"ನಾನು ಜೈಲಿಗೆ ಹೋದವನೇ.. ಕಾಫಿ ಕುಡಿದು, ಸಿಗರೇಟ್ ಸೇದಿದ್ರೆ ಬಳ್ಳಾರಿಗೆ ಕಳಿಸುತ್ತಾರೆ ಅಂದ್ರೆ ಏನ್ರಿ"; ವಿನೋದ್ ಆಳ್ವ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ದರ್ಶನ್ ಫೋಟೋ ಲೀಕ್ ಆಗುತ್ತಿದ್ದಂತೆ ದೊಡ್ಡ ಸಂಚಲನ ಸೃಷ್ಟಿಸಿತ್ತು. ಅದೇ ಜಲೈನಲ್ಲಿ ಅಂದರ್ ಆಗದಿದ್ದ ವಿಲ್ಸನ್ ಗಾರ್ಡನ್ ನಾಗ, ಕುಳ್ಳ ಸೀನ ಜೊತೆ ದರ್ಶನ್ ಕಾಫಿ ಮಗ್ ಹಿಡಿದು, ಸಿಗರೇಟ್ ಸೇದುತ್ತಾ? ಕುಳಿತಿದ್ದ ಫೋಟೋ ಲೀಕ್ ಆಗಿತ್ತು. ಬಳಿಕ ಜೈಲಿನೊಳಗೆ ವಿಡಿಯೋ ಕೂಡ ಲೀಕ್ ಆಗಿತ್ತು. ಅಲ್ಲಿಂದ ದರ್ಶನ್ ಮತ್ತೆ ಸುದ್ದಿಯಲ್ಲಿದ್ದರು.

ಜೈಲಿನೊಳಗೆ ದರ್ಶನ್‌ಗೆ ರಾಜಾತಿಥ್ಯ ನೀಡಲಾಗುತ್ತಿದೆ ಎಂದು ಆರೋಪ ಮಾಡಲಾಗಿತ್ತು. ಇದು ದೊಡ್ಡ ಮಟ್ಟಕ್ಕೆ ಸಂಚಲನ ಸೃಷ್ಟಿಸುತ್ತಿದ್ದಂತೆ ದರ್ಶನ್ ಹಾಗೂ ಅವರ ಸಂಗಡಿಗರನ್ನು ಬೇರೆ ಬೇರೆ ಜೈಲ್‌ಗೆ ಶಿಫ್ಟ್ ಮಾಡುವುದಕ್ಕೆ ನಿರ್ಧರಿಸಲಾಗಿತ್ತು. ಪೊಲೀಸರ ಮನವಿಯಂತೆ ದರ್ಶನ್‌ರನ್ನು ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡುವುದಕ್ಕೆ ಕೋರ್ಟ್‌ ಕೂಡ ಒಪ್ಪಿಗೆ ನೀಡಿತ್ತು.

Veteran actor Vinod Alva reacted on Darshan shifted to Bellary Jail

ಈಗ ದರ್ಶನ್ ಪರಪ್ಪನ ಅಗ್ರಹಾರ ಜೈಲ್‌ನಿಂದ ಬಳ್ಳಾರಿ ಜೈಲ್‌ಗೆ ಶಿಫ್ಟ್ ಮಾಡಲಾಗಿದೆ. ಈ ಸಂಬಂಧ ಹಿರಿಯ ನಟ ವಿನೋದ್ ಆಳ್ವ ಪಾಸಿಟಿವ್ ಪಿಕ್ಚರ್ (Positive Picture) ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. 'ಕಾಟೇರ' ಸಿನಿಮಾದಲ್ಲಿ ದರ್ಶನ್ ಜೊತೆ ನಟಿಸಿದ ಅನುಭವವನ್ನು ಹೇಳಿಕೊಂಡಿದ್ದಾರೆ. ಅಲ್ಲದೆ ತಾನೂ ಕೂಡ ಜೈಲಿಗೆ ಹೋಗಿ ಬಂದವನೇ ಎಂದಿದ್ದಾರೆ.

ದರ್ಶನ್ ಒಬ್ಬ ವಿಭಿನ್ನ ವ್ಯಕ್ತಿ. ಎಲ್ಲರನ್ನೂ ದರ್ಶನ್ ಪ್ರೀತಿಯಿಂದಾನೇ ಕಾಣುತ್ತಾರೆ ಎಂದಿದ್ದಾರೆ. "ನಾನು ನೋಡಿದ ಮಟ್ಟಿಗೆ ಚಿತ್ರರಂಗದಲ್ಲಿ ಅವರು ಡಿಫ್ರೆಂಟ್ ವ್ಯಕ್ತಿ. ಈವಾಗ ಏನೇನೋ ನಡೀತಾ ಇದೆ ಅದು ಬೇರೆ. ಅವರ ಒಬ್ಬರ ಒಳ್ಳೆಯ ವ್ಯಕ್ತಿ ಅವರಿಗೆ ಹಾಗೆ ಆಗಬಾರದಿತ್ತು. ಅವರ ದಾನ, ಧರ್ಮ, ಪ್ರೀತಿ, ಆತ್ಮೀಯತೆ, ಹಿರಿಯರಿಗೆ ಗೌರವ ಕೊಡುವುದು ಇದೆಲ್ಲವನ್ನೂ ನಾನು ನನ್ನ ಕಣ್ಣಲ್ಲಿ ನೋಡಿದವನು. 20 ರಿಂದ 25 ದಿನ ಕಾಟೇರಗೆ ಕೆಲಸ ಮಾಡಿದ್ದೇನೆ. ಎಲ್ಲಾ ಕಲಾವಿದರ ಜೊತೆ ಬಹಳ ಪ್ರೀತಿ ಇಟ್ಟುಕೊಂಡಿದ್ದಾರೆ." ಎಂದು ವಿನೋದ್ ಆಳ್ವ ಹೇಳಿದ್ದಾರೆ.

Veteran actor Vinod Alva reacted on Darshan shifted to Bellary Jail

ದರ್ಶನ್ ಒಳ್ಳೆಯ ವ್ಯಕ್ತಿ. ಆದರೆ, ಈ ಪ್ರಕರಣ ಹೇಗೆ ನಡೀತು ಅನ್ನೋದೇ ಅಚ್ಚರಿ ಹುಟ್ಟಿಸಿದೆ ಎಂದು ವಿನೋದ್ ಆಳ್ವ ಪ್ರತಿಕ್ರಿಯೆ ನೀಡಿದ್ದಾರೆ. "ಸಹಾಯ ಮನೋಭಾವನೆ ಇದೆ. ಅವರೊಂದು ತರ ಕಿಂಗ್ ಇದ್ದಂತೆ. ಒಳ್ಳೆಯ ವ್ಯಕ್ತಿ. ಇದೊಂದು ಆಂಗಲ್ ಏನಾಯ್ತು ಅಂತ ಗೊತ್ತಿಲ್ಲ. ಅವರು ಇನ್ನೂ ಹೆಚ್ಚು ಕ್ರೇಜ್‌ನೊಂದಿಗೆ ಹೊರ ಬರುತ್ತಾರೆ." ಎಂದು ಪಾಸಿಟಿವ್ ಪಿಕ್ಚರ್ (Positive Picture) ಅನ್ನುವ ಯೂಟ್ಯೂಬ್ ಚಾನೆಲ್‌ಗೆ ಪ್ರತಿಕ್ರಿಯಿಸಿದ್ದಾರೆ.

ಯಾರೊಂದಿಗೋ ಕೂತು ಕಾಫಿ, ಸಿಗರೇಟ್ ಸೇದಿದ್ದಕ್ಕೆ ಬಳ್ಳಾರಿ ಜೈಲ್‌ಗೆ ಕಳುಹಿಸಿದ್ದಕ್ಕೆ ಪರೋಕ್ಷವಾಗಿ ವಿರೋಧ ವ್ಯಕ್ತಪಡಿಸಿದ್ದಾರೆ. "ಯಾರ್‍ರಿ.. ನಾನು ಜೈಲಿಗೆ ಹೋದವನೇ. ಜೈಲಿನಲ್ಲಿ ಕೂತುಕೊಂಡು ಕಾಫಿ ಕೂಡಿದು, ಒಂದು ಸಿಗರೇಟ್ ಸೇದಿದರೆ ಅವನನ್ನು ಬಳ್ಳಾರಿಗೆ ಕಳಿಸುತ್ತೇನೆ ಅಂದರೆ ಏನ್ರಿ ಇದೆಲ್ಲ. ಇದು ಒಳ್ಳೆಯದಲ್ಲ. ಅದು ಆಗ ಬಾರದಿತ್ತು. ಏನೋ ಒಂದು ವ್ಯವಸ್ಥೆಯಿದೆ. ನ್ಯಾಯಾಲಯವಿದೆ, ಜಡ್ಜ್ ಇದ್ದಾರೆ. ನಿಜವಾಗಿಯೂ ಅವರು ಪಾಸಿಟಿವ್ ಆಗಿಯೇ ಹೊರಗೆ ಬರುತ್ತಾರೆ. ಕೇಸ್ ನಡೆಯುತ್ತಿರುತ್ತೆ. ಅದೇನು ದೊಡ್ಡ ವಿಷಯವಲ್ಲ. ಈ ಕೇಸ್‌ನಲ್ಲಿ ಅವರ ಸಹಭಾಗಿತ್ವ ಎಷ್ಟು ಇದೆ ಅನ್ನೋದನ್ನು ನ್ಯಾಯಾಧೀಶರು ನೋಡುತ್ತಾರೆ. ಅದನ್ನು ಟಿವಿಯಲ್ಲಿ ಕೂತು ಮಾತಾಡಬಾರದು." ಎಂದು ಪ್ರತಿಕ್ರಿಯಿಸಿದ್ದಾರೆ.

ವಿನೋದ್ ಆಳ್ವ ಕೂಡ ಕೊಲೆ ಪ್ರಕರಣ ಆರೋಪದಲ್ಲಿ ಸದ್ದು ಮಾಡಿದ್ದರು. ಅವರಿಗೂ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿತ್ತು. ವಿನೋದ್ ಆಳ್ವ ಮಾಜಿ ಕೆಲಸಗಾರನ ಕೊಲೆ ಯತ್ನ ಸಂಚು ನಡೆಸಿದ ಆರೋಪದ ಮೇಲೆ ವಿನೋದ್ ಆಳ್ವ ಅವರು ನ್ಯಾಯಾಂಗ ಬಂಧನದಲ್ಲಿದ್ದರು. ಬಳಿಕ ಸೆಷನ್ಸ್ ನ್ಯಾಯಾಲಯ ವಿನೋದ್ ಆಳ್ವರಿಗೆ ಜಾಮೀನು ಮಂಜೂರು ಮಾಡಿತ್ತು.

More from Filmibeat

English summary
Veteran actor Vinod Alva reacted on shifted Darshan to Bellary Jail:
Read more about: darshan vinod alva filmibeat news
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X