Kichcha 50: ಕಿಚ್ಚನ ಬರ್ತ್‌ಡೇಗೆ ಮೆಗಾ ಸಿನಿಮಾ.. ಸ್ಕ್ರಿಪ್ಟ್‌ಗೆ ಕೈ ಹಾಕಿದ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್

ಕನ್ನಡ ಚಿತ್ರರಂಗದ ಬಾದ್‌ಷಾ ಕಿಚ್ಚ ಸುದೀಪ್ ಸೆಪ್ಟೆಂಬರ್ 2ರಂದು 50ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಸಂದರ್ಭದಲ್ಲಿ ಕಿಚ್ಚನಿಗೆ ಹೊಸ ಹೊಸ ಸಿನಿಮಾಗಳ ಉಡುಗೊರೆಗಳೇ ಸಿಗುತ್ತಿದೆ. ಇದರಲ್ಲೊಂದು ಸಿನಿಮಾವನ್ನು ಆರ್‌. ಚಂದ್ರು ನಿರ್ದೇಶನ ಮಾಡುತ್ತಿದ್ದಾರೆ.

'ಕಬ್ಜ' ಸಿನಿಮಾ ಬಳಿಕ ಆರ್. ಚಂದ್ರು ಆರ್‌ ಸಿ ಸ್ಟುಡಿಯೋಸ್ ಅನ್ನೋ ಸಂಸ್ಥೆಯನ್ನು ಹುಟ್ಟಾಕಿದ್ದಾರೆ. ಈ ಸಂಸ್ಥೆಯಿಂದ ಚೊಚ್ಚಲ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದು, ಕಿಚ್ಚ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

r-chandru-kichcha-sudeep-vijayendra-prasad

ಸುದೀಪ್ ಈಗಾಗಲೇ ಆರ್ ಚಂದ್ರುಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದು ಸ್ಕ್ರಿಪ್ಟ್ ಕೆಲಸ ಆರಂಭ ಆಗಿದೆ. ವಿಶೇಷ ಅಂದ್ರೆ ಈ ಸ್ಕ್ರಿಪ್ಟ್ ಮೇಲ್ವಿಚಾರಣೆ ಮಾಡಲು ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಬರುತ್ತಿದ್ದಾರೆ. ಅವರ ಕಣ್ಗಾವಲಿನಲ್ಲಿ ಈ ಮೆಗಾ ಸಿನಿಮಾದ ಸ್ಕ್ರಿಪ್ಟ್ ನಡೆಯಲಿದೆ.

ಕಿಚ್ಚನ ಸಿನಿಮಾಗೆ ವಿಜಯೇಂದ್ರ ಪ್ರಸಾದ್ ಸಾಥ್

ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಭರ್ಜರಿ ನ್ಯೂಸ್ ಸಿಗುತ್ತಿದೆ. ತನ್ನ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಗಿಫ್ಟ್‌ಗಳ ಮೇಲೆ ಗಿಫ್ಟ್ ಕೊಡುತ್ತಿದ್ದಾರೆ. ಈಗ ಆರ್ ಚಂದ್ರು ಆಕ್ಷನ್ ಕಟ್ ಹೇಳುತ್ತಿರುವ ಸಿನಿಮಾಗೆ ರಾಜಮೌಳಿ ತಂದೆ ಸಾಥ್ ಕೊಡುತ್ತಿರೋದು ಕುತೂಹಲಕ್ಕೆ ಕಾರಣವಾಗಿದೆ.'ಮಗಧೀರ', 'ಬಾಹುಬಲಿ', 'ಆರ್ ಆರ್ ಆರ್' ಅಂತಹ ಮೆಗಾ ಹಿಟ್ ಸಿನಿಮಾಗಳ ಕಥೆಗಾರ ವಿ .ವಿಜಯೇಂದ್ರ ಪ್ರಸಾದ್ ಕಿಚ್ಚ ಸಿನಿಮಾ ಸ್ಕ್ರಿಪ್ಟ್ ಸೂಪರ್‌ವೈಸ್ ಮಾಡುತ್ತಿದ್ದಾರೆ.

ವಿಜಯೇಂದ್ರ ಪ್ರಸಾದ್ ಭೇಟಿಯಾದ ಆರ್.ಚಂದ್ರು

ಆರ್.ಚಂದ್ರು ಮತ್ತೊಂದು ಮೆಗಾ ಪ್ಯಾನ್ ಇಂಡಿಯಾ ಸಿನಿಮಾ ಮಾಡುವುದಕ್ಕೆ ಹೊರಟಿದ್ದಾರೆ. ಆರ್ ಸಿ ಸ್ಟುಡಿಯೋ ಮೂಲಕ ಕಮ್ಮಿ ಅಂದರೂ 5 ಸಿನಿಮಾ ಸೆಟ್ಟೇರುತ್ತಿದೆ. ಅದರಲ್ಲಿ ಮೊದಲ ಸಿನಿಮಾ ಕಿಚ್ಚ ಸುದೀಪ್ ನಟಿಸುತ್ತಿದ್ದಾರೆ ಅನ್ನೋದು ಆರ್ ಚಂದ್ರು ತಂಡದಿಂದ ಸಿಕ್ಕಿರೋ ಮಾಹಿತಿ. ಹೀಗಾಗಿ ಈಗಾಗಲೇ ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಅವರನ್ನು ಆರ್.ಚಂದ್ರು ಭೇಟಿಯಾಗಿ ಮಾತುಕತೆ ನಡೆಸಿ ಬಂದಿದ್ದಾರೆ. ಆ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಓಡಾಡುತ್ತಿದೆ.

r-chandru-kichcha-sudeep-vijayendra-prasad

ಪ್ಯಾನ್ ಇಂಡಿಯಾ ಅಲ್ಲ ಗ್ಲೋಬಲ್ ಸಿನಿಮಾ

ಆರ್ ಚಂದ್ರು ಸಿನಿಮಾದ ಟೈಟಲ್ ರಿಲೀಸ್ ಮಾಡುವುದಕ್ಕೆ ಮುಹೂರ್ತ ಫಿಕ್ಸ್ ಮಾಡಿಕೊಂಡಿದೆ. ಕಿಚ್ಚನ ಹುಟ್ಟುಹಬ್ಬ (ಸೆಪ್ಟೆಂಬರ್ 2) ರಂದು ಸಿನಿಮಾ ಅಧಿಕೃತವಾಗಿ ಘೋಷಣೆಯಾಗಲಿದೆ. ಈ ಸಿನಿಮಾವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದ್ದು, ಪ್ಯಾನ್ ಇಂಡಿಯಾ ಕಲ್ಪನೆಯನ್ನು ಮುರಿದು ಗ್ಲೋಬಲ್ ಸಿನಿಮಾವನ್ನು ನಿರ್ಮಾಣ ಮಾಡುವುದಕ್ಕೆ ಮುಂದಾಗಿದ್ದಾರೆ. ವಿಜಯೇಂದ್ರ ಪ್ರಸಾದ್ ಸ್ಕ್ರಿಪ್ಟ್ ಮೇಲ್ವಿಚಾರಣೆ ಮಾಡುತ್ತಿರೋದ್ರಿಂದ ಕಥೆ ಬಗ್ಗೆ ಕುತೂಹಲ ದುಪ್ಪಟ್ಟಾಗಿದೆ.

25ಕ್ಕೂ ಹೆಚ್ಚು ಸಿನಿಮಾಗಳಿಗೆ ಕಥೆ

ರಾಜಮೌಳಿ ತಂದೆ ವಿಜಯೇಂದ್ರ ಪ್ರಸಾದ್ ಕಥೆಗಳು ಬಾಕ್ಸಾಫೀಸ್ ಅನ್ನೇ ಕೊಳ್ಳೆ ಹೊಡೆದಿದ್ದು ಗೊತ್ತೇ ಇದೆ. 'ಭಜರಂಗಿ ಭಾಯ್‌ಜಾನ್‌', 'ಬಾಹುಬಲಿ', 'RRR' ಅಂತಹ ಸಿನಿಮಾಗಳು ಇದಕ್ಕೆ ಸಾಕ್ಷಿ. ಇದೂವರೆಗೂ ಸುಮಾರು 25ಕ್ಕೂ ಹೆಚ್ಚು ಸಿನಿಮಾಗಳಿಗೆ ಕಥೆ ಹೆಣೆದಿರೋ ವಿಜಯೇಂದ್ರ ಪ್ರಸಾದ್ ಸದ್ಯ ಕಿಚ್ಚ ಸಿನಿಮಾಗೆ ಕೆಲಸ ಮಾಡುತ್ತಿರೋದು ಅವರ ಫ್ಯಾನ್ಸ್‌ಗೆ ಕಿಕ್ ಕೊಟ್ಟಿದೆ.

More from Filmibeat

English summary
V. Vijayendra Prasad supervising Sudeep and R Chandru Combination Movie
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X