Spandana Death: ಗೃಹಿಣಿ ಅಷ್ಟೇ ಅಲ್ಲ.. ಸಿನಿಮಾದಲ್ಲೂ ನಟಿಸಿದ್ದರು.. ನಿರ್ಮಾಪಕಿಯೂ ಹೌದು ಸ್ಪಂದನಾ!

ಸ್ಯಾಂಡಲ್‌ವುಡ್‌ಗೆ ಮತ್ತೊಂದು ಅಘಾತವಾಗಿದೆ. ಕನ್ನಡ ಚಿತ್ರರಂಗದ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಥೈಲ್ಯಾಂಡ್ ಪ್ರವಾಸಕ್ಕೆ ತೆರಳಿದಿದ್ದಾಗ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಈ ವಿಷಯ ಸಿನಿಮಾ ಮಂದಿಗೆ ನಂಬುವುದಕ್ಕೆ ಆಗುತ್ತಿಲ್ಲ.

ಸ್ಪಂದನಾಗೆ ಮದುವೆಗೂ ಮುನ್ನ ಸಿನಿಮಾ ನಂಟು ಇರಲಿಲ್ಲ. ವಿಜಯ್ ರಾಘವೇಂದ್ರ ಅವರನ್ನು ಪ್ರೀತಿಸಿ ವಿವಾಹವಾದ ಬಳಿಕ ಸಿನಿಮಾರಂಗದಲ್ಲಿ ಆಗು ಹೋಗುಗಳ ಬಗ್ಗೆ ಗಮನವಿಡುತ್ತಿದ್ದರು. ವಿಜಯ್ ರಾಘವೇಂದ್ರ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾಗ ಸ್ಪಂದನಾ ಕೂಡ ಗಮನಕೊಡುತ್ತಿದ್ದರು. ಅಷ್ಟು ಬಿಟ್ಟರೆ ಸಿನಿಮಾ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದೇ ಕಡಿಮೆ.

Vijay Raghavendra-Spandana Vijay Raghavendra

ವಿಜಯ್ ರಾಘವೇಂದ್ರ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸ್ಪಂದನಾ ಗೃಹಿಣಿಯಾಗಿ ತಮ್ಮ ಜವಾಬ್ದಾರಿಯನ್ನು ನಿಭಾಯಿಸಿದ್ದರು. ವಿಜಯ್ ರಾಘವೇಂದ್ರ ಕರಿಯರ್‌ಗೆ ಬೆನ್ನೆಲುಭಾಗಿ ನಿಂತಿದ್ದರು. ಆದರೆ, ಸಿನಿಮಾ ನಿರ್ಮಾಣ, ನಿರ್ದೇಶನ, ನಟನೆ ಕಡೆಗೆ ಬಂದಿದ್ದೇ ಇಲ್ಲ. ಆದರೆ, 2016ರಲ್ಲಿ ಪ್ರಥಮ ಬಾರಿಗೆ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು ಅದುವೇ 'ಅಪೂರ್ವ'.

ಕ್ರೇಜಿಸ್ಟಾರ್ ರವಿಚಂದ್ರನ್ ನಿರ್ದೇಶಿಸಿ, ನಟಿಸಿದ್ದ ವಿಶಿಷ್ಠ ಸಿನಿಮಾ 'ಅಪೂರ್ವ'. ಈ ಸಿನಿಮಾದಲ್ಲಿ ಸ್ಪಂದನಾ ಆಗಿಯೇ ವಿಜಯ್ ರಾಘವೇಂದ್ರ ಪತ್ನಿ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸಾಫೀಸ್‌ನಲ್ಲಿ ದೊಡ್ಡದಾಗಿ ಸದ್ದು ಮಾಡಿರಲಿಲ್ಲ. ಆ ಬಳಿಕ ಮತ್ತೆ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ. ಮನಸ್ಸು ಮಾಡಿದ್ದರೆ, ವಿಜಯ್ ರಾಘವೇಂದ್ರ ನಟಿಸುತ್ತಿದ್ದ ಸಿನಿಮಾಗಳಲ್ಲಿ ಚಿಕ್ಕ ಪಾತ್ರದಲ್ಲಿ ಕಾಣಿಸಿಕೊಳ್ಳಬಹುದಿತ್ತು.

Vijay Raghavendra-Spandana Vijay Raghavendra

ವಿಜಯ್ ರಾಘವೇಂದ್ರ ನಿರ್ದೇಶನಕ್ಕೆ ಇಳಿಯಲು ಮನಸ್ಸು ಮಾಡಿದ್ದರು. ಆ ಸಿನಿಮಾವೇ 'ಕಿಸ್ಮತ್'. ಈ ಸಿನಿಮಾವನ್ನು ವಿಜಯ್ ರಾಘವೇಂದ್ರ ನಿರ್ದೇಶನ ಮಾಡಿದ್ದರೆ, ಅತ್ತ ಸ್ಪಂದನಾ ವಿಜಯ್ ರಾಘವೇಂದ್ರ ಸಿನಿಮಾವನ್ನು ನಿರ್ಮಾಣ ಮಾಡಿದ್ದರು. ಆದರೆ, ಈ ಸಿನಿಮಾ ಕೂಡ ಹೇಳಿಕೊಳ್ಳುವಷ್ಟು ಸದ್ದು ಮಾಡಲಿಲ್ಲ.

ಸ್ಪಂದನಾ ಸಿನಿಮಾಗಿಂತ, ತನ್ನ ವೃತ್ತಿ ಬದುಕಿಗಿಂತ ಕೌಟುಂಬಿಕ ಜೀವನದ ಬಗ್ಗೆ ಹೆಚ್ಚು ಗಮನ ಹರಿಸಿದ್ದರು. ಪತಿ ವಿಜಯ್ ರಾಘವೇಂದ್ರ ಹಾಗೂ ಶೌರ್ಯ ವಿಜಯ್ ರಾಘವೇಂದ್ರ ಅವರ ಜವಾಬ್ದಾರಿ ಇವರ ಮೇಲಿತ್ತು. ಈಗ ದಿಢೀರನೇ ಹೃದಯಾಘಾತದಿಂದ ಸ್ಪಂದನಾ ಇಹಲೋಕ ತ್ಯಜಿಸಿದ್ದಾರೆ. ಸದ್ಯ ಮರಣೋತ್ತರ ಪರೀಕ್ಷೆ ನಡೆಯುತ್ತಿದ್ದು, ಇಂದ ಸಂಜೆ ಅಥವಾ ನಾಳೆ (ಆಗಸ್ಟ್ 8) ಬೆಳಗ್ಗೆ ಮೃತದೇಹ ಬೆಂಗಳೂರಿಗೆ ಬರುವ ಸಾಧ್ಯತೆಯಿದೆ.

More from Filmibeat

English summary
Vijay Raghavendra wife Spandana death and her filmography
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X