ಕಂಚಿನ ಕಂಠದ ವಸಿಷ್ಠ ಸಿಂಹ ಈಗ 'ವಿಐಪಿ'; ಫಸ್ಟ್ ಲುಕ್ ಚಿಂದಿ

ಸ್ಯಾಂಡಲ್‌ವುಡ್‌ನ ಕಂಚಿನ ಕಂಠದ ನಟ ವಸಿಷ್ಠ ಸಿಂಹ. ತಮ್ಮ ಮಾಸ್ ಲುಕ್‌ನಿಂದಲೇ ಪ್ರೇಕ್ಷಕರನ್ನು ಸೆಳೆದಿರುವ ನಟ. ಕನ್ನಡದ ಜೊತೆ ತೆಲುಗು ಸಿನಿಮಾರಂಗಕ್ಕೆ ಕಾಲಿಟ್ಟಿರುವ ನಟ ಅಲ್ಲೂ ಬ್ಯುಸಿಯಾಗಿದ್ದಾರೆ. ಈ ಮಧ್ಯೆ ತಮ್ಮ ಮುಂದಿನ ಸಿನಿಮಾದ ಪ್ರಚಾರದಲ್ಲಿವನ್ನು ಮಾಡುತ್ತಿದ್ದಾರೆ.

ಹೌದು ವಸಿಷ್ಠ ಸಿಂಹ ನಾಯಕ ನಟನಾಗಿ ನಟಿಸುತ್ತಿರುವ 'ವಿಐಪಿ' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಕೈಯಲ್ಲಿ ಬ್ಯಾಟ್ ಹಿಡಿದು ಮಾಸ್ ಲುಕ್ ಕೊಟ್ಟಿರೋ ಈ ನಟನ ಅವತಾರಕ್ಕೆ ಅವರ ಅಭಿಮಾನಿಗಳು ಫಿದಾ ಆಗಿದ್ದಾರೆ. ಫಸ್ಟ್ ಲುಕ್ ನೋಡಿ ಸೋಶಿಯಲ್ ಮೀಡಿಯಾಗಳಲ್ಲಿ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.

Vasishta Simha s VIP movie first look

'ವಿಐಪಿ' ಸಿನಿಮಾದ ಈ ಫಸ್ಟ್ ಲುಕ್‌ ಅನ್ನು ಆದಿಚುಂಚನಗಿರಿ ಮಠದ ಪರಮಪೂಜ್ಯ ಜಗದ್ಗುರು ಡಾ. ನಿರ್ಮಲಾನಂದನಾಥ ಸ್ವಾಮೀಜಿ ಸಾನಿಧ್ಯದಲ್ಲಿ ಬಿಡುಗಡೆ ಮಾಡಲಾಗಿದೆ. ಈ ಸಿನಿಮಾದ ಫಸ್ಟ್ ಲುಕ್ ಬಿಡುಗಡೆ ಮಾಡಿ ಸ್ವಾಮೀಜಿ ಶುಭ ಕೋರಿದ್ದಾರೆ. ವಿಐಪಿ ಸಿನಿಮಾ ಪೋಸ್ಟರ್ ಬಿಡುಗಡೆ ಮಾಡುವ ಸಂದರ್ಭದಲ್ಲಿ ನಾಯಕ ವಸಿಷ್ಠ ಸಿಂಹ, ಡಾ.ನಿರ್ಮಲಾನಂದನಾಥ ಸ್ವಾಮೀಜಿ ಜೊತೆ ಉಪಸ್ಥಿತರಿದ್ದರು.

'ವಿಐಪಿ' ಸಿನಿಮಾ ಶೂಟಿಂಗ್ ಸದ್ದಿಲ್ಲದೆ ನಡೆದಿದೆ. ಬಹುತೇಕ ಬೆಂಗಳೂರು ಸುತ್ತಮುತ್ತವೇ ಸಿನಿಮಾದ ಶೂಟಿಂಗ್ ನಡೆದಿದೆ. ಈಗಾಗಲೇ ಎರಡು ಹಂತದ ಶೂಟಿಂಗ್ ನಡೆದಿದ್ದು, ಸದ್ಯ ಡಬ್ಬಿಂಗ್‌ನಲ್ಲಿ ಚಿತ್ರತಂಡ ಬ್ಯುಸಿಯಾಗಿದೆ. ಸದ್ಯ ಈ ಸಿನಿಮಾಗೆ ಆಕ್ಷನ್ ಸೀಕ್ವೆನ್ಸ್‌ ಶೂಟಿಂಗ್ ನಡೆಯುತ್ತಿದೆ. 'ಕೆಜಿಎಫ್' ಸಿನಿಮಾದ ವಿಕ್ರಂ ಮೋರ್ ಹಾಗೂ 'ಯುವ' ಖ್ಯಾತಿಯ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದಾರೆ.

ವಸಿಷ್ಠ ಸಿಂಹ ನಟನೆಯ 'ವಿಐಪಿ' ಸಿನಿಮಾವನ್ನು ಬ್ರಹ್ಮ ನಿರ್ದೇಶನ ಮಾಡುತ್ತಿದ್ದಾರೆ. ವಿಭಿನ್ನ ಕಥೆ ಹಾಗೂ ಮೇಕಿಂಗ್‌ನಿಂದಲೇ ಸದ್ದು 'ವಿಐಪಿ' ಸಿನಿಮಾ ಸದ್ದು ಮಾಡುತ್ತಿದೆ. ಇನ್ನು ವಸಿಷ್ಠ ಸಿಂಹಗೆ ನಾಯಕಿಯಾಗಿ ತೇಜಸ್ವಿನಿ ಶರ್ಮ ನಟಿಸುತ್ತಿದ್ದಾರೆ. ವಸಿಷ್ಠ ಸಿಂಹ ಜೊತೆ ಸುನೀಲ್ ಪುರಾಣಿಕ್, ಬಲ ರಾಜವಾಡಿ, ಅಫ್ಜಲ್, ಸ್ಪರ್ಶ ರೇಖಾ, ಸುಚೇಂದ್ರ ಪ್ರಸಾದ್ ಹಲವರು ನಟಿಸುತ್ತಿದ್ದಾರೆ.

More from Filmibeat

English summary
Vasishta Simha's up coming movie VIP first look out
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X