'ಕೆಜಿಎಫ್' ಸಿನಿಮಾಗೂ ಕಮಲ್ ಹಾಸನ್ ಗೂ ಸಂಬಂಧ ಇದ್ಯಾ?

Recommended Video

KGF Kannada Movie : ಕೆಜಿಎಫ್ ಸಿನಿಮಾಗೂ ನಟ ಕಮಲ್ ಹಾಸನ್ ಗೂ ಸಂಬಂಧ ಇದೆಯಾ? | FILMIBEAT KANNADA

ರಾಕಿಂಗ್ ಸ್ಟಾರ್ ನಟನೆಯ 'ಕೆಜಿಎಫ್' ಸಿನಿಮಾ ಬಿಡುಗಡೆಗೆ ನಾಲ್ಕೆ ನಾಲ್ಕು ದಿನ ಬಾಕಿ ಇದೆ. ಈಗಾಗಲೇ ಮೊದಲ ದಿನದ ಟಿಕೆಟ್ ಬಹುತೇಕ ಸೋಲ್ಡ್ ಔಟ್ ಆಗಿದೆ. ಮೊದಲ ದಿನ ಮೊದಲ ಶೋ ಸಿನಿಮಾ ನೋಡಬೇಕು ಎಂದು ಅನೇಕರು ಸಾಹಸ ಪಡುತ್ತಿದ್ದಾರೆ.

ಒಂದು ಟಿಕೆಟ್ ವಿಷಯವಾದರೆ, ಇನ್ನೊಂದು ಕಡೆ ಸಿನಿಮಾದ ಪೈರಸಿ ಬಗ್ಗೆ ದೊಡ್ಡ ಸುದ್ದಿಯಾಗಿದೆ. ಆದರೆ, ಚಿತ್ರತಂಡ ನಮ್ಮ ಸಿನಿಮಾ ಲೀಕ್ ಆಗಿಲ್ಲ ಎಂದು ಸ್ಪಷ್ಟಪಡಿಸಿದೆ. ಇವೆಲ್ಲವುಗಳ ನಡುವೆ ಈಗ ಸಿನಿಮಾದ ಬಗ್ಗೆ ಮತ್ತೊಂದು ಗೊಂದಲ ಸೃಷ್ಟಿಯಾಗಿದ್ದು, ಇದಕ್ಕೂ ಉತ್ತರ ಸಿಕ್ಕಿದೆ.

ಚಿತ್ರದ ನಿರ್ಮಾಪಕ ವಿಜಯ್ ಕಿರಗಂದೂರು ಮಾಡಿರುವ ಟ್ವೀಟ್ ನೋಡಿ ಕೆಲವರು ನಟ ಕಮಲ್ ಹಾಸನ್ ಅವರಿಗೂ, ಈ ಸಿನಿಮಾಗೂ ಸಂಬಂಧ ಇದ್ಯಾ? ಎಂದು ಕೇಳುತ್ತಿದ್ದರು.ಆದರೆ, ಇಂತಹ ಗೊಂದಲಕ್ಕೆ ಈಗ ಸ್ಪಷ್ಟತೆ ಸಿಕ್ಕಿದೆ. ಅಂದಹಾಗೆ, ಆ ವಿವರ ಮುಂದಿದೆ ಓದಿ...

ವಿಜಯ್ ಕಿರಗಂದೂರು ಟ್ವೀಟ್

ನಿನ್ನೆ 'ಕೆಜಿಎಫ್' ಸಿನಿಮಾದ ನಿರ್ಮಾಪಕ ವಿಜಯ್ ಕಿರಗಂದೂರು ಒಂದು ಟ್ವೀಟ್ ಮಾಡಿದ್ದರು. ''ಕೆಜಿಎಫ್' ಸಿನಿಮಾದ ಹಿಂದೆ ನಾಲ್ಕು ವರ್ಷದ ಶ್ರಮ ಇದೆ. ಈ ಸಿನಿಮಾಗೆ ನಿಮ್ಮ ಪೂರ್ಣ ಪ್ರೋತ್ಸಾಹ ಬೇಕು. ಯಾರಾದರೂ, ಪೈರಸಿ ಮಾಡಿಸಿದರೆ ಗಮನಕ್ಕೆ ತನ್ನಿ'' ಎಂದು ಹೇಳಿದ್ದರು.

ಕಮಲ್ ಗಮನಕ್ಕೆ ತಂದ ನಿರ್ಮಾಪಕರು

ಕಮಲ್ ಗಮನಕ್ಕೆ ತಂದ ನಿರ್ಮಾಪಕರು

ನಿರ್ಮಾಪಕ ವಿಜಯ್ ಕಿರಗಂದೂರು ಮಾಡಿರುವ ಟ್ವೀಟ್ ನಲ್ಲಿ ಚಿತ್ರಕ್ಕೆ ಸಂಬಂಧಪಟ್ಟ ಕೆಲವರ ಟ್ವಿಟ್ಟರ್ ಖಾತೆಯ ಹ್ಯಾಂಡಲ್ ಹಾಕಲಾಗಿದೆ. ನಟ ಯಶ್, ನಾಯಕಿ ಶ್ರೀನಿಧಿ ಶೆಟ್ಟಿ, ತಮ್ಮ ಹೊಂಬಾಳೆ ಸಂಸ್ಥೆ, ನಿರ್ದೇಶಕ ಪ್ರಶಾಂತ್ ನೀಲ್, ಹಿಂದಿ, ತೆಲುಗು, ತಮಿಳು, ಮಲೆಯಾಳಂ ಭಾಷೆಯ ವಿತರಕರ ಸಂಸ್ಥೆಯ ಟ್ವಿಟ್ಟರ್ ಹ್ಯಾಂಡಲ್ ಗಳನ್ನು ಹಾಕಿದ್ದಾರೆ. ಇವುಗಳ ಜೊತೆಗೆ ಕಮಲ್ ಹಾಸನ್ ಖಾತೆ ಕೂಡ ಸೇರಿಕೊಂಡಿದೆ.

ಪೈರಸಿ ವಿರುದ್ಧ ಹೋರಾಟ ಮಾಡಿದ್ದ ನಟ

ಪೈರಸಿ ವಿರುದ್ಧ ಹೋರಾಟ ಮಾಡಿದ್ದ ನಟ

ನಟ ಕಮಲ್ ಹಾಸನ್ ಹಾಗೂ ಕನ್ನಡದ 'ಕೆಜಿಎಫ್' ಸಿನಿಮಾಗೆ ಯಾವುದೇ ಲಿಂಕ್ ಇಲ್ಲ. ಆದರೆ, ಕಮಲ್ ಹಾಸನ್ ತಮ್ಮ 'ವಿಶ್ವರೂಪಂ 2' ಸಿನಿಮಾ ಬಂದಾಗ ಪೈರಸಿ ಬಗ್ಗೆ ದೊಡ್ಡ ಹೋರಾಟ ಮಾಡಿದ್ದರು. ಈ ಕಾರಣ ವಿಜಯ್ ಕಿರಗಂದೂರು ಟ್ವೀಟ್ ಮಾಡಿ 'ಕೆಜಿಎಫ್' ಪೈರಸಿ ಆಗಬಾರದು ಎಂಬ ವಿಷಯವನ್ನ ಅವರ ಗಮನಕ್ಕೆ ತಂದಿದ್ದಾರೆ.

ಶ್ರಮವನ್ನು ಗೌರವಿಸಿ

ಶ್ರಮವನ್ನು ಗೌರವಿಸಿ

ಒಂದು ಸಿನಿಮಾದ ಹಿಂದೆ ಅದೆಷ್ಟೋ ಜನರ ಶ್ರಮ ಇರುತ್ತದೆ. ಅದರಲ್ಲಿಯೂ 'ಕೆಜಿಎಫ್' ರೀತಿಯ ದೊಡ್ಡ ಸಿನಿಮಾದ ಮಾಡುವುದು ಸಣ್ಣ ಮಾತಲ್ಲ. ಇಡೀ ಭಾರತದಲ್ಲಿ ಕನ್ನಡ ಚಿತ್ರವನ್ನ ಪ್ರತಿನಿಧಿಸುತ್ತಿರುವ ಈ ಸಿನಿಮಾವನ್ನು ಪೈರಸಿ ಮಾಡಬೇಡಿ. ಇಡೀ ತಂಡದ ಶ್ರಮಕ್ಕೆ ಗೌರವ ನೀಡಿ ಎನ್ನುವುದು ತಮ್ಮ ಮನವಿ.

More from Filmibeat

English summary
'KGF' movie producer 'Vijay Kiragandur' has bought piracy issue to actor Kamal Haasan notice.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X