ಪುಟಾಣಿ ಮಗು ಜೊತೆ ಅಪ್ಪು ಡ್ಯಾನ್ಸ್: ವೈರಲ್ ಆಯ್ತು ಮುದ್ದಾದ ವಿಡಿಯೋ

ನಟ ಪುನೀತ್ ರಾಜ್ ಕುಮಾರ್ ಎಲ್ಲರೊಂದಿಗೆ ಬೆರೆಯುವ ಸರಳ ವ್ಯಕ್ತಿತ್ವದವರು. ರಾಜ್ ಕುಮಾರ್ ಅವರಿಗಿದ್ದ ಸರಳತೆ ಪುನೀತ್ ಅವರಲ್ಲಿಯೂ ಇದೆ ಎಂದು ಅನೇಕರು ತಮ್ಮ ಅನುಭವಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಜನಸಾಮಾನ್ಯರು, ವಯಸ್ಸಾದವರು, ಮಕ್ಕಳೊಂದಿಗೆ ಪುನೀತ್ ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ. ಸಿನಿಮಾಗಳು ಮಾತ್ರವಲ್ಲದೆ, ಅವರ ವ್ಯಕ್ತಿತ್ವದ ಕಾರಣದಿಂದಲೂ ಅವರಿಗೆ ಅಭಿಮಾನಿಗಳಾದವರು ಸಾಕಷ್ಟು ಮಂದಿ.

Recommended Video

ಅಣ್ಣ ಬಿಟ್ಟುಹೋದ ಚಿತ್ರಗಳ ಬೆಂಬಲಕ್ಕೆ ನಿಂತ ಧ್ರುವಸರ್ಜಾ | Dhruva Sarja to dub Chiru movies

ಪುಟ್ಟ ಮಗುವೊಂದರ ಜತೆ ಪುನೀತ್ ತಾವೂ ಮಗುವಿನಂತೆ ಡ್ಯಾನ್ಸ್ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಪುಟಾಣಿ ಜತೆ ಮಾತನಾಡುವ ಪುನೀತ್ ಅದರ ಎದುರು ನಿಂತು ಡ್ಯಾನ್ಸ್ ಕೂಡ ಮಾಡುತ್ತಾರೆ.

Video Of Puneeth Rajkumar Dance With Small Kid Goes Viral

ತೆಲುಗು ಭಾಷಿಕ ಕುಟುಂಬವೊಂದನ್ನು ಪುನೀತ್ ಭೇಟಿ ಮಾಡಿದ್ದು, ಆ ಕುಟುಂಬದ ಪುಟಾಣಿ ಜತೆ ಪುನೀತ್ ಸಂಭಾಷಣೆ ನಡೆಸಿದ್ದಾರೆ. 'ಬುಟ್ಟ ಬೊಮ್ಮಾ' ಹಾಡಿನ ನೃತ್ಯಶೈಲಿಯಲ್ಲಿ ನರ್ತಿಸಿದ್ದಾರೆ. ಇದು ಯಾವ ಹಾಡು ಹೇಳು ಎಂದು ಮಗುವನ್ನು ಕೇಳಿದಾಗ ಅದು ತೊದಲು ನುಡಿಯಲ್ಲಿ ಬುಟ್ಟ ಬೊಮ್ಮಾ ಎಂದಿದೆ.

ಅದನ್ನು ಕೇಳಿ ರೋಮಾಂಚಿತರಾಗುವ ಪುನೀತ್ ಜೋರಾಗಿ ಚಪ್ಪಾಳೆ ತಟ್ಟಿ ನಗುತ್ತಾರೆ. ಆ ಮಗುವಿನ ಮನೆಯವರೂ ಖುಷಿಯಿಂದ ಹರ್ಷೋದ್ಗಾರ ಮಾಡುತ್ತಾರೆ. ಕುಟುಂಬದವರು ಈ ಸಂತಸದ ಕ್ಷಣಗಳನ್ನು ವಿಡಿಯೋದಲ್ಲಿ ದಾಖಲಿಸಿದ್ದು, ಅದೀಗ ವೈರಲ್ ಆಗಿದೆ. ಆ ಕುಟುಂಬದವರು ಯಾರು? ಯಾವಾಗ ವಿಡಿಯೋ ಮಾಡಿದ್ದು ಎನ್ನುವುದು ತಿಳಿದಿಲ್ಲ.

More from Filmibeat

English summary
Actor Puneeth Rajkumar's adorabel video dancing with a kid goes viral on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X