ಪಾಡ್‌ಕಾಸ್ಟ್‌ನಲ್ಲಿ ಕೃಷಿ ತಾಪಂಡ ಹೇಳಿದ್ದೆಲ್ಲ ಸುಳ್ಳಾ? ವೈಶಾಕ್‌ಗೂ-ಕೃಷಿಗೂ ಏನು ಸಂಬಂಧ?
ಸ್ಯಾಂಡಲ್‌ವುಡ್ ನಟಿ ಕೃಷಿ ತಾಪಂಡ ಮತ್ತೊಂದು ಸಂಕಷ್ಟಕ್ಕೆ ಸಿಕ್ಕಿಕೊಂಡಿದ್ದಾರೆ. ಕಳೆದ ಕೆಲವು ದಿನಗಳ ಹಿಂದಷ್ಟೇ ಉದ್ಯಮಿ ಅರವಿಂದ್ ರೆಡ್ಡಿ ಜೊತೆಗಿನ ವಿವಾದ ಸ್ವಲ್ಪ ಮಟ್ಟಿಗೆ ತಣ್ಣಗಾಗುತ್ತಿದ್ದಂತೆ ಈಗ ಗೆಳೆಯ ವೈಶಾಕ್ ಆತ್ಮ*ಹತ್ಯೆ ಮತ್ತೊಮ್ಮೆ ಸಂಕಷ್ಟಕ್ಕೆ ಸಿಲುಕಿದೆ. ಇತ್ತೀಚೆಗೆ ನಟಿ ಪಾಡ್‌ಕಾಸ್ಟ್ ಒಂದರಲ್ಲಿ ವಿವಾದದ ಬಗ್ಗೆ ಹೇಳಿಕೊಂಡು ಕಣ್ಣೀರು ಹಾಕಿದ್ದರು. ಉದ್ಯಮಿ ಅರವಿಂದ್ ರೆಡ್ಡಿಯನ್ನು ಪ್ರೀತಿಸಿದ್ದಾಗಿ ಹೇಳಿದ್ದರು. ಆದ್ರೀಗ ಕೃಷಿ ಜೊತೆ ವೈಶಾಕ್ ಹೆಸರು ಕೂಡ ತಳುಕು ಹಾಕಿಕೊಂಡಿದೆ.
ಉದ್ಯಮಿಯಾಗಿರುವ ವೈಶಾಕ್ ನಿನ್ನೆ (ಜೂನ್ 24) ರಾತ್ರಿ ಕೃಷಿ ತಾಪಂಡ ನಿವಾಸದಲ್ಲಿ ಆತ್ಮ'ಹತ್ಯೆಗೆ ಶರಣಾಗಿದ್ದಾರೆ. ಈ ವಿಷಯ ಹೊರ ಬೀಳುತ್ತಿದ್ದಂತೆ ಕೃಷಿ ತಾಪಂಡಗೂ, ವೈಶಾಕ್‌ಗೂ ಇರುವ ಸಂಬಂಧ ಏನು? ಕೃಷಿ ಮನೆಯಲ್ಲಿ ವೈಶಾಕ್ ಏನು ಮಾಡುತ್ತಿದ್ದರು? ಅನ್ನೋ ಪ್ರಶ್ನೆಗಳನ್ನು ನೆಟ್ಟಿಗರು ಕೇಳುವುದಕ್ಕೆ ಶುರು ಮಾಡಿದ್ದಾರೆ.

ಕೃಷಿ ತಾಪಂಡ ಹಾಗೂ ಅರವಿಂದ್ ರೆಡ್ಡಿ ನಡುವಿನ ವಿವಾದ ಬೀದಿಗೆ ಬಂದಾಗ ವೈಶಾಕ್ ಸೀನ್‌ನಲ್ಲಿ ಇರಲಿಲ್ಲ. ಆದರೆ, ಇಬ್ಬರೂ ಯಾವಾಗ ಪೊಲೀಸ್ ಸ್ಟೇಷನ್ ಮೆಟ್ಟಿಲೇರಿದರೋ ಆ ಬಳಿಕ ವೈಶಾಕ್ ಹೆಸರು ಕೂಡ ತಳುಕು ಹಾಕಿಕೊಂಡಿತ್ತು. ಅರವಿಂದ್ ರೆಡ್ಡಿಗೆ ಬೆದರಿಕೆ ಪತ್ರ ಕಳಿಸುವ ಮೂಲಕ ಅರೆಸ್ಟ್ ಆಗಿದ್ದರು. ಅಲ್ಲಿಂದ ವೈಶಾಕ್ ವೈಯಕ್ತಿಕ ಬದುಕು ಇನ್ನಷ್ಟು ಬಿಗಡಾಯಿಸಿತ್ತು. ಆದರೆ, ಕೃಷಿ ತಾಪಂಡ ತನ್ನ ಪಾಡ್‌ಕಾಸ್ಟ್‌ನಲ್ಲಿ ವೈಶಾಕ್ ಬಗ್ಗೆ ಯಾಕೆ ಹೇಳಿಲ್ಲ ಅಂತ ಅಂತ ನೆಟ್ಟಿಗರು ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ಜೀವ ಬೆದರಿಕೆ ಕೇಸ್‌ನಲ್ಲಿ ವೈಶಾಕ್ ಬಂಧನ
ನಟಿ ಕೃಷಿ ತಾಪಂಡ ಹಾಗೂ ಅರವಿಂದ್ ರೆಡ್ಡಿ ಪ್ರಕರಣ ನಡೆಯುತ್ತಿರುವಾಗಲೇ ವೈಶಾಕ್ ಎಂಟ್ರಿ ಕೊಟ್ಟಿದ್ದರು. ಅರವಿಂದ್ ರೆಡ್ಡಿಗೆ ಫೆಬ್ರವರಿ ತಿಂಗಳಲ್ಲಿ ಬೆದರಿಕೆ ಪತ್ರವನ್ನು ಕಳುಹಿಸಿದ್ದರು. ಈ ಪತ್ರದಲ್ಲಿ ಜೀವ ಬೆದರಿಕೆ ಹಾಕಿದ್ದು, ಕೋಟಿ ಕೋಟಿ ಹಣವನ್ನು ನೀಡುವಂತೆ ಬೇಡಿಕೆ ಇಟ್ಟಿದ್ದರು ಎಂಬ ಆರೋಪವಿದೆ. ಬೆದರಿಕೆ ಪತ್ರ ಬರುತ್ತಿದ್ದಂತೆ ಅರವಿಂದ್ ರೆಡ್ಡಿ ದೂರದನ್ನು ದಾಖಲಿಸಿದ್ದರು. ಈ ಹಿನ್ನೆಲೆಯಲ್ಲಿ ವೈಶಾಕ್ ಅವರ ಬಂಧನ ಆಗಿತ್ತು. ಬಳಿಕ ಜಾಮೀನ ಮೇಲೆ ಹೊರ ಬಂದಿದ್ದರು.
ಕೃಷಿ ಮನೆಯಲ್ಲಿ ವಾಸ
ಕಳೆದ ಒಂದು ತಿಂಗಳಿನಿಂದ ನಟಿ ಕೃಷಿ ತಾಪಂಡ ಅಪಾರ್ಟ್‌ಮೆಂಟ್‌ನಲ್ಲಿಯೇ ವೈಶಾಕ್ ವಾಸವಿದ್ದರು. ಇಬ್ಬರ ಬಳಿಯೂ ಅಪಾರ್ಟ್‌ಮೆಂಟ್‌ನ ಕೀ ಇತ್ತು. ಹೀಗಾಗಿ ವೈಶಾಕ್ ಹಾಗೂ ಕೃಷಿ ತಾಪಂಡ ಇಬ್ಬರೂ ನಡುವಿನ ಸಂಬಂಧ ಏನು ಅನ್ನೋ ಚರ್ಚೆಯಾಗುತ್ತಿದೆ. ಅದಕ್ಕೆ ಸರಿಯಾಗಿ ವೈಶಾಕ್ ಪತ್ನಿ ನೀಡಿರುವ ದೂರಿನಲ್ಲಿ ನಟಿಯೊಂದಿಗೆ ಅನೈತಿಕ ಸಂಬಂಧದ ಬಗ್ಗೆನೂ ಪ್ರಸ್ತಾಪ ಆಗಿದೆ.

ಕೃಷಿ ತಾಪಂಡ ಜೊತೆ ಅನೈತಿಕ ಸಂಬಂಧ?
ವೈಶಾಕ್ ಆತ್ಮ*ಹತ್ಯೆ ಬಳಿಕ ಅವರ ಪತ್ನಿ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಿದ್ದಾರೆ. ಇದರಲ್ಲಿ ಕೆಲವು ಅಂಶಗಳನ್ನು ಉಲ್ಲೇಖ ಮಾಡಿದ್ದಾರೆಂದು ವರದಿಯಾಗಿದೆ. ಕೃಷಿ ತಾಪಂಡ ಜೊತೆಗಿನ ಅನೈತಿಕ ಸಂಬಂಧದ ಬಗ್ಗೆ ಉಲ್ಲೇಖ ಮಾಡಿದ್ದಾರೆ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇಬ್ಬರ ನಡುವೆ ವಿರಸ ಇತ್ತು. ಕಳೆದ ಒಂದು ತಿಂಗಳಿನಿಂದ ಪತ್ನಿಯೊಂದಿಗೆ ಮಾತಾಡುತ್ತಿರಲಿಲ್ಲ. ಕೇವಲ ಮೆಸೇಜ್ ಮೂಲಕ ಅಷ್ಟೇ ಮಗನ ಬಗ್ಗೆ ಮಾಹಿತಿ ಪಡೆಯುತ್ತಿದ್ದರು ಎಂದು ವರದಿಯಾಗಿದೆ. ಹೀಗಾಗಿ ನೆಟ್ಟಿಗರು ಪಾಪ್‌ಕಾಸ್ಟ್‌ಗೆ ನೀಡಿದ ಸಂದರ್ಶನದಲ್ಲಿ ಯಾಕೆ ಈ ಬಗ್ಗೆ ಎಲ್ಲಾ ಮಾತಾಡಿಲ್ಲ ಎಂದು ಕಮೆಂಟ್ ಮಾಡುತ್ತಿದ್ದಾರೆ.
ವಿಷಯ ಮುಚ್ಚಿಟ್ಟರೇ ಕೃಷಿ?
ಕೃಷಿ ತಾಪಂಡ ಪಾಪ್‌ಕಾಸ್ಟ್‌ನಲ್ಲಿ ಅರವಿಂದ್ ರೆಡ್ಡಿಯ ಬಗ್ಗೆ ಪ್ರಸ್ತಾಪ ಮಾಡಿದ್ದರು. "ಯಾರೊಂದಿಗೆ ಅಫೇರ್ ಇಲ್ಲ, ಅರವಿಂದ್ ರೆಡ್ಡಿಯನ್ನೇ ಪ್ರೀತಿಸಿದ್ದು ಅಂತ ಹೇಳಿದ್ದರು. ಈ ವಿಷಯವನ್ನು ಯಾಕೆ ಹೇಳಿಲ್ಲ" ಎಂದು ಕಮೆಂಟ್ ಮಾಡಿದ್ದರೆ, ಇನ್ನೊಬ್ಬರು "ಪಾಡ್‌ಕಾಸ್ಟ್‌ಗೆ ಬಂದು ಇಮೇಜ್ ಕ್ಲಿಯರ್ ಮಾಡಿಕೊಳ್ಳುವ ಪ್ರಯತ್ನ ಮಾಡಿದ್ದಾರೆ" ಎಂದು ಇನ್ನೊಬ್ಬರು ಆರೋಪ ಮಾಡಿದ್ದಾರೆ. ಇದೆಲ್ಲ ಮುಗಿದ ಮೇಲೆ ಕೃಷಿ ತಾಪಂಡ ಗೆಳೆಯ ವೈಶಾಕ್ ಬಗ್ಗೆ ಕ್ಲಾರಿಟಿ ಕೊಡುವ ಸಾಧ್ಯತೆಯಿದೆ.


Click it and Unblock the Notifications