ತಾರೆ ಅಂತ. ಇದೊಂದು ಪಿಕ್ಚರ್ ಹುಳ ತೆಗೆಯುವುದಕ್ಕೆ ಮಾಡಿರುವಂತಹದ್ದು. ನಿಮ್ಮ ತಲೆಯಲ್ಲಿ ಹುಳಯಿದೆ. ಅದನ್ನು ತೆಗೆದುಕೊಂಡು ಬಿಡಿ ಅಂತ ಹೇಳುವುದಕ್ಕೆ ಮಾಡಿದಂತಹ ಸಿನಿಮಾ." ಎಂದಿದ್ದಾರೆ ಉಪ್ಪಿ.
"ಹುಳ ತೆಗೆದುಕೊಂಡರೆ ಬೊಂಬಾಟ್"
ಉಪೇಂದ್ರ 'ಯುಐ' ಸಿನಿಮಾ ಹುಳ ತೆಗೆಯುವ ಸಿನಿಮಾ ಅಂತೇನೋ ಹೇಳಿದ್ದಾರೆ. ಅದರೊಂದಿಗೆ ತಲೆಯಲ್ಲಿರುವ ಹುಳವನ್ನು ತೆಗೆಯುವುದಕ್ಕೆ ಸಿಂಪಲ್ ಆಗಿರೋ ಒಂದು ಸಲಹೆಯನ್ನೂ ನೀಡಿದ್ದಾರೆ. "ತಲೆಯಲ್ಲಿರುವ ಹುಳವನ್ನು ತೆಗೆದುಕೊಂಡರೆ ಬೊಂಬಾಟ್ ಆಗಿ ಇರುತ್ತೀರ. ತಲೆಯಲ್ಲಿರುವ ಹುಳ ತೆಗೆಯುವುದು ಬಹಳ ಕಷ್ಟ. ನೋಡಿ ಈಗಾಗಲೇ ಆಲೋಚನೆ ಮಾಡುತ್ತಿದ್ದೀರ." ಎಂದು ಮತ್ತೆ ಸಿನಿಮಾ ಬಗ್ಗೆ ಹುಳ ಬಿಟ್ಟಿದ್ದಾರೆ ಉಪೇಂದ್ರ ಮಾಡುತ್ತಿದ್ದಾರೆ.

"ನಾವು ಅನೌನ್ಸ್ ಮಾಡಿದ್ವಾ?"
ಉಪೇಂದ್ರ ಸಿನಿಮಾ ರಿಲೀಸ್ ಬಗ್ಗೆ ಇನ್ನೂ ಗೊಂದಲವಿದೆ. ಈಗಾಗಲೇ ಅಕ್ಟೋಬರ್ ತಿಂಗಳಲ್ಲಿ ಸಿನಿಮಾ ರಿಲೀಸ್ ಅಂತ ಅನೌನ್ಸ್ ಮಾಡಲಾಗಿದೆ. ಆದರೆ, ಡೇಟ್ ಮಾತ್ರ ಘೋಷಣೆ ಮಾಡಿಲ್ಲ. ರಿಲೀಸ್ ಯಾವಾಗ ಅಂದರೆ, ಅಲ್ಲೂ ಗೊಂದಲದ ಉತ್ತರವನ್ನೇ ಕೊಟ್ಟಿದ್ದಾರೆ. "ಸಿನಿಮಾ ತಡವಾಗುತ್ತಿದೆ ಅಂತ ಯಾರು ಹೇಳಿದ್ದು ನಿಮಗೆ. ನಾವು ಎಲ್ಲೂ ಹೇಳಿಲ್ವಲ್ಲ. ಹೋದ ವರ್ಷ ಬರುತ್ತೇವೆ ಅಂತ ಅನೌನ್ಸ್ ಮಾಡಿದ್ವಾ? ಬ್ಯುಸಿನೆಸ್, ಟೆಕ್ನಾಲಜಿ, ಮೇಕಿಂಗ್ ಎಲ್ಲವೂ ಬದಲಾಗಿದೆ. ಅಕ್ಟೋಬರ್‌ನಲ್ಲಿ ರಿಲೀಸ್ ಆಂತಹ ಹೇಳಿದ್ದೇವೆ. ಏನು ರಿಲೀಸ್ ಅಂತ ಹೇಳಿದ್ದೇವಾ?" ಎಂದು ಉಪೇಂದ್ರ ಹೇಳಿದ್ದಾರೆ.
"ಪ್ರೇಕ್ಷಕರು ಅತೀ ಬುದ್ಧಿವಂತರು"
"ನಾನು ಒಂದೇ ಒಂದು ವಿಶ್ವಾಸದಲ್ಲಿ ಈ ಸಿನಿಮಾ ಮಾಡಿದ್ದೇನೆ. ಅದೇನು ಅಂದರೆ, ನೀವೆಲ್ಲರೂ ಅತೀ ಬುದ್ಧಿವಂತರು ಅಂತ. ನನಗೆ ಎ ಸಿನಿಮಾ ಮಾಡಿದಾಗಲೇ ನೀವೆಲ್ಲ ಬುದ್ದಿವಂತರು ಅಂತ ಪ್ರೂವ್ ಆಗಿ ಹೋಯ್ತು. ಖಂಡಿತಾ ಪ್ರೇಕ್ಷಕರು ಯಾವತ್ತೂ ಮೇಲಿರುತ್ತಾರೆ. ನನ್ನ ಪ್ರಕಾರ, ನಾವು ಏನೇ ಇದ್ದೂ ಕೆಳಗೆ ಇರುತ್ತೇವೆ. ಅದೆಂತಹ ಗ್ರೇಟೆಸ್ಟ್ ಟೆಕ್ನಿಷಿಯನ್ ಆದರೂ ಅವನು ಕೆಳಗೆನೇ. ಯಾಕಂದ್ರೆ ನಿಮ್ಮನ್ನು ಗೆಲ್ಲುವುದು ಅಷ್ಟು ಸುಲಭ ಅಲ್ಲ" ಎಂದು ಉಪೇಂದ್ರ ಹೇಳಿದ್ದಾರೆ.


Click it and Unblock the Notifications











