"ರಜನಿಕಾಂತ್, ಕಮಲ್ ಹಾಸನ್ ಇಬ್ಬರೂ ಕರ್ನಾಟಕಕ್ಕೆ ಬರಬೇಡಿ" : ವಾಟಾಳ್ ನಾಗರಾಜ್ ಕಿಡಿ
ಒಂದು ಕಡೆ ಲೋಕಸಭೆ ಚುನಾವಣಾ ಕಾವು ಹೆಚ್ಚಾಗುತ್ತಿದೆ. ರಾಜಕೀಯ ಮುಖಂಡರು ಚುನಾವಣಾ ಪ್ರಚಾರದಲ್ಲಿ, ಅಭ್ಯರ್ಥಿಗಳನ್ನು ಆಯ್ಕೆ ಮಾಡುವುದರಲ್ಲಿ ಬ್ಯುಸಿಯಾಗಿದ್ದಾರೆ. ಅದೇ ಇನ್ನೊಂದು ಕಡೆ ಕನ್ನಡ ಪರ ಸಂಘಟನೆಗಳು ಮೇಕೆದಾಟು ಯೋಜನೆ ಬೆಂಬಲಿಸಿ ಪ್ರತಿಭಟನೆಗೆ ಇಳಿದಿವೆ. ಕನ್ನಡ ಚಳುವಳಿ ವಾಟಾಳ್ ಪಕ್ಷದ ಅಧ್ಯಕ್ಷ ವಾಟಾಳ್ ನಾಗರಾಜ್ ಮೇಕೆದಾಟು ಯೋಜನೆ ಬೆಂಬಲಿಸಿ ಹೋರಾಟ ಮಾಡುತ್ತಿದ್ದಾರೆ.
ಇತ್ತೀಚೆಗೆ ತಮಿಳುನಾಡು ಮುಖ್ಯ ಮಂತ್ರಿ ಎಂ ಕೆ ಸ್ಟಾಲಿನ್ ಲೋಕಸಭೆ ಚುನಾವಣೆಯಲ್ಲಿ INDIA ಒಕ್ಕೂಟ ಗೆದ್ದರೆ, ಮೇಕೆದಾಟು ಯೋಜನೆಗೆ ಬ್ರೇಕ್ ಹಾಕುತ್ತೇವೆ ಎಂದು ಹೇಳಿಕೆ ಕೊಟ್ಟಿದ್ದವರು. ಅದನ್ನು ಕರ್ನಾಟಕದಲ್ಲಿ ವಿರೋಧ ಮಾಡಲಾಗಿತ್ತು. ನಿನ್ನೆ (ಮಾರ್ಚ್ 26) ಕನ್ನಡ ಪರ ಹೋರಾಟಗಾರರ ಜೊತೆ ಸೇರಿಕೊಂಡು ವಾಟಾಳ್ ನಾಗರಾಜ್ ಪ್ರತಿಭಟನೆ ಮಾಡಿದ್ದರು.

ಈ ವೇಳೆ ಮೇಕೆದಾಟು ಡ್ಯಾನ್ ಯೋಜನೆ ಪರವಾಗಿ ಹೋರಾಟ ಮಾಡಬೇಕು. ಕನ್ನಡದ ಕಲಾವಿದರು ಬೀದಿಗೆ ಇಳಿಯಬೇಕು. ಹಾಗೇ ರಜನಿಕಾಂತ್ ಹಾಗೂ ಕಮಲ್ ಹಾಸನ್ ಇಬ್ಬರೂ ತಮಿಳುನಾಡು ಸಿ ಎಂ ಎಂಕೆ ಸ್ಟ್ಯಾಲಿನ್ ಅವರನ್ನು ಭೇಟಿ ಮಾಡಿ ಮೇಕೆದಾಟು ಯೋಜನೆಗೆ ಬೆಂಬಲ ನೀಡುವಂತೆ ಒತ್ತಾಯ ಮಾಡಬೇಕು ಎಂದು ಆಗ್ರಹಿಸಿದ್ದಾರೆ. ಒಂದು ವೇಳೆ ಬೆಂಬಲ ಕೊಡದೇ ಹೋದರೆ ಕರ್ನಾಟಕಕ್ಕೆ ಕಾಲಿಡಬೇಕು ಎಂದು ರಜನಿ ಹಾಗೂ ಕಮಲ್ ಹಾಸನ್‌ಗೆ ಎಚ್ಚರಿಕೆ ಕೊಟ್ಟಿದ್ದಾರೆ.
ಬೆಂಗಳೂರಿನ ಜನರಿಗೆ ಕುಡಿಯುವ ನೀರಿಗೆ ಸಮಸ್ಯೆ ಎದುರಾಗಿದೆ. ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ಹೀಗಿದ್ದರೂ ತಮಿಳುನಾಡು ಸರ್ಕಾರ ಹೆದರಿಸಿ ಕರ್ನಾಟಕದ ಮೇಲೆ ಒತ್ತಡ ತರುತ್ತಿದೆ. ಬೆಂಗಳೂರಿನಲ್ಲಿ ನೀರಿಗಾಗಿ ಹಾಹಾಕಾರ ಶುರುವಾಗಿದೆ. ಹೀಗಾಗಿ ತಮಿಳುನಾಡು ಸರ್ಕಾರ ಮೇಕೆದಾಟು ಯೋಜನೆಗೆ ಅಡ್ಡಿಪಡಿಸಬಾರದೆಂದು ಪ್ರತಿಭಟನೆಯಲ್ಲಿ ವಾಟಾಳ್ ನಾಗರಾಜ್ ಕಿಡಿಕಾರಿದ್ದರು.
ಇದೇ ವೇಳೆ ಮೇಕೆದಾಟು ಯೋಚನೆ ಮುಂದಿನ ದಿನಗಳಲ್ಲಿ ಉಗ್ರ ಸ್ವರೂಪ ಪಡೆದುಕೊಳ್ಳುತ್ತೆ ಅನ್ನೋದಕ್ಕೆ ಪರೋಕ್ಷವಾಗಿ ಸೂಚನೆ ಕೊಟ್ಟಿದ್ದಾರೆ. ಕನ್ನಡದ ಸಿನಿಮಾ ಕಲಾವಿದರನ್ನು ಬೀದಿಗೆ ಇಳಿಯುವಂತೆ ಕರೆ ಕೊಟ್ಟಿದ್ದಾರೆ. ಮೇಕೆದಾಟು ಯೋಜನೆ ಪರ ಹೋರಾಟ ಮಾಡುವಂತೆ ಸ್ಯಾಂಡಲ್‌ವುಡ್ ತಾರೆಯರು ಕಿಡಿಕಾರಿದ್ದಾರೆ.
"ಕರ್ನಾಟಕದ ಸಿನಿಮಾ ನಟರುಗಳು ನೀವು ಕಾವೇರಿ ಹೋರಾಟದಲ್ಲಿ, ಉತ್ತರ ಕರ್ನಾಟಕದ ರೈತರ ಹೋರಾಟದಲ್ಲಿ, ಮೇಕೆದಾಟು ಹೋರಾಟದಲ್ಲಿ ಬೀದಿಗೆ ಬರಬೇಕು. ನೀವು ಬೀದಿಗೆ ಬರಲೇಬೇಕು." ಎಂದು ವಾಟಾಳ್ ನಾಗರಾಜ್ ಕನ್ನಡದ ಕಲಾವಿದರನ್ನು ಎಂದಿನಂತೆ ಒತ್ತಾಯಿಸಿದ್ದರು. ಆದರೆ, ಇಂತಹ ಸಮಸ್ಯೆ ಆದಾಗಲೆಲ್ಲಾ ರಜನಿಕಾಂತ್ ಹಾಗೂ ಕಮಲ್ ಹಾಸನ್ ಮುನ್ನೆಲೆಗೆ ಬರುತ್ತಾರೆ.
ಈ ಬಾರಿ ಹೋರಾಟದ ವೇಳೆನೂ ವಾಟಾಳ್ ನಾಗರಾಜ್ ರಜನಿಕಾಂತ್ ಹಾಗೂ ಕಮಲ್ ಹಾಸನ್ ಮೇಲೆ ವಿಭಿನ್ನವಾದ ಒತ್ತಡ ಹೇರಿದ್ದಾರೆ. "ತಮಿಳುನಾಡಿನಲ್ಲಿ ರಜನಿಕಾಂತ್, ಕಮಲಹಾಸನ್ ಸ್ಟಾಲಿನ್ ಅವರನ್ನು ಭೇಟಿ ಮಾಡಬೇಕು. ಮೇಕೆದಾಟು ಬಗ್ಗೆ ತಕರಾರು ತೆಗೆಯಬೇಡಿ. ಮೇಕೆದಾಟಿಗೆ ಅವಕಾಶ ಕೊಡಿ ಅಂತ ಹೇಳಬೇಕು. ರಜನಿಕಾಂತ್ ಹಾಗೂ ಕಮಲ ಹಾಸನ್ ಕೂಡಲೇ ಹೇಳಬೇಕು. ಇಲ್ಲದೆ ಹೋದರೆ, ರಜನಿಕಾಂತ್, ಕಮಲ್ ಹಾಸನ್ ಕರ್ನಾಟಕಕ್ಕೆ ಬರಬೇಡಿ. ಇಬ್ಬರಿಗೂ ಕರ್ನಾಟಕ ಬಂದ್ ಮಾಡುತ್ತೇವೆ. ಮೇಕೆದಾಟಿಗೆ ಬೆಂಬಲ ಕೊಡದೇ ಹೋದೆ ತಮಿಳು ಸಿನಿಮಾ ಹಾಗೂ ಗಡಿ ಬಂದ್ ಮಾಡುತ್ತೇವೆ" ಎಂದು ವಾಟಾಳ್ ನಾಗರಾಜ್ ಗುಡುಗಿದ್ದಾರೆ.
ಹೀಗಾಗಿ ಮುಂದಿನ ದಿನಗಳಲ್ಲಿ ಬೆಂಗಳೂರಿನಲ್ಲಿ ನೀರಿಗಾಗಿ ಹೀಗೆ ಹಾಹಾಕಾರ ಶುರುವಾದರೆ, ಮೇಕೆದಾಟು ಯೋಜನೆ ಪರ ಹೋರಾಟ ಉಗ್ರ ಸ್ವರೂಪ ತಾಳುವ ಸಾಧ್ಯತೆಯಿದೆ.


Click it and Unblock the Notifications











