'ಕಬ್ಜ' ವೇದಿಕೆಯಲ್ಲೇ ಉಪ್ಪಿ–ಶಿವಣ್ಣ ಸಿನಿಮಾ ಅನೌನ್ಸ್: ಪ್ರೊಡ್ಯೂಸರ್‌ ರೆಡಿ..'ಓಂ 2'ನಾ ಬೇರೆ ಸಿನಿಮಾ?

2023 ಸದ್ಯ ಈ ವರ್ಷ ಕನ್ನಡದ ಎರಡು ಪ್ಯಾನ್ ಇಂಡಿಯಾ ಸಿನಿಮಾಗಳು ಸದ್ದು ಮಾಡುವುದಕ್ಕೆ ಶುರು ಮಾಡಿವೆ. ಧ್ರುವ ಸರ್ಜಾ ಅಭಿನಯದ 'ಮಾರ್ಟಿನ್' ಟೀಸರ್ ಬಿಡುಗಡೆಯಾಗಿ ಇತ್ತೀಚೆಗೆ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅದಕ್ಕೂ ಉಪೇಂದ್ರ ಹಾಗೂ ಕಿಚ್ಚ ಸುದೀಪ್ ಕಾಂಬಿನೇಷನ್ ಸಿನಿಮಾ 'ಕಬ್ಜ' ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಗುಡುಗುವುದಕ್ಕೆ ರೆಡಿಯಾಗಿದೆ. 'ಕಬ್ಜ' ಈ ವರ್ಷ ಬಿಡುಗಡೆಯಾಗುತ್ತಿರುವ ಕನ್ನಡದ ಮೊದಲ ಪ್ಯಾನ್ ಇಂಡಿಯಾ ಸಿನಿಮಾ. ಈ ಕಾರಣಕ್ಕೆ ಎಲ್ಲರ ಕಣ್ಣು ಉಪ್ಪಿ-ಕಿಚ್ಚನ ಕಾಂಬಿನೇಷನ್‌ ಮೇಲಿದೆ.

ನಿನ್ನೆ(ಫೆಬ್ರವರಿ 26)ರಂದು ನಿರ್ದೇಶಕ ಕಮ್ ನಿರ್ಮಾಪಕ ಆರ್‌.ಚಂದ್ರು ಶಿಡ್ಲಘಟ್ಟದಲ್ಲಿ 'ಕಬ್ಜ' ಸಿನಿಮಾದ ಅದ್ಧೂರಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಈ ಕಾರ್ಯಕ್ರಮಕ್ಕೆ ಶಿವರಾಜ್‌ಕುಮಾರ್ ಸೇರಿದಂತೆ ರಾಜಕೀಯ ಗಣ್ಯರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಉಪೇಂದ್ರ ಹಾಗೂ ಶಿವರಾಜ್‌ಕುಮಾರ್ ಕಾಂಬಿನೇಷನ್‌ ಸಿನಿಮಾ ಚರ್ಚೆ ನಡೀತು. ಉಪ್ಪಿ ಹಾಗೂ ಶಿವಣ್ಣ ಇಂತಹ ಹಲವು ವೇದಿಕೆಗಳಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಆ ವೇಳೆ ಇಬ್ಬರಿಗೂ ಎದುರಾಗುತ್ತಿದ್ದ ಪ್ರಶ್ನೆ ಯಾವಾಗ ಒಟ್ಟಿಗೆ ಸಿನಿಮಾ ಮಾಡುತ್ತೀರಾ? ಆ ಪ್ರಶ್ನೆಗೆ 'ಕಬ್ಜ' ಇವೆಂಟ್‌ನಲ್ಲಿ ಉತ್ತರ ಸಿಕ್ಕಿದೆ.

Upendra Will be Directing Shivarajkumar Soon Announced Kabzaa Event held In Sidlaghatta

ನಿರೂಪಕಿ ಅನುಶ್ರೀ ಉಪೇಂದ್ರ ಹಾಗೂ ಶಿವಣ್ಣ ಇಬ್ಬರಿಗೂ ಒಟ್ಟಿಗೆ ಯಾವಾಗ ಸಿನಿಮಾ ಮಾಡುತ್ತೀರಿ ಎಂಬ ಪ್ರಶ್ನೆ ಹಾಕಿದ್ದರು. ಆಗ ಒಟ್ಟಿಗೆ ಉಪ್ಪಿ ಹಾಗೂ ಶಿವಣ್ಣ ಇಬ್ಬರೂ ತಮ್ಮ ಅಭಿಮಾನಿಗಳಿಗೆ ಸಿನಿಮಾ ಮಾಡುವ ಭರವಸೆ ನೀಡಿದ್ರು. ಮೊದಲು ಶಿವಣ್ಣ ಈ ಸಿನಿಮಾ ಬಗ್ಗೆ ಮಾತಾಡಿದ್ದು, ಉಪ್ಪಿ ಮೊದಲು ಕೈಯಲ್ಲಿ ಕೊಟ್ಬಿಟ್ರು. ಅಲ್ಲಿಂದ ಎಲ್ಲೂ ಲಾಂಗ್ ಸಿನಿಮಾನೇ ಮಾಡಿ ಅಂತಿದ್ದಾರೆ ಅಂದ್ರು. "ಹೇಳಿ ಕೇಳಿ ಗೊತ್ತಿಲ್ದೆ ಕೈಯಲ್ಲಿ ಲಾಂಗ್ ಕೊಟ್ಬಿಟ್ಟು. ಈಗ ಬರೀ ಲಾಂಗ್ ಸಿನಿಮಾನೇ ಮಾಡಿ, ಮಾಡಿ ಅಂತಿದ್ದಾರೆ ಏನ್ಮಾಡ್ಲಿ." ಅಂತ ಶಿವಣ್ಣ ಹೇಳಿಕೊಂಡಿದ್ದಾರೆ.

ಶಿವಣ್ಣ-ಉಪ್ಪಿ ಸಿನಿಮಾಗೆ ಪ್ರೊಡ್ಯೂಸರ್ ರೆಡಿ

ಶಿವರಾಜ್‌ಕುಮಾರ್ ಹಾಗೂ ಉಪೇಂದ್ರ ಸಿನಿಮಾ ಸೆಟ್ಟೇರುವುದು ಬಹುತೇಕ ಖಚಿತ. ಈ ಸುಳಿವನ್ನು ಸ್ವತ: ಉಪೇಂದ್ರೆ 'ಕಬ್ಜ' ಸಿನಿಮಾದ ವೇದಿಕೆ ಮೇಲೆ ಖಚಿತಪಡಿಸಿದ್ದಾರೆ. ಶಿವಣ್ಣನಿಗೆ ಉಪ್ಪಿ ನಿರ್ದೇಶನ ಮಾಡಬೇಕು ಅನ್ನೋದು ಹಲವು ದಿನಗಳ ಬೇಡಿಕೆ. ಆ ಬೇಡಿಕೆಗೀಗ ಬಹುತೇಕ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ. "ಪ್ರೊಡ್ಯೂಸರ್ ಇಲ್ಲೇ ರೆಡಿ ಇದ್ದಾರೆ. ಅಕ್ಕ ಇಲ್ಲದೇ ಇದ್ದಾರೆ. ಅವರು ಯಾವತ್ತೂ ಹೇಳುತ್ತಾ ಇರುತ್ತಾರೆ. ನಮ್ಮ ಪ್ರೊಡಕ್ಷನ್‌ನಲ್ಲೇ ಮಾಡಬೇಕು ಅಂತ. ಅಕ್ಕ, ಖಂಡಿತಾ ಸಿನಿಮಾ ಮಾಡುತ್ತೇವೆ. ಎಷ್ಟು ಬೇಗನೋ ಅಷ್ಟು ಬೇಗ ಮಾಡುತ್ತೇವೆ." ಎಂದು ಉಪೇಂದ್ರ ಭರವಸೆ ನೀಡಿದ್ದಾರೆ.

ಶಿವಣ್ಣನಿಗೆ ಉಪೇಂದ್ರ ಆಕ್ಷನ್ ಕಟ್ ಹೇಳಿದ್ದ 'ಓಂ' ಸಿನಿಮಾ ಇಂದಿಗೂ ಕನ್ನಡ ಚಿತ್ರರಂಗದ ಎವರ್‌ಗ್ರೀನ್ ಸಿನಿಮಾ. ಈ ಸಿನಿಮಾ ಅದೆಷ್ಟೋ ಬಾರಿ ರೀ-ರಿಲೀಸ್ ಆಗಿ ದಾಖಲೆಗಳನ್ನು ಬರೆದಿದೆ. ಈ ಕಾರಣಕ್ಕೆ ಮತ್ತೊಂದು ಸಿನಿಮಾ ಇಬ್ಬರ ಕಾಂಬಿನೇಷನ್‌ನಲ್ಲಿ ಬರಲಿ ಅನ್ನೋದು ಇಬ್ಬರ ಅಭಿಮಾನಿಗಳ ಹಲವು ದಿನಗಳ ಬೇಡಿಕೆಯಾಗಿತ್ತು. ಅದರಂತೆ ಮತ್ತೆ ಶಿವಣ್ಣನಿಗೆ ಉಪೇಂದ್ರ ಆಕ್ಷನ್ ಕಟ್ ಹೇಳುವ ಮುನ್ಸೂಚನೆ ಸಿಕ್ಕಿದೆ. ಮೇಲ್ನೋಟಕ್ಕೆ ಗೀತಾ ಶಿವರಾಜ್‌ಕುಮಾರ್‌ ನಿರ್ಮಾಣ ಮಾಡಿ ಎಂದು ಉಪೇಂದ್ರ ಹೇಳಿದ್ದಾರೆ. ಹೀಗಾಗಿ ಶಿವಣ್ಣ ಉಪ್ಪಿ ಕಾಂಬಿನೇಷನ್‌ನಲ್ಲಿ ಯಾವ ಸಿನಿಮಾ ಸೆಟ್ಟೇರುತ್ತಾ? 'ಓಂ 2' ಮಾಡುತ್ತಾರಾ? ಇಲ್ಲ ಬೇರೆ ಸಬ್ಜೆಕ್ಟ್ ಆಯ್ಕೆ ಮಾಡಿಕೊಳ್ಳುತ್ತಾರಾ? ಅನ್ನೋದು ಇನ್ನಷ್ಟೇ ತಿಳಿಯಬೇಕಿದೆ. ಗೊತ್ತಾಗಬೇಕಿದೆ.

Upendra Will be Directing Shivarajkumar Soon Announced Kabzaa Event held In Sidlaghatta

ಅಪ್ಪುಗೆ ಡೈರೆಕ್ಟ್ ಮಾಡೋ ಚಾನ್ಸ್ ಕಳೆದುಕೊಂಡೆ

ರಿಯಲ್‌ಸ್ಟಾರ್ ಉಪೇಂದ್ರ ನಟನೆಗೆ ಎಷ್ಟು ಫೇಮಸ್ಸೋ, ಅದಕ್ಕಿಂತ ಒಂದು ಪಟ್ಟು ಹೆಚ್ಚು ನಿರ್ದೇಶನವನ್ನು ಇಷ್ಟ ಪಡುತ್ತಾರೆ. ಹೀಗಾಗಿ ಸೂಪರ್‌ಸ್ಟಾರ್‌ಗಳಿಗೆ ಉಪೇಂದ್ರ ಆಕ್ಷನ್ ಕಟ್‌ ಹೇಳುತ್ತಾರೆ ಅಂದ್ರೆ, ಡಬಲ್ ಧಮಾಕಾ ಇದ್ದಂತೆ. ಈ ಹಿಂದೆ ಪುನೀತ್ ರಾಜ್‌ಕುಮಾರ್‌ಗೆ ರಿಯಲ್‌ಸ್ಟಾರ್ ಉಪೇಂದ್ರ ಆಕ್ಷನ್ ಕಟ್ ಹೇಳುತ್ತಾರೆ ಅನ್ನೋ ಮಾತುಕೇಳಿ ಬರುತ್ತಲೇ ಇತ್ತು. ಆದರೆ, ಅಭಿಮಾನಿಗಳ ಆ ಆಸೆ ಈಡೇರಲೇ ಇಲ್ಲ.

ಅಪ್ಪುಗೆ ಸಿನಿಮಾ ನಿರ್ದೇಶನ ಮಾಡಲು ಆಗಲಿಲ್ಲ. ಹೀಗಾಗಿ ಶಿವಣ್ಣನಿಗೆ ಆದಷ್ಟು ಬೇಗ ಸಿನಿಮಾ ನಿರ್ದೇಶನ ಮಾಡುತ್ತೇನೆ ಎಂದು ಭರವಸೆಯನ್ನು ನೀಡಿದ್ದಾರೆ. "ಒಂದು ಚಾನ್ಸ್ ನಾನು ಕಳೆದುಕೊಂಡ್ಬಿಟ್ಟೆ. ಅಪ್ಪು ಅವರಿಗೆ ಒಂದು ಸಿನಿಮಾ ಡೈರೆಕ್ಟ್ ಮಾಡಬೇಕಿತ್ತು. ಅದನ್ನು ನಾನು ಕಳೆದುಕೊಂಡೆ. ಶಿವಣ್ಣನಲ್ಲಿ ಅಪ್ಪುವನ್ನು ಎಲ್ಲರೂ ನೋಡುತ್ತಾರೆ. ಆದಷ್ಟು ಬೇಗ ಒಂದು ಸಿನಿಮಾ ಡೈರೆಕ್ಟ್ ಮಾಡುತ್ತೇನೆ." ಎಂದು ಉಪೇಂದ್ರ ಹೇಳಿದ್ದಾರೆ.

More from Filmibeat

English summary
Upendra Will be Directing Shivarajkumar Soon Announced Kabzaa Event held In Sidlaghatta, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X