Beast - KGF 2 In Sri Lanka: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು: 'ಬೀಸ್ಟ್', 'ಕೆಜಿಎಫ್ 2' ಗತಿಯೇನು?
ದ್ವೀಪ ರಾಷ್ಟ್ರ ಶ್ರೀಲಂಕಾ ಆರ್ಥಿಕ ಮುಗ್ಗಟ್ಟು ಎದುರಿಸುತ್ತಿದೆ. ಜನರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆ ಗಗನಕ್ಕೆ ಏರಿದೆ. ಇಂತಹ ಸ್ಥಿತಿಯಲ್ಲಿ ಜನರು ಬೀದಿಗೆ ಬಂದು ಸರ್ಕಾರದ ವಿರುದ್ಧ ಹೋರಾಟಕ್ಕೆ ಇಳಿದಿದ್ದಾರೆ. ಈ ಸಂಬಂಧ ಶ್ರೀಲಂಕಾದಲ್ಲಿ ಕೋಲಾಹಲ ಎದ್ದಿದೆ.
ಶ್ರೀಲಂಕಾ ಬೇರೊಂದು ದೇಶದ ಮುಂದೆ ಸಹಾಯ ಬೇಡುತ್ತಿದೆ. ಜನರು ಜೀವನ ನಡೆಸಲು ಸಾಧ್ಯವಾಗದೆ ಕಂಗಾಲಾಗಿದ್ದಾರೆ. ಇನ್ನೊಂದು ಕಡೆ ಬೀದಿಗಿಳಿದು ಶ್ರೀಲಂಕಾದ ಅಧ್ಯಕ್ಷ ರಾಜಪಕ್ಸ ಸರ್ಕಾರದ ವಿರುದ್ಧ ಕೆಂಡಕಾರುತ್ತಿದ್ದಾರೆ. ಪ್ರತಿಭಟನಾಕಾರರನ್ನು ನಿಯಂತ್ರಿಸಲು ಲಂಕಾ ವಿಶೇಷ ಪಡೆಗಳು ಕೂಡ ಅಖಾಡಕ್ಕೆ ಇಳಿದಿವೆ. ರಾಜಧಾನಿ ಕೊಲಂಬೋದಲ್ಲಿ ಈ ಘಟನೆ ವಿವಾದ ಸೃಷ್ಟಿಸಿದೆ.
ಶ್ರೀಲಂಕಾ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇಂತಹ ಸಂದರ್ಭದಲ್ಲಿ ಸಿನಿಮಾ ಬಗ್ಗೆ ಮಾತಾಡುವುದಕ್ಕೆ ಆಗುತ್ತಾ? ಸಿನಿಮಾ ನೋಡಿ ಅಂತ ಹೇಳುವುದಕ್ಕೆ ಸಾಧ್ಯವೇ? ಆದರೂ, ಭಾರತದ ಎರಡು ಸಿನಿಮಾಗಳು ಶ್ರೀಲಂಕಾದಲ್ಲಿ ಬಿಡುಗಡೆಯಾಗಲಿವೆ. ದಳಪತಿ ವಿಜಯ್ ಸಿನಿಮಾ 'ಬೀಸ್ಟ್' ಹಾಗೂ ಯಶ್ ಚಿತ್ರ 'ಕೆಜಿಎಫ್ 2'. ಹಾಗಿದ್ದರೆ, ಈ ಎರಡೂ ಸಿನಿಮಾಗಳಿಗೆ ಅಲ್ಲಿನ ಪ್ರೇಕ್ಷಕರ ರೆಸ್ಪಾನ್ಸ್ ಹೇಗಿದೆ? ಅನ್ನುವುದನ್ನು ತಿಳಿಯಲು ಮುಂದೆ ಓದಿ.
Recommended Video


ಭಾರತದ ಎರಡು ಸಿನಿಮಾ ಕ್ರೇಜ್ ಹೇಗಿದೆ?
ಯಶ್ ಅಭಿನಯದ 'ಕೆಜಿಎಫ್ 2' ಸಿನಿಮಾ ಇದೇ ಮೊದಲ ಬಾರಿಗೆ ವಿದೇಶದ ಹಲವು ಭಾಗಗಳಲ್ಲಿ ಬಿಡುಗಡೆಯಾಗುತ್ತಿದೆ. ಕನ್ನಡ ಸಿನಿಮಾ ಇದೂವರೆಗೂ ಬಿಡುಗಡೆಯಾಗದ ಕೆಲವಡೆ ರಿಲೀಸ್ ಆಗುತ್ತಿದೆ. ಅದರಂತೆ ಶ್ರೀಲಂಕಾದಲ್ಲೂ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗಲಿದೆ. ಹಾಗೆ ದಳಪತಿ ವಿಜಯ್ ಅಭಿನಯದ 'ಬೀಸ್ಟ್' ಸಿನಿಮಾ ಕೂಡ ರಿಲೀಸ್ ಆಗುತ್ತಿದ್ದು, ಈ ಎರಡೂ ಸಿನಿಮಾವನ್ನು ಶ್ರೀ ಲಂಕಾ ಪ್ರೇಕ್ಷಕರು ಹೇಗೆ ರಿಸೀವ್ ಮಾಡಿಕೊಳ್ಳುಬಹುದೆಂಬ ಕುತೂಹಲವಿದೆ.

ಶ್ರೀಲಂಕಾದಲ್ಲೂ 'ಕೆಜಿಎಫ್ 2' ರಿಲೀಸ್
ಯಶ್ ಸಿನಿಮಾ 'ಕೆಜಿಎಫ್ 2' ಶ್ರೀಲಂಕಾದಲ್ಲೂ ಬಿಡುಗಡೆಯಾಗುತ್ತಿದೆ. ಕೊಲಂಬೊದಲ್ಲಿ 'ಕೆಜಿಎಫ್ 2' ತಮಿಳು ವರ್ಷನ್ ರಿಲೀಸ್ ಆಗುತ್ತಿದೆ. ಕೊಲಂಬೊದ ಲಿಬರ್ಲಿ ಬೇ ಸಿನಿಮಾಸ್‌ನಲ್ಲಿ ಈಗಾಗಲೇ ಮೊದಲ ಶೋ ಬಿಟ್ಟು ಉಳಿದ ಐದು ಶೋಗಳು ವೇಗವಾಗಿ ಬುಕ್ ಆಗುತ್ತಿದೆ. ಇನ್ನು ಉಳಿದಂತೆ ನಾಲ್ಕು ಥಿಯೇಟರ್‌ಗಳಲ್ಲಿ 'ಕೆಜಿಎಫ್ 2' ಸಿನಿಮಾ ರಿಲೀಸ್ ಆಗುತ್ತಿದೆ. ಅಲ್ಲೂ ಕೂಡ ಈ ಸಿನಿಮಾಗೆ ನಿಧಾನವಾಗಿ ಜನರು ಒಲವು ತೋರುತ್ತಿದ್ದಾರೆ.
'ಬೀಸ್ಟ್'ಗೆ ಶ್ರೀಲಂಕಾದಲ್ಲಿ ಹೇಗಿದೆ ರೆಸ್ಪಾನ್ಸ್?
ದಳಪತಿ ವಿಜಯ್ ಅಭಿನಯದ ಸಿನಿಮಾ 'ಬೀಸ್ಟ್'ಗೆ ಶ್ರೀಲಂಕಾದಲ್ಲಿ ಸಖತ್ ರೆಸ್ಪಾನ್ಸ್ ಸಿಕ್ಕಿದೆ. 'ಬೀಸ್ಟ್' ಟ್ರೈಲರ್ ರಿಲೀಸ್ ಆಗುತ್ತಿದ್ದಂತೆ ಶ್ರೀಲಂಕಾದಲ್ಲಿ ಸಿನಿಮಾ ಬಗ್ಗೆ ಕ್ರೇಜ್ ಹೆಚ್ಚಾಗಿದೆ. ಆರ್ಥಿಕ ಮುಗ್ಗಟ್ಟು ಇದ್ದರೂ, ಶ್ರೀಲಂಕಾದ ಪ್ರೇಕ್ಷಕರು ತಮಿಳು ಸಿನಿಮಾವನ್ನು ನೋಡಲು ತುದಿಗಾಲಲ್ಲಿ ನಿಂತಿದ್ದಾರೆ. ಈಗಾಗಲೇ ಜನರು ರಿಸರ್ವೇಷನ್ ಮಾಡುತ್ತಿದ್ದು, 'ಬೀಸ್ಟ್' ತಂಡಕ್ಕೆ ಸರ್ಪ್ರೈಸ್ ಸಿಕ್ಕಂತಾಗಿದೆ.

ತಮಿಳುನಾಡಿನಲ್ಲೂ 'ಬೀಸ್ಟ್' ಬುಕಿಂಗ್
ತಮಿಳುನಾಡಿನಲ್ಲೂ 'ಬೀಸ್ಟ್' ಸಿನಿಮಾ ಬುಕಿಂಗ್ ಓಪನ್ ಮಾಡಲಾಗಿದೆ. ಟಿಕೆಟ್ ಬುಕಿಂಗ್ ಓಪನ್ ಆದ ಕೆಲವೇ ಗಂಟೆಗಳಲ್ಲಿ ಎಲ್ಲೆಡೆ ಫುಲ್ ಆಗಿದೆ. ತಮಿಳು ನಾಡಿನಲ್ಲಿ ಉದಯ ನಿಧಿ ಸ್ಟ್ಯಾಲಿನ್ ಮಾಲೀಕತ್ವದ ರೆಡ್ ಗೈಂಟ್ ಮೂವೀಸ್ ವಿತರಣೆ ಮಾಡುತ್ತಿದೆ. ಹೀಗಾಗಿ ತಮಿಳು ಪ್ರೇಕ್ಷಕರಿರುವ ಏರಿಯಾದಲ್ಲಿ 'ಬೀಸ್ಟ್' ಹಾಗೂ 'ಕೆಜಿಎಫ್ 2' ಫೈಟ್ ಮಸ್ತ್ ಆಗಿ ಇರುತ್ತೆ.


Click it and Unblock the Notifications











