ಇತ್ತ ಪವಿತ್ರಾ ಗೌಡ.. ಅತ್ತ ವಿಜಯಲಕ್ಷ್ಮಿ ದರ್ಶನ್; 'ವರಮಹಾಲಕ್ಷ್ಮಿ' ಹಬ್ಬದಂದು ಟ್ರೆಡಿಷನಲ್ ಸೀರೆಯಲ್ಲಿ ಮಿಂಚಿಂಗ್
ಒಂದ್ಕಡೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜಾಮೀನು ಅರ್ಜಿ ವಿಚಾರಣೆಯ ತೀರ್ಪು ಬರೋದು ಬಾಕಿಯಿದೆ. ದರ್ಶನ್‌ಗೆ ನೀಡಿರುವ ಜಾಮೀನನ್ನು ರದ್ದು ಮಾಡುವಂತೆ ಕೋರಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ರಾಜ್ಯ ಸರ್ಕಾರದ ಪರ ವಕೀಲರು ಯಾಕೆ ಜಾಮೀನು ರದ್ದು ಮಾಡಬೇಕು ಎಂದು ಈಗಾಗಲೇ ಅಫಿಡವಿಟ್ ಅನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ್ದು ಆಗಿದೆ. ಇತ್ತ ದರ್ಶನ್ ಹಾಗೂ ಪವಿತ್ರಾ ಗೌಡ ಪರ ವಕೀಲರು ಕೂಡ ಜಾಮೀನು ರದ್ದು ಮಾಡದಂತೆ ಮನವಿಯನ್ನು ಸಲ್ಲಿಸಿದ್ದಾರೆ.
ಇದೊಂದು ಟೆನ್ಷನ್ ಇದ್ದರೂ, ಹಬ್ಬದ ಆಚರಣೆ ನಡೆದಿದೆ. ಒಂದು ಕಡೆ ವಿಜಯ ಲಕ್ಷ್ಮಿ ದರ್ಶನ್. ಇನ್ನೊಂದು ಕಡೆ ಪವಿತ್ರಾ ಗೌಡ ಇಬ್ಬರೂ ಟ್ರೆಡಿಷನಲ್ ಸೀರೆಯುಟ್ಟು ವರಮಹಾಲಕ್ಷ್ಮಿ ಹಬ್ಬವನ್ನು ಆಚರಣೆ ಮಾಡಿದ್ದಾರೆ. ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಸೀರೆಯುಟ್ಟು ಮಿಂಚಿದ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.

ರೇಣುಕಾಸ್ವಾಮಿ ಪ್ರಕರಣದ ಬಳಿಕ ವಿಜಯಲಕ್ಷ್ಮಿ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರ ಮೇಲೂ ನೆಟ್ಟಿಗರ ಕಣ್ಣು ಇದ್ದೇ ಇದೆ. ಅವರ ಚಲನವಲನಗಳನ್ನು ಗಮನಿಸುತ್ತಲೇ ಇರುತ್ತಾರೆ. ಒಂದೇ ಒಂದು ಪೋಸ್ಟ್ ಮಾಡಿದರೂ ಸಾಕು ಅವುಗಳಿಗೆ ಸಿಗುವ ಲೈಕ್ಸ್, ಕಮೆಂಟ್ಸ್ ಕಮ್ಮಿಯಿರೋದಿಲ್ಲ. ಇನ್ನು ವರಮಹಾಲಕ್ಷ್ಮಿ ಹಬ್ಬ ಅಂದರೆ, ಸುಮ್ಮನೆನಾ? ಮಹಿಳೆಯರು ಸಾಕ್ಷಾತ್ ಮಹಾಲಕ್ಷ್ಮಿಯರಂತೆ ಸಿಂಗಾರಗೊಂಡು ಲಕ್ಷ್ಮಿಯ ಮುಂದೆ ವರ ಕೇಳುವುದಕ್ಕೆ ಕೂತು ಬೀಡುತ್ತಾರೆ. ಈ ವಿಶೇಷವನ್ನು ಇಬ್ಬರೂ ಸಂಭ್ರಮದಿಂದ ಆಚರಣೆ ಮಾಡಿದ್ದಾರೆ.
ಲಕ್ಷ್ಮಿ ಹಬ್ಬಕ್ಕೆ ವಿಜಯಲಕ್ಷ್ಮಿ ಸೆಲ್ಫಿ
ದರ್ಶನ್ ಪತ್ನಿ ವಿಜಯಲಕ್ಷ್ಮಿ 'ವರಮಹಾಲಕ್ಷ್ಮಿ' ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಿದ್ದಾರೆ. ತಿಳಿ ಹಳದಿ ಬಣ್ಣ ಹಾಗೂ ಹಸಿರು ಬಣ್ಣದ ಬಾರ್ಡರ್ ಜೊತೆಗೆ ಲೈಟ್ ಆಗಿ ಚೆಕ್ಸ್ ಸೀರೆಯಲ್ಲಿ ಮಿಂಚಿದ್ದಾರೆ. ಹಬ್ಬದ ಸಂಭ್ರಮದಲ್ಲಿ ಮುಳುಗಿರುವ ಫೋಟೋ ಹಾಗೂ ಸೆಲ್ಫಿಯನ್ನು ಹಂಚಿಕೊಂಡಿದ್ದಾರೆ. ತನ್ನ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಈ ಫೋಟೊಗಳು ಶೇರ್ ಆಗುತ್ತಿದಂತೆ ದರ್ಶನ್ ಅಭಿಮಾನಿಗಳು ಲೈಕ್ಸ್ ಕಮೆಂಟ್ಸ್ ಕೊಡೋಕೆ ಶುರು ಮಾಡಿದ್ದರು.
ಹಸು ನೋಡಿ ಸಂಭ್ರಮಿಸಿದ ಪವಿತ್ರಾ ಗೌಡ
ಇನ್ನು ಪವಿತ್ರಾ ಗೌಡ ಕೂಡ ವರಮಹಾಲಕ್ಷ್ಮಿ ಹಬ್ಬವನ್ನು ಜೋರಾಗಿಯೇ ಆಚರಿಸಿದ್ದಾರೆ. ಹಚ್ಚ ಹಸಿರು ಬಣ್ಣದ ಸೀರೆಗೆ ಗುಲಾಬಿ ಹಾಗೂ ಕೇಸರಿ ಬಣ್ಣದ ಬಾರ್ಡರ್ ಇರುವ ಸೀರೆಯನ್ನು ಉಟ್ಟು ಮಿಂಚಿದ್ದಾರೆ. ಈ ಫೋಟೊಗಳನ್ನು ತನ್ನ ಇನ್‌ಸ್ಟಾಗ್ರಾಂ ಸೋರಿಯಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗಳು ಕೂಡ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪವಿತ್ರಾ ಗೌಡ ಸೀರೆಗೂ ಮಹಿಳೆಯರು ಮೆಚ್ಚುಗೆ ಸೂಚಿಸಿದ್ದಾರೆ.
ವರಮಹಾಲಕ್ಷ್ಮಿ ಹಬ್ಬದಂದು ತಮ್ಮ ಮನೆಗೆ ಹಸು ಬಂದಿದ್ದನ್ನು ನೋಡಿ ಖುಷಿ ಪಟ್ಟಿದ್ದಾರೆ. ಸಾಕ್ಷಾತ್ ಲಕ್ಷ್ಮಿಯೇ ಮನೆಗೆ ಬಂದಂತೆ ಭಾವಿಸಿ, ಹಸುವಿಗೆ ಹಬ್ಬದಂತು ಮಾಡಿದ ಖಾದ್ಯಗಳನ್ನು ತಿನ್ನಿಸಿದ್ದಾರೆ. ಈ ವಿಡಿಯೋಗಳನ್ನು ಕೂಡ ಇನ್‌ಸ್ಟಾ ಸ್ಟೋರಿಯಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ನೆಟ್ಟಿಗರು ಹಾಗೂ ದರ್ಶನ್ ಅಭಿಮಾನಿಗಳು ಇಷ್ಟ ಪಟ್ಟು ಲೈಕ್ಸ್ ಕೊಟ್ಟಿದ್ದಾರೆ.
ಜಾಮೀನಿನ ಕಥೆಯೇನು?
ದರ್ಶನ್ ಹಾಗೂ ಪವಿತ್ರಾ ಗೌಡ ಮುಂದೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ಇವರಿಬ್ಬರ ಜೊತೆ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಆರೋಪಿಗಳಾಗಿರುವವರ ಭವಿಷ್ಯ ಏನಾಗುತ್ತೆ ಎನ್ನುವ ಕುತೂಹಲವಿದೆ. ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಹೈಕೋರ್ಟ್ ಜಾಮೀನು ನೀಡಿದ ಪರಿಗೆ ಅಸಮಧಾನ ಹೊರಹಾಕಿತ್ತು. ಇನ್ನೊಂದು ಕಡೆ ರಾಜ್ಯ ಸರ್ಕಾರದ ಪರ ವಕೀಲರು ಕೂಡ ಪ್ರಬಲವಾಗಿ ವಾದ ಮಂಡಿಸಿದ್ದಾರೆ. ಇತ್ತ ದರ್ಶನ್ ಪರ ಮೂವರು ವಕೀಲರು ಬದಲಾಗಿದ್ದು, ಕೊಂಚ ಆತಂಕಕ್ಕೆ ಎಡೆ ಮಾಡಿಕೊಟ್ಟಂತೆ ಇದೆ.


Click it and Unblock the Notifications











