twitter
    For Quick Alerts
    ALLOW NOTIFICATIONS  
    For Daily Alerts

    31 ವರ್ಷದ ಹಿಂದೆ ಸೆಟ್ಟೇರಿದ್ದ 'ತರ್ಲೆನನ್ಮಗ': ಉಪ್ಪಿ ನಿರ್ದೇಶನದ ಮೊದಲ ಸಿನಿಮಾದ ಫೋಸ್ಟರ್ ಹೇಗಿತ್ತು?

    |

    ಸ್ಯಾಂಡಲ್‌ವುಡ್‌ನಲ್ಲಿ ಎಂದೂ ಮರೆಯದ ಸಿನಿಮಾಗಳಲ್ಲಿ ಪಟ್ಟಿಗೆ ನವರಸ ನಾಯಕ ಜಗ್ಗೇಶ್ ಅಭಿನಯದ ಸಿನಿಮಾವೊಂದಿದೆ. ಅದುವೇ 'ತರ್ಲೆನನ್ಮಗ'. ಈ ಸಿನಿಮಾ ಹಾಸ್ಯ ಪ್ರಿಯರು ಎಂದೆಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ. ಹಾಸ್ಯವೇ ಪ್ರಮುಖವಾಗಿದ್ದ ಈ ಸಿನಿಮಾ ಇಂದಿಗೂ ಸಿನಿಪ್ರಿಯರನ್ನು ರಂಜಿಸುತ್ತಿದೆ.

    'ತರ್ಲೆನನ್ಮಗ' ಕನ್ನಡ ಸಿನಿ ಪ್ರೇಮಿಗಳಲ್ಲಿ ವಿಶೇಷವಾಗಿ ನಿಲ್ಲಲು ಎರಡು ಕಾರಣವಿದೆ. ನವರಸ ನಾಯಕ ಜಗ್ಗೇಶ್ ಹಾಗೂ ರಿಯಲ್ ಸ್ಟಾರ್ ಉಪೇಂದ್ರ ಕಾಂಬಿನೇಷನ್‌ನಲ್ಲಿ ಬಂದಿರೋ ಮೊದಲ ಸಿನಿಮಾ ಇದು. ಈ ಅಪರೂಪದ ಜೋಡಿಯ ಸಿನಿಮಾ ಪ್ರೇಕ್ಷಕರನ್ನು ಸೆಳೆಯುತ್ತಿದೆ.

    ರೀ ಡೈರೆಕ್ಟ್ರೆ ಮಾನಿಟರ್ ಒಳಗೆ ಮುಳುಗಿ ಹೋಗಿದ್ದೀರಾ?: ಬರ್ತ್‌ಡೇಯಂದೇ ಉಪ್ಪಿ ಕೊಟ್ಟ ಸುಳಿವೇನು?ರೀ ಡೈರೆಕ್ಟ್ರೆ ಮಾನಿಟರ್ ಒಳಗೆ ಮುಳುಗಿ ಹೋಗಿದ್ದೀರಾ?: ಬರ್ತ್‌ಡೇಯಂದೇ ಉಪ್ಪಿ ಕೊಟ್ಟ ಸುಳಿವೇನು?

    ಅಂದ್ಹಾಗೆ 'ತರ್ಲೆನನ್ಮಗ' ಉಪೇಂದ್ರ ನಿರ್ದೇಶನದ ಮೊದಲ ಸಿನಿಮಾ. ಚೊಚ್ಚಲ ಚಿತ್ರದಲ್ಲಿಯೇ ಉಪೇಂದ್ರ ಸಕ್ಸಸ್ ಕಂಡಿದ್ದರು. ಹೀಗಾಗಿ ಉಪ್ಪಿ ಈ ಸಿನಿಮಾವನ್ನು ಎಂದಿಗೂ ಮರೆಯೋಕೆ ಸಾಧ್ಯವೇ ಇಲ್ಲ. ಈ ಕಾರಣಕ್ಕೆ ತೀರಾ ಅಪರೂಪದ ಫೋಟೊವೊಂದನ್ನು ಶೇರ್ ಮಾಡಿಕೊಂಡಿದ್ದಾರೆ.

    'ತರ್ಲೆನನ್ಮಗ' ಸಿನಿಮಾ ಸೆಟ್ಟೇರಿ 31 ವರ್ಷ

    'ತರ್ಲೆನನ್ಮಗ' ಸಿನಿಮಾ ಸೆಟ್ಟೇರಿ 31 ವರ್ಷ

    ನವರಸ ನಾಯಕ ಕನ್ನಡ ಸಿನಿಮಾಗಳಲ್ಲಿ ಚಿಕ್ಕ-ಪುಟ್ಟ ಪಾತ್ರಗಳನ್ನು ಮಾಡುತ್ತಿದ್ದ ಕಾಲ. ಹೀರೊ ಆಗಬೇಕು ಅನ್ನೋ ಕನಸು ಕಾಣುತ್ತಿದ್ದ ಜಗ್ಗೇಶ್‌ಗೆ 'ತರ್ಲೆನನ್ಮಗ' ಹುಡುಕಿಕೊಂಡು ಬಂದಿತ್ತು. ಅತ್ತ ಜಗ್ಗೇಶ್ ಹೀರೊ ಆಗಿ ಗೆಲ್ಲಬೇಕಿತ್ತು. ಅದೇ ಉಪೇಂದ್ರ ಚೊಚ್ಚಲ ನಿರ್ದೇಶನದಲ್ಲಿ ಸಕ್ಸಸ್ ಕಾಣಬೇಕಿತ್ತು. ಇಬ್ಬರನ್ನೂ ಹೀರೊ ಮಾಡಿದ ಈ ಸಿನಿಮಾ ಇದೇ 31 ವರ್ಷಗಳ ಹಿಂದೆ ಸೆಟ್ಟೇರಿತ್ತು. ಆ ಮಧುರ ಕ್ಷಣಗಳನ್ನು ರಿಯಲ್ ಸ್ಟಾರ್ ಉಪೇಂದ್ರ ಹಂಚಿಕೊಂಡಿದ್ದಾರೆ.

    ಪೋಸ್ಟರ್‌ ವಿಶೇಷತೆಯೇನು?

    ಪೋಸ್ಟರ್‌ ವಿಶೇಷತೆಯೇನು?

    ಅಕ್ಟೋಬರ್ 10, 1991.. ಸರಿಸುಮಾರು 31 ವರ್ಷಗಳ ಹಿಂದೆ ಈ ಸಿನಿಮಾ ಸೆಟ್ಟೇರಿತ್ತು. ಆ ವೇಳೆ ಸಿನಿಮಾ ತಂಡ ಜಾಹೀರಾತನ್ನು ನೀಡಿತ್ತು. ಅಂದು ನೀಡಿದ್ದ ಈ ಕಪ್ಪು-ಬಿಳುಪಿನ ಜಾಹೀರಾತನ್ನು ಉಪೇಂದ್ರ ಶೇರ್ ಮಾಡಿದ್ದಾರೆ. 31 ವರ್ಷದ ಹಿಂದೆ ಇದೇ ದಿನ (ಅಕ್ಟೋಬರ್ 10) ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯ ಶ್ರೀ ವೆಂಕಟೇಶ್ವರ ದೇವಸ್ಥಾನದಲ್ಲಿ ಮುಹೂರ್ತ ನೆರವೇರಿತ್ತು. ಎಂಬಿ ಬಾಬು, ಸಿಎಸ್ ಮಂಜು, ಶ್ರೀಮತಿ ಪಿಜಿ ಪದ್ಮ ಮೂವರೂ ಸೇರಿಕೊಂಡು ಸಿನಿಮಾ ನಿರ್ಮಾಣ ಮಾಡಿದ್ದರು.

    'ತರ್ಲೆನನ್ಮಗ' ಉಪ್ಪಿಗೆ ಸಕ್ಸಸ್

    'ತರ್ಲೆನನ್ಮಗ' ಉಪ್ಪಿಗೆ ಸಕ್ಸಸ್

    'ತರ್ಲೆನನ್ಮಗ' ಸಿನಿಮಾ ಬಳಿಕ ರಿಯಲ್‌ಸ್ಟಾರ್ ಉಪೇಂದ್ರ ಮತ್ತೆಂದೂ ಹಿಂತಿರುಗಿ ನೋಡಲೇ ಇಲ್ಲ. ಉಪ್ಪಿ ನಿರ್ದೇಶಿಸಿದ ಸಿನಿಮಾಗಳು ಒಂದರ ಹಿಂದೊಂದು ಬಾಕ್ಸಾಫೀಸ್‌ನಲ್ಲಿ ಗೆದ್ದಿದೆ. ಕನ್ನಡದ ಮತ್ತೊಬ್ಬ ಖ್ಯಾತ ನಿರ್ದೇಶಕ ಕಾಶಿನಾಥ್‌ಗೆ ಸಹಾಯಕ ನಿರ್ದೇಶಕರಾಗಿದ್ದ ಉಪ್ಪಿ ಮೊದಲು ಅವರ ಶೈಲಿಯನ್ನೇ ಅನುಕರಿಸಿದ್ದರು. ಆ ಬಳಿಕ ತಮ್ಮದೇ ವಿಶಿಷ್ಟ ಶೈಲಿಯ ಸಿನಿಮಾಗಳನ್ನು ಕನ್ನಡಿಗರಿಗೆ ನೀಡುತ್ತಲೇ ಬಂದಿದ್ದಾರೆ. 'ಶ್', 'ಓಂ', 'ಆಪರೇಷನ್ ಅಂತ', 'ಸ್ವಸ್ತಿಕ್', 'ಎ', 'ಉಪೇಂದ್ರ', 'ಸೂಪರ್', 'ಉಪೇಂದ್ರ 2' ಅಂತಹ ಸಿನಿಮಾಗಳನ್ನು ನಿರ್ದೇಶಿಸಿದ್ದಾರೆ. ಇಷ್ಟು ಸಿನಿಮಾಗಳಲ್ಲಿ ಎರಡು ಬಿಟ್ಟರೆ ಉಳಿದಿದ್ದು ಎಲ್ಲವೂ ಸೂಪರ್ ಹಿಟ್.

    'UI'ಗೆ ಉಪ್ಪಿ ನಿರ್ದೇಶನ

    'UI'ಗೆ ಉಪ್ಪಿ ನಿರ್ದೇಶನ

    ರಿಯಲ್ ಸ್ಟಾರ್ ಉಪೇಂದ್ರ ಬಹಳ ದಿನಗಳ ಬಳಿಕ ಹೊಸ ಸಿನಿಮಾಗೆ ಕೈ ಹಾಕಿದ್ದಾರೆ. 'UI' ಸಿನಿಮಾ ಮೂಲಕ ಆಕ್ಷನ್ ಕಟ್ ಹೇಳುತ್ತಿದ್ದು, ಸಿನಿಪ್ರಿಯರ ಕಣ್ಣು ಈ ಸಿನಿಮಾ ಮೇಲೆನೇ ಇದೆ. ಈಗಾಗಲೇ ರಿಯಲ್‌ ಸ್ಟಾರ್ ಉಪೇಂದ್ರ 'UI' ಸಿನಿಮಾ ಶೂಟಿಂಗ್ ಆರಂಭಿಸಿದ್ದಾರೆ. ಮೂಲಗಳ ಪ್ರಕಾರ, ಸಿನಿಮಾ ಮೊದಲ ಶೆಡ್ಯೂಲ್ ಮುಗಿದಿದ್ದು, ಮುಂದಿನ ಹಂತದ ಚಿತ್ರೀಕರಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಸದ್ಯ ಡೈರೆಕ್ಷನ್ ಮೋಡ್‌ನಲ್ಲಿರೋ ಉಪೇಂದ್ರ ಮೊದಲ ಸಿನಿಮಾದ ವಿಶೇಷ ಕ್ಷಣಗಳನ್ನು ಹಂಚಿಕೊಂಡಿದ್ದಾರೆ.

    ಶಿವಣ್ಣ -ಉಪ್ಪಿ ಹ್ಯಾಟ್ರಿಕ್ ಪ್ರಾಜೆಕ್ಟ್‌ಗೆ ಜನ್ಯ ಸಾರಥ್ಯ: ಚಿತ್ರದಲ್ಲಿ ನಟಿಸೋ ಮತ್ತೊಬ್ಬ ಸ್ಟಾರ್ ಯಾರು?ಶಿವಣ್ಣ -ಉಪ್ಪಿ ಹ್ಯಾಟ್ರಿಕ್ ಪ್ರಾಜೆಕ್ಟ್‌ಗೆ ಜನ್ಯ ಸಾರಥ್ಯ: ಚಿತ್ರದಲ್ಲಿ ನಟಿಸೋ ಮತ್ತೊಬ್ಬ ಸ್ಟಾರ್ ಯಾರು?

    English summary
    Upendra Shared 37 Year Old Poster Of His First Directional Movie Tarle Nan Maga Muhurat, Know More.
    Monday, October 10, 2022, 23:51
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X