ಉಪ್ಪಿ ಟ್ರೋಲ್‌ ಸಾಂಗ್‌ಗೆ ಡಿಸೈನ್ ಡಿಸೈನ್ ಕಮೆಂಟ್; 'ಗುಮ್ಮಿಸಿಕೊಳ್ತೀಯಾ', 'ತಗಡು' ಬೆಂಕಿ ಲಿರಿಕ್ಸ್ ಅಂದ್ರು ಫ್ಯಾನ್ಸ್!

ರಿಯಲ್‌ಸ್ಟಾರ್ ಉಪೇಂದ್ರ ಬಹಳ ದಿನಗಳ ಬಳಿಕ ನಿರ್ದೇಶನಕ್ಕೆ ಇಳಿದಿರೋದು ಗೊತ್ತೇ ಇದೆ. ಉಪ್ಪಿ ಡೈರೆಕ್ಷನ್ ಅಂದ್ಮೇಲೆ ರೆಗ್ಯೂಲರ್ ಸಿನಿಮಾ ನೋಡುವುದಕ್ಕೆ ಆಗುತ್ತಾ? ಉಪೇಂದ್ರ ಸಿನಿಮಾವನ್ನು ನೋಡುವ ರೀತಿನೇ ಬೇರೆ. ಈ ಹಿಂದೆ ಬಂದ ಸಿನಿಮಾಗಳು ಕೂಡ ಇದನ್ನು ಸಾಬೀತು ಮಾಡಿವೆ. ಈಗ 'ಯುಐ' ಕೂಡ ಉಪೇಂದ್ರ ವೃತ್ತಿ ಬದುಕಿನ ವಿಶಿಷ್ಟ ಸಿನಿಮಾ ಆಗುವ ಎಲ್ಲಾ ಲಕ್ಷಣಗಳು ಇವೆ. ಅದಕ್ಕೆ ಕಾರಣ 'ಯುಐ' ಸಿನಿಮಾದ ಮೊದಲ ಹಾಡು.

ಕೆಲವು ದಿನಗಳ ಹಿಂದೆ ಉಪೇಂದ್ರ ಹಾಡಿನ ಝಲಕ್ ಒಂದನ್ನು ರಿಲೀಸ್ ಮಾಡಿದ್ದರು. "ನಂದು ದೊಡ್ಡದು.. ನಿಂದು ಚಿಕ್ಕದು" ಅನ್ನುವ ಸಾಲುಗಳು ಸಿಕ್ಕಾಪಟ್ಟೆ ವೈರಲ್ ಆಗಿದ್ದವು. ಇಂದು (ಮಾರ್ಚ್ 4) ಅದೇ ಹಾಡು ರಿಲೀಸ್ ಆಗುತ್ತೆ ಅಂತಲೇ ಭಾವಿಸಲಾಗಿತ್ತು. ಆದ್ರೀಗ ಟ್ರೋಲಿಗರನ್ನೇ ರೋಸ್ಟ್ ಮಾಡುವ ಟ್ರೋಲ್ ಸಾಂಗ್ ಬಿಟ್ಟಿದ್ದಾರೆ. ಈ ಹಾಡು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಚರ್ಚೆಯಾಗುತ್ತಿದೆ.

Upendra UI movie trolls song here is what audience crazy comments

'ಯುಐ' ಸಿನಿಮಾದ ಈ ಟ್ರೋಲ್ ಸಾಂಗ್‌ನಲ್ಲಿ ಕಳೆದ ಕೆಲವು ದಿನಗಳಲ್ಲಿ ಭಾರೀ ಸದ್ದು ಮಾಡಿದ್ದ ಟ್ರೋಲ್‌ಗಳನ್ನೆಲ್ಲ ಸೇರಿಸಿಕೊಂಡು ಹಾಡನ್ನು ಮಾಡಲಾಗಿದೆ. 'ಜೋಡೆತ್ತು', 'ಎಲ್ಲಿದ್ದಿಯಪ್ಪಾ', 'ಆರ್‌. ಚಂದ್ರು ಹೈಪ್', 'ರಾಜ್ಯವೇ ಖುಷಿಪಡುವ ಸುದ್ದಿ', 'ನಾನು ನಂದಿನಿ', 'ನಾ ಡ್ರೈವರಾ', 'ಕರಿಮಣಿ ಮಾಲೀಕ', 'ಬೆಳ್ಳುಳ್ಳಿ ಕಬಾಬ್', 'ಹೆಂಗ್‌ ಪುಂಗ್ಲಿ', 'ಗೂಸ್‌ ಬಂಪ್ಸ್', ಹೀಗೆ ಇನ್ನು ಹಲವು ಟ್ರೋಲ್‌ಗಳು ಹಾಡಿನಲ್ಲಿವೆ. ಈ ಹಾಡನ್ನು ಎಕ್ಸ್‌ಪೆಕ್ಟ್ ಮಾಡದ ಸಿನಿಪ್ರೇಮಿಗಳು ಹಾಡನ್ನು ಕೇಳಿ ಹೇಗೆಲ್ಲ ಕಮೆಂಟ್ ಮಾಡಿದ್ದಾರೆ ನೋಡಿ..

ಕ್ಯಾಕರ್ಸಿ ಉಗಿದ ಉಪ್ಪಿ

ಟ್ರೋಲ್ ಸಾಂಗ್ ಕೇಳುತ್ತಿದ್ದಂತೆ ಮೊದಲಿಗೆ ಉಪ್ಪಿ ಅಭಿಮಾನಿಗಳಿ ಥ್ರಿಲ್ ಆಗಿದ್ದಾರೆ. ಹಾಡು ರಿಲೀಸ್ ಆಗುತ್ತಿದ್ದಂತೆ ಒಂದರ ಹಿಂದೊಂದು ಕಮೆಂಟ್‌ಗಳು ಪಟಪಟನೆ ಬರುವುದಕ್ಕೆ ಶುರುವಾಗಿದೆ. ಅದರಲ್ಲೊಂದು "ಎಲ್ರಿಗೂ ಸೆರ್ಸಿ ಕ್ಯಾಕರ್ಸಿ ಒಂದೇ ಸಲ ಉಗಿದ್ರಲ್ಲ ಉಪ್ಪಿ ಸಾರ್.." ಅಂತ ಅಭಿಮಾನಿಯೊಬ್ಬರು ಹೆಮ್ಮೆ ಪಟ್ಟಿದ್ದಾರೆ. ಇನ್ನೊಬ್ಬರು "ಎಲ್ಲರಿಗೂ ಗುಮ್ಮಿದ್ದಾರೆ ಈ ಸಾಂಗ್‌ನಲ್ಲಿ. ಇದು ಉಪ್ಪಿ ಬಾಸ್ ಅಂದರೆ.. TROLL ಆದವರು ಎಲ್ಲಾರೂ ಬಂದು ಹೋಗಿದ್ದಾರೆ.." ಎಂದು ಕಮೆಂಟ್ ಮಾಡಿದ್ದಾರೆ.

ಇದು ಡಿಕೆ ಶಿವಕುಮಾರ್ ಡೈಲಾಗ್

ಇಷ್ಟೇ ಅಲ್ಲ ಟ್ರೋಲ್ ಸಾಂಗ್‌ನಲ್ಲಿ ಬಂದು ಹೋಗುವ ಪ್ರತಿಯೊಂದು ಸಾಲನ್ನು ಟೈಮ್ ಕೋಡ್ ಸಮೇತ ಕಮೆಂಟ್ ಮಾಡುತ್ತಿದ್ದಾರೆ. ಅದರಲ್ಲಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅನ್ನೂ ಬಿಟ್ಟಿಲ್ಲ "ಇದು ಖಚಿತ.. ಇದು ಉಚಿತ.. ಇದು ನಿಶ್ಚಿತ.. ಡಿಕೆ ಶಿವಕುಮಾರ್ ಡೈಲಾಗ್" ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ. ಇದರೊಂದಿಗೆ "ಟೋಲ್ ಆಗಿರುವ ಪದಗಳನೆಲ್ಲ ಹಾಡಿನ ಮೂಲಕ ತಿಳಿಸುವ ಏಕಕೈ ನಿರ್ದೇಶಕ ಅಂದ್ರೆ, ಓನ್ ಅಂಡ್ ಓನ್ಲಿ ಉಪ್ಪಿ ಸರ್ ಮಾತ್ರ" ಎಂದು ಕಮೆಂಟ್ ಮಾಡಿದ್ದಾರೆ.

Upendra UI movie trolls song here is what audience crazy comments

'ಗುಮ್ಮಿಸಿಕೊಳ್ತೀಯಾ', 'ತಗಡು' ಬೆಂಕಿ ಲಿರಿಕ್ಸ್

ಈ ಹಾಡಿನಲ್ಲಿ ದರ್ಶನ್ ಹಾಗೂ ಉಮಾಪತಿ ವಿವಾದ ಕೂಡ ಬಂದು ಹೋಗಿದೆ. ನಿರ್ಮಾಪಕ ಉಮಾಪತಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ 'ತಗಡು', 'ಗುಮ್ಮಿಸಿಕೊಳ್ತೀಯಾ' ಅನ್ನೋ ಪದ ಬಳಸಿದ್ದರು. ಈ ಹಾಡಿನಲ್ಲಿ ಅದಕ್ಕೂ ಸ್ಥಾನವಿದೆ. ಅದಕ್ಕೆ "Love ಅಲ್ಲಿ ಗುಮ್ಮಾಸ್ಕೊಂಡು ತಗಡು ಆಗೋದ ಅವನು.. ಬೆಂಕಿ lyrics" ಎಂದು ಕಮೆಂಟ್ ಮಾಡಿದ್ದಾರೆ. ಹಾಗೇ " ಟ್ರೆಂಡಿಂಗ್ ವಿಡಿಯೋಗಳ, ವಿಶ್ವದರ್ಶನ... ಡೈರೆಕ್ಟರ್‌ಗಳ ಅಪ್ಪ ನಮ್ ಉಪ್ಪಿ" ಎಂದು ಮತ್ತೊಬ್ಬರು ಕಮೆಂಟ್ ಮಾಡಿದ್ದಾರೆ.

ಉಪ್ಪಿ ಗುಮ್ಮಿದ್ದು ಯಾರಿಗೆ ?

ಕಮೆಂಟ್ ಮಾಡಿರೋರು ಉಪ್ಪಿ ಯಾರಿಗೆಲ್ಲ ಗುಮ್ಮಿದ್ದಾರೆ ಅನ್ನೋ ಪಟ್ಟಿ ಮಾಡಿಯೇ ಹಾಕಿದ್ದಾರೆ. ಆ ಪಟ್ಟಿ ಹೀಗಿದೆ.

1:06 ಪ್ರೇಮ್ ಆರು ಹೀರೊ ರೆಫರೆನ್ಸ್
1:29 ಸುಮಲತಾ ಎಂಪಿ ಎಲೆಕ್ಷನ್ ಫೈಟ್ (ಜೋಡೆತ್ತು)
1:38 ನಾ ಲವ್ವರಾ.. ನಾ ಡ್ರೈವರಾ ಸಾಂಗ್
1:41 ದರ್ಶನ್ ಹಾಗೂ ಉಮಾಪತಿ ವಿವಾದ
1:45 ಜಮೀರ್ ಅಹಮದ್ ಕಂಗ್ರಾಚುಲೆಷನ್
2:29 ನಿಖಿಲ್ ಕುಮಾರಸ್ವಾಮಿ (ಎಲ್ಲಿದ್ದೀಯಪ್ಪ?)
2:42 ಮದಗಜ ಮಹೇಶ್ (ಬೂ** ಬಂಪ್ಸ್)
2:53 ಡಾಲಿಯ ಬಡವರ ಮಕ್ಕಳು ಬೆಳೆಯಬೇಕು
3:09 ಆರ್ ಚಂದ್ರು ಹೈಪ್

More from Filmibeat

English summary
Here is crazy comments on Upendra UI movie first song:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X