"ಮಗಳು ನಂಗೆ ಹುಟ್ಟಿದ್ದಲ್ಲ ಅಂದ.. ಮದ್ವೆಯಾದ 3 ದಿನಕ್ಕೆ ಡಿವೋರ್ಸ್ ಕೊಡು ಅಂದಿದ್ಲು ಅತ್ತೆ" ಮಾವ ಗಂಭೀರ ಆರೋಪ

ವರ್ತೂರು ಸಂತೋಷ್ ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡುತ್ತಿದ್ದಂತೆ ಒಂದೊಂದೇ ವಿವಾದಗಳು ಅವರನ್ನು ಸುತ್ತಿಕೊಂಡಿದೆ. ಇತ್ತೀಚೆಗೆ ಹುಲಿ ಉಗುರು ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಹೋಗಿ ಜಾಮೀನು ಪಡೆದು ಬಂದಿದ್ದರು. ಇದೇ ನೋವಿನಲ್ಲಿದ್ದು, ಬಿಗ್ ಬಾಸ್ ಮನೆಯಿಂದ ಹೊರ ಹೋಗಬೇಕು ಎಂದು ಹಠ ಹಿಡಿದಿದ್ದರು.

ಬಿಗ್ ಬಾಸ್ ಮನೆಯೊಳಗೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಚರ್ಚೆ ಆಗುತ್ತಿರುವಾಗಲೇ, ವರ್ತೂರು ಸಂತೋಷ್‌ಗೆ ಮದುವೆ ಆಗಿರೋ ಸುದ್ದಿ ಬೆಳಕಿಗೆ ಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಮದುವೆ ಆಗಿರೋ ವಿಡಿಯೋ ಹಾಗೂ ಫೋಟೊಗಳು ಹರಿದಾಡಿದ್ದವು. ಇದೇ ಸುದ್ದಿಯೀಗ ವಿವಾದಕ್ಕೂ ತಿರುಗಿದೆ.

varthur-santhosh-father-in-law-reaction

ಇದೀಗ ಮಾವ ಸೋಮನಾಥ್ ನ್ಯೂಸ್‌ ಫಸ್ಟ್‌ಗೆ ಪ್ರತಿಕ್ರಿಯೆ ನೀಡಿದ್ದು, ವರ್ತೂರು ಸಂತೋಷ್ ಹಾಗೂ ಅವರ ಅಮ್ಮನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ವರ್ತೂರು ಸಂತೋಷ್ ಡ್ರಗ್ಸ್ ತೆಗೆದುಕೊಳ್ಳುತ್ತಿದ್ದ. ಕುಡಿದು ಮಗಳಿಗೆ ಹಿಂಸೆ ನೀಡುತ್ತಿದ್ದ ಎಂದು ಆರೋಪ ಮಾಡಿದ್ದಾರೆ. ಮಾವ ಆರೋಪ ಮಾಡಿರುವ ಪ್ರಮುಖ ಅಂಶಗಳು ಇಲ್ಲಿವೆ.

ಮದುವೆ ಆಗಿಲ್ಲ ಯಾವ ಬಾಯಲ್ಲಿ ಹೇಳ್ತಾರೆ?

ಮಾವ ಸೋಮನಾಥ್ ಅಳಿಯನ ಮೇಲೆ ಗಂಭೀರ ಆರೋಪ ಮಾಡಿದ್ದಾರೆ. ವರ್ತೂರು ಸಂತೋಷ್ ಹಾಗೂ ಮಗಳ ಮದುವೆಗೆ 12 ಸಾವಿರ ಮಂದಿ ಬಂದಿದ್ದರು. ಆದ್ರೀಗ ಮದುವೆನೇ ಆಗಿಲ್ಲ ಅಮ್ಮ-ಮಗ ಅಂತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ. "ಅವರ ಅಮ್ಮ ಯಾವ ಬಾಯಿಯಲ್ಲಿ ಮದುವೆ ಆಗಿಲ್ಲ ಅಂತ ಹೇಳ್ತಾರೆ. 10 ರಿಂದ 12 ಮದುವೆಗೆ ಬಂದಿದ್ರಲ್ಲ. ಮೂರು ಸಾವಿರ, ಎರಡು ಸಾವಿರ ಅಂದರೆ ಏನೋ ಅನ್ಬಹುದು. ಒಡವೆ ಇಟ್ಟು ನಾನೇ ಮದುವೆ ಮಾಡಿಕೊಟ್ಟೆ. ನಾನು ಮದುವೆನೇ ಆಗಿಲ್ಲ ಅಂತ ಬಿಗ್ ಬಾಸ್‌ನಲ್ಲಿ ಹೇಳಿಕೊಂಡಿದ್ದಾನಲ್ಲ. ಟಿವಿಗೆ ಬಂದಿದ್ದಾನಲ್ಲ ಅಂತ ಸುಮ್ಮನೆ ಇದ್ವಿ. ಈಗ ಎರಡನೇ ಮದುವೆ ಮಾಡಿಕೊಳ್ತೀನಿ ಅಂದಿದ್ದಕ್ಕೆ ಮಾತಾಡ್ತಿದ್ದೀವಿ." ಎಂದು ಮಾವ ಸೋಮನಾಥ್ ಹೇಳಿದ್ದಾರೆ.

ಡ್ರಗ್ಸ್, ಡ್ರಿಂಕ್ಸ್ ಮಾಡೋ ಹವ್ಯಾಸವಿದೆ

"ಅವರು ಡ್ರಗ್ಸ್ ಹಾಕೊಳ್ಳೋದು.. ಡ್ರಿಂಕ್ಸ್ ಮಾಡೋದು.. ಸ್ಪಂದನಾಗೆ ಆಸ್ಪತ್ರೆಗೆ ಹಾಕಿ ಎರಡು ಮೂರು ತಿಂಗಳು ಸುಧಾರಿಸಿ ಮನೆಗೆ ಕಳಿಸಿದ್ದೀನಿ. ಅದು ಅವನಿಗೆ ತಲೆ ಕೆಟ್ಟೋಗಿರೋದು. ಅವರ ಅಮ್ಮ ಇಲ್ಲದೆ ಇರೋದನ್ನೆಲ್ಲ ಹಾಕಿ ಕೊಡೋರು. ಇವನು ಸಂಜೆ ಬಂದು ಕುಡಿಯೋದು ಹೊಡೆಯೋದು. ನಾನು ಮನೆಗೆ ಹೋಗಿದ್ದಾಗ ನನ್ನ ಎದುರಿಗೇ ಕತ್ತು ಕೊಯ್ಯುವುದಕ್ಕೆ ಚಾಕು ಹಾಕ್ತಿದ್ದಾನೆ. ಅವತ್ತು ಮನೆಯಲ್ಲಿ 30-40 ಜನ ಇದ್ರು. ಅವರೆಲ್ಲ ಬುದ್ದಿವಂತರೇ.. ಅವತ್ತೂ ಅವನು ಕೇಳಲಿಲ್ಲ." ಎಂದು ಮಾವ ಹೇಳಿದ್ದಾರೆ.

"ಮಗು ನನಗೆ ಹುಟ್ಟಿಲ್ಲ ಅಂತಾನಂತೆ"

"ದೊಡ್ಡೋರನ್ನು ಕೇಳಿ ಕರ್ಕೊಂಡು ಬಂದೆ. ಎರಡು ವರ್ಷ ಆಯ್ತು ಹೆಂಡ್ತಿ ಕರ್ಕೊಂಡು ಹೋಗೋಕೆ ಮನೆಗೆ ಬರಲೇ ಇಲ್ಲ. ಮಗು ಆಗಿದೆ. ಹೆಣ್ಣು ಮಗಳು. ಇದೂವರೆಗೂ ಯಾರು ಬಂದಿಲ್ಲ ಸರ್.. ಅವರ ಮನೆಯಲ್ಲಿ ಸುಮಾರು 60-70 ಜನ ಇದ್ದಾರೆ. ಮಗು ಡಿಲೇವರಿ ಆದಾಗ ಹೇಳ್ಕೊಂಡಿದ್ದಾನೆ. ಆ ಮಗು ನನಗೆ ಹುಟ್ಟಿಲ್ಲ ಅಂತ ಹೇಳಿದ್ದಾನೆ. ಮದುವೆ ಆಗಿ ಮೂರು ದಿನಕ್ಕೆ ಡಿವೋರ್ಸ್ ತೆಗೆದುಕೊಂಡು ಬಿಡು ಅಂತಾಳಂತೆ ಆ ಯಮ್ಮ." ಎಂದು ವರ್ತೂರು ಸಂತೋಷ್ ಮಾವ ಸೋಮನಾಥ್ ಆಕ್ರೋಶ ಹೊರ ಹಾಕಿದ್ದಾರೆ.

ಮದುವೆ 7 ಲಕ್ಷ ರೂಪಾಯಿ ಸಾಮಾನು

ಇಷ್ಟೇ ಅಲ್ಲದೆ ಮದುವೆಗೆ ಅಂತ 7 ಲಕ್ಷ ರೂಪಾಯಿ ಬೆಲೆ ಬಾಳುವ ಸಾಮಾನುಗಳನ್ನು ಲಾರಿ ತುಂಬಿ ಕಳುಹಿಸಿಕೊಟ್ಟಿದ್ದೀನಿ ಎಂದು ನ್ಯೂಸ್ ಫಸ್ಟ್‌ಗೆ ನೀಡಿದ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. "ಜಯನಗರದಲ್ಲಿ 7 ಲಕ್ಷ ರೂಪಾಯಿ ಸಾಮಾನು ಖರೀದಿ ಮಾಡಿದ್ದೀವಿ. 1 ಸ್ಪೂನ್ ತಗೊಂಡ್ರೆ 100 ವೆರೈಟಿ ಇರಬೇಕು. 1 ತಟ್ಟೆ ತಗೊಂಡ್ರೆ 100 ವೆರೈಟಿ ಇರಬೇಕು. ಇಂತಹದ್ದು ಒಂದು ಲಾರಿ ಸಾಮಾನು ಕಳಿಸಿದ್ದೀವಿ." ಎಂದಿದ್ದಾರೆ.

More from Filmibeat

English summary
Varthur Santhosh has a habit of taking drugs, drinking says father in law
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X