'ಡಂಕಿ' ಎದುರು 'ಸಲಾರ್' ರಿಲೀಸ್ ಮಾಡುತ್ತಿರೋದೇಕೆ? ಕೊನೆಗೂ ಕಾರಣ ಬಿಚ್ಚಿಟ್ಟ ವಿಜಯ್ ಕಿರಗಂದೂರು!

ಹೊಂಬಾಳೆ ಫಿಲ್ಮ್ಸ್ ಹಾಗೂ ಶಾರುಖ್ ಖಾನ್ ನಡುವೆ ಏನಾದರೂ ಭಿನ್ನಾಭಿಪ್ರಾಯವಿದೆಯೇ? ಎಲ್ಲಾ ಸಿನಿಮಾ ಪ್ರೇಮಿಗಳಲ್ಲೂ ಕಾಡುತ್ತಿರುವ ಪ್ರಶ್ನೆ ಇದು. 'ಕೆಜಿಎಫ್ ಚಾಪ್ಟರ್ 1' ರಿಲೀಸ್ ಮಾಡುವಾಗಲೂ ಶಾರುಖ್ ಖಾನ್ ಸಿನಿಮಾ ಎದುರು ಬಿಡುಗಡೆ ಮಾಡಿದ್ದರು. ಈಗ ಕಿಂಗ್ ಖಾನ್ 'ಡಂಕಿ' ಎದುರು 'ಸಲಾರ್' ರಿಲೀಸ್ ಮಾಡುವುದಕ್ಕೆ ಹೊರಟಿದ್ದಾರೆ.

'ಸಲಾರ್' ರಿಲೀಸ್ ಡೇಟ್ ಅನೌನ್ಸ್ ಮಾಡಿದಾಗ, ಉದ್ದೇಶಪೂರ್ವಕವಾಗಿಯೇ 'ಡಂಕಿ' ತಮ್ಮ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ ಅನ್ನೋ ಮಾತು ಕೇಳಿ ಬಂದಿತ್ತು. ಎರಡನೇ ಬಾರಿ ಮುಖಾ-ಮುಖಿ ಆಗುತ್ತಿರುವ ಬಗ್ಗೆ ಒಂದಿಷ್ಟು ಊಹಾ ಪೋಹಗಳು ಎದ್ದಿದ್ದವು. ಕೊನೆಗೂ ಈ ಬಗ್ಗೆ ವಿನಯ್ ಕಿರಗಂದೂರು ಮೌನ ಮುರಿದಿದ್ದಾರೆ.

Vijay Kiragandur revealed that Salaar releasing opposite Dunki because of this reason

ಶಾರುಖ್ ಖಾನ್ ನಟಿಸುತ್ತಿರುವ 'ಡಂಕಿ' ಎದುರೇ ' ಸಲಾರ್ ಪಾರ್ಟ 1' ರಿಲೀಸ್ ಮಾಡುತ್ತಿರುವುದಕ್ಕೆ ಕಾರಣವೇನು? ಅನ್ನೋದನ್ನು ರಿವೀಲ್ ಮಾಡಿದ್ದಾರೆ. ಬಾಲಿವುಡ್ ಹಂಗಾಮಕ್ಕೆ ನೀಡಿದ ಸಂದರ್ಶನದಲ್ಲಿ ಈ ಬಗ್ಗೆ ಚರ್ಚೆ ಮಾಡಿದ್ದಾರೆ. ಜೊತೆಗೆ 'ಸಲಾರ್' ರಿಲೀಸ್ ಪೋಸ್ಟ್‌ಪೋನ್ ಆಗಿದ್ದೇಕೆ? ಡಿಸೆಂಬರ್ 22ಕ್ಕೆ ರಿಲೀಸ್ ಮಾಡಲು ಮುಂದಾಗಿದ್ದೇಕೆ? ಅನ್ನೋದನ್ನು ರಿವೀಲ್ ಮಾಡಿದ್ದಾರೆ.

'ಡಂಕಿ' ಎದುರು 'ಸಲಾರ್' ಏಕೆ?

'ಡಂಕಿ' ಎದುರು 'ಸಲಾರ್' ಸಿನಿಮಾವನ್ನು ರಿಲೀಸ್ ಮಾಡುವುದಕ್ಕೆ ಮುಂದಾಗಿದ್ದು ಯಾಕೆ? ಅನ್ನೋ ಬಗ್ಗೆ ನಿರ್ಮಾಪಕ ವಿಜಯ್ ಕಿರಗಂದೂರು ಮಾಹಿತಿ ಹಂಚಿಕೊಂಡಿದ್ದಾರೆ. ಶಾರುಖ್ ಖಾನ್ ಎದುರೇ 'ಸಲಾರ್' ರಿಲೀಸ್ ಮಾಡಬೇಕು ಅನ್ನೋ ಹಠವೇನು ಇರಲಿಲ್ಲ. ಡಿಸೆಂಬರ್ 22ಕ್ಕೆ ಸಿನಿಮಾ ರಿಲೀಸ್ ಮಾಡುವುದಕ್ಕೆ ಕಾರಣ ಬೇರೆನೇ ಇದೆ ಎಂದು ಹೇಳಿದ್ದಾರೆ.

Vijay Kiragandur revealed that Salaar releasing opposite Dunki because of this reason

ವಿಜಯ್ ಕಿರಗಂದೂರು ಜ್ಯೋತಿಷ್ಯವನ್ನು ಹೆಚ್ಚಾಗಿ ನಂಬುತ್ತಾರೆ. ತಮ್ಮ ನಿರ್ಮಾಣ ಸಂಸ್ಥೆಯ ಸಿನಿಮಾದ ಟೀಸರ್, ಟ್ರೈಲರ್ ಏನೇ ಇದ್ದರೂ, ಜ್ಯೋತಿಷ್ಯದ ಆಧಾರದ ಮೇಲೆ ರಿಲೀಸ್ ಮಾಡುವುದು ವಾಡಿಕೆ. ಅಂತೆಯೇ ಈ ಸಿನಿಮಾವನ್ನೂ ಅದೇ ಆಧಾರದ ಮೇಲೆ ರಿಲೀಸ್ ಮಾಡಿದ್ದಾಗಿ ಹೇಳಿಕೊಂಡಿದ್ದಾರೆ. "ನಮ್ಮ ನಂಬಿಕೆಯ ಆಧಾರದ ಮೇಲೆ ಸಿನಿಮಾದ ರಿಲೀಸ್ ಡೇಟ್ ಅನ್ನು ಅನೌನ್ಸ್ ಮಾಡಲಾಗಿದೆ. ನಾನು ನಮ್ಮ ನಂಬಿಕೆಯ ಆಧಾರದ ಮೇಲೆ ಸಿನಿಮಾ ರಿಲೀಸ್ ಪ್ಲ್ಯಾನ್ ಮಾಡುತ್ತೇವೆ. 10-12 ವರ್ಷಗಳಿಂದ ಇದನ್ನೇ ಮಾಡಿಕೊಂಡು ಬಂದಿದ್ದೇವೆ. ಮುಂದೇನೂ ಇದನ್ನೇ ಮಾಡುತ್ತೇವೆ." ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.

ವಿವಾದ ನಮಗೆ ಇಷ್ಟವಿಲ್ಲ

ಇದೇ ಸಂದರ್ಶನದಲ್ಲಿ ನಮಗೆ ವಿವಾದ ಇಷ್ಟವಿಲ್ಲ ಎಂದೂ ಹೇಳಿದ್ದಾರೆ. ವಿಜಯ್ ಕಿರಗಂದೂರು ಈಗಾಗಲೇ ಈ ಸಂಬಂಧ ವಿತರಕರು ಹಾಗೂ ಪ್ರದರ್ಶಕರ ನಡುವೆ ಮಾತುಕತೆಯನ್ನು ನಡೆಸಿದ್ದಾಗಿ ಹೇಳಿಕೊಂಡಿದ್ದಾರೆ. ಸೋಲೊ ರಿಲೀಸ್ ಆದರೆ ಏನಾಗುತ್ತೆ? ಅನ್ನೋ ತಮ್ಮ ಲೆಕ್ಕಾಚಾರವನ್ನೂ ತೆರೆದಿಟ್ಟಿದ್ದಾರೆ.

"ಸಲಾರ್ ಮತ್ತು ಡಂಕಿಗೆ ಸ್ಕ್ರೀನ್ ವಿಚಾರಕ್ಕೆ ಸಂಬಂಧಿಸಿದಂತೆ ಸದ್ಯ ಪರಿಸ್ಥಿತಿಯಲ್ಲಿ 50-50 ಸಿಗುವ ಸಾಧ್ಯತೆಯಿದೆ. ಇದರಲ್ಲಿ ಶೇ. 90 ರಿಂದ 100ರಷ್ಟು ಸಾಧನೆ ಮಾಡಬಹುದು. ಇದು ಎರಡೂ ಸಿನಿಮಾಗಳಿಗೂ ಉತ್ತಮ. ನಮಗೆ ಹೆಚ್ಚು ಸ್ಕ್ರೀನ್‌ಗಳು ಸಿಕ್ಕರೂ ಶೇ. 60 ರಿಂದ 70ರಷ್ಟು ಥಿಯೇಟರ್‌ಗಳು ತುಂಬುತ್ತವೆ" ಎಂದು ಸಲಾರ್ ರಿಲೀಸ್ ವಿಚಾರಕ್ಕೆ ತಮ್ಮ ಲೆಕ್ಕಾಚಾರವನ್ನು ಹೊರ ಹಾಕಿದ್ದಾರೆ.

ಡಿಸೆಂಬರ್ 22ಕ್ಕೆ ಯಾಕೆ?

ವಿಎಫ್‌ಎಕ್ಸ್ ಹಾಗೂ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ವಿಳಂಬ ಆಗಿದ್ದರಿಂದ ಸಿನಿಮಾ ರಿಲೀಸ್ ಅನ್ನು ಮುಂದೂಡಲಾಯ್ತು ಎಂದು ವಿಜಯ್ ಕಿರಗಂದೂರು ಹೇಳಿದ್ದಾರೆ. ಇದರೊಂದಿಗೆ ಸೆಪ್ಟೆಂಬರ್‌ನಿಂದ ಮಾರ್ಚ್ (2024)ವರೆಗೂ ಸೂಕ್ತ ರಿಲೀಸ್ ಡೇಟ್ ಅನ್ನು ಹುಡುಕಾಡಿದ್ದರು. ಸಂಕ್ರಾಂತಿಯಲ್ಲಿ ತೆಲುಗು, ತಮಿಳು ಸಿನಿಮಾಗಳ ಹೆಚ್ಚು ರಿಲೀಸ್ ಆಗುವುದರಿಂದ ಆ ಡೇಟ್ ಅನ್ನು ಕೈ ಬಿಡಲಾಗಿತ್ತು ಎಂದಿದ್ದಾರೆ.

ಡಿಸೆಂಬರ್ 22ಕ್ಕೆ ಯಾಕೆ ಅಂದರೆ, ಕ್ರಿಸ್‌ಮಸ್ ಹೊಸ ವರ್ಷ ಅಂತ ಹೆಚ್ಚು ಕಡಿಮೆ 10 ದಿನ ರಜೆ ಸಿಗುತ್ತೆ. ಈ ಸಮಯದಲ್ಲಿ ಪ್ರೇಕ್ಷಕರು ಥಿಯೇಟರ್‌ಗೆ ಬಂದು 'ಸಲಾರ್' ಸಿನಿಮಾವನ್ನು ನೋಡುತ್ತಾರೆ ಅಂತ ಅನ್ನೋ ಲೆಕ್ಕಾಚಾರ ಹಾಕಿ ಈ 'ಸಲಾರ್' ರಿಲೀಸ್‌ಗೆ ಮುಂದಾಗಿರೋದಾಗಿ ಸಂದರ್ಶನದಲ್ಲಿ ರಿವೀಲ್ ಮಾಡಿದ್ದಾರೆ.

More from Filmibeat

English summary
Vijay Kiragandur finaly opens up about releasing Salaar opposite Shah Rukh Khan's Dunki.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X