ವಿದ್ಯಾಭರಣ್ ವಿರುದ್ಧ ನಟಿ ಆಡಿಯೋ ವೈರಲ್! ಮದುವೆ ಕ್ಯಾನ್ಸಲ್?

ಇತ್ತೀಚೆಗೆ ಅಗ್ನಿಸಾಕ್ಷಿ ಹಾಗೂ ಬಿಗ್ ಬಾಸ್ ಖ್ಯಾತಿಯ ವೈಷ್ಣವಿ ಗೌಡ ಅವರು ನಿಶ್ವಿತಾರ್ಥ ಮಾಡಿಕೊಂಡಿದ್ದಾರೆ ಎನ್ನಲಾದ ಫೋಟೊಗಳು ವೈರಲ್ ಆಗಿದ್ದವು. ವಿದ್ಯಾಭರಣ್ ಅನ್ನೋ ನಟ ಜೊತೆ ಸಪ್ತಪದಿ ತುಳಿಯಲಿದ್ದಾರೆ ಅನ್ನೋ ಮಾತು ಹರಿದಾಡಿದ್ದವು.

ಅದ್ಯಾವಾಗ ನಿಶ್ಚಿತಾರ್ಥದ ಫೋಟೊಗಳು ವೈರಲ್ ಆಯ್ತೋ ಆಗ ವೈಷ್ಣವಿ ಗೌಡ ನಿಶ್ಚಿತಾರ್ಥ ಮಾಡಿಕೊಂಡಿಲ್ಲ. ಎರಡೂ ಮನೆಯವರು ಮಾತುಕತೆ ಬಂದಿದ್ದರು ಎಂದು ಸ್ಪಷ್ಣನೆ ನೀಡಿದ್ದರು. ಇಲ್ಲಿಂದ ಒಂದಲ್ಲ ಸುದ್ದಿ ಸದ್ದು ಮಾಡುತ್ತಲೇ ಇದೆ.

ಇದೀಗ ವಿದ್ಯಾಭರಣ್ ವಿರುದ್ಧ ಹೆಸರು ಹೇಳದ ನಟಿಯೊಬ್ಬರು ಗಂಭೀರ ಆರೋಪಗಳನ್ನು ಮಾಡುತ್ತಿದ್ದಾರೆ. ನಕಲಿ ಇನ್‌ಸ್ಟಾಗ್ರಾಂ ಅಕೌಂಟ್‌ಗಳನ್ನು ಮಾಡಿಕೊಂಡು ಯುವತಿಯರಿಗೆ ಮೆಸೇಜ್ ಕಳಿಸಿಕೊಂಡು ಇರುತ್ತಾರೆ. ವಿದ್ಯಾಭರಣ್‌ಗೆ ಈ ಹಿಂದೆ ಗರ್ಲ್‌ಫ್ರೆಂಡ್ ಇದ್ದರು ಎಂದು ಯುವತಿ ಆರೋಪ ಮಾಡಿದ್ದಾರೆ. ಇದೇ ವಿಚಾರವಾಗಿ ವಿದ್ಯಾಭರಣ್ ಕೂಡ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ.

ನಟಿ ಆಡಿಯೋ ವೈರಲ್

ನಟಿ ಆಡಿಯೋ ವೈರಲ್

ಹೆಸರು ಹೇಳಿದ ನಟಿಯೊಬ್ಬರು ವಿದ್ಯಾಭರಣ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ಇನ್‌ಸ್ಟಾಗ್ರಾಂನಲ್ಲಿ ಫೇಕ್ ಅಕೌಂಟ್‌ ಓಪನ್ ಮಾಡಿ ಎಲ್ಲರಿಗೂ ಮೆಸೇಜ್ ಕಳಿಸಿಕೊಂಡಿದ್ದಾನೆ. "ನಾನು ಮದುವೆ ಆಗ್ತೀನಿ, ಲೆಟ್ಸ್ ಮೂವ್ ಆನ್, ಡೇಟ್ ಮಾಡೋಣ ಅಂತೆಲ್ಲ ಮೆಸೇಜ್ ಮಾಡಿಕೊಂಡಿದ್ದಾನೆ. ಇತ್ತೀಚೆಗೆ ಹಿಂದಿ ಹುಡುಗಿಯೊಬ್ಬಳ ಜೊತೆ ಬ್ರೇಕಪ್ ಮಾಡಿಕೊಂಡಿದ್ದಾನೆ. ಆಕೆ ಫ್ಯಾಷನ್ ಡಿಸೈನರ್. ಅವಳನ್ನು ಮನೆಗೆ ಕರೆದುಕೊಂಡು ಹೋಗಿದ್ದರು. ಅವರ ಅಮ್ಮ ಕೂಡ ನನ್ನ ಸೊಸೆ ಅಂತ ಎಲ್ಲರಿಗೂ ಹೇಳಿಕೊಂಡು ಬಂದಿದ್ದರು. ಅಕ್ಟೋಬರ್ 30ರಂದು ಬ್ರೇಕಪ್ ಮಾಡಿಕೊಂಡು ಈಗ ಸಡನ್ ಆಗಿ ನಿಶ್ಚಿತಾರ್ಥ ಮಾಡಿಕೊಂಡಿರುವ ಫೋಟೊ ಹಾಗೂ ವಿಡಿಯೋವನ್ನು ಅವರ ಅಪ್ಪ ಎಲ್ಲರಿಗೂ ಶೇರ್ ಮಾಡುತ್ತಿದ್ದಾರೆ" ಎಂದು ಯುವ ನಟಿ ಆರೋಪ ಮಾಡಿದ್ದಾರೆ. ಆಡಿಯೋ ಲೀಕ್ ಆದ ಬಳಿಕ ಮದುವೆ ಮುರಿದುಕೊಂಡಿರುವ ಬಗ್ಗೆ ಸುದ್ದಿ ಹರಿದಾಡುತ್ತಿದೆ.

ವೈಷ್ಣವಿಗೌಡ ಪೋಸ್ಟ್

ವೈಷ್ಣವಿಗೌಡ ಪೋಸ್ಟ್

ಈ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವೈಷ್ಣವಿ ಗೌಡ ಪೋಸ್ಟ್ ಮಾಡಿದ್ದಾರೆ. " ನಾವು ಈ ಸಂಬಂಧವನ್ನು ಮುರಿದುಕೊಂಡಿದ್ದೇವೆ. ಇದನ್ನು ಇಲ್ಲಿಗೆ ಬಿಟ್ಟು ಬಿಡಿ" ಎಂದು ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಮೂಲಕ ಮದುವೆ ನಿಶ್ಚಿಯವಾಗಿದ್ದು ಪಕ್ಕಾ ಆಗಿತ್ತು. ಆದ್ರೀಗ ವೈಷ್ಣವಿ ಗೌಡ ಈಗ ಮದುವೆ ಮುರಿದುಕೊಂಡಿದ್ದೇವೆ ಎಂದು ಹೇಳಿಕೆಯನ್ನು ನೀಡಿದ್ದಾರೆ. ಈ ಮೂಲಕ ಅಗ್ನಿಸಾಕ್ಷಿ ಖ್ಯಾತಿ ವೈಷ್ಣವಿ ಗೌಡ ನಿಶ್ಚಿತಾರ್ಥ ಹಾಗೂ ಮದುವೆ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ವಿದ್ಯಾಭರಣ್ ಪ್ರತಿಕ್ರಿಯೆ ಏನು?

ವಿದ್ಯಾಭರಣ್ ಪ್ರತಿಕ್ರಿಯೆ ಏನು?

ವೈಷ್ಣವಿ ಗೌಡ ಅವರು ಒಳ್ಳೆಯರು. ಅವರಿಗೂ ಇದಕ್ಕೂ ಯಾವುದೇ ರೀತಿ ಸಂಬಂಧಾನೇ ಇಲ್ಲ. ವೈಷ್ಣವಿಗೌಡ ಅವರಿಗೆ ಒಂದು ಫ್ಯಾನ್ ಬೇಸ್ ಇರುತ್ತೆ. ವೈಷ್ಣವಿಗೌಡ ಅವರಿಗೆ ಫೇವರ್ ಮಾಡುವುದಕ್ಕೆ ಹೋದರೆ ಅವರಿಗೆ ಫ್ಯಾನ್ ಬೇಸ್ ಸಪೋರ್ಟ್ ಮಾಡುತ್ತೆ. ಈಗೇನು ವಿಡಿಯೋ ಮಾಡಿದ್ದಾರೆ ಅದರಿಂದ ಅವರಿಗೆ ಶಕ್ತಿ ಸಿಗುತ್ತೆ ಅನ್ನೋದಕ್ಕೆ ಬಳಸಿಕೊಂಡಿದ್ದಾರೆ. ಅದು ಬಿಟ್ಟರೆ ಅದರಲ್ಲಿ ಯಾವುದೇ ರೀತಿಯ ಸತ್ಯಾಸತ್ಯತೆ ಏನೂ ಇಲ್ಲ. ಮುಂದಿನ ದಿನಗಳಲ್ಲಿ ಎಲ್ಲನೂ ನಿಮಗೆ ಗೊತ್ತಾಗುತ್ತೆ. ಇದೊಂದು ಫೇಕ್ ನ್ಯೂಸ್." ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಈಗಲೇ ಯಾಕೆ ಈ ರೀತಿ ಮಾಡಿದ್ರು?

ಈಗಲೇ ಯಾಕೆ ಈ ರೀತಿ ಮಾಡಿದ್ರು?

"ವೈಷ್ಣವಿ ಗೌಡ ಅವರನ್ನು ಮದುವೆ ಆಗ್ತಿದ್ದಾರೆ ಅನ್ನೋ ಸುದ್ದಿ ಬರುತ್ತಿದ್ದಂತೆ ಹೀಗೆ ಮಾಡುತ್ತಿದ್ದಾರೆ. ಅಸಲಿಗೆ ಸಿನಿಮಾ ರಿಲೀಸ್ ಆಯ್ತು. ಆಡಿಯೋ, ಟ್ರೈಲರ್ ಎಲ್ಲಾ ಆಯ್ತು. ಆಗಲೂ ಮೀಡಿಯಾ ಬಂದಿತ್ತು. ಆಗ ಯಾಕೆ ಇದನ್ನೆಲ್ಲಾ ತಂದಿಲ್ಲ. ಆಗಲೂ ಹುಡುಗ ಸರಿಯಿಲ್ಲ ಅಂತ ಹೇಳಬಹುದಿತ್ತಲ್ಲ ಅನ್ನೋದು ವಿದ್ಯಾಭರಣ್ ಅವರ ವಾದ. ಒಟ್ನಲ್ಲಿ ಈ ಘಟನೆಯ ಬಳಿಕ ವೈಷ್ಣವಿ ಗೌಡ ಹಾಗೂ ವಿದ್ಯಾಭರಣ್ ಅವರ ಮದುವೆ ಮುರಿದುಬಿದ್ದಿರು ಬಗ್ಗೆ ಸುದ್ದಿಗಳು ಎಲ್ಲೆಡೆ ಹರಡುತ್ತಿವೆ.

More from Filmibeat

English summary
Vaishnavi Gowda Engagement in Trouble Vidyabharan Ex Girlfriend's Audio Leak, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X