'ಉಸಿರೇ ಉಸಿರೇ' ಎನ್ನತ್ತಲೇ ಡೈನಾಮಿಕ್ ಲುಕ್ ಕೊಟ್ಟ ದೇವರಾಜ್

ಸ್ಯಾಂಡಲ್‌ವುಡ್‌ನ ಹಿರಿಯ ನಟ ದೇವರಾಜ್ ಡೈನಾಮಿಕ್ ಲುಕ್ ಕೊಡುವುದರಲ್ಲಿ ಎಕ್ಸ್‌ಪರ್ಟ್. ಇದೂವರೆಗೂ ದೇವರಾಜ್ ನಟಿಸಿದ ಬಹುತೇಕ ಸಿನಿಮಾಗಳು ಇವರ ಲುಕ್‌ನಿಂದಲೇ ಗಮನ ಸೆಳೆದಿವೆ.ಸ ಅದೆಷ್ಟೋ ಸಿನಿಮಾಗಳು ಈ ಲುಕ್‌ನಿಂದಲೇ ಪ್ರೇಕ್ಷಕರ ಮನಗೆದ್ದಿದ್ದೂ ಇದೆ.

ಈಗ ಇಂತಹದ್ದೇ ಒಂದು ಲುಕ್ ಪ್ರೇಕ್ಷಕರ ಗಮನ ಸೆಳೆಯುತ್ತಿದೆ. ಬಿಳಿ ಗಡ್ಡ ಬಿಟ್ಟು, ಕ್ಯಾಪ್ ತೊಟ್ಟು ಕಾಣಿಸಿಕೊಂಡಿರುವ ಡೈನಾಮಿಕ್ ಸ್ಟಾರ್ ದೇವರಾಜ್ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅಂದ್ಹಾಗೆ ಇದು ದೇವರಾಜ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿರುವ 'ಉಸಿರೇ ಉಸಿರೇ' ಸಿನಿಮಾದ ಲುಕ್.

Usire Usire Team Revealed Senior Actor Devaraj Look On His Birthday

ಪ್ರದೀಪ್ ಯಾದವ್ ಎಂಬುವವರು 'ಉಸಿರೇ ಉಸಿರೇ' ಸಿನಿಮಾದವನ್ನು ನಿರ್ಮಾಣ ಮಾಡುತ್ತಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ದೇವರಾಜ್ ಅವರ ಹುಟ್ಟುಹಬ್ಬದ ವಿಶೇಷ ದಿನದಂದು ಡೈನಾಮಿಕ್ ಲುಕ್ ಅನ್ನು ರಿವೀಲ್ ಮಾಡಲಾಗಿದೆ.

ದೇವರಾಜ್ ಅವರ ವಿಶಿಷ್ಟವಾದ ಲುಕ್ ರಿಲೀಸ್ ಮಾಡುವ ಮೂಲಕ 'ಉಸಿರೇ ಉಸಿರೇ' ಚಿತ್ರತಂಡ ಹುಟ್ಟುಹಬ್ಬವನ್ನು ಆಚರಿಸಿದೆ. 'ಉಸಿರೇ ಉಸಿರೇ' ಸಿನಿಮಾದಲ್ಲಿ ದೇವರಾಜ್ ಅವರ ವಿಭಿನ್ನ ಪಾತ್ರದ ಪೋಸ್ಟರ್ ಮತ್ತು ಮೇಕಿಂಗ್ ವಿಡಿಯೋವನ್ನೂ ಸಿನಿಮಾ ತಂಡ ಬಿಡುಗಡೆ ಮಾಡಿದೆ.

ಅಂದ್ಹಾಗೆ 'ಉಸಿರೇ ಉಸಿರೇ' ಸಿನಿಮಾಗೆ ಬಿಗ್ ಬಾಸ್' ಖ್ಯಾತಿಯ ರಾಜೀವ್ ನಾಯಕ. ರಾಜೀವ್ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಹಾಗೇ ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಆಲಿ,ಬ್ರಹ್ಮಾನಂದಮ್,ಸಾಧುಕೋಕಿಲ, ದೇವರಾಜ್, ಮಂಜು ಪಾವಗಡ, ಜಗಪ್ಪ, ಶಿವು, ಸುಶ್ಮಿತಾ ಮುಂತಾದವರು ತಾರಾಬಳಗದಲ್ಲಿದ್ದಾರೆ.

Usire Usire Team Revealed Senior Actor Devaraj Look On His Birthday

ಸಿ.ಎಂ.ವಿಜಯ್ ನಿರ್ದೇಶನದ ಉಸಿರೇ ಉಸಿರೇ ಸಿನಿಮಾವನ್ನು ನಿರ್ದೇಶನ ಮಾಡಿದ್ದರೆ, ಮನು ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನವಿದೆ. ವಿವೇಕ್ ಚಕ್ರವರ್ತಿ ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

More from Filmibeat

English summary
Usire Usire Team Revealed Senior Actor Devaraj Look On His Birthday, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X