»   » ಎಸ್.ಕೆ ಭಗವಾನ್ ಗೆ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯ ಗರಿ

ಎಸ್.ಕೆ ಭಗವಾನ್ ಗೆ 'ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ'ಯ ಗರಿ

Posted By:
Subscribe to Filmibeat Kannada

ಮುಂಬೈ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ವತಿಯಿಂದ ಪ್ರತಿ ವರ್ಷ ಚಿತ್ರರಂಗದ ಸಾಧಕರಿಗೆ ನೀಡುವ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಯನ್ನ 2017 ಸಾಲಿನಲ್ಲಿ ಕನ್ನಡದ ಹಿರಿಯ ನಿರ್ದೇಶಕ ಎಸ್.ಕೆ ಭಗವಾನ್ ಅವರಿಗೆ ನೀಡಲಾಗಿದೆ.

ಭಾರತೀಯ ಸಿನಿಮಾದ ಪಿತೃ ಎಂದೇ ಬಣ್ಣಿಸಲಾಗುವ ದಾದಾಸಾಹೇಬ್ ಫಾಲ್ಕೆ ಅವರ 148 ನೇ ಹುಟ್ಟುಹಬ್ಬದ ಅಂಗವಾಗಿ, 2017ನೇ ಸಾಲಿನ "ದಾದಾಸಾಹೇಬ್ ಫಿಲ್ಮ್ ಸಂಸ್ಥೆ ಪ್ರಶಸ್ತಿ' ಯನ್ನ ಮುಂಬೈನಲ್ಲಿ ಪ್ರದಾನ ಮಾಡಲಿದ್ದು, ಜೂನ್ 1 ರಂದು ಎಸ್.ಕೆ ಭಗವಾನ್ ಅವರು ಈ ಪ್ರಶಸ್ತಿ ಪಡೆಯಲಿದ್ದಾರೆ.[ಐಶ್ವರ್ಯ ರೈ, ಹೇಮಾ ಮಾಲಿನಿ'ಗೆ ಪ್ರತಿಷ್ಠಿತ ದಾದಾಸಾಹೇಬ್ ಪ್ರಶಸ್ತಿ]

 Veteran Director SK Bhagavan Wins Dadasaheb Phalke award

ದೊರೆ-ಭಗವಾನ್ ಜೋಡಿಯ ಎಸ್.ಕೆ ಭಗವಾನ್ ಸಿನಿಮಾ ರಂಗದಲ್ಲಿ 65 ವರ್ಷದ ಸುದೀರ್ಘ ಸೇವೆಯನ್ನು ಸಲ್ಲಿಸಿದ್ದಾರೆ. 'ಕಸ್ತೂರಿ ನಿವಾಸ', 'ಎರಡು ಕನಸು', 'ಬಯಲು ದಾರಿ', 'ಗಿರಿ ಕನ್ಯೆ', 'ಚಂದನದ ಗೊಂಬೆ', 'ವಸಂತ ಗೀತೆ', 'ಆಪರೇಷನ್ ಡೈಮೆಂಡ್ ರಾಕೆಟ್', 'ಹೊಸ ಬೆಳಕು', 'ಯಾರಿವನು' ಸೇರಿದಂತೆ ಈ ವರೆಗೂ ಸುಮಾರು 49 ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ಅವುಗಳಲ್ಲಿ 32 ಸಿನಿಮಾಗಳಲ್ಲಿ ಡಾ.ರಾಜ್ ಕುಮಾರ್ ನಾಯಕರಾಗಿ ನಟಿಸಿದ್ದಾರೆ. 24 ಕಾದಂಬರಿಗಳನ್ನು ಬೆಳ್ಳಿತೆರೆಗೆ ತಂದಿರುವುದು ಖ್ಯಾತಿ ಭಗವಾನ್‌ ಅವರಿಗೆ ಸಲ್ಲುತ್ತದೆ.

ಸೂಚನೆ: ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ಆರಂಭಿಸಲಾಯಿತು. ಈ ಪ್ರಶಸ್ತಿಗಳು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನೀಡುವ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಗಿಂತ ವಿಭಿನ್ನವಾಗಿವೆ.

English summary
Kannada Veteran Director SK Bhagavan wins Dadasaheb Phalke Academy Awards 2017 From Dadasaheb Phalke Academy Mumbai.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada