ಒಂದೂವರೆ ವರ್ಷ ಕಥೆ ಬರೆದ್ರೂ ಚಿರಂಜೀವಿಗೆ ಸಿನಿಮಾ ಮಾಡೋಕಾಗಿಲ್ಲ:ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
ಉಪೇಂದ್ರ ನಿರ್ದೇಶನ ಮಾಡುವ ಸಿನಿಮಾಗಾಗಿ ಇಡೀ ದಕ್ಷಿಣ ಭಾರತವೇ ಕಾದು ಕೂತಿರುತ್ತೆ. ರಿಯಲ್ ಸ್ಟಾರ್ ಸಿನಿಮಾಗಳು ಅಷ್ಟು ವಿಭಿನ್ನವಾಗಿರುತ್ತೆ. ಇದೂವರೆಗೂ ಅವರು ನಿರ್ದೇಶನ ಮಾಡಿದ ಒಂದೇ ಒಂದು ಸಿನಿಮಾನೂ ಸೋತಿದ್ದಿಲ್ಲ.
'ಓಂ' ಸಿನಿಮಾ ಮೂಲಕ ಇಡೀ ಭಾರತವೇ ತಿರುಗಿ ನೋಡಿವಂತೆ ಮಾಡಿದ್ದು ಉಪೇಂದ್ರ. ಈ ಸಿನಿಮಾ ರಿಲೀಸ್ ಆಗುತ್ತಿದ್ದಂತೆ ತೆಲುಗಿನ ಮೆಗಾಸ್ಟಾರ್ ಚಿರಂಜೀವಿ ಸಿನಿಮಾ ಮಾಡುವಂತೆ ಆಹ್ವಾನ ನೀಡಿದ್ದರಂತೆ. ಆದರೆ ಉಪ್ಪಿ-ಚಿರಂಜೀವಿ ಸಿನಿಮಾ ಮಾತ್ರ ಸೆಟ್ಟೇರಲೇ ಇಲ್ಲ.
ಈ ಹಿಂದೆನೂ ಉಪೇಂದ್ರ ಇದೇ ಸಿನಿಮಾ ಬಗ್ಗೆನೂ ಮಾತಾಡಿದ್ದರು. ಈಗ 'ಕಬ್ಜ'ದ ಹಾಡು ಬಿಡುಗಡೆ ವೇಳೆ ಮತ್ತೊಮ್ಮೆ ಚಿರಂಜೀವಿ ಸಿನಿಮಾ ಯಾಕೆ ಸೆಟ್ಟೇರಿಲ್ಲ ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಅಲ್ಲದೆ ತೆಲುಗು ಮಂದಿ ತೋರುತ್ತಿರುವ ಪ್ರೀತಿ ಬಗ್ಗೆ ಬಗ್ಗೆನೂ ಮನಸಾರೆ ಮಾತಾಡಿದ್ದಾರೆ.

'ಓಂ' ಸಿನಿಮಾದಿಂದ ಸ್ಟಾರ್ ಇಮೇಜ್
ರಿಯಲ್ ಸ್ಟಾರ್ ಉಪೇಂದ್ರ ಹೀರೊ ಆಗುವುದಕ್ಕೂ ಮುನ್ನ ನಿರ್ದೇಶಿಸಿದ ಸಿನಿಮಾಗಳು ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿವೆ. ಅದರಲ್ಲೂ 'ಓಂ' ಸಿನಿಮಾ ಕನ್ನಡ ಚಿತ್ರರಂಗದ ಗತಿಯನ್ನೇ ಬದಲಿಸಿತ್ತು. 'ಓಂ' ಬ್ಲಾಕ್‌ಬಸ್ಟರ್ ಆಗುತ್ತಿದ್ದಂತೆ ನಿರ್ದೇಶಕನಾಗಿದ್ದರೂ, ಉಪ್ಪಿಗೆ ಸ್ಟಾರ್ ಇಮೇಜ್ ಬಂದಿತ್ತು. ಈ ಸಿನಿಮಾದ ಸಕ್ಸಸ್ ನೋಡಿ ಮೆಗಾಸ್ಟಾರ್ ಚಿರಂಜೀವಿ ಒಂದು ಸಿನಿಮಾ ಮಾಡುವಂತೆ ಆಹ್ವಾನ ನೀಡಿದ್ದರು. ಇದಕ್ಕೆ ಉಪ್ಪಿ ಬರೊಬ್ಬರಿ ಒಂದೂವರೆ ವರ್ಷ ಕಥೆ ಬರೆದಿದ್ದರಂತೆ.

ಚಿರಂಜೀವಿ ಸಿನಿಮಾ ಬಗ್ಗೆ ಉಪ್ಪಿ ಹೇಳಿದ್ದೇನು?
ಕಬ್ಜ ಸಿನಿಮಾದ ಹಾಡು ಹೈದರಾಬಾದ್‌ನಲ್ಲಿ ರಿಲೀಸ್ ಆಗಿದೆ. ಈ ವೇಳೆ ತೆಲುಗು ನಿರೂಪಕಿ ಉಪ್ಪಿ ಬಳಿ ಬಂದು ಚಿರಂಜೀವಿಯವರೊಂದಿಗೆ ಯಾಕೆ ಸಿನಿಮಾ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದರು. "ಒಂದೂವರೆ ವರ್ಷ ಸ್ಕ್ರಿಪ್ಟ್ ಮಾಡಿದ್ದೆ. ಒಂದೂವರೆ ವರ್ಷ ಡಿಸ್ಕಷನ್.. ರಾಘವೇಂದ್ರ ಅವರೊಂದಿಗೂ ಚರ್ಚೆ ಮಾಡಿದ್ದೆವು. ಅದೇನೋ ನನಗೆ ಆ ಅದೃಷ್ಟ ಇಲ್ಲ. ನಿರ್ದೇಶನ ಮಾಡುವುದಕ್ಕೆ ಆಗಲಿಲ್ಲ." ಎಂದು ತೆಲುಗು ನಿರೂಪಕಿಗೆ ಉಪ್ಪಿ ಉತ್ತರ ಕೊಟ್ಟಿದ್ದಾರೆ.

ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
" ನಾನು ಯಾವಾಗಲೂ ಇಲ್ಲಿಗೆ ಬಂದಾಗಲೂ ಒಂದು ವೈಬ್ರೇಷನ್ ಬರುತ್ತೆ. ಇಲ್ಲಿ ಅಂತಹ ಕಲಾಭಿಮಾನವಿರುತ್ತೆ. ಚಿಕ್ಕ ಕೆಲಸವನ್ನೂ ಬೈನಾಕುಲರ್‌ನಲ್ಲಿ ನೋಡಿ ದೊಡ್ಡ ಕೆಲಸ ಅಂತಾರೆ. ಆಸ್ಕರ್‌ನಿಂದ ಗೋಲ್ಡನ್ ಗ್ಲೋಬ್‌ವರೆಗೂ ಹೋಗಿರುವ ಹೋಗಿರುವವರು, ನನ್ನ ಚಿಕ್ಕದೊಂದು ಪ್ರತಿಭೆಯನ್ನು ಎಷ್ಟು ದೊಡ್ಡದು ಮಾಡುತ್ತಾರೆ ಅಂದ್ರೆ, ನಾನು ಚಿಕ್ಕನಾಗಿಬಿಡುತ್ತೇನೆ. ಇನ್ನೂ ಏನೇನೋ ಮಾಡಬೇಕು ಅಂತ ಅನಿಸುತ್ತೆ. ಖಂಡಿತವಾಗಿಯೂ ಮಾಡುತ್ತೇನೆ." ಎಂದು ಉಪೇಂದ್ರ ತೆಲುಗು ಅಭಿಮಾನಿಗಳಿಗೆ ಮಾತು ಕೊಟ್ಟಿದ್ದಾರೆ.

ಕಬ್ಜ ಸಿನಿಮಾಗಾಗಿ ಪ್ರಚಾರ
ಉಪೇಂದ್ರ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ 'ಕಬ್ಜ' ಬಿಡುಗಡೆ ಸಜ್ಜಾಗಿದೆ. ಮಾರ್ಚ್ 17ರಂದು ಅಪ್ಪು ಹುಟ್ಟುಹಬ್ಬಕ್ಕೆ ಸಿನಿಮಾ ಬಿಡುಗಡೆಯಾಗುತ್ತಿದೆ. ಇನ್ನೊಂದು ವಾರಕ್ಕೆ ಯುಗಾದಿ ಹಬ್ಬನೂ ಇದೆ. ಹೀಗಾಗಿ ಸಿನಿಮಾದ ಪ್ರಚಾರ ಕೂಡ ಆರಂಭ ಆಗಿದೆ. ಈಗಾಗಲೇ ಟೀಸರ್ ರಿಲೀಸ್ ಆಗಿದ್ದು, ಮೊದಲ ಹಾಡನ್ನೂ ಬಿಡುಗಡೆ ಮಾಡಲಾಗಿದೆ. ಇನ್ನು ಮುಂಬೈ, ಸೇರಿದಂತೆ ಹಲವೆಡೆ ಇವೆಂಟ್‌ಗಳನ್ನು ಹಮ್ಮಿಕೊಳ್ಳಲಾಗಿದೆ.


Click it and Unblock the Notifications











