ರೆಡ್ ಗೌನ್‌ನಲ್ಲಿ ಮಿಂಚಿದ 'ಪಟಾಕ'; ನಭಾ ನಟೇಶ್ ಫೋಟೋಶೂಟ್‌ಗೆ ಜೈ ಎಂದ ಫ್ಯಾನ್ಸ್

ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟಿಸಿದ 'ವಜ್ರಕಾಯ' ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟ ನಟಿ ನಭಾ ನಟೇಶ್. ಈ ಸಿನಿಮಾದಿಂದಲೇ ಕನ್ನಡಿಗರಿಗೆ ಪಟಾಕ ಅಂತ ಚಿರಪರಿಚಿತರಾಗಿದ್ದಾರೆ. ಕನ್ನಡದಿಂದ ನಟನಾ ಜರ್ನಿ ಆರಂಭ ಆಗಿದ್ದರೂ, ಟಾಲಿವುಡ್ ಅನ್ನು ನಭಾ ನಟೇಶ್ ಆಯ್ಕೆ ಮಾಡಿಕೊಂಡಿದ್ದಾರೆ. ಅಲ್ಲಿಯೇ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಶೃಂಗೇರಿ ಮೂಲದ ಈ ನಟಿ ಸದ್ಯ ತೆಲುಗು ಚಿತ್ರರಂಗದ ಟಾಪ್ ನಟಿಯರಲ್ಲಿ ಒಬ್ಬರು. ಒಂದರ ಹಿಂದೊಂದು ಸಿನಿಮಾಗಳಲ್ಲಿ ನಭಾ ನಟೇಶ್ ನಟಿಸುತ್ತಿದ್ದಾರೆ. ಬಹಳ ದಿನಗಳ ಬಳಿಕ 'ಡಾರ್ಲಿಂಗ್' ಸಿನಿಮಾ ಮೂಲಕ ಪ್ರೇಕ್ಷಕರ ಎದುರು ಪ್ರತ್ಯಕ್ಷ ಆದ ನಭಾ ನಟೇಶ್ ಜನ ಮೆಚ್ಚುಗೆ ಸಿಕ್ಕಿತ್ತು. ಇದೇ ಜೋಷ್‌ನಲ್ಲಿ ನಭಾ ನಟೇಶ್ ಹೊಸ ಫೋಟೋಶೂಟ್‌ನಲ್ಲಿ ಮಿಂಚಿದ್ದಾರೆ.

Vajrakaya Movie Pataka fame actress Nabha Natesh Photoshoot went viral

ನಭಾ ನಟೇಶ್ ಟಾಲಿವುಡ್‌ನಲ್ಲಿ ಗ್ಲಾಮರಸ್ ಪಾತ್ರಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗೇ ಟ್ರೆಡಿಷನಲ್ ಲುಕ್‌ನಲ್ಲೂ ಈ ನಟಿ ಮಿಂಚಿದ್ದಾರೆ. ಆದ್ರೀಗ ಕೆಂಪು ಬಣ್ಣದ ಗೌನ್‌ನಲ್ಲಿ ಗುಲಾಬಿಯಂತೆ ಮಿಂಚುತ್ತಿರುವ ನಭಾ ನಟೇಶ್ ಬೋಲ್ಡ್ ಅಂಡ್ ಬ್ಯೂಟಿಫುಲ್ ಲುಕ್‌ ಕೊಟ್ಟಿದ್ದಾರೆ. ಈ ಹೊಸ ಫೋಟೊಶೂಟ್ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.

ಈ ಹೊಸ ಫೋಟೋಶೂಟ್‌ನಲ್ಲಿ ನಭಾ ನಟೇಶ್ ವಿವಿದ ಭಂಗಿಯಲ್ಲಿ ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ. ಅದನ್ನು ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಫ್ಯಾನ್ಸ್ ಕೂಡ ನಭಾ ನಟೇಶ್ ಹೊಸ ಫೋಟೋಶೂಟ್‌ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕಾಮೆಂಟ್‌ಗಳ ಮೇಲೆ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.

ನಭಾ ನಟೇಶ್‌ಗೆ ಕೆಲವು ತಿಂಗಳುಗಳ ಹಿಂದೆ ಅಪಘಾತವಾಗಿತ್ತು. ಇದರಿಂದ ಸಿನಿಮಾ ಸ್ವಲ್ಪ ದೂರ ಉಳಿದಿದ್ದರು. ಈಗ ಮತ್ತೆ ಚೇತರಿಸಿಕೊಂಡು ಸಿನಿಮಾ ಕಡೆ ಮುಖ ಮಾಡಿದ್ದಾರೆ. ಟಾಲಿವುಡ್‌ನಲ್ಲಿ ಮತ್ತೆ ಆಕ್ಟಿವ್ ಆಗಿರುವ ನಭಾ, ಸಿನಿಮಾಗಳಿಗೆ ಗ್ರೀನ್ ಸಿಗ್ನಲ್ ಕೊಡುತ್ತಿದ್ದಾರೆ. ಅಶ್ವಿನ್ ರಾಮ್ ನಿರ್ದೇಶಿಸಿದ್ದ ಈ ಸಿನಿಮಾದಲ್ಲಿ ಪ್ರಿಯದರ್ಶಿ ಪುಲಿಕೊಂಡ ನಾಯಕನಾಗಿ ನಟಿಸಿದ್ದರು. ಈ ಸಿನಿಮಾ ಜುಲೈ 19ರಂದು ತೆರೆಕಂಡಿದೆ. ಈ ಸಿನಿಮಾದಲ್ಲಿ ನಭಾ ನಟೇಶ್ 7 ಪಾತ್ರಗಳಲ್ಲಿ ನಟಿಸಿ, ಸಿನಿಪ್ರಿಯರ ಹುಬ್ಬೇರಿಸಿದ್ದಾರೆ.

Vajrakaya Movie Pataka fame actress Nabha Natesh Photoshoot went viral

'ಡಾರ್ಲಿಂಗ್' ಸಿನಿಮಾ ಬಳಿಕ ನಭಾ ನಟೇಶ್ ಕೈಯಲ್ಲಿ 'ಸ್ವಯಂಭು' ಎಂಬ ಪ್ಯಾನ್ ಇಂಡಿಯಾ ಸಿನಿಮಾವಿದೆ. ಈ ಸಿನಿಮಾದ ಚಿತ್ರೀಕರಣದ ಕೆಲಸ ಕೂಡ ನಡೆಯುತ್ತಿದೆ. ನಿಖಿಲ್ ಸಿದ್ಧಾರ್ಥ್‌ಗೆ ನಾಯಕಿಯಾಗಿ ನಭಾ ಕಾಣಿಸಿಕೊಳ್ಳುತ್ತಿದ್ದಾರೆ. ಈ ಸಿನಿಮಾದಲ್ಲಿ ಪಟಾಕ ದಂತಹ ಪಾತ್ರದಲ್ಲಿಯೇ ನಟಿಸುತ್ತಿರುವ ಸುದ್ದಿ ಸದ್ದು ಮಾಡುತ್ತಿದ್ದು ಲುಕ್ ವೈರಲ್ ಆಗಿದೆ.

ಕನ್ನಡದಿಂದ ಟಾಲಿವುಡ್‌ಗೆ ಹಾರಿದ ಬಳಿಕ ನಭಾ ನಟೇಶ್ ಅಲ್ಲೇ ಸೆಟಲ್ ಆದಂತೆ ಕಾಣುತ್ತಿದೆ. ಇವರು ನಟಿಸಿದ 'ಇಸ್ಮಾರ್ಟ್' ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಬಳಿಕ 'ಡಿಸ್ಕೋ ರಾಜಾ' ನಭಾ ನಟೇಶ್‌ಗೆ ಜನಪ್ರಿಯತೆ ತಂದುಕೊಟ್ಟಿತ್ತು. ಸದ್ಯ ಟಾಲಿವುಡ್‌ನಲ್ಲಿಯೇ ಬ್ಯುಸಿಯಾಗಿರುವ ನಟಿ ಕನ್ನಡ ಸಿನಿಮಾದಲ್ಲಿ ನಟಿಸುತ್ತಾರಾ? ಇಲ್ವಾ? ಅನ್ನೋ ಪ್ರಶ್ನೆಯಂತೂ ಕಾಡುತ್ತಿದೆ.

More from Filmibeat

English summary
Vajrakaya Movie Pataka fame actress Nabha Natesh Photoshoot went viral
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X