For Quick Alerts
  ALLOW NOTIFICATIONS  
  For Daily Alerts

  ಐಶ್ವರ್ಯ ರೈ, ಹೇಮಾ ಮಾಲಿನಿ'ಗೆ ಪ್ರತಿಷ್ಠಿತ ದಾದಾಸಾಹೇಬ್ ಪ್ರಶಸ್ತಿ

  By Suneel
  |

  ಮುಂಬೈನಲ್ಲಿ ಪ್ರತಿವರ್ಷ ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ನೀಡುವ ಪ್ರಶಸ್ತಿ ಪ್ರಕಟವಾಗಿದೆ. ಈ ಪ್ರಶಸ್ತಿಗೆ ಐಶ್ವರ್ಯ ರೈ ಬಚ್ಚನ್, ನಿರ್ದೇಶಕ ಸೂಜಿತ್ ಸರ್ಕಾರ್ ಮತ್ತು ಹಿರಿಯ ನಟ ಜೀನತ್ ಅಮನ್ ಅವರುಗಳು ಭಾಜನರಾಗಿದ್ದಾರೆ.

  ಚಿತ್ರ ಪ್ರೊಡಕ್ಷನ್ ಮತ್ತು ದಾದಾಸಾಹೇಬ್ ಫಾಲ್ಕೆ ಎಕ್ಸಲೆನ್ಸ್ 2017 ಜಂಟಿಯಾಗಿ ಆಯೋಜಿಸಿದ್ದ ಭಾರತೀಯ ಸಿನಿಮಾದ ಪಿತೃ ಎಂದೇ ಬಣ್ಣಿಸಲಾಗುವ ದಾದಾಸಾಹೇಬ್ ಫಾಲ್ಕೆ ಅವರ 148ನೇ ಹುಟ್ಟುಹಬ್ಬದ ಅಂಗವಾಗಿ, 2017ನೇ ಸಾಲಿನ "ದಾದಾಸಾಹೇಬ್ ಫಿಲ್ಮ್ ಸಂಸ್ಥೆ ಪ್ರಶಸ್ತಿ' ಪ್ರದಾನ ಸಮಾರಂಭವು ಮುಂಬೈ ನಲ್ಲಿ ನಿನ್ನೆ(ಏಪ್ರಿಲ್ 21) ನೆರವೇರಿದೆ.

  ಬಾಲಿವುಡ್ ನಟಿ ಐಶ್ವರ್ಯ ರೈ ಬಚ್ಚನ್ ಗೆ 2016 ರಲ್ಲಿ ತೆರೆಕಂಡ ಓಮಂಗ್ ಕುಮಾರ್ ನಿರ್ದೇಶನದ 'ಸರಬ್ಜಿತ್' ಚಿತ್ರದಲ್ಲಿ ದಲ್ಬಿರ್ ಕೌರ್ ಪಾತ್ರದ ಅತ್ಯುತ್ತಮ ನಟನೆಗಾಗಿ ದಾದಾಸಾಹೇಬ್ ಫಿಲ್ಮ್ ಸಂಸ್ಥೆಯ ಪ್ರಶಸ್ತಿ ನೀಡಲಾಗಿದೆ. 'Mirzya' ಚಿತ್ರದ ನಟನೆಗೆ ಸೈಯಾಮಿ ಖೇರ್ ಗೆ ಅತ್ಯುತ್ತಮ ಉದಯೋನ್ಮುಖ ನಟಿ ಪ್ರಶಸ್ತಿ ಮತ್ತು ಹಿರಿಯ ನಟಿ ಹೇಮ ಮಾಲಿನಿ'ಗೆ 'ಕಲಾ ಶ್ರೀ' ವಿಭಾಗದಲ್ಲಿ ಪ್ರಶಸ್ತಿ ನೀಡಲಾಗಿದೆ.

  ಹಿರಿಯ ನಟ ಜೀನತ್ ಅಮನ್ ಅವರಿಗೆ ಸಿನಿಮಾ ಕ್ಷೇತ್ರಕ್ಕೆ ನೀಡಿದ ಕೊಡುಗೆಗಾಗಿ ಜೀವಮಾನ ಸಾಧನೆ ಪ್ರಶಸ್ತಿ ಲಭಿಸಿದೆ. ನಿರ್ದೇಶಕ ಶ್ರೀಜಿತ್ ಸರ್ಕಾರ್ ರವರಿಗೆ 'ಪಿಂಕ್' ಚಿತ್ರಕ್ಕಾಗಿ ಸೃಜನಶೀಲ ನಿರ್ದೇಶಕ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಜೊತೆಗೆ ರೋಹಿತ್ ರಾಯ್ ಗೆ 'ಕಾಬಿಲ್' ಚಿತ್ರದಲ್ಲಿನ ಖಳ ನಾಯಕನ ಪಾತ್ರಕ್ಕಾಗಿ ಪ್ರಶಸ್ತಿ ಲಭಿಸಿದೆ.

  ನೆನಪಿರಲಿ: ದಾದಾಸಾಹೇಬ್ ಫಾಲ್ಕೆ ಫಿಲ್ಮ್ ಫೌಂಡೇಶನ್ ಪ್ರಶಸ್ತಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಮುಂಬೈನಲ್ಲಿ ಆರಂಭಿಸಲಾಯಿತು. ಈ ಪ್ರಶಸ್ತಿಗಳು ಭಾರತ ಸರ್ಕಾರದ ಮಾಹಿತಿ ಮತ್ತು ಪ್ರಸಾರ ಸಚಿವಾಲಯದಿಂದ ನೀಡುವ 'ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ'ಗಿಂತ ವಿಭಿನ್ನವಾಗಿವೆ.

  English summary
  Veteran actor- politician Hema Malini along with Aishwarya Rai Bachchan, filmmaker Shoojit Sircar and Zeenat Aman bagged the Dadasaheb Phalke Excellence Awards 2017.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X