»   » ಉಪ್ಪಿ 2: ವಿಭಿನ್ನವಾದ ಆಮಂತ್ರಣ ಪತ್ರಿಕೆ ನೋಡಿದಿರಾ?

ಉಪ್ಪಿ 2: ವಿಭಿನ್ನವಾದ ಆಮಂತ್ರಣ ಪತ್ರಿಕೆ ನೋಡಿದಿರಾ?

Posted By:
Subscribe to Filmibeat Kannada

ರಿಯಲ್ ಸ್ಟಾರ್ ಉಪೇಂದ್ರ ಏನೇ ಮಾಡಿದರೂ ಅದು ಡಿಫರೆಂಟ್ ಆಗಿರುತ್ತದೆ. ಇನ್ನು ಅವರದೇ ಬ್ಯಾನರಿನ ಚಿತ್ರವೆಂದರೆ ಕೇಳಬೇಕೇ. ನಮ್ಮ ಕಚೇರಿಗೆ ಉಪ್ಪಿ 2 ಚಿತ್ರತಂಡ ಮಹೂರ್ತದ ಆಮಂತ್ರಣ ಪತ್ರ ಕಳುಹಿಸಿತ್ತು.

ಇದೇ ಬುಧವಾರ (ಸೆ 18) ಉಪೇಂದ್ರ ಹುಟ್ಟುಹಬ್ಬದ ದಿನ ಸಂಜೆ ಐದು ಗಂಟೆಗೆ ಅರಮನೆ ಮೈದಾನದ ಗಾಯತ್ರಿ ವಿಹಾರ್ ನಲ್ಲಿ ಈ ಕಾರ್ಯಕ್ರಮ ಆರಂಭವಾಗಲಿದೆ.

ಉಪೇಂದ್ರ ಪ್ರೊಡಕ್ಷನ್ ಬ್ಯಾನರಿನಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಪ್ರಿಯಾಂಕ ಉಪೇಂದ್ರ ಮತ್ತು ಸಿ ಆರ್ ಮನೋಹರ್ ನಿರ್ಮಾಪಕರು.

ಆಮಂತ್ರಣ ಪತ್ರಿಕೆಯ ಬಗ್ಗೆ ಸ್ಲೈಡಿನಲ್ಲಿ ನೋಡಿ..

ಉಪ್ಪಿ 2

ಎಲ್ಲದಕ್ಕೂ ಕಾರಣ ಒಳಗಿದೆ! ಎನ್ನುವ ಶೀರ್ಷಿಕೆಯಲ್ಲಿ ಕಿತ್ತಳೆ ಬಣ್ಣದಲ್ಲಿ ಆಮಂತ್ರಣ ಪತ್ರಿಕೆಯ ಮೊದಲ ಪುಟವಿದೆ ಪಾಲಿಥಿನ್ ಹೊದಿಕೆಯಲ್ಲಿ ಮುದ್ರಿತವಾಗಿದೆ.

ಆಮಂತ್ರಣ ಪತ್ರಿಕೆ

ಕನ್ನಡಿಯಲ್ಲಿ ಮುದ್ರಿತವಾಗಿರುವ ಈ ಆಮಂತ್ರಣ ಪತ್ರಿಕೆಯ ಕೆಳಗಡೆ 'ನೀನು!' ಎಂದಿದೆ.

ಉಪೇಂದ್ರ ಪ್ರೊಡಕ್ಷನ್

ಅದರ ಹಿಂದಿನ ಭಾಗದಲ್ಲಿ ನೀಲಿ ಬಣ್ಣದ ಬ್ಯಾಕ್ ಗ್ರೌಂಡಿನಲ್ಲಿ ಅಂದು.. ಉಪೇಂದ್ರ "ನಾನು" ಇಂದು.. ಎಂದು ಮುದ್ರಿತವಾಗಿದೆ.

ಉಪ್ಪಿ

ಉಪ್ಪಿ UnKnoWnನು ಎಂದು Entry U2 only ಎನ್ನುವ ವಿಐಪಿ ಪಾಸ್ ಮುದಿತ್ರವಾಗಿದೆ.

ಉಪೇಂದ್ರ

18.09.2013ರಂದು ಬೆಳಿಗ್ಗೆ 10ಕ್ಕೆ ಕಂಠೀರಿವ ಸ್ಟುಡಿಯೋದಲ್ಲಿ ನಿಮ್ಮ ಆಶೀರ್ವಾದದೊಂದಿಗೆ ಉದಯಿಸಿದ ಸಂಸ್ಥೆ ಉಪೇಂದ್ರ ಪ್ರೊಡಕ್ಷನ್ಸ್ ಹಾಗೂ ಉಪ್ಪಿ 2 ಚಿತ್ರದ ಪ್ರಾರಂಭೋತ್ಸವಕ್ಕೆ ಬಂದು ಹಾರೈಸಿ ಎನ್ನುವ ಕನ್ನಡ, ಇಂಗ್ಲಿಷ್ ಮಿಶ್ರಿತ ಆಮಂತ್ರಣವಿದೆ.

English summary
Upendra next flick Uppi 2 : The Kannada movie muhurta invitation card is different and as stylish as Uppi Dada.
Please Wait while comments are loading...