'ಕಬ್ಜ' ರಿಲೀಸ್‌ಗೂ ಮುನ್ನ ₹100 ಕೋಟಿ ಬ್ಯುಸಿನೆಸ್? ಇಷ್ಟೇನಾ ಅನ್ಬೇಡಿ.. ಇದ್ರಲ್ಲಿ ಥಿಯೇಟ್ರಿಕಲ್ ರೈಟ್ಸ್ ಇಲ್ಲ
'ಕಬ್ಜ' ನಿಧಾನವಾಗಿ ಸದ್ದು ಮಾಡೋದಕ್ಕೆ ಶುರುಮಾಡಿದೆ. ಕನ್ನಡದ ಪ್ಯಾನ್ ಇಂಡಿಯಾ ಕ್ರೇಜ್ ನೋಡಿ ದೊಡ್ಡ ದೊಡ್ಡ ನಿರ್ಮಾಣ ಸಂಸ್ಥೆಗಳು ಬೇರೆ ಬೇರೆ ಭಾಷೆಯಲ್ಲಿ ಸಿನಿಮಾ ರಿಲೀಸ್ ಮಾಡೋಕೆ ಮುಂದೆ ಬರುತ್ತಿವೆ. ಹಿಂದಿ ಬೆಲ್ಟ್‌ಗಳಲ್ಲಿ ಸಕ್ಸಸ್‌ಪುಲ್ ಸಿನಿಮಾಗಳನ್ನು ವಿತರಣೆ ಮಾಡಿರೋ ನಿರ್ಮಾಪಕ ಆನಂದ್ ಪಂಡಿತ್ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿದ್ದಾರೆ.
'ಎಂದಿರನ್', '2.0' ಹಾಗೂ 'ಇಂಡಿಯನ್ 2' ಅಂತಹ ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡಿರೋ ಲೈಕಾ ಪ್ರೊಡಕ್ಷನ್ಸ್ 'ಕಬ್ಜ' ತಮಿಳನ್ನು ರಿಲೀಸ್ ಮಾಡಲಿದೆ. ದಕ್ಷಿಣ ಭಾರತದ ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಬಹುಕೋಟಿಗೆ ತಮಿಳುನಾಡಿನಾದ್ಯಂತ ಸಿನಿಮಾ ವಿತರಣೆ ಹಕ್ಕನ್ನು ಪಡೆದುಕೊಂಡಿದೆ.

ಲೈಕಾ ಸಂಸ್ಥೆಯ ಮಾಲೀಕ ಸುಭಾಷ್ ಕರಣ್ ಖುದ್ದಾಗಿ 'ಕಬ್ಜ ನೋಡಿ ಮೆಚ್ಚಿಕೊಂಡಿದ್ದಾರೆ ಎನ್ನಲಾಗಿದೆ. ಈ ಬೆನ್ನಲ್ಲೇ 'ಕಬ್ಜ' ಪ್ರಿ-ರಿಲೀಸ್ ಬ್ಯುಸಿನೆಸ್ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಜೋರಾಗಿ ಚರ್ಚೆಯಾಗುತ್ತಿದೆ. ಅಷ್ಟಕ್ಕೂ ಆ ಚರ್ಚೆಯೇನು? ಅನ್ನೋದನ್ನು ನೋಡಲು ಮುಂದೆ ಓದಿ.
'ಕಬ್ಜ' ಬ್ಯುಸಿನೆಸ್ ₹100 ಕೋಟಿ?
ನಿರ್ದೇಶಕ ಆರ್ ಚಂದ್ರು 'ಕಬ್ಜ' ಪ್ರಿ-ರಿಲೀಸ್ ಇವೆಂಟ್ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಅದೇ ಇನ್ನೊಂದು ಕಡೆ 'ಕಬ್ಜ'ದ ಬ್ಯುಸಿನೆಸ್ ಕೂಡ ಜೋರಾಗಿ ನಡೆಯುತ್ತಿದೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ 'ಕಬ್ಜ' ಬಿಡುಗಡೆಗೂ ಮುನ್ನ ಪ್ರಿ-ರಿಲೀಸ್ ಬ್ಯುಸಿನೆಸ್ 100 ಕೋಟಿ ರೂ. ದಾಟಲಿದೆ ಎಂಬ ಸುದ್ದಿ ಓಡಾಡುತ್ತಿದೆ. ಸಿನಿಮಾ ಬಿಡುಗಡೆಗೆ ಇನ್ನು 11 ದಿನಗಳು ಬಾಕಿ ಇರುವಾಗಲೇ ಇಂತಹದ್ದೊಂದು ಸುದ್ದಿ ಹರಿದಾಡುತ್ತಿದೆ.

ಅಂದ್ಹಾಗೆ, 100 ಕೋಟಿ ರೂ. ಬ್ಯುಸಿನೆಸ್ ಆಗುತ್ತೆ ಅಂತ ಓಡಾಡುತ್ತಿರೋ ಸುದ್ದಿಯಲ್ಲಿ ವಿತರಣೆ ಹಕ್ಕು ಸೇರಿಲ್ಲ. ಥಿಯೇಟ್ರಿಕಲ್ ಹಕ್ಕುಗಳನ್ನು ಬಿಟ್ಟು ಉಳಿದ ಹಕ್ಕುಗಳಿಂದ ಈಗಾಗಲೇ 65 ಕೋಟಿ ರೂ. ಕಲೆಕ್ಷನ್ ಆಗಿದೆ ಎನ್ನಲಾಗಿದೆ. ಇನ್ನು ಸಿನಿಮಾ ಬಿಡುಗಡೆಗೂ ಮುನ್ನವೇ 100 ಕೋಟಿ ರೂ. ವ್ಯಾಪಾರ ಮಾಡುತ್ತೆ ಅನ್ನೋ ಸುದ್ದಿ ಎಲ್ಲೆಡೆ ಓಡಾಡುತ್ತಿದೆ.
₹100 ಕೋಟಿ ಎಲ್ಲಿಂದ ಸಿಗುತ್ತೆ?
ಸ್ಯಾಟಲೈಟ್ ರೈಟ್ಸ್, ಓಟಿಟಿ ರೈಟ್ಸ್, ಆಡಿಯೋ ರೈಟ್ಸ್ ಹಾಗೂ ಬೇರೆ ಬೇರೆ ಭಾಷೆಗಳ ಡಬ್ಬಿಂಗ್ ರೈಟ್ಸ್‌ನಿಂದ ಸುಮಾರು 100 ಕೋಟಿ ರೂ. ಬ್ಯುಸಿನೆಸ್ ಮಾಡಬಹುದು ಎಂದು ನಿರೀಕ್ಷೆ ಮಾಡಲಾಗಿದೆ. ಆದರೆ, ಇದರಲ್ಲಿ ಥಿಯೇಟ್ರಿಕಲ್ ರೈಟ್ಸ್ ಸೇರಿಕೊಂಡಿದಲ್ಲ. ಮೂಲಗಳ ಪ್ರಕಾರ, 'ಕೆಜಿಎಫ್' ಎರಡು ಪಾರ್ಟ್‌ಗಳನ್ನು ಹೊರತು ಪಡಿಸಿದ್ರೆ, 'ಕಬ್ಜ'ನೇ ಅತೀ ಹೆಚ್ಚು ಬ್ಯುಸಿನೆಸ್ ಮಾಡಿದ ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ ಎಂದು ಹೇಳಲಾಗುತ್ತಿದೆ.
'ಕೆಜಿಎಫ್' ಹಾಗೂ 'ಕೆಜಿಎಫ್ 2' ಎರಡೂ ಸಿನಿಮಾಗಳೂ ಬಿಡುಗಡೆಗೂ ಮುನ್ನವೇ ದೊಡ್ಡ ಮಟ್ಟದ ವ್ಯಾಪಾರ ಖುದುರಿಸಿದ್ದವು ಎನ್ನಲಾಗಿದೆ. ಕಳೆದ ವರ್ಷ ರಿಲೀಸ್ ಆಗಿದ್ದ 'ಕೆಜಿಎಫ್ 2' ಸಿನಿಮಾ ಸುಮಾರು ₹200 ಕೋಟಿ ಬ್ಯುಸಿನೆಸ್ ಮಾಡಿತ್ತು ಎಂದು ವರದಿಯಾಗಿದೆ. ಈ ಬೆನ್ನಲ್ಲೇ 'ಕಬ್ಜ' ₹100 ಕೋಟಿ ವ್ಯಾಪಾರ ಮಾಡಿದ್ರೆ, ದೊಡ್ಡ ಸಾಧನೆಯೇ ಎಂದು ಭವಿಷ್ಯ ನುಡಿಯಲಾಗುತ್ತಿದೆ.
ಥಿಯೇಟರ್ ಹಕ್ಕುಗಳ ಬ್ಯುಸಿನೆಸ್ ಬೇರೆ
ಇನ್ನೊಂದು ಕಡೆ ಹಿಂದಿ ಹಾಗೂ ತಮಿಳು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡುವ ಹಕ್ಕು ಈಗಾಗಲೇ ಸೇಲ್ ಆಗಿದೆ. ಆದರೆ, ಎಷ್ಟು ಮೊತ್ತಕ್ಕೆ ವ್ಯಾಪಾರ ಆಗಿದೆ? ಅನ್ನೋ ಮಾಹಿತಿಯನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಇನ್ನು ಟ್ರೈಲರ್ ರಿಲೀಸ್ ಆದ ಬಳಿಕ ಸಿನಿಮಾಗೆ ಮತ್ತಷ್ಟು ಕ್ರೇಜ್ ಹೆಚ್ಚಾಗಿದ್ದು, ಉಳಿದ ಭಾಷೆಗಳಲ್ಲಿ ಬೇಡಿಕೆ ಹೇಗಿರುತ್ತೆ? ಅನ್ನೋದು ಮುಂದಿನ ದಿನಗಳಲ್ಲಿ ರಿವೀಲ್ ಆಗಬೇಕಿದೆ.
ರಿಯಲ್ ಸ್ಟಾರ್ ಉಪೇಂದ್ರ, ಕಿಚ್ಚ ಸುದೀಪ್, ಶಿವರಾಜ್‌ಕುಮಾರ್, ಶ್ರಿಯಾ ಶರಣ್ ಅಂತಹ ದಿಗ್ಗಜರು ನಟಿಸಿರೋ ಈ ಸಿನಿಮಾ ಪ್ರೀ ರಿಲೀಸ್ ಬ್ಯುಸಿನೆಸ್ ಮೇಲೆ ಎಲ್ಲರ ಕಣ್ಣಿದೆ. ಹೀಗಾಗಿ ಬಿಡುಗಡೆಗೂ ಮುನ್ನ ದೊಡ್ಡ ಮಟ್ಟದಲ್ಲಿ ವ್ಯಾಪಾರ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಎಂದು ಟ್ರೇಡ್ ಎಕ್ಸ್‌ಪರ್ಟ್‌ಗಳು ಭವಿಷ್ಯ ನುಡಿದಿದ್ದಾರೆ. ಆದರೆ, ನಿರ್ದೇಶಕ ಕಮ್ ನಿರ್ಮಾಪಕ ಆರ್.ಚಂದ್ರು ಅಧಿಕೃತವಾಗಿ ಯಾವುದೇ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲ.


Click it and Unblock the Notifications











