Kabzaa Cutout: ಒಂದೇ ಫ್ರೇಮ್‌ನಲ್ಲಿ ಉಪ್ಪಿ, ಕಿಚ್ಚ, ಶಿವಣ್ಣ: ನರ್ತಕಿ ಮುಂದೆ 72 ಅಡಿ ಎತ್ತರದ ಕಟೌಟ್
ಸ್ಯಾಂಡಲ್‌ವುಡ್ ಮತ್ತೊಂದು ಸಂಭ್ರಮಕ್ಕೆ ವೇದಿಕೆ ಸಜ್ಜಾಗಿದೆ. ಇನ್ನೇನು ಕೆಲವೇ ದಿನಗಳಲ್ಲಿ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಅದ್ಧೂರಿಯಾಗಿ ರಿಲೀಸ್ ಆಗಲಿದೆ. ವಿಶ್ವದಾದ್ಯಂತ ಬಾಕ್ಸಾಫೀಸ್ 'ಕಬ್ಜ' ಮಾಡುವುದಕ್ಕೆ ತುದಿಗಾಲಲ್ಲಿ ನಿಂತಿದೆ. ಉತ್ತರ ಭಾರತ, ದಕ್ಷಿಣ ಭಾರತದ ಎಲ್ಲಾ ಕಡೆ 'ಕಬ್ಜ' ದರ್ಬಾರ್ ಆರಂಭ ಆಗಿದೆ.
ಇಷ್ಟು ದಿನ ಮುಂಬೈ, ಹೈದರಾಬಾದ್, ಚೆನ್ನೈ ಅಂತ 'ಕಬ್ಜ' ಟೀಮ್ ಓಡಾಡಿಕೊಂಡಿತ್ತು ಆದ್ರೀಗ ಕರ್ನಾಟಕದಲ್ಲಿ ತನ್ನ ಹವಾ ಹೇಗಿದೆ ಅಂತ ತೋರಿಸುವುದಕ್ಕೆ ಸಜ್ಜಾಗಿದೆ. 'ಕಬ್ಜ' ಸಿನಿಮಾ ಬಿಡುಗಡೆಯಾಗುತ್ತಿರುವ ಪ್ರಮುಖ ಚಿತ್ರಮಂದಿರದ ಮುಂದೆ ಸಂಭ್ರಮ ಮನೆ ಮಾಡಿದೆ. ಅದಕ್ಕೆ ಕಾರಣ ಉಪೇಂದ್ರ, ಕಿಚ್ಚ ಸುದೀಪ್ ಹಾಗೂ ಶಿವಣ್ಣನ ಕಟೌಟ್.

ನರ್ತಕಿ ಚಿತ್ರಮಂದಿರದ ಮುಂದೆ 72 ಅಡಿ ಕಟೌಟ್
ಕನ್ನಡದ ಯಾವುದೇ ಸೂಪರ್‌ಸ್ಟಾರ್ ಸಿನಿಮಾ ರಿಲೀಸ್ ಆದರೂ, ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಚಿತ್ರಮಂದಿರದ ಮುಂದೆ ಸಂಭ್ರಮವಿರುತ್ತೆ. ದೊಡ್ಡ ದೊಡ್ಡ ಕಟೌಟ್‌ಗಳು ಎದ್ದು ನಿಲ್ಲುತ್ತವೆ. ಹೂವಿನ ಹಾರ, ಹಾಲಿನ ಅಭಿಷೇಕ ಅಂತ ಅಭಿಮಾನಿಗಳು ತಮಟೆ ಸದ್ದಿನೊಂದಿಗೆ ಕುಣಿದು ಕುಪ್ಪಳಿಸುತ್ತಾರೆ. ಆದರೆ, 'ಕಬ್ಜ' ಸಿನಿಮಾದ ಹವಾನೇ ಬೇರೆ ಇದೆ. ಅದಕ್ಕೆ ಪ್ರಮುಖ ಚಿತ್ರಮಂದಿರದ ಮುಂದೆ ಬೃಹತ್ ಕಟೌಟ್ ಎದ್ದು ನಿಂತಿದೆ.
ಬೆಂಗಳೂರಿನ ಪ್ರಮುಖ ಚಿತ್ರಮಂದಿರ ನರ್ತಕಿ ಮುಂದೆ 'ಕಬ್ಜ' ಸಿನಿಮಾದ ಕಟೌಟ್ ಎದ್ದು ನಿಂತಿದೆ. ವಿಶೇಷ ಅಂದ್ರೆ, ಇದೇ ಮೊದಲ ಬಾರಿಗೆ ಕನ್ನಡದ ಮೂವರು ಸೂಪರ್‌ಸ್ಟಾರ್‌ಗಳು ಒಂದೇ ಕಟೌಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸುಮಾರು 72 ಅಡಿ ಎತ್ತರದ ಈ ಕಟೌಟ್‌ನಲ್ಲಿ ಉಪ್ಪಿ, ಸುದೀಪ್, ಶಿವಣ್ಣ ರಾರಾಜಿಸುತ್ತಿದ್ದಾರೆ.
ಒಂದೇ ಕಟೌಟ್‌ನಲ್ಲಿ ಉಪ್ಪಿ, ಸುದೀಪ್, ಶಿವಣ್ಣ
ಸೂಪರ್‌ಸ್ಟಾರ್ ಸಿನಿಮಾ ಅಂದ್ಮೇಲೆ ಕಟೌಟ್ ಬೀಳಲೇ ಬೇಕು. ಆ ಕಟೌಟ್ ಮುಂದೆ ಅಭಿಮಾನಿಗಳು ಹೆಜ್ಜೆ ಹಾಕಬೇಕು. ಇದು ಹಲವು ವರ್ಷಗಳಿಂದ ನಡೆದುಕೊಂಡು ಬಂದಿರೋ ವಾಡಿಕೆ. ಅದೇ ಮಾಲ್ಟಿಸ್ಟಾರರ್ ಸಿನಿಮಾ ಬಂದಾಗಲೂ ಇಬ್ಬರ ಕಟೌಟ್ ಪ್ರತ್ಯೇಕವಾಗಿ ನಿಂತಿದ್ದು ಇದೆ. ಆದರೆ, ಈ 'ಕಬ್ಜ' ಸಿನಿಮಾದ ಮೂಲಕ ಅದೆಲ್ಲವೂ ಬದಲಾಗಿದೆ. ಒಂದೇ ಕಟೌಟ್‌ನಲ್ಲಿ ಮೂವರು ಸೂಪರ್‌ಸ್ಟಾರ್ ಇರೋದು ಅಭಿಮಾನಿಗಳಿಗೆ ಕಿಕ್ ಕೊಟ್ಟಿದೆ.

'ಕಬ್ಜ' ಪ್ಯಾನ್ ಇಂಡಿಯಾ ಸಿನಿಮಾ ಆಗಿದ್ದರೂ, ಕರ್ನಾಟಕದಲ್ಲಿ ಈ ಸಿನಿಮಾ ಹವಾನೇ ಬೇರೆ. ಕನ್ನಡ ಮೂವರು ಸೂಪರ್‌ಸ್ಟಾರ್‌ಗಳು ಒಂದೇ ಸಿನಿಮಾದಲ್ಲಿ ಕಂಡಿರಲಿಲ್ಲ. ಉಪೇಂದ್ರ-ಕಿಚ್ಚ ಸುದೀಪ್, ಉಪೇಂದ್ರ-ಶಿವಣ್ಣ, ಶಿವಣ್ಣ-ಕಿಚ್ಚ ಸುದೀಪ್ ಒಟ್ಟಿಗೆ ನಟಿಸಿದ್ದರು. ಆದ್ರೀಗ 'ಕಬ್ಜ'ದಲ್ಲಿ ಮೂವರನ್ನೂ ಒಟ್ಟಿಗೆ ಕಣ್ತುಂಬಿಕೊಳ್ಳುವ ಅವಕಾಶ ಅಭಿಮಾನಿಗಳಿಗೆ ಸಿಗಲಿದೆ.
ಇತಿಹಾಸ ಸೃಷ್ಟಿಸುತ್ತಾ ಆರ್. ಚಂದ್ರು 'ಕಬ್ಜ'
ನಿರ್ದೇಶಕ ಆರ್ ಚಂದ್ರು ಅವರ ಮೊದಲ ಪ್ಯಾನ್ ಇಂಡಿಯಾ ಸಿನಿಮಾವಿದು. ಇದೂವರೆಗೂ ರೊಮ್ಯಾಂಟಿಕ್ ಆಕ್ಷನ್ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದ ಚಂದ್ರು, ಇದೇ ಮೊದಲ ಬಾರಿಗೆ ಔಟ್ ಅಂಡ್ ಔಟ್ ಆಕ್ಷನ್ ಸಿನಿಮಾ ಮಾಡುತ್ತಿದ್ದಾರೆ. ಹೀಗಾಗಿ 'ಕಬ್ಜ' ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಎಷ್ಟರ ಮಟ್ಟಿಗೆ ಸದ್ದು ಮಾಡುತ್ತೆ? ಅನ್ನೋ ಕುತೂಹಲವಿದೆ.
ಹಿಂದಿ ಬೆಲ್ಟ್‌ನಲ್ಲಿ ಆನಂದ್ ಪಂಡಿತ್, ತಮಿಳುನಾಡಿನಲ್ಲಿ ಲೈಕಾ ಪ್ರೊಡಕ್ಷನ್ ಅಂತಹ ದೊಡ್ಡ ದೊಡ್ಡ ಸಂಸ್ಥೆಗಳು 'ಕಬ್ಜ' ಜೊತೆ ಕೈ ಜೋಡಿಸಿವೆ. ಹೀಗಾಗಿ ಬಾಕ್ಸಾಫೀಸ್‌ನಲ್ಲಿ ದೊಡ್ಡ ಮಟ್ಟದ ಕಲೆಕ್ಷನ್ ಮಾಡುತ್ತೆ ಅಂತ ನಿರೀಕ್ಷೆ ಮಾಡಲಾಗಿದೆ.


Click it and Unblock the Notifications











