For Quick Alerts
  ALLOW NOTIFICATIONS  
  For Daily Alerts

  ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ ಇನ್ನಿಲ್ಲ

  |

  ರಾಜ್ಯ ಪ್ರಶಸ್ತಿ ಪುರಸ್ಕೃತ ಹಿರಿಯ ಛಾಯಾಗ್ರಾಹಕ ಎಸ್ ವಿ ಶ್ರೀಕಾಂತ್ (87) ಶುಕ್ರವಾರ ನಿಧನರಾದರು.

  Karabu song released date postponed | Pogaru | Dhruva sarja | Filmibeat kannada

  ಮಂಡ್ಯ ಜಿಲ್ಲೆಯ ಮದ್ದೂರಿನಲ್ಲಿ ಜನಿಸಿದ ಅವರು ಬಿಎಸ್‌ಸಿ ಪದವೀಧರರಾಗಿದ್ದರು. ಮೈಸೂರಿನ ಪ್ರೀಮಿಯರ್ ಸ್ಟುಡಿಯೋದಲ್ಲಿ ಫೋಟೊಗ್ರಫಿ ಆರಂಭಿಸಿದ್ದರು. 'ಗೆಜ್ಜೆಪೂಜೆ', 'ಮಾರ್ಗದರ್ಶಿ' ಮತ್ತು 'ಉಪಾಸನೆ' ಚಿತ್ರಗಳಲ್ಲಿನ ಛಾಯಾಗ್ರಹಣಕ್ಕೆ ಮೂರು ಬಾರಿ ಅತ್ಯುತ್ತಮ ಛಾಯಾಗ್ರಾಹಕ ರಾಜ್ಯ ಪ್ರಶಸ್ತಿ ಪಡೆದಿದ್ದರು.

  ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರಿಗೆ ಬಹಳ ಆಪ್ತರಾಗಿದ್ದ ಅವರು ಸುಮಾರು 65-70 ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದರು. ಬಬ್ರುವಾಹನ, ಪ್ರೇಮಮಯಿ, ಅಶ್ರುತರ್ಪಣ, ಜೀವನಚೈತ್ರ, ಆಕಸ್ಮಿಕ, ಸಾಕ್ಷಾತ್ಕಾರ, ತ್ರಿಮೂರ್ತಿ ಮುಂತಾದ ಸಿನಿಮಾಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ಹಿಂದಿಯ 'ಹೈಸಿಯಾತ್', 'ವಫಾದಾರ್' ಮುಂತಾದ ಚಿತ್ರಗಳಲ್ಲಿಯೂ ಅವರು ಕ್ಯಾಮೆರಾ ಹಿಂದೆ ಕೆಲಸ ಮಾಡಿದ್ದರು. ಮುಂದೆ ಓದಿ...

  ಟ್ರಿಕ್ಸ್ ಫೋಟೊಗ್ರಫಿಗೆ ಹೆಸರು

  ಟ್ರಿಕ್ಸ್ ಫೋಟೊಗ್ರಫಿಗೆ ಹೆಸರು

  ಡಬಲ್ ಆಕ್ಟಿಂಗ್ ಛಾಯಾಗ್ರಹಣಕ್ಕೆ ಎಸ್. ವಿ. ಶ್ರೀಕಾಂತ್ ಖ್ಯಾತರಾಗಿದ್ದರು. ಕಪ್ಪು-ಬಿಳುಪು ಸಿನಿಮಾ ಕಾಲದಲ್ಲಿಯೇ ಒಂದೇ ಫ್ರೇಮ್‌ನಲ್ಲಿ ದ್ವಿಪಾತ್ರಗಳನ್ನು ತರುವ ಟ್ರಿಕ್ ಫೋಟೊಗ್ರಫಿಯಲ್ಲಿ ಅವರು ಪರಿಣತರಾಗಿದ್ದರು. ಡಬಲ್ ಆಕ್ಟಿಂಗ್ ಇರುವ ಅನೇಕ ಚಿತ್ರಗಳಿಗೆ ಅವರದೇ ಛಾಯಾಗ್ರಹಣವಿದೆ. (ಮಾಹಿತಿ: ಜಗನ್ನಾಥ್ ಪ್ರಕಾಶ್)

  ಅದ್ಭುತ ಟೆಕ್ನಿಷಿಯನ್

  ಅದ್ಭುತ ಟೆಕ್ನಿಷಿಯನ್

  'ನಾನು ಎಸ್ ವಿ ಶ್ರೀಕಾಂತ್ ಅವರೊಂದಿಗೆ ಕೆಲಸ ಮಾಡಿದ್ದು 'ಜೀವನ ಚೈತ್ರ' ಸಿನಿಮಾಕ್ಕಾಗಿ. ಆದರೆ ಅವರು ದೊರೆ ಹಾಗೂ ಡಾ. ರಾಜ್ ಕುಮಾರ್ ಅವರಿಗೆ ಬಹಳ ಆಪ್ತರಾಗಿದ್ದರು. ಶ್ರೀಕಾಂತ್ ಅವರು ಬಹಳ ಮನಸಿನ ವ್ಯಕ್ತಿ ಹಾಗೂ ಬದ್ಧತೆಯುಳ್ಳವರು. ಹಾಗೆಯೇ ಅದ್ಭುತ ಟೆಕ್ನಿಷಿಯನ್' ಎಂದು ನಿರ್ದೇಶಕ ಭಗವಾನ್ ನೆನಪಿಸಿಕೊಂಡರು.

  ನಾದಮಯ ಹಾಡಿನ ಚಿತ್ರೀಕರಣ

  ನಾದಮಯ ಹಾಡಿನ ಚಿತ್ರೀಕರಣ

  'ಜೀವನಚೈತ್ರ' ಚಿತ್ರದ 'ನಾದಮಯ' ಹಾಡಿನ ಚಿತ್ರೀಕರಣಕ್ಕಾಗಿ ಕೇದರಾನಾಥಕ್ಕೆ ತೆರಳಿದ್ದೆವು. ಕೇದಾರನಾಥ 18,000 ಅಡಿ ಎತ್ತರವಿದ್ದರೆ, ನಾವು ಚಿತ್ರೀಕರಣಕ್ಕೆ ಹೋಗಿದ್ದು ಇನ್ನೂ 1,000 ಅಡಿ ಎತ್ತರದ ಸ್ಥಳಕ್ಕೆ. ನಾವು ಇಲ್ಲಿಂದ ಹೋಗಿದ್ದೇ ಐದು ಜನ. ನಾನು, ಶ್ರೀಕಾಂತ್, ಅವರ ಸಹಾಯಕ, ಸೌಂಡ್ ಅಸಿಸ್ಟೆಂಟ್ ಮತ್ತು ಮೇಕಪ್ ಅಸಿಸ್ಟೆಂಟ್. ಇಷ್ಟೇ ಜನ ಎಲ್ಲವನ್ನೂ ನಿಭಾಯಿಸಬೇಕಿತ್ತು ಎಂದು ಹೇಳಿದರು.

  ಮರುದಿನ ಶೂಟಿಂಗ್‌ಗೆ ಸಿದ್ಧ

  ಮರುದಿನ ಶೂಟಿಂಗ್‌ಗೆ ಸಿದ್ಧ

  ಎರಡು ಗಂಟೆ ಶೂಟಿಂಗ್ ಬಳಿಕ ಶ್ರೀಕಾಂತ್ ಅವರಿಗೆ ಚಳಿ ತಡೆಯಲು ಆಗುತ್ತಿರಲಿಲ್ಲ. ನನ್ನಿಂದ ಆಗುವುದೇ ಇಲ್ಲ ಎಂದು ಹೊರಟರು. 'ಅವರ ಆರೋಗ್ಯಕ್ಕೆ ತೊಂದರೆಯಾಗುತ್ತದೆ. ಇಷ್ಟು ದೂರ ಬಂದಿದ್ದೇವೆ. ಹೆಚ್ಚು ಕಡಿಮೆ ಆಗುವುದು ಬೇಡ. ಅವರ ಆರೋಗ್ಯ ಮುಖ್ಯ. ಶೂಟಿಂಗ್ ಬೇಕಾದರೆ ಆಮೇಲೆ ಮಾಡೋಣ' ಎಂದು ರಾಜ್ ಕುಮಾರ್ ಹೇಳಿದರು. ಅಲ್ಲಿಯೇ ಪೇಜಾವರ ಮಠದ ಛತ್ರವಿತ್ತು. ಅಲ್ಲಿಗೆ ವಾಪಸ್ ಹೋಗಿ ಹೀಟರ್ ಹಾಕಿ ಅವರ ದೇಹ ಬೆಚ್ಚಗಾಗುವಂತೆ ಮಾಡಿದೆವು. ಮರು ದಿನ ಶ್ರೀಕಾಂತ್ ಶೂಟಿಂಗ್‌ಗೆ ರೆಡಿಯಾದರು ಎಂಬುದನ್ನು ಭಗವಾನ್ ನೆನಪಿಸಿಕೊಂಡರು.

  ಲಾಯರ್ ಮನೆ, ಶ್ರೀಕಾಂತ್ ಮನೆ

  ಲಾಯರ್ ಮನೆ, ಶ್ರೀಕಾಂತ್ ಮನೆ

  ಚಿತ್ರರಂಗದ ಆರಂಭದ ದಿನಗಳು ಇದ್ದದ್ದು ಮದ್ರಾಸ್‌ನಲ್ಲಿ. ಆಗ ಶ್ರೀಕಾಂತ್ ಅಣ್ಣನ ಮನೆಯಲ್ಲಿದ್ದರಂತೆ. ಅಣ್ಣ ವೃತ್ತಿಯಿಂದ ವಕೀಲರು. ಹೀಗಾಗಿ ಆ ಮನೆಗೆ ಲಾಯರ್ ಮನೆ ಎಂದೇ ಕರೆಯುತ್ತಿದ್ದರಂತೆ. ಶ್ರೀಕಾಂತ್ ಅವರು 'ಗೆಜ್ಜೆಪೂಜೆ'ಯ ಛಾಯಾಗ್ರಹಣಕ್ಕೆ ಅವಾರ್ಡ್ ತೆಗೆದುಕೊಂಡ ಬಳಿಕ ಆ ಮನೆಯನ್ನು ಜನರು 'ಶ್ರೀಕಾಂತ್ ಮನೆ' ಎಂದು ಕರೆಯತೊಡಗಿದರಂತೆ. ಇದನ್ನು ಓದಿದ್ದೆ ಎಂದು ಭಗವಾನ್ ತಿಳಿಸಿದರು.

  English summary
  Veteran Kannada cinematographer SV Srikanth (87) passed away on Friday. He was awarded as best cinematographer thrice by the state government

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X