ವಿಜಯ್ ಕಿರಗಂದೂರು, ಕಾರ್ತಿಕ್ ಗೌಡ ಹೇಳಿಕೆಯಲ್ಲಿ ಈ ಗೊಂದಲವೇಕೆ? ಸದ್ಯಕ್ಕಿಲ್ವಂತೆ 'ಕೆಜಿಎಫ್ 3'

ಕಳೆದೆರಡು ದಿನಗಳಿಂದ 'ಕೆಜಿಎಫ್' ಸಿನಿಮಾ ಅಭಿಮಾನಿಗಳು ಖುಷಿಯಲ್ಲಿ ತೇಲಾಡುತ್ತಿದ್ದರು. 'ಕೆಜಿಎಫ್ 2' ಆಯ್ತು, 'ಕೆಜಿಎಫ್ 3' ಶುರುವಾಗೇ ಬಿಡುತ್ತೆ ಅಂತ ಕುಣಿದು ಕುಪ್ಪಳಿಸಿದ್ದರು. ಆದರೆ, ಖುಷಿ ಅವರಿಗೆ ಸಿಕ್ಕಿದ್ದು ಕೇವಲ ಎರಡು ದಿನಕ್ಕೆ ಮಾತ್ರ. ಇದಕ್ಕೆ ನಿರ್ಮಾಪಕ ಹಾಗೂ ಕಾರ್ಯಕಾರಿ ನಿರ್ಮಾಪಕ ಇಬ್ಬರು ನೀಡಿದ ಎರಡು ವಿಭಿನ್ನ ಹೇಳಿಕೆಗಳು. ಅಸಲಿಗೆ ಇವರು ನೀಡಿದ ಹೇಳಿಕೆಯಲ್ಲಿ ಯಾವುದು ಸತ್ಯ? ಅನ್ನೋದು ಇನ್ನೊಂದು ಗೊಂದಲಕ್ಕೆ ಎಡೆ ಮಾಡಿಕೊಟ್ಟಿದೆ.

ಹೊಂಬಾಳೆ ಫಿಲ್ಮ್ಸ್‌ನ ವಿಜಯ್ ಕಿರಗಂದೂರು ರಾಷ್ಟ್ರೀಯ ಪತ್ರಿಕೆಯೊಂದಕ್ಕೆ 'ಕೆಜಿಎಫ್ ಚಾಪ್ಟರ್ 3' ಬಗ್ಗೆ ಹೇಳಿಕೆಯೊಂದನ್ನು ನೀಡಿದ್ದರು. 'ಕೆಜಿಎಫ್ 3' ಸಿನಿಮಾ ಇದೇ ವರ್ಷ ಶುರುವಾಗುತ್ತೆ ಅಂತಲೂ ಹೇಳಿದ್ದರು. ಈ ಹೇಳಿಕೆ ವೈರಲ್ ಆಗುತ್ತಿದ್ದಂತೆ ಹೊಂಬಾಳೆ ಫಿಲ್ಮ್ಸ್‌ನ ಕಾರ್ಯಕಾರಿ ನಿರ್ಮಾಪಕ 'ಕೆಜಿಎಫ್ 3' ಸದ್ಯಕ್ಕಿಲ್ಲ ಅಂತ ಹೇಳಿದ್ದಾರೆ. ಇವರಿಬ್ಬರ ವಿಭಿನ್ನ ಹೇಳಿಕೆ ಈಗ ಮತ್ತಷ್ಟು ಗೊಂದಲವನ್ನು ಸೃಷ್ಟಿ ಮಾಡಿದೆ.

ಅಸಲಿಗೆ ನಿರ್ಮಾಪಕ ವಿಜಯ್ ಕಿರಗಂದೂರು ತಮ್ಮ ಹೇಳಿಕೆ ಬಗ್ಗೆ ತಾವೇ ಸ್ಪಷ್ಟನೆ ನೀಡಬಹುದಿತ್ತು. ಯಾಕೆ ಕೆಜಿಎಫ್ 3 ಬಗ್ಗೆ ಮಾತಾಡಿಲ್ಲ ಎಂಬುದು ಈಗ ದೊಡ್ಡ ಪ್ರಶ್ನೆ. ಆದರೆ, ಈ ಗೊಂದಲದ ಬಗ್ಗೆ ಸ್ಯಾಂಡಲ್‌ವುಡ್‌ ಮಂದಿ ಸಾಕಷ್ಟು ಕಾರಣಗಳನ್ನು ಕೊಡುತ್ತಿದ್ದಾರೆ. ಅಷ್ಟಕ್ಕೂ 'ಕೆಜಿಎಫ್ 3' ಬಗ್ಗೆ ವಿಜಯ್ ಕಿರಂಗಂದೂರು ಹೇಳಿ ನೀಡಿದ್ದೆಲ್ಲಿ? ಹೇಳಿಕೆ ವೈರಲ್ ಆಗುತ್ತಿದ್ದಂತೆ ನಿರ್ಮಾಣ ಸಂಸ್ಥೆ ಯೂಟರ್ನ್ ಹೊಡೆದಿದ್ದೇಕೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.

Recommended Video

'ಪುಷ್ಪ 2' Strategy 'KGF2' ಮುಂದೆ ವರ್ಕ್‌ಔಟ್ ಆಗುತ್ತಾ? | Yash | Allu Arjun | Prashanth Neel | Sukumar

ಕೆಜಿಎಫ್ 3 ಸದ್ಯಕ್ಕಿಲ್ಲ ಎಂದ ಕಾರ್ತಿಕ್ ಗೌಡ

ಕೆಜಿಎಫ್ 3 ಸದ್ಯಕ್ಕಿಲ್ಲ ಎಂದ ಕಾರ್ತಿಕ್ ಗೌಡ

'ಕೆಜಿಎಫ್ ಚಾಪ್ಟರ್ 3' ಸಿನಿಮಾ ಸದ್ಯಕ್ಕಿಲ್ಲ ಎಂದು ಟ್ವೀಟ್ ಮೂಲಕ ಸ್ಪಷ್ಟನೆ ನೀಡಿದ್ದಾರೆ. " ಸುತ್ತಮುತ್ತ ಓಡಾಡುತ್ತಿರುವ ಸುದ್ದಿಗಳೆಲ್ಲವೂ ಬರೀ ಊಹಾಪೋಹ. ನಮ್ಮ ಮುಂದೆ ತುಂಬಾನೇ ಅದ್ಭುತವಾದ ಪ್ರಾಜೆಕ್ಟ್‌ಗಳಿವೆ. ಹೊಂಬಾಳೆ ಫಿಲ್ಮ್ಸ್ 'ಕೆಜಿಎಫ್ 3' ಸಿನಿಮಾವನ್ನು ಸದ್ಯಕ್ಕಂತೂ ಆರಂಭ ಮಾಡುತ್ತಿಲ್ಲ. ಈ ಬಗ್ಗೆ ಕೆಲಸ ಆರಂಭ ಮಾಡುತ್ತಿದ್ದಂತೆ ದೊಡ್ಡ ಮಟ್ಟದಲ್ಲಿ ನಿಮಗೆ ತಿಳಿಸುತ್ತೇವೆ." ಎಂದು ಕಾರ್ತಿಕ್ ಗೌಡ ಟ್ವೀಟ್ ಮಾಡಿದ್ದರು. ಹೀಗೆ ಟ್ವೀಟ್ ಮಾಡುವುದಕ್ಕೆ ಕಾರಣ ವಿಜಯ್ ಕಿರಂಗದೂರು ನೀಡಿದ ಹೇಳಿಕೆ.

ಅಕ್ಟೋಬರ್‌ನಿಂದ 'ಕೆಜಿಎಫ್ 3' ಎಂದಿದ್ದ ವಿಜಯ್

ಅಕ್ಟೋಬರ್‌ನಿಂದ 'ಕೆಜಿಎಫ್ 3' ಎಂದಿದ್ದ ವಿಜಯ್

ಎರಡು ದಿನಗಳ ಹಿಂದೆ 'ಕೆಜಿಎಫ್' ನಿರ್ಮಾಪಕ ವಿಜಯ್ ಕಿರಗಂದೂರು ದೈನಿಕ್ ಭಾಸ್ಕರ್‌ಗೆ 'ಕೆಜಿಎಫ್ 3' ಬಗ್ಗೆ ಹೇಳಿಕೆ ನೀಡಿದ್ದರು ಎನ್ನಲಾಗಿತ್ತು. ಈ ಹೇಳಿಕೆ ವೈರಲ್ ಕೂಡ ಆಗಿತ್ತು. " ನಿರ್ದೇಶಕ ಪ್ರಶಾಂತ್ ನೀಲ್ 'ಸಲಾರ್' ಸಿನಿಮಾದ ಶೂಟಿಂಗ್‌ನಲ್ಲಿ ಬ್ಯುಸಿಯಾಗಿದ್ದಾರೆ. ಶೇ. 30-35ರಷ್ಟು ಶೂಟಿಂಗ್ ಮುಗಿದಿದೆ. ಮುಂದಿನ ವಾರ ಇನ್ನೊಂದು ಹಂತದ ಶೂಟಿಂಗ್ ಆರಂಭ ಆಗಲಿದೆ. ಈ ಸಿನಿಮಾವನ್ನು ಅಕ್ಟೋಬರ್ ಹಾಗೂ ನವೆಂಬರ್‌ನಲ್ಲಿ ಮುಗಿಸುವ ಆಲೋಚನೆ ಹೊಂದಿದ್ದೇವೆ. ಆ ಬಳಿಕವೇ ಕೆಜಿಎಫ್ ಸಿನಿಮಾವನ್ನು ಆರಂಭ ಮಾಡುತ್ತೇವೆ. 2024ಕ್ಕೆ ಸಿನಿಮಾ ಬಿಡುಗಡೆ ಆಗುತ್ತೆ ಎಂದು ನಂಬಿದ್ದೇವೆ." ಎಂದು ಹೇಳಿದ್ದರು. ಆದ್ರೀಗ ಈ ಹೇಳಿಕೆಯನ್ನು ಕಾರ್ತಿಕ್ ಗೌಡ ಊಹಾಪೋಹ ಎನ್ನುತ್ತಿದ್ದಾರೆ.

ಯೂ ಟರ್ನ್ ಹೊಡೆಯಲು ಏನು ಕಾರಣ?

ಯೂ ಟರ್ನ್ ಹೊಡೆಯಲು ಏನು ಕಾರಣ?

ಅಷ್ಟಕ್ಕೂ ಎರಡೂ ದಿನಗಳ ಹಿಂದೆ ವಿಜಯ್ ಕಿರಗಂದೂರು ನೀಡಿದ ಹೇಳಿಕೆ ಬಗ್ಗೆ ಯೂ ಟರ್ನ್ ಹೊಡೆದಿದ್ದೇಕೆ? ಅನ್ನುವ ಪ್ರಶ್ನೆ ಎದುರಾಗಿದೆ. ಈ ಬಗ್ಗೆ ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆ ಶುರುವಾಗಿದೆ. ಮೂಲಗಳ ಪ್ರಕಾರ, ನರ್ತನ್ ನಿರ್ದೇಶಿಸುತ್ತಿರುವ ಸಿನಿಮಾಗೆ ಯಶ್ ಗ್ರೀನ್ ಸಿಗ್ನಲ್ ಕೊಟ್ಟಿದ್ದು, ಶೀಘ್ರವೇ ಸಿನಿಮಾ ಆರಂಭ ಆಗಲಿದೆ. ಹೀಗಾಗಿ ಅಕ್ಟೋಬರ್‌ನಲ್ಲಿ 'ಕೆಜಿಎಫ್ 3' ಆರಂಭ ಆಗುವುದು ಅನುಮಾನ. ಈ ಕಾರಣಕ್ಕೆ ಹೊಂಬಾಳೆ ಫಿಲ್ಮ್ಸ್ ಉಲ್ಟಾ ಹೊಡೆದಿದೆ ಎನ್ನಲಾಗುತ್ತಿದೆ.

ಪ್ರಶಾಂತ್ ನೀಲ್ ತೆಲುಗು ಸಿನಿಮಾದಲ್ಲಿ ಬ್ಯುಸಿ

ಪ್ರಶಾಂತ್ ನೀಲ್ ತೆಲುಗು ಸಿನಿಮಾದಲ್ಲಿ ಬ್ಯುಸಿ

ನಿರ್ದೇಶಕ ಪ್ರಶಾಂತ್ ನೀಲ್ ತೆಲುಗು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಪ್ರಭಾಸ್ ಸಿನಿಮಾ ಸಲಾರ್ ಮುಗಿಸಬೇಕಿದೆ. ಇದರ ಹಿಂದೆನೇ ಜೂ. ಎನ್‌ಟಿಆರ್ ಸಿನಿಮಾ ನಿರ್ದೇಶಿಸಬೇಕಿದೆ. ಹಾಗೇ ರಾಮ್‌ ಚರಣ್‌ಗೂ ಆಕ್ಷನ್ ಕಟ್ ಹೇಳಲಿದ್ದಾರೆ ಎನ್ನಲಾಗಿದೆ. ಹೀಗಾಗಿ ಪ್ರಶಾಂತ್ ನೀಲ್ ಸದ್ಯಕ್ಕೆ ಸಿಗುವುದು ಅನುಮಾನ. ಹಾಗಾಗಿ ಯೂಟರ್ನ್ ಹೊಡೆದಿರಬಹುದು ಎಂದು ಸ್ಯಾಂಡಲ್‌ವುಡ್‌ನಲ್ಲಿ ಚರ್ಚೆಯಾಗುತ್ತಿದೆ.

More from Filmibeat

English summary
Vijay Kiragandur and Karthik Gowda gave Different Statement About KGF Chapter 3, Know More.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X