ತಮಿಳುನಾಡಿನಲ್ಲೂ ವಿಜಯ್ ರಾಘವೇಂದ್ರ ಸಿನಿಮಾ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ರಿಲೀಸ್: ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಸಾಥ್
ವಿಜಯ ರಾಘವೇಂದ್ರ ನಟಿಸಿದ 'ಸೀತಾರಾಮ್ ಬಿನೋಯ್' ಕನ್ನಡಿಗರಿಗೆ ಥ್ರಿಲ್ ಕೊಟ್ಟ ಸಿನಿಮಾ. ಚಿತ್ರದ ಕಥೆಯಿಂದ ಹಿಡಿದು, ನಿರ್ದೇಶನ, ನಟನೆ, ಪ್ರೆಸೆಂಟ್ ಮಾಡಿದ ರೀತಿ ಎಲ್ಲವೂ ಚೆನ್ನಾಗಿತ್ತು. ವಿಜಯ್ ರಾಘವೇಂದ್ರ ವೃತ್ತಿ ಬದುಕಿಗೆ ಹೊಸ ಇಮೇಜ್ ಹಾಗೂ ತಿರುವು ಕೊಟ್ಟ ಸಿನಿಮಾ ಆಯ್ತು. ಇಲ್ಲಿಂದ ವಿಜಯ್ ರಾಘವೇಂದ್ರ ಇಂತಹ ಸಸ್ಪೆನ್ಸ್-ಥ್ರಿಲ್ಲಿಂಗ್ ಸಿನಿಮಾಗಳಲ್ಲಿ ಹೆಚ್ಚಾಗಿ ನಟಿಸಿ ಗೆದ್ದಿದ್ದಾರೆ.
'ಸೀತಾರಾಮ್ ಬಿನೋಯ್' ಕನ್ನಡ ಚಿತ್ರರಂಗಕ್ಕೂ ಟ್ರೆಂಡ್ ಸೆಟ್ಟರ್ ಸಿನಿಮಾ ಆಯ್ತು. ಅದರಲ್ಲೂ ಓಟಿಟಿಯಲ್ಲಿ ಈ ಸಿನಿಮಾವನ್ನು ಹೆಚ್ಚು ಮಂದಿ ವೀಕ್ಷಣೆ ಮಾಡಿದ್ದರು. ಹೀಗಾಗಿ ಓಟಿಟಿಯಲ್ಲಿ ಹೆಚ್ಚು ಸಕ್ಸಸ್ ಕಂಡ ಕನ್ನಡ ಸಿನಿಮಾಗಳ ಪೈಕಿ ಈ ಸಿನಿಮಾ ಕೂಡ ಮುಂಚೂಣಿಯಲ್ಲಿ ಇದೆ. ಈಗ ಇದೇ ಸಿನಿಮಾದ ಮತ್ತೊಂದು ಚಾಪ್ಟರ್ ರಿಲೀಸ್ ಆಗುತ್ತಿದೆ. ಅದುವೇ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್'.

'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ನಾಳೆ (ಫೆಬ್ರವರಿ 20) ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಬೆಂಬಲವಾಗಿ ಪವನ್ ಒಡೆಯರ್ ನಿಂತಿದ್ದಾರೆ. ಈ ಗ್ಯಾಪ್‌ನಲ್ಲಿಯೇ ತಮಿಳುನಾಡಿನಲ್ಲಿಯೂ ಈ ಸಿನಿಮಾ ರಿಲೀಸ್ ಆಗುತ್ತಿದೆ. ತಮಿಳಿನಾಡಿನ ಪ್ರತಿಷ್ಠಿತ ಸಂಸ್ಥೆಯೊಂದು ಈ ಸಿನಿಮಾವನ್ನು ತಮಿಳುನಾಡಿನಲ್ಲಿ ರಿಲೀಸ್ ಮಾಡುವುದಕ್ಕೆ ಮುಂದೆ ಬಂದಿದೆ.
ತಮಿಳುನಾಡಿನಲ್ಲಿ 'ಧೀರನ್', 'ಅರುವಿ', 'ಎನ್‌ಜಿಕೆ', 'ರಾಕ್ಷಸಿ', 'ಖೈದಿ', 'ಭೋಲಾ'ದಂತಹ ಯಶಸ್ವಿ ಸಿನಿಮಾಗಳನ್ನು ವಿತರಿಸಿರುವ ಡ್ರೀಮ್ ವಾರಿಯರ್ ಪಿಕ್ಚರ್ಸ್ ಈ ಸಿನಿಮಾ ಬಿಡುಗಡೆಗೆ ಮುಂದೆ ಬಂದಿದೆ. ದಕ್ಷಿಣ ಭಾರತೀಯ ಚಿತ್ರರಂಗದ ಪ್ರತಿಷ್ಠಿತ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಗಳಲ್ಲಿ ಇದೂ ಒಂದು. ಇದೀಗ ನಿರ್ದೇಶಕ ಕಂ ನಿರ್ಮಾಪಕ ಪವನ್ ಒಡೆಯರ್ ಜೊತೆ ತಮಿಳಿನ ಈ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ ಪಿಕ್ಚರ್ಸ್ ಕೈ ಜೋಡಿಸಿದ್ದಾರೆ.
ಪವನ್ ಒಡೆಯರ್ ಇದೇ ಮೊದಲ ಬಾರಿಗೆ ಸಿನಿಮಾವನ್ನು ಪ್ರಸ್ತುತಪಡಿಸುತ್ತಿದ್ದಾರೆ. 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಹೀಗಾಗಿ ಕನ್ನಡದ ಜೊತೆಗೆ ತಮಿಳಿಗೂ ಎಂಟ್ರಿ ಕೊಡುವುದಕ್ಕೆ ಸಾಧ್ಯವಾಗಿದೆ. ಪವನ್ ಒಡೆಯರ್ ಜೊತೆ ಕೈ ಜೋಡಿಸಿರುವ ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಸಿನಿಮಾದ ಕಂಟೆಂಟ್, ಕ್ವಾಲಿಟಿ, ಮೇಕಿಂಗ್, ಕಥೆ ಇಷ್ಟ ಪಟ್ಟಿದೆ ಎನ್ನಲಾಗಿದೆ. ಹೀಗಾಗಿ ತಮಿಳಿನಲ್ಲಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಬಿಡುಗಡೆಗೆ ಮುಂದೆ ಬಂದಿದೆ. ಇದು ಇಡೀ ಚಿತ್ರತಂಡಕ್ಕೆ ಡಬಲ್ ಖುಷಿಗೆ ಕಾರಣವಾಗಿದೆ.
ಈಗಾಗಲೇ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾ ಹಲವೆಡೆ ಪ್ರೀಮಿಯರ್ ಕಂಡಿದೆ. ಎಲ್ಲೆಲ್ಲಿ ಪ್ರೀಮಿಯರ್ ಕಂಡಿದೆಯೋ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹೀಗಾಗಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ತಮಿಳುನಾಡಿನಲ್ಲೂ ರಿಲೀಸ್ ಆಗುತ್ತಿದೆ. ಬ್ಲಾಕ್ ಬಸ್ಟರ್ ಸಿನಿಮಾ 'ಕೈದಿ', 'ಕುರುಪ್', 'ಕೆಜಿಎಫ್ 2', 'ಕಾಂತಾರ' ಸಿನಿಮಾಗಳನ್ನು ಇದೇ ಡ್ರೀಮ್ ವಾರಿಯರ್ ಪಿಕ್ಚರ್ ರಿಲೀಸ್ ಮಾಡಿತ್ತು. ಹೀಗಾಗಿ 'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ತಮಿಳುನಾಡಿನಲ್ಲೂ ಫೆಬ್ರವರಿ 20 ರಂದೇ ರಿಲೀಸ್ ಆಗುತ್ತಿರೋದು ವಿಶೇಷ.

ಡ್ರೀಮ್ ವಾರಿಯರ್ಸ್ ಪಿಕ್ಚರ್ಸ್ ಬೆಂಬಲವಾಗಿ ನಿಂತಿರುವುದಕ್ಕೆ ಪವನ್ ಒಡೆಯರ್ ಪ್ರತಿಕ್ರಿಯಿಸಿದ್ದಾರೆ "ಪ್ರತಿಷ್ಟಿತ ನಿರ್ಮಾಣ ಸಂಸ್ಥೆ ಡ್ರೀಮ್ ವಾರಿಯರ್ಸ್ ಸೀತಾರಾಮ್ ಚಿತ್ರವನ್ನು ತಮಿಳಿನಲ್ಲಿ ಬಿಡುಗಡೆ ಮಾಡುತ್ತಿರುವುದು ಖುಷಿ. ಅವರ ಜೊತೆ ನಾವು ಕೈ ಜೋಡಿಸಿರುವುದು ಸಂತಸ. ಈಗಾಗಲೇ ಪ್ರೀಮಿಯರ್ ಶೋಗೆ ಪ್ರೇಕ್ಷಕರಿಂದ ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿದೆ. ತಮಿಳು ಸಿನಿಮಾ ಪ್ರೇಮಿಗಳಿಗೂ ಈ ಕಥೆ ಇಷ್ಟವಾಗಲಿದೆ ಎಂದು ನಂಬಿದ್ದೇವೆ" ಎಂದು ಹೇಳಿದ್ದಾರೆ.
'ಸೆಕೆಂಡ್ ಕೇಸ್ ಆಫ್ ಸೀತಾರಾಮ್' ಸಿನಿಮಾದಲ್ಲಿ ವಿಜಯ್ ರಾಘವೇಂದ್ರ, ಗೋಪಾಲ್ ಕೃಷ್ಣ ದೇಶಪಾಂಡೆ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ದೇವಿ ಪ್ರಸಾದ್ ಶೆಟ್ಟಿ ಸಿನಿಮಾವನ್ನ ನಿರ್ದೇಶನ ಮಾಡಿದ್ದು, 'ಫ್ಲೈಯಿಂಗ್ ಎಲಿಫಂಟ್ ಸ್ಟೋರಿ ಟೆಲ್ಲರ್ಸ್' ಸಿನಿಮಾ ಮೂಲಕ ದೇವಿ ಪ್ರಸಾದ್ ಶೆಟ್ಟಿ ಹಾಗೂ ಸಾತ್ವಿಕ್ ಹೆಬ್ಬಾರ್ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.


Click it and Unblock the Notifications











