ನಟಿ ಜಯಂತಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ: ಆರೋಗ್ಯದಲ್ಲಿ ಚೇತರಿಕೆ

ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ಕನ್ನಡದ ಹಿರಿಯ ನಟಿ ಜಯಂತಿ ಅವರು ವಿಕ್ರಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರನ್ನು ವೆಂಟಿಲೇಟರ್‌ನಲ್ಲಿ ಇರಿಸಲಾಗಿದೆ. ಚಿಕಿತ್ಸೆಗೆ ಅವರು ಚೆನ್ನಾಗಿ ಸ್ಪಂದಿಸುತ್ತಿದ್ದಾರೆ ಎಂದು ವರದಿಯಾಗಿದೆ.

Recommended Video

Susheel Gowda No more,ಅಭಿನಯಿಸಿದ ಚಿತ್ರ ಬಿಡುಗಡೆಗು ಮುನ್ನ ಕೊನೆಯುಸಿರೆಳೆದ ಸುಶೀಲ್ ಗೌಡ | Filmibeat kannada

ಅಸ್ತಮಾದಿಂದ ಬಳಲುತ್ತಿರುವ ಅವರಲ್ಲಿ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಕೂಡಲೇ ಬೆಂಗಳೂರಿನ ವಿಕ್ರಂ ಆಸ್ಪತ್ರೆಗೆ ಸಾಗಿಸಲಾಗಿತ್ತು. ವೆಂಟಿಲೇಟರ್‌ನಲ್ಲಿ ಇರಿಸಿ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಅವರು ಚೇತರಿಸಿಕೊಳ್ಳುತ್ತಿದ್ದಾರೆ. ವಿಕ್ರಂ ಆಸ್ಪತ್ರೆಯ ವೈದ್ಯ ಡಾ. ಸತೀಶ್ ಚಿಕಿತ್ಸೆ ನೀಡುತ್ತಿದ್ದಾರೆ. ಅವರನ್ನು ಆಸ್ಪತ್ರೆಗೆ ಕರೆದು ತಂದಾಗ ನಿಯಮಾವಳಿಗಳಿಗೆ ಅನುಗುಣವಾಗಿ ಕೊರೊನಾ ವೈರಸ್ ಪರೀಕ್ಷೆ ಸಹ ಮಾಡಲಾಗಿತ್ತು. ವರದಿಯಲ್ಲಿ ನೆಗೆಟಿವ್ ಬಂದಿರುವುದು ಸಮಾಧಾನ ಮೂಡಿಸಿದೆ. ಮುಂದೆ ಓದಿ.

ಗಾಬರಿ ಪಡುವ ಅಗತ್ಯ ಇಲ್ಲ

ಗಾಬರಿ ಪಡುವ ಅಗತ್ಯ ಇಲ್ಲ

ಜಯಂತಿ ಅವರು ಹಲವು ವರ್ಷಗಳಿಂದ ಅಸ್ತಮಾ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಈಗ ಹವಾಮಾನದಲ್ಲಿ ವ್ಯತ್ಯಾಸ ಆಗಿರುವುದರಿಂದ ಅವರಲ್ಲಿ ಸಹಜವಾಗಿಯೇ ಆರೋಗ್ಯದಲ್ಲಿ ಏರುಪೇರು ಉಂಟಾಗಿದೆ. ಇದಕ್ಕೆ ಗಾಬರಿಪಡುವಂಥದ್ದು ಏನೂ ಇಲ್ಲ ಎಂದು ಜಯಂತಿ ಅವರ ಮಗ ಕೃಷ್ಣಕುಮಾರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮಳೆಗಾಲದಲ್ಲಿ ಅಸ್ತಮಾ ಹೆಚ್ಚು

ಮಳೆಗಾಲದಲ್ಲಿ ಅಸ್ತಮಾ ಹೆಚ್ಚು

ಜಯಂತಿ ಅವರಿಗೆ 70 ವರ್ಷ ದಾಟಿರುವ ಕಾರಣದಿಂದ ಕುಟುಂಬದವರಲ್ಲಿ ಆತಂಕ ಹೆಚ್ಚಿತ್ತು. ಬೆಂಗಳೂರಿನ ವಾತಾವರಣದಲ್ಲಿ ಅಸ್ತಮಾ ಸಮಸ್ಯೆಯಿದ್ದಾಗ ಕಷ್ಟವಾಗುತ್ತದೆ. ಅದರಲ್ಲಿಯೂ ಮಳೆಗಾಲದಲ್ಲಿ ಅದರ ತೀವ್ರತೆ ಹೆಚ್ಚು ಎಂದು ಅವರು ತಿಳಿಸಿದ್ದಾರೆ.

ಪರೀಕ್ಷೆಯಲ್ಲಿ ನೆಗೆಟಿವ್

ಪರೀಕ್ಷೆಯಲ್ಲಿ ನೆಗೆಟಿವ್

ಆಸ್ಪತ್ರೆಗೆ ಕರೆತರುವಾಗ ಕೊರೊನಾ ವೈರಸ್ ಭಯವಿತ್ತು. ಅದಕ್ಕೆ ದಾಖಲು ಮಾಡಿದ ತಕ್ಷಣ ಗಂಟಲು ದ್ರವ ತೆಗೆದುಕೊಂಡು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರ ವರದಿಯಲ್ಲಿ ನೆಗೆಟಿವ್ ಬಂದಿರುವುದು ಸಮಾಧಾನ ಮೂಡಿಸಿದೆ ಎಂದು ಮಾಹಿತಿ ನೀಡಿದ್ದಾರೆ.

ಎರಡು ವರ್ಷದ ಹಿಂದೆಯೂ ಉಲ್ಬಣಿಸಿತ್ತು

ಎರಡು ವರ್ಷದ ಹಿಂದೆಯೂ ಉಲ್ಬಣಿಸಿತ್ತು

2018ರ ಮಾರ್ಚ್ ತಿಂಗಳಲ್ಲಿ ಸಹ ಜಯಂತಿ ಅವರಲ್ಲಿ ಅಸ್ತಮಾ ಉಲ್ಬಣಗೊಂಡಿತ್ತು. ಆಗಲೂ ಅವರಿಗೆ ವಿಕ್ರಂ ಆಸ್ಪತ್ರೆಯಲ್ಲಿ ವೈದ್ಯ ಡಾ. ಸತೀಶ್ ಚಿಕಿತ್ಸೆ ನೀಡಿದ್ದರು. ಆಗ ಅವರು ಚೇತರಿಸಿಕೊಂಡು ಬಿಡುಗಡೆಯಾಗಿದ್ದರು. ಲಾಕ್ ಡೌನ್ ಆರಂಭಕ್ಕೂ ಮುನ್ನ ಕಾರ್ಯಕ್ರಮದ ಸಲುವಾಗಿ ಹಂಪಿಗೆ ತೆರಳಿದ್ದ ಅವರು ಅಲ್ಲಿಯೇ ಒಂದು ತಿಂಗಳು ಸಿಲುಕಿಕೊಂಡಿದ್ದರು. ಬಳಿಕ ಅಧಿಕಾರಿಗಳ ನೆರವಿನಿಂದ ಬೆಂಗಳೂರಿನ ಮನೆಗೆ ಮರಳಿದ್ದರು.

More from Filmibeat

English summary
Veteran actress Jayanthi who was hospitalized due to asthma is recovering well. She is in ventilator support.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X