ಕರ್ನಾಟಕದಲ್ಲಿ ತಮಿಳು ಚಿತ್ರವನ್ನು ಬ್ಯಾನ್ ಮಾಡುತ್ತೇವೆ: ಮತ್ತೆ ಗುಡುಗಿದ ವಾಟಾಳ್ ನಾಗರಾಜ್

ಮೇಕೆದಾಟು ವಿಚಾರಕ್ಕೆ ಸಂಬಂಧ ಪಟ್ಟಂತೆ ವಾದ- ವಿವಾದಗಳು ನಡೆಯುತ್ತಲೇ ಇದೆ. ವರ್ಷಗಳಿಂದಲೇ ಹೋರಾಟ ಮಾಡುತ್ತಿದ್ದಾರೆ. ಆದರೂ ಮೇಕೆದಾಟು ವಿಷಯಕ್ಕೆ ಸಂಬಂಧಿಸಿದಂತೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಮೇಕೆದಾಟು ಯೋಜನೆ ವಿಚಾರಕ್ಕೆ ಕರ್ನಾಟಕ ಹಾಗೂ ತಮಿಳುನಾಡಿ ನಡುವೆ ಜಟಾಪಟಿ ನಡೆಯುತ್ತಿದೆ. ಇದೇ ವಿಷಯಕ್ಕೆ ಬಂಧಿಸಿದಂತೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ತಮಿಳು ನಾಡು ವಿರುದ್ಧ ಗುಡುಗಿದ್ದಾರೆ.

Recommended Video

ನಿಮ್ಮ ಅರ್ಧ ಬೆಂಬಲ ಯಾವನಿಗೆ ಬೇಕು ಎಂದ ವಾಟಾಳ್ ನಾಗರಾಜ್

ಪಾದಯಾತ್ರೆ ಮಾಡುವುದರಿಂದ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಸಾಧ್ಯವಿಲ್ಲ. ತಮಿಳುನಾಡು ಮೇಕೆದಾಟು ವಿಷಯಕ್ಕೆ ಕಾಲು ಕೆರೆದುಕೊಂಡು ಜಗಳಕ್ಕೆ ಬಂದರೆ ಹೋರಾಟ ಮಾಡಲಾಗಿತ್ತು. ಗಡಿ, ಸಿನಿಮಾ ಎಲ್ಲವನ್ನು ಬಂದ್ ಮಾಡಬೇಕಾಗುತ್ತೆ ಎಂದು ಎಚ್ಚರಿಕೆಯನ್ನು ನೀಡುವ ಮೂಲಕ ಮತ್ತೆ ಗುಡುಗಿದ್ದಾರೆ.

ತಮಿಳು ಸಿನಿಮಾ ಬ್ಯಾನ್ ಮಾಡುತ್ತೇವೆ ಎಂದ ವಾಟಾಳ್

ಮೇಕೆದಾಟು ಯೋಜನೆ ವಿಚಾರಕ್ಕೆ ಮತ್ತೆ ಕಾಲುಕೆರೆದುಕೊಂಡು ಜಗಳಕ್ಕೆ ಬಂದರೆ ತಮಿಳು ಸಿನಿಮಾಗಳನ್ನು ಬ್ಯಾನ್ ಮಾಡುತ್ತೇವೆ. ಕರ್ನಾಟಕದಲ್ಲಿ ತಮಿಳು ಸಿನಿಮಾಗಳನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಎಚ್ಚರಿಕೆ ನೀಡಿದ್ದಾರೆ.

Vatal nagaraj warns tamil nadu that tamil films will be ban in Karnataka over mekedatu issue

" ತಮಿಳು ಚಿತ್ರರಂಗವನ್ನು ಬಂದ್ ಮಾಡುತ್ತೇವೆ. ತಮಿಳುನಾಡನ್ನು ನಿರ್ಬಂಧ ಮಾಡುತ್ತೇವೆ. ಎಚ್ಚರ ಎಚ್ಚರ. ನಿಮ್ಮ ವಿರುದ್ಧ ಇಲ್ಲಿ ಸತ್ಯಾಗ್ರಹ ಮಾಡುವ ರೀತಿಯಲ್ಲಿ ಗಡಿನಾಡು ಚಳುವಳಿಯನ್ನು ಆರಂಭ ಮಾಡುತ್ತಿದ್ದೇವೆ." ಎಂದು ವಾಟಾಳ್ ನಾಗರಾಜ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಪಾದಯಾತ್ರೆ ಮಾಡಿದರೆ ಏನೂ ಆಗುವುದಿಲ್ಲ

ಕೆಲವು ದಿನಗಳ ಹಿಂದೆ ಕಾಂಗ್ರೆಸ್ ಪಕ್ಷ ಮೇಕೆದಾಟು ಯೋಜನೆಯನ್ನು ಜಾರಿಗೆ ತರುವಂತೆ ಪಾದಯಾತ್ರೆಯನ್ನು ಹಮ್ಮಿಕೊಂಡಿತ್ತು. ಕೊರೊನಾ ಆತಂಕದ ನಡುವೆಯೂ ಸಿದ್ಧರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನೇತೃತ್ವದಲ್ಲಿ ಪಾದಯಾತ್ರೆ ಆರಂಭ ಆಗಿತ್ತು. ರಾಜ್ಯ ಸರ್ಕಾರ ಈ ಪಾದಯಾತ್ರೆಯನ್ನು ವಿರೋಧಿಸಿತ್ತು. ಕೊರೊನಾ ಕಾಲದಲ್ಲಿ ಈ ಪಾದಯಾತ್ರೆ ಸೂಕ್ತವಲ್ಲ. ರಾಜ್ಯ ಸರ್ಕಾರ ಮೇಕೆದಾಟು ಯೋಜನೆಯನ್ನು ಜಾರಿಗೆ ತರಲು ಶತಪ್ರಯತ್ನ ನಡೆಸುತ್ತಿದೆ ಎಂದು ಹೇಳಿತ್ತು. ಮೇಕೆದಾಟು ಯೋಜನೆ ಪಾದಯಾತ್ರೆಯಿಂದ ಜಾರಿಗೆ ಬರಲ್ಲ ಅಂತ ವಾಟಾಳ್ ನಾಗರಾಜ್ ಕಿಡಿ ಕಾರಿದ್ದಾರೆ.

Vatal nagaraj warns tamil nadu that tamil films will be ban in Karnataka over mekedatu issue

"ಬರೀ ಪಾದಯಾತ್ರೆ ಮಾಡಿದರೆ ಸಾಧ್ಯವಿಲ್ಲ. ತಮಿಳುನಾಡಿಗೆ ಅಂತಿಮವಾಗಿ ಎಚ್ಚರಿಕೆ ಕೊಡುತ್ತೇನೆ. ನೀವೇನಾದರೂ ಮತ್ತೆ ಕಾಲುಕೆರೆದು ಜಗಳಕ್ಕೆ ಬಂದರೆ, ಇಡೀ ಕರ್ನಾಟಕದ ಉದ್ದಗಲಕ್ಕೂ ತಮಿಳುನಾಡು ಗಡಿ ಬಂದ್ ಮಾಡುತ್ತೇವೆ. ಒಳಗಡೆ ಬರುವುದಕ್ಕೆ ಬಿಡುವುದಿಲ್ಲ." ಎಂದು ತಮಿಳುನಾಡಿಗೆ ಎಚ್ಚರಿಕೆ ನೀಡಿದ್ದಾರೆ.

ಮೇಕೆದಾಟು ಯೋಜನೆ ಬೆಂಗಳೂರು ಕುಡಿಯುವ ನೀರಿಗಾಗಿ ಹಮ್ಮಿಕೊಳ್ಳಲಾಗಿದೆ. ಆದರೆ, ಇದಕ್ಕೆ ತಮಿಳುನಾಡು ಸರ್ಕಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ಹಲವು ಬಾರಿ ಹೋರಾಟಗಳು ನಡೆದಿವೆ. ಕೇಂದ್ರ ಸರ್ಕಾರದ ಮೇಲೆ ಒತ್ತಡವನ್ನೂ ತರಲಾಗುತ್ತಿದೆ. ಹೀಗಿದ್ದರೂ ಕರ್ನಾಟಕದ ಪರವಾದ ತೀರ್ಪು ಬರುತ್ತಿಲ್ಲ. ಇದೇ ಕಾರಣಕ್ಕೆ ತಮಿಳು ನಾಡು ಮತ್ತೆ ಮೇಕೆದಾಟು ವಿಚಾರಕ್ಕೆ ಕಾಲುಕೆರೆದುಕೊಂಡು ಜಗಳಕ್ಕೆ ಬಂದರೆ, ಗಡಿಯೊಳಗೆ ಬಿಟ್ಟುಕೊಳ್ಳುವುದಿಲ್ಲವೆಂದು ವಾಟಾಳ್ ನಾಗರಾಜ್ ಎಚ್ಚರಿಗೆ ನೀಡಿದ್ದಾರೆ.

More from Filmibeat

English summary
Kannada activist vatal nagaraj warns Tamil Nadu govt. They will ban tamil films in Karnataka over mekedatu issue.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X