ಒಂದೇ ಕಾಂಪೌಂಡ್‌ನಲ್ಲಿ ಉಪ್ಪಿಯ 'ಯುಐ' ಕಿಚ್ಚನ 'ಮ್ಯಾಕ್ಸ್'? ಎದುರು ಬದುರು ಎರಡು ಬಿಗ್ ಸಿನಿಮಾ!
'ಪುಷ್ಪ 2' ಆಯ್ತು ಇನ್ನೇನಿದ್ದರೂ ಕನ್ನಡ ಸಿನಿಮಾಗಳದ್ದೇ ಹವಾ. ಅದರಲ್ಲೂ ಕನ್ನಡ ಇಬ್ಬರು ಸೂಪರ್‌ಸ್ಟಾರ್‌ಗಳ ಸಿನಿಮಾ ಬಿಡುಗಡೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಉಳಿದಿವೆ. ಬಹಳ ದಿನಗಳ ಬಳಿಕ ಉಪೇಂದ್ರ ನಿರ್ದೇಶಿಸಿರುವ ಸಿನಿಮಾ 'ಯುಐ' ರಿಲೀಸ್ ಆಗುತ್ತಿದೆ. ಇನ್ನೊಂದು ಕಡೆ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ಎರಡು ವರ್ಷಗಳ ಬಳಿಕ ಬಿಡುಗಡೆಗೆ ಸಜ್ಜಾಗಿದೆ.
ಈ ಎರಡೂ ಸಿನಿಮಾಗಳಿಗೂ ಅದರದ್ದೇ ಆದ ಕ್ರೇಜ್ ಇದೆ. ಒಂದ್ಕಡೆ ಉಪೇಂದ್ರ ಡೈರೆಕ್ಷನ್ ಮಾಡುವ ಸಿನಿಮಾಗಳಿಗೆ ಇವರ ನಿರೀಕ್ಷೆಗಳೇ ಬೇರೆ. ಇದೇ ಡಿಸೆಂಬರ್ 20ರಂದು ಗ್ರ್ಯಾಂಡ್ ಆಗಿ ರಿಲೀಸ್ ಆಗಲಿದೆ. ಈಗಾಗಲೇ ಸಿನಿಮಾ ಪ್ರಮೋಷನ್ ಕೂಡ ಆರಂಭ ಮಾಡಿದ್ದಾರೆ. ಆಮಿರ್ ಖಾನ್ ಕೂಡ ಉಪೇಂದ್ರ ಅವರಿಗೆ ಶುಭ ಕೋರಿದ ವಿಡಿಯೋ ವೈರಲ್ ಆಗಿತ್ತು.

ಇನ್ನೊಂದು ಕಡೆ ಕೇವಲ ಐದು ದಿನಗಳ ಗ್ಯಾಪ್‌ನಲ್ಲಿ ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ರಿಲೀಸ್ ಆಗುತ್ತಿದೆ. ಡಿಸೆಂಬರ್ 25 ಕ್ರಿಸ್‌ಮಸ್‌ಗೆ 'ಮ್ಯಾಕ್ಸ್' ಅದ್ಧೂರಿಯಾಗಿ ಥಿಯೇಟರ್‌ಗೆ ಲಗ್ಗೆ ಇಡುತ್ತಿದೆ. ವಿಶೇಷ ಅಂದರೆ, ಒಂದೇ ಕಾಂಪೌಂಡ್‌ನಲ್ಲಿ ಇರುವ ಬೆಂಗಳೂರಿನ ಎರಡು ಪ್ರಮುಖ ಚಿತ್ರಮಂದಿರಗಳಲ್ಲಿ 'ಯುಐ' ಹಾಗೂ 'ಮ್ಯಾಕ್ಸ್' ರಿಲೀಸ್ ಆಗುತ್ತಿದೆ ಅಂತ ಸಿನಿಮಾ ವಲಯದಲ್ಲಿ ಚರ್ಚೆಯಾಗಿತ್ತಿದೆ. ಹಾಗಿದ್ದರೆ ಆ ಎರಡು ಥಿಯೇಟರ್‌ಗಳು ಯಾವುವು? ಪ್ರೇಕ್ಷಕರಿಗೆ ಗೊಂದಲ ಆಗುತ್ತಾ?
ಉಪೇಂದ್ರ ಸಿನಿಮಾ 'ಯುಐ' ಈಗಾಗಲೇ ಪ್ರಮುಖ ಚಿತ್ರಮಂದಿರವನ್ನು ಅನೌನ್ಸ್ ಮಾಡಿದೆ. ಬೆಂಗಳೂರಿನ ಕೆಜಿ ರಸ್ತೆಯಲ್ಲಿರುವ ಐಕಾನಿಕ್ ಚಿತ್ರಮಂದಿರ ಸಂತೋಷ್ ಅನ್ನು ಆಯ್ಕೆ ಮಾಡಿಕೊಂಡಿದೆ. ಈ ಥಿಯೇಟರ್‌ನಲ್ಲಿ ತೆರೆಕಂಡ ಸಿನಿಮಾಗಳು ಬಹುತೇಕ ಹಿಟ್ ಆಗಿವೆ. ಕನ್ನಡ ಸಿನಿಮಾ ಮಂದಿಗೆ ಈ ಚಿತ್ರಮಂದಿ ಲಕ್ಕಿ. ಹಾಗಾಗಿ ಸಂತೋಷ್‌ಗೆ ಇಂದಿಗೂ ಬೇಡಿಕೆಯಿದೆ. ಈ ಥಿಯೇಟರ್ ಈಗ 'ಯುಐ' ಪಾಲಾಗಿದೆ.

ಇನ್ನೊಂದು ಕಡೆ ಇದೇ ಕೆಜಿ ರಸ್ತೆಯಲ್ಲಿರುವ ಮತ್ತೊಂದು ಪ್ರಮುಖ ಚಿತ್ರಮಂದಿರ ನರ್ತಕಿ. ಇದೂ ಕೂಡ ಕನ್ನಡ ಸಿನಿಮಾ ಮಂದಿಗೆ ಲಕ್ಕಿ ಥಿಯೇಟರ್. ಈ ಚಿತ್ರಮಂದಿರದಲ್ಲಿ ಕಿಚ್ಚ ಸುದೀಪ್ ಸಿನಿಮಾ 'ಮ್ಯಾಕ್ಸ್' ರಿಲೀಸ್ ಆಗುತ್ತಿದೆ ಎಂದು ಹೇಳಲಾಗುತ್ತಿದೆ. ಸದ್ಯ ಈ ಥಿಯೇಟರ್‌ನಲ್ಲಿ ಈಗ ಶಿವಣ್ಣ ನಟನೆಯ 'ಭೈರತಿ ರಣಗಲ್' ಸಿನಿಮಾ ಪ್ರದರ್ಶನ ಕಾಣುತ್ತಿದೆ. ಡಿಸೆಂಬರ್ 25ಕ್ಕೆ ಆ ಸಿನಿಮಾದ ಜಾಗಕ್ಕೆ 'ಮ್ಯಾಕ್ಸ್' ಬರುತ್ತೆ ಎಂದು ಹೇಳಲಾಗಿದೆ. 'ಮ್ಯಾಕ್ಸ್' ತಂಡ ಇನ್ನೂ ಅನೌನ್ಸ್ ಮಾಡಿಲ್ಲ.
ಕೆಜಿ ರಸ್ತೆಯಲ್ಲಿ ಒಂದೇ ಕಾಂಪೌಂಡ್‌ನಲ್ಲಿ ಮೂರು ಚಿತ್ರಮಂದಿರಗಳಿವೆ. ಅದರಲ್ಲಿ ನರ್ತಕಿ ಹಾಗೂ ಸಂತೋಷ್ ಎರಡು ಪ್ರಮುಖ ಚಿತ್ರಮಂದಿರಗಳು. ಸೂಪರ್‌ಸ್ಟಾರ್‌ಗಳ ಯಾವುದೇ ಸಿನಿಮಾ ಇದ್ದರೂ ಈ ಎರಡು ಚಿತ್ರಮಂದಿರಗಳಲ್ಲಿ ಪ್ರಮುಖವಾಗಿ ಬಿಡುಗಡೆಯಾಗುತ್ತವೆ. ಈ ಚಿತ್ರಮಂದಿರ ಯಾವ ಸಮಯಕ್ಕೆ ಸಿಗುತ್ತೆ ಅಂತ ನೋಡಿಕೊಂಡು ರಿಲೀಸ್ ಮಾಡುವ ವಾಡಿಕೆ ಕೂಡ ಇದೆ.
ಈಗ ಎರಡು ಚಿತ್ರಮಂದಿರಗಳು ಎರಡು ಸೂಪರ್‌ಸ್ಟಾರ್‌ಗಳ ಸಿನಿಮಾಗಳಿಗೆ ಸಾಕ್ಷಿಯಾಗಲಿದೆ. ಐದು ಮುನ್ನ (ಡಿಸೆಂಬರ್ 20) 'ಯುಐ' ರಿಲೀಸ್ ಆದರೆ, ನಂತರ 'ಮ್ಯಾಕ್ಸ್' ಈ ಕಾಂಪೌಂಡ್‌ಗೆ ಲಗ್ಗೆ ಇಡುತ್ತಿದೆ. ಸಿನಿಮಾ ನೋಡುವುದಕ್ಕೆ ಬಂದ ಪ್ರೇಕ್ಷಕರು ಈ ಎರಡು ಸಿನಿಮಾಗಳ ಕಟೌಟ್ ನೋಡಿ ಯಾವ ಸಿನಿಮಾ ನೋಡಬೇಕು ಅಂತ ಕನ್ಫ್ಯೂಸ್ ಆಗುವುದಂತೂ ಗ್ಯಾರಂಟಿ. ಹಾಗೇ ಒಂದೇ ಕಾಂಪೌಂಡ್‌ನಲ್ಲಿ ಬಾಕ್ಸಾಫೀಸ್ ಫೈಟ್ ಹೇಗಿರುತ್ತೆ? ಅಂತ ನೋಡುವುದಕ್ಕೂ ಒಂದು ಸಿನಿಮಾ ಮಂದಿ ಕಾಯುತ್ತಿದ್ದಾರೆ.


Click it and Unblock the Notifications











