ಬೆಟ್ಟಿಂಗ್ ಆಪ್ ತಂದ ಕಂಟಕ; ವಿಜಯ್ ದೇವರಕೊಂಡ, ರಾಣಾ ಸೇರಿ 29 ವಿರುದ್ಧ ಕೇಸ್ ದಾಖಲಿಸಿದ ಇಡಿ
ದಕ್ಷಿಣ ಭಾರತದ ಸ್ಟಾರ್‌ಗಳಿಗೆ ಕಂಟಕ ಎದುರಾಗಿದೆ. ಬೆಟ್ಟಿಂಗ್ ಆಪ್ ಅನ್ನು ಪ್ರಮೋಟ್ ಮಾಡಿದ್ದಕ್ಕಾಗಿ ದಕ್ಷಿಣ ಭಾರತದ 29 ಮಂದಿಯ ವಿರುದ್ದ ಜಾರಿ ನಿರ್ದೇಶನಾಲಯ ದೂರನ್ನು ದಾಖಲು ಮಾಡಲಾಗಿದೆ. ಈ 29 ಮಂದಿಯಲ್ಲಿ ಸಿನಿಮಾ ತಾರೆಯರು, ಸೋಶಿಯಲ್ ಮೀಡಿಯಾ ಇನ್‌ಫ್ಲ್ಯೂಯೆನ್ಸರ್‌ಗಳು ಹಾಗೂ ಯೂಟ್ಯೂಬರ್‌ಗಳ ಮೇಲೆ ಕೇಸ್ ಅನ್ನು ದಾಖಲು ಮಾಡಿಕೊಳ್ಳಲಾಗಿದೆ.
ಈ 29 ಮಂದಿಯಲ್ಲಿ ಸಿನಿಮಾ ತಾರೆಯರು ಕೂಡ ಸೇರಿಕೊಂಡಿದ್ದಾರೆ. ಪಬ್ಲಿಕ್ ಗೇಮಿಂಗ್ ಆಕ್ಟ್, 1867ರ ಅಡಿಯಲ್ಲಿ ಜಾರಿ ನಿರ್ದೇಶನಲಾಯ ದೂರನ್ನು ದಾಖಲಿಸಿಕೊಂಡಿದೆ. ಇದರಲ್ಲಿ ದಕ್ಷಿಣ ಭಾರತದ ಪ್ರಮುಖ ನಟರ ಹೆಸರು ಕೂಡ ಸೇರಿಕೊಂಡಿವೆ. ಇದರಲ್ಲಿ ಪ್ರಮುಖವಾಗಿ ರಾಣಾ ದಗ್ಗುಬಾಟಿ, ವಿಜಯ್ ದೇವರಕೊಂಡ, ಪ್ರಕಾಶ್ ರಾಜ್ ಸೇರಿದಂತೆ ಹಲವು ತಾರೆಯರ ಹೆಸರುಗಳು ಈ ಪಟ್ಟಿಯಲ್ಲಿವೆ.

ಬೆಟ್ಟಿಂಗ್ ಆಪ್‌ಗಳನ್ನು ಪ್ರಮೋಟ್ ಮಾಡಿರುವ ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ, ಪ್ರಕಾಶ್ ರಾಜ್ ಅಂತಹ ಜನಪ್ರಿಯರ ನಟರ ವಿರುದ್ಧವೇ ದೂರ ಅನ್ನು ದಾಖಲಿಸಲಾಗಿದೆ. ಆಂಧ್ರ ಪ್ರದೇಶ ಹಾಗೂ ತೆಲಂಗಾಣ ರಾಜ್ಯಗಳಲ್ಲಿ ಬೆಟ್ಟಿಂಗ್ ಆಪ್ ವಿರುದ್ಧ ಐದು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿತ್ತು. ಹೀಗಾಗಿ ಸ್ಟಾರ್ ನಟರು ವಿರುದ್ಧ ಜಾರಿ ನಿರ್ದೇಶನಾಲಯ ದೂರ ದಾಖಲಿಸಿದೆ.
ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿಯ ಜೊತೆ ಸಿನಿಮಾ ತಾರೆಯರ ದೊಡ್ಡ ಲಿಸ್ಟ್ ಇದೆ. ದಕ್ಷಿಣ ಭಾರತದ ಸಿನಿಮಾ ಸ್ಟಾರ್‌ಗಳಲ್ಲಿ ಪಟ್ಟಿಯಲ್ಲಿ ಪ್ರಕಾಶ್ ರಾಜ್, ಮಂಚು ಲಕ್ಷ್ಮಿ, ನಿಧಿ ಅಗರ್ವಾಲ್, ಪ್ರಣೀತಾ ಸುಭಾಷ್ ಹಾಗೂ ಅನನ್ಯಾ ನಗ್ಗೆಲ್ಲ ಅವರು ಹೆಸರುಗಳು ಇವೆ. ಇವರೆಲ್ಲರೂ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಬಗ್ಗೆ ಇನ್ನೂ ಸ್ಟಾರ್‌ಗಳು ಹೇಳಿಕೆಗಳನ್ನು ನೀಡಿಲ್ಲ.
ಹಾಗಂತ ಕೇವಲ ಸಿನಿಮಾ ತಾರೆಯರಷ್ಟೇ ಅಲ್ಲ. ಇವರೊಂದಿಗೆ ಜನಪ್ರಿಯ ಸೋಶಿಯಲ್ ಮೀಡಿಯಾ ಇನ್‌ಫ್ಲ್ಯುಯೆನ್ಸರ್‌ಗಳು ಕೂಡ ಈ ಪಟ್ಟಿಯಲ್ಲಿ ಇದ್ದಾರೆ. ಜಾರಿ ನಿರ್ದೇಶನನಾಲಯ ದಾಖಲಿಸಿದ ಎಫ್‌ಐಆರ್‌ನಲ್ಲಿ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಾಗಿರುವ ಶ್ಯಾಮಲಾ, ವಾಸಂತಿ ಕೃಷ್ಣನ್, ಅಮೃತಾ ಚೌಧರಿ, ನಯನಿ ಪಾವನಿ, ವರ್ಷಿಣಿ ಸೌಂದರ್ ರಾಜನ್, ಹರ್ಷ ಸಾಯಿ, ಶ್ರೀಮುಖಿ, ಶೋಭಾ ಶೆಟ್ಟಿ, ನೇಹಾ ಪಥಾನ್, ಪಾಂಡು, ಪದ್ಮಾವತಿ ಹಾಗೂ ಬಯ್ಯ ಸನ್ನಿ ಯಾದವ್ ಅಂತಹ ಹಸರುಗಳು ಇವೆ.
ಜಾರಿ ನಿರ್ದೇಶನಾಲಯದ ಜಾರಿ ಪ್ರಕರಣದ ಮಾಹಿತಿ ವರದಿ (ECIR)ಅನ್ನು ಭಾರತೀಯ ನೀತಿ ಸಂಹಿತೆ, ತೆಲಂಗಾಣ ಗೇಮಿಂಗ್ ಆಕ್ಟ್ ಹಾಗೂ ಐಟಿ ಆಕ್ಟ್ ಅಡಿಯಲ್ಲಿ ದಾಖಲು ಮಾಡಲಾಗಿದೆ. ಇದರಲ್ಲಿ ಬೆಟ್ಟಿಂಗ್ ಗ್ಲಾಮ್ಲಿಂಗ್ ವೇದಿಕೆಗಳಾದ ಜಂಗ್ಲಿ ರಮ್ಮಿ, ಎ23 ಸೇರಿದಂತೆ ಉಳಿದ ಆಪ್‌ಗಳು ದೊಡ್ಡ ಮಟ್ಟದಲ್ಲಿ ಅಕ್ರಮ ಹಣ ವರ್ಗಾವಣೆಯಲ್ಲಿ ಭಾಗಿಯಾಗಿರಬಹುದೆಂದು ಅನುಮಾನವನ್ನು ವ್ಯಕ್ತಪಡಿಸಿದೆ. ಹೀಗಾಗಿ ಈ ಆಪ್‌ಗಳ ಪ್ರಚಾರದಲ್ಲಿ ಭಾಗಿಯಾಗಿರುವ ನಟ, ನಟಿಯರು ಹಾಗೂ ಸೋಶಿಯಲ್ ಮೀಡಿಯಾ ಸ್ಟಾರ್‌ಗಳಿಗೆ ಈಗ ಸಂಕಷ್ಟ ಎದುರಾಗಿದೆ.

ಸೆಲೆಬ್ರೆಟಿಗಳ ವಿರುದ್ಧ ಈ ಕೇಸ್ ಅನ್ನು ವಿಶಾಖಪಟ್ಟಣಂ, ಸೂರ್ಯಪೇಟ್, ಸೈಬರಾಬಾದ್ ಸೇರಿದಂತೆ ಹಲವು ಭಾಗಗಳಲ್ಲಿ ದಾಖಲು ಮಾಡಲಾಗಿದೆ. ವಿಜಯ್ ದೇವರಕೊಂಡ, ರಾಣಾ ದಗ್ಗುಬಾಟಿ ಹಾಗೂ ಪ್ರಕಾಶ್ ರಾಜ್ ಈಗಾಗಲೇ ಅಕ್ರಮ ಬೆಟ್ಟಿಂಗ್ ಜಾಹೀರಾತುಗಳನ್ನು ಪ್ರಮೋಟ್ ಮಾಡುವುದಿಲ್ಲ ಎಂದು ಕ್ಲಾರಿಟಿಯನ್ನು ಕೊಟ್ಟಿದ್ದಾರೆ. ಈಗಾಗಲೇ ವಿಜಯ್ ದೇವರಕೊಂಡ ಕೂಡ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ. ಮಾರ್ಚ್ ತಿಂಗಳಲ್ಲಿ ಈ ಬಗ್ಗೆ ಮಾಹಿತಿಯನ್ನು ನೀಡಿದ್ದರು. ರಮ್ಮಿಯನ್ನು ಕೌಶಲ್ಯ ಆಧಾರಿತ ಗೇಮ್ ಎಂದು ಪರಿಗಣಿಸಿದ್ದು, ಜೂಜಿನಿಂದ ಹೊರತಾದ ಆಟವಾಗಿದೆ. ಇದಕ್ಕೆ ಕಾನೂನಾತ್ಮಕವಾಗಿ ಅನುಮತಿಯನ್ನು ನೀಡಲಾಗಿ ಎಂದು ಹೇಳಿದ್ದರು.
ಇನ್ನು ಪ್ರಕಾಶ್ ರಾಜ್ ಕೂಡ ವಿಡಿಯೋ ಮೂಲಕ ಕ್ಲಾರಿಟಿಯನ್ನು ಕೊಟ್ಟಿದ್ದರು. 2016ರಲ್ಲಿ ಗೇಮಿಂಗ್ ಆಪ್ ಅನ್ನು ಪ್ರಮೋಟ್ ಮಾಡುವುದಕ್ಕೆ ಸಹಿ ಮಾಡಿದ್ದರು. ಆದರೆ, ಒಂದು ವರ್ಷದ ಬಳಿಕ ಅದನ್ನು ಮುಂದುವರೆಸಲಿಲ್ಲ ಎಂದು ಪ್ರಕಾಶ್ ರಾಜ್ ಕೂಡ ಹೇಳಿಕೆ ಕೊಟ್ಟಿದ್ದರು.


Click it and Unblock the Notifications