ಕನ್ನಡದ ಹಿರಿಯ ನಟಿ ಭಾರ್ಗವಿ ನಾರಾಯಣ್ ಇನ್ನಿಲ್ಲ: ಚಿತ್ರರಂಗದ ಗಣ್ಯರಿಂದ ಕಂಬನಿ

ಕನ್ನಡದ ಕಿರುತೆರೆ, ರಂಗಭೂಮಿ ಹಾಗೂ ಸಿನಿಮಾಗಳಲ್ಲಿ ನಟಿಸಿದ್ದ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್ ಇಂದು (ಫೆಬ್ರವರಿ 14) ನಿಧನರಾಗಿದ್ದಾರೆ. ಕನ್ನಡ ಚಿತ್ರರಂಗ ಮತ್ತೊಬ್ಬ ಹಿರಿಯ ಜೀವವನ್ನು ಕಳೆದುಕೊಂಡು ಅನಾಥವಾಗಿದೆ. 84 ವರ್ಷ ವಯಸ್ಸಿನ ಹಿರಿಯ ನಟಿ ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದರು.

ಭಾರ್ಗವಿ ನಾರಾಯಣ್ ಧಾರಾವಾಹಿಗಳಲ್ಲಿ ಹೆಚ್ಚು ಜನಪ್ರಿಯರಾಗಿದ್ದರೂ, ರಂಗಭೂಮಿಯಲ್ಲಿ ಜನಪ್ರಿಯರಾಗಿದ್ದರು. ಸಿನಿಮಾಗಳಲ್ಲೂ ನಟಿಸಿ ಹೆಸರು ಸಂಪಾದಿಸಿದ್ದಾರೆ. ಇವರು ಸ್ಯಾಂಡಲ್‌ವುಡ್ ಸಂಯುಕ್ತ ಹೊರನಾಡು ಅವರು ಅಜ್ಜಿ. ಭಾರ್ಗವಿ ನಾರಾಯಣ್ ಅವರ ನಿಧನದ ಬಗ್ಗೆ ಸ್ವತ: ಸಂಯುಕ್ತ ಹೊರನಾಡು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಭಾರ್ಗವಿ ನಾರಾಯಣ್ ಇಂದು ಸಂಜೆ ಸರಿ ಸುಮಾರಿಗೆ 7.30ಕ್ಕೆ ದೈವಾಧೀನರಾಗಿದ್ದಾರೆ.

ಪ್ರಕಾಶ್ ಬೆಳವಾಡಿ, ಸುಧಾ ಬೆಳವಾಡಿ ತಾಯಿ ಭಾರ್ಗವಿ ನಾರಾಯಣ್

ಸ್ಯಾಂಡಲ್‌ವುಡ್‌ನ ನಟರಾದ ಪ್ರಕಾಶ್ ಬೆಳವಾಡಿ ಮತ್ತು ಸುಧಾ ಬೆಳವಾಡಿ ಅವರ ಅಮ್ಮ ಭಾರ್ಗವಿ ನಾರಾಯಣ್. ಧಾರಾವಾಹಿ, ರಂಗಭೂಮಿಯಲ್ಲಿ ಹೆಚ್ಚು ಸಕ್ರೀಯರಾಗಿದ್ದ ಭಾರ್ಗವಿ ನಾರಾಯಣ ಹಲವು ವರ್ಷ ಕಲಾಸೇವೆ ಮಾಡಿದ್ದಾರೆ. ರಂಗಭೂಮಿಯಲ್ಲಿ ಮೇಕಪ್ ನಾಣಿ ಎಂದು ಪ್ರಸಿದ್ಧ ಪಡೆದಿದ್ದ ನಾರಯಣ್ ಅವರನ್ನು ಭಾರ್ಗವಿ ನಾರಾಯಣ್ ವಿವಾಹವಾಗಿದ್ದರು. ಧಾರಾವಾಹಿ, ರಂಗಭೂಮಿ, ಸಿನಿಮಾ ಅಷ್ಟೇ ಅಲ್ಲ. ಸಾಹಿತ್ಯ ಲೋಕದಲ್ಲೂ ಜನಪ್ರಿಯರಾಗಿದ್ದರು.

Veteran actress Bhargavi Narayan Passes away, kannada celebrities mourns

ಭಾರ್ಗವಿ ನಾರಾಯಣ್ ಸುಮಾರು 600ಕ್ಕೂ ಅಧಿಕ ನಾಟಕಗಳಲ್ಲಿ ನಟಿಸಿದ್ದಾರೆ. ಸಿನಿಮಾಗಳಲ್ಲೂ ಜನಪ್ರಿಯರಾಗಿದ್ದ ಇವರು ನಾಗತಿಹಳ್ಳಿ ಚಂದ್ರಶೇಖರ್ ನಿರ್ದೇಶಿಸಿದ 'ಬಾ ನಲ್ಲೆ ಮಧುಚಂದ್ರಕೆ', 'ಎರಡು ಕನಸು', 'ಪಲ್ಲವಿ ಅನುಪಲ್ಲವಿ', ಜಂಬೂ ಸವಾರಿ, ಇದೊಳ್ಳೆ ರಾಮಾಯಣ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಇತ್ತೀಚೆಗೆ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಭಿನಯದ 'ರಾಜಕುಮಾರ' ಸಿನಿಮಾದಲ್ಲೂ ಚಿಕ್ಕದೊಂದು ಪಾತ್ರದಲ್ಲಿ ನಟಿಸಿದ್ದರು. ಈ ಪಾತ್ರ ಕೂಡ ಗಮನ ಸೆಳೆದಿತ್ತು.

ಧಾರಾವಾಹಿಗಳಲ್ಲಿ ಭಾರ್ಗವಿ ಅಭಿನಯ

ಟಿಎನ್ ಸೀತಾರಾಮ್ ನಿರ್ದೇಶನದ 'ಮುಕ್ತಾ' ಧಾರಾವಾಹಿ ನಟಿಸಿದ್ದಾರೆ. 'ಮಂಥನಾ' ಭಾರ್ಗವಿ ನಟಿಸಿ ಧಾರಾವಾಹಿಯಲ್ಲಿ ಜನಪ್ರಿಯಾಗಿವೆ. ಸುಮಾರು 22ಕ್ಕೂ ಅಧಿಕ ಚಿತ್ರಗಳಲ್ಲಿ ಭಾರ್ಗವಿ ನಾರಾಯಣ್ ಅಭಿನಯಿಸಿದ್ದಾರೆ.

More from Filmibeat

English summary
Sandalwood veteran actress Bhargavi Narayan passes away. Kannada celebrities mourns. Bhargavi Narayan acted in Puneeth Rajkumar movie Yuvarathna.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X