2018ಕ್ಕೆ ತಾಯಿ, 2019ಕ್ಕೆ ತಂದೆ, 2020ಕ್ಕೆ ಅಳಿಯ; 3 ವರ್ಷದಲ್ಲಿ ಮೂವರನ್ನು ಕಳೆದು ಕೊಂಡು ಕಂಗಾಲಾಗಿದ್ದ ಸುಂದರ್ ರಾಜ್

"ಚಿರು ಬದುಕಲು ಎರಡು ದಿನ ಅವಕಾಶವಿತ್ತು"
-ಹಿರಿಯ ನಟ ಸುಂದರ್ ರಾಜ್

ಸ್ಯಾಂಡಲ್‌ವುಡ್‌ನ ಹಿರಿಯ ಜೋಡಿ ಸುಂದರ್ ರಾಜ್ ಹಾಗೂ ಪ್ರಮೀಳಾ ಜೋಷಾಯ್. ಈ ತಾರಾ ಜೋಡಿಯ ಪುತ್ರಿ ಮೇಘನಾ ರಾಜ್. ಸುಂದರವಾಗಿ, ಸುಖವಾಗಿದ್ದ ಸಂಸಾರದಲ್ಲಿ ಬಿರುಗಾಳಿ ಬೀಸಿದಾಗ, ಈ ಹಿರಿಯ ಜೋಡಿ ಪರಿಸ್ಥತಿ ಏನಾಗಬೇಡ. ಅದರಲ್ಲೂ ತಂದೆ, ತಾಯಿ ಹಾಗೂ ಅಳಿಯನನ್ನು ಒಬ್ಬರ ಹಿಂದೊಬ್ಬರಂತೆ ಕಳೆದುಕೊಂಡರೆ ಏನಾಗಬೇಡ. ಇದೇ ಪರಿಸ್ಥಿತಿ ಸುಂದರ್ ರಾಜ್‌ಗೂ ಆಗಿತ್ತು.

ಹಿರಿಯ ನಟ ಸುಂದರ್ ರಾಜ್‌ಗೆ ಒಂದರ ಹಿಂದೊಂದು ನೋವುಗಳು ಹಿಂಬಾಲಿಸುತ್ತೆ. ಅದರಲ್ಲೂ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ತೀರಿಕೊಂಡಾಗ ಇವರಿಗೆ ಆಕಾಶವೇ ಕಳೆದು ಬಿದ್ದಂತೆ ಆಗಿತ್ತು. ಮಗಳ ಬದುಕು ಮುಂದೇನು? ಅಂತ ಅನಿಸುವುದಕ್ಕೆ ಶುರುವಾಗಿತ್ತು. ಒಬ್ಬ ತಂದೆಯಾಗಿ ನೋವುಂಡಿದ್ದರು. ದೇವರನ್ನು ಶಪಿಸಿದ್ದರು. ಅಂದಿನ ಸ್ಥಿತಿ ಏನಿತ್ತು? ಅನ್ನೋದನ್ನು ಹೇಳಿಕೊಂಡಿದ್ದಾರೆ.

Veteran actor Sundar Raj lost his father mother and son-in-law Chiranjeevi Sarja in just three years

ಹಿರಿಯ ನಟ ಸುಂದರ್ ರಾಜ್‌ಗೆ ಇಂದೊಂದೇ ಸಂಕಷ್ಟ ಅಲ್ಲ. ಮೊದಲು ಅಮ್ಮ ತೀರಿಕೊಂಡಿದ್ದರು. ಬಳಿಕ ಅಪ್ಪ. ಆಮೇಳೆ ಅಳಿಯನನ್ನು ಕಳೆದುಕೊಂಡು ಒಂದರ ಹಿಂದೊಂದು ನೋವುಗಳನ್ನೇ ಅನುಭವಿಸುತ್ತಿದ್ದರು. ಇನ್ನೊಂದು ಕಡೆ ಚಿರು ಬದುಕಿಸಿಕೊಳ್ಳುವುದಕ್ಕೆ ಎರಡು ದಿನ ಟೈಂ ಇತ್ತು ಎಂದೂ ಹೇಳಿದ್ದಾರೆ. ಇತ್ತೀಚೆಗೆ ರಾಪಿಡ್ ರಶ್ಮಿ ಯೂಟ್ಯೂಬ್ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಸುಂದರ್ ರಾಜ್ ಈ ಎಲ್ಲಾ ವಿಷಯಗಳ ಬಗ್ಗೆ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"2 ದಿನ ಟೈಂ ಇತ್ತು"

ಚಿರಂಜೀವಿ ಸರ್ಜಾ ದಿಡೀರ್ ಅಗಲಿಕೆ ಕನ್ನಡಿಗರಿಗೆ ಶಾಕ್ ಆಗಿತ್ತು. ಇದ್ದಕ್ಕಿದ್ದಂತೆ ಇದೇನು ಆಗಿ ಹೋಯ್ತು? ಬೇಸರ ಪಟ್ಟುಕೊಂಡಿದ್ದರು. ಆದರೆ, ಚಿರಂಜೀವಿ ಸರ್ಜಾರನ್ನು ಉಳಿಸಿಕೊಳ್ಳುವುದಕ್ಕೆ ಎರಡು ದಿನಗಳು ಅವಕಾಶವಿತ್ತು ಎಂದು ಹೇಳಿದ್ದಾರೆ. "ಚಿರುಗೆ ಎರಡು ದಿನ ಅವಕಾಶವಿತ್ತು. ಅದನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಅನ್ನೋ ನೋವು ಇದೆ ನನಗೆ. ನಾನು ಎಷ್ಟೋ ಕಡೆ ಹೇಳಿದ್ದೀನಿ. ಅಂದು ಕೋವಿಡ್ ಅಂತ ಬಂದು ರೆಸ್ಟ್ರಿಕ್ಷನ್ ಅಂತ ಇಲ್ಲದೆ ಇದ್ದಿದ್ದರೆ, ವೈದ್ಯರ ಬಳಿ ಕರೆದುಕೊಂಡು ಹೋಗುತ್ತಿದ್ವಿ. ಅವರು ಇಲ್ಲ ನಾಳೆ ಬನ್ನಿ ಅಂದರು. ನಮ್ಮ ದುರಾದೃಷ್ಟ, ಇವನಿಗೆ ಶನಿವಾರವೇ ಈ ತರ ಆಗಬೇಕೆ? ಮಾರನೇ ದಿನ ಭಾನುವಾರ. ಯಾವ ವೈದ್ಯರೂ ಬರೋದಿಲ್ಲ. ಮೇಲಕ್ಕೆ ಕೋವಿಡ್ ಬೇರೆ, ಎಲ್ಲಾ ಟೆಲಿಕಮ್ಯೂನಿಕೇಶನ್‌ನಲ್ಲೇ ನಡೆಯುತ್ತಿದೆ.

Veteran actor Sundar Raj lost his father mother and son-in-law Chiranjeevi Sarja in just three years

"ಚಿರುಗಾಗಿದ್ದ ಸಮಸ್ಯೆ ಏನು?"

ಚಿರಂಜೀವಿ ಸರ್ಜಾ ಆರೋಗ್ಯ ಸಮಸ್ಯೆ ಏನು ಅನ್ನೋದನ್ನು ಈಗಾಗಲೇ ಹಿರಿಯ ನಟ ಸುಂದರ್ ರಾಜ್ ಸಾಕಷ್ಟು ಬಾರಿ ಹೇಳಿದ್ದಾರೆ. ಈ ಸಂದರ್ಶನದಲ್ಲಿ ಮತ್ತೊಮ್ಮೆ ಚಿರುಗಿದ್ದ ಸಮಸ್ಯೆಗಳು, ಮಗಳ ಸ್ಥಿತಿಯ ಬಗ್ಗೆ ನೋವಿನಿಂದಲೇ ಮಾತಾಡಿದ್ದಾರೆ. "ಚಿರುಗೆ ಮೆದುಳಿಗೆ ಆದ ಸಮಸ್ಯೆ. ಸರಿಯಾದ ಮಾಹಿತಿ ಕೊಡಬೇಕು. ಸರಿಯಾದ ಔಷಧಿ ಕೊಡಬೇಕು. ವಿಧಿ, ಎಲ್ಲಾ ಇತ್ತು ಏನೂ ಇರಲ್ಲ. ಒಂದೊಂದು ಸಾರಿ ಬಹಳ ಬೇಸರ ಆಗುತ್ತೆ. ಮೇಘನಾ ಪ್ರೀತಿಯಿಂದ ಎತ್ತ ಆಡಿಸಿದ ಮಗಳು." ಎಂದಿದ್ದಾರೆ.

"3 ವರ್ಷದಿಂದ ಮೂವರನ್ನು ಕಳೆದುಕೊಂಡೆ"

"ನಮ್ಮ ತಾಯಿಯನ್ನೂ ಕಳೆದುಕೊಂಡಿದ್ದೀನಿ. ನಮ್ಮ ತಂದೆನೂ ಇಲ್ಲ. ಚಿರುನೂ ಇಲ್ಲ. ಇದೆಲ್ಲವೂ ಒಂದೊಂದೇ ವರ್ಷದಲ್ಲಿ ಆಯ್ತು. 2018ಕ್ಕೆ ನಮ್ಮ ತಾಯಿ ಇಲ್ಲ. 2019 ನಮ್ಮ ತಂದೆ ಇಲ್ಲ. 2020 ನಮ್ಮ ಅಳಿಯ ಇಲ್ಲ. ಹೆತ್ತವರು ಇಬ್ಬರೂ ಇಲ್ಲ. ಮನೆಗೆ ಬಂದ ಮಗನೂ ಇಲ್ಲ. ಈಗ ಮಗಳನ್ನು ಇಟ್ಕೊಂಡು ಮೊಮ್ಮಗ ಇನ್ನೂ ಹೊಟ್ಟೆಯೊಳಗೆ ಇದೆ. ಅವತ್ತು ನಾನು ಪಟ್ಟ ನೋವು ಇದೆಯಲ್ಲ.. ಆಗ ನಾನು ದೇವರು ಇಲ್ಲ ಅಂತ ಬೈದಿದ್ದೆ." ಎಂದು ಹಿರಿಯ ನಟ ಸುಂದರ್ ರಾಜ್ ಹೇಳಿಕೊಂಡಿದ್ದಾರೆ.

"ಒಮ್ಮೊಮ್ಮೆ ಕೋಪ ಬಂದು ಬಿಡುತ್ತೆ"

ಅಳಿಯನನ್ನು ಕಳೆದುಕೊಂಡ ಸಮಯದಲ್ಲಿ ತಾನೇಕೆ ದೇವರಿಲ್ಲ ಅಂತ ಬೈದಿದ್ದೆ ಎಂದು ಹೇಳಿದ್ದಾರೆ. "ದೇವರಿಲ್ಲ ಅಂತ ಯಾಕೆ ಬೈದಿದ್ದೆ ಅಂದರೆ, ಒಂದೊಂದು ಸಾರಿ ನಮಗೆ ಕೋಪ ಬಂದು ಬಿಡುತ್ತೆ. ನಮಗೆ ಅಸಹಾಯಕತೆ ನಮ್ಮದು. ನಾವೇನು ತಪ್ಪು ಮಾಡಿದ್ದೀವಿ. ನಾವೇನು ತಪ್ಪು ಮಾಡಿಲ್ಲ. ದಿನಾ ಬೆಳಗ್ಗೆ ನಾನು ದೀಪ ಹಚ್ಚುತ್ತೇನೆ. ನೀನು ನನಗೇ ಕಷ್ಟ ಕೊಡುತ್ತೀಯಲ್ಲ. ಆಗ ಕೆಲವರು ತಿಳುವಳಿಕೆ ಉಳ್ಳವರು. ಆಗಿದ್ದು ಆಗಿ ಹೋಯ್ತು ಅಂದರು" ಎಂದು ಸುಂದರ್ ರಾಜ್ ಹೇಳಿದ್ದಾರೆ.

More from Filmibeat

English summary
Veteran actor Sundar Raj lost his father, mother and son-in-law Chiranjeevi Sarja in just three years:
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X