ದರ್ಶನ್‌ಗೆ ಜಾಮೀನು ಸಿಕ್ಕಿದ ಕೂಡಲೇ ಪತ್ನಿ ವಿಜಯಲಕ್ಷ್ಮಿ ಕೊಟ್ಟ ಪ್ರತಿಕ್ರಿಯೆ ಏನು?
ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ದರ್ಶನ್‌ಗೆ ಬಿಗ್ ರಿಲೀಫ್ ಸಿಕ್ಕಿದೆ. ಹೆಚ್ಚು ಕಡಿಮೆ ಕಳೆದ ಏಳು ತಿಂಗಳಿನಿಂದ ದರ್ಶನ್ ಜಾಮೀನಿಗಾಗಿ ಪ್ರಯತ್ನ ಪಡುತ್ತಲೇ ಇದ್ದರು. ಇದೊಂದು ಹೈ ಪ್ರೊಫೈಲ್ ಕೇಸ್ ಆಗಿದ್ದರಿಂದ ಕರ್ನಾಟಕ ಅಷ್ಟೇ ಅಲ್ಲ ಇಡೀ ದೇಶದ ಗಮನ ಸೆಳೆದಿತ್ತು. ಕೊನೆಗೂ ದರ್ಶನ್‌ಗೆ ಪೂರ್ಣ ಪ್ರಮಾಣದ ಜಾಮೀನು ಸಿಕ್ಕಿದೆ.
ಕೆಲವು ವಾರಗಳ ಹಿಂದಷ್ಟೇ ದರ್ಶನ್ ಅನಾರೋಗ್ಯದ ಹಿನ್ನೆಲೆಯಲ್ಲಿ ಬಳ್ಳಾರಿ ಜೈಲಿನಿಂದ ಮಧ್ಯಂತರ ಜಾಮೀನು ಪಡೆದು ಹೊರ ಬಂದಿದ್ದರು. ಇಂದು (ಡಿಸೆಂಬರ್ 13) ಅವರಿಗೆ ಪೂರ್ಣ ಪ್ರಮಾಣದ ಜಾಮೀನು ದೊರೆತಿದೆ. ಈ ವಿಷಯ ಹೊರ ಬೀಳುತ್ತಿದ್ದಂತೆ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸಾಂಕೇತಿಕವಾಗಿ ಖುಷಿಯನ್ನು ವ್ಯಕ್ತಪಡಿಸಿದ್ದಾರೆ.

ದರ್ಶನ್ ಜಾಮೀನು ಮಂಜೂರು ಆಗುತ್ತಿದ್ದಂತೆ ಪತ್ನಿ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಫೋಟೊ ಒಂದನ್ನು ಅಪ್‌ಲೋಡ್ ಮಾಡಿದ್ದಾರೆ. ಕೈಯಲ್ಲಿ ಹೂವು ಹಿಡಿದಿರುವ ಈ ಫೋಟೊ ಜೊತೆಗೆ ಭೋಲೆನಾಥ ಶಂಕರ ಹಾಡನ್ನು ಸೇರಿಸಿ ದೇವರಿಗೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ತಮ್ಮ ಇನ್‌ಸ್ಟಾ ಸ್ಟೋರಿಯಲ್ಲಿ ವಿಜಯಲಕ್ಷ್ಮಿ ದರ್ಶನ್ ತಮ್ಮ ಸಂತಸವನ್ನು ಫೋಟೊ ಮೂಲಕ ವ್ಯಕ್ತಪಡಿಸಿದ್ದಾರೆ. ದರ್ಶನ್ ಜೈಲು ಸೇರಿದ ದಿನದಿಂದ ಪತಿಗೆ ಜಾಮೀನು ಕೊಡಿಸುವುದರಲ್ಲಿ ವಿಜಯಲಕ್ಷ್ಮಿ ಸಾಕಷ್ಟು ಶ್ರಮ ವಹಿಸಿದ್ದರು. ಪರಪ್ಪನ ಅಗ್ರಹಾರ ಜೈಲಿನಿಂದ ಹಿಡಿದು ಬಳ್ಳಾರಿ ಜೈಲಿನವರೆಗೂ ವಿಜಯಲಕ್ಷ್ಮಿ ಪ್ರತಿ ಹಂತದಲ್ಲೂ ಓಡಾಡಿದ್ದರು. ಪತಿಯನ್ನು ಬೇಡಿ ಮುಂದಿನ ನಡೆಯನ್ನು ವಿವರಿಸುತ್ತಿದ್ದರು.
ದರ್ಶನ್‌ಗೆ ಜಾಮೀನು ಕೊಡಿಸುವಲ್ಲಿ ಹಿರಿಯ ವಕೀಲ ಸಿ. ವಿ. ನಾಗೇಶ್ ಅವರನ್ನು ಒಪ್ಪಿಸಿದ್ದು ಕೂಡ ವಿಜಯಲಕ್ಷ್ಮಿ ಅವರೇ ಎಂಬ ಮಾತು ದರ್ಶನ್ ವಲಯದಲ್ಲಿ ಕೇಳಿಬಂದಿತ್ತು. ಪರಪ್ಪನ ಅಗ್ರಹಾರದಿಂದ ಬಳ್ಳಾರಿ ಜೈಲ್‌ಗೆ ಸ್ಥಳಾಂತರ ಮಾಡಿದಾಗಲೂ ಬೆಂಗಳೂರಿನಿಂದ ಬಳ್ಳಾರಿಗೆ ಹೋಗಿ ಪತಿ ಯೋಗಕ್ಷೇಮ ವಿಚಾರಸಿ ಬರುತ್ತಿದ್ದರು. ಒಮ್ಮೆ ಪುತ್ರ ವಿನೀಶ್‌ರನ್ನು ಬಳ್ಳಾರಿ ಜೈಲ್‌ಗೆ ಕರೆದುಕೊಂಡು ಹೋಗಿ ದರ್ಶನ್ ಭೇಟಿ ಮಾಡಿಸಿಕೊಂಡು ಬಂದಿದ್ದರು.
7 ತಿಂಗಳ ಬಳಿಕ ಪವಿತ್ರಾ ಗೌಡಗೆ ಜಾಮೀನು; ರೇಣುಕಾಸ್ವಾಮಿ ಕೇಸ್ ಕತೆಯೇನು?
ಈ ಎಲ್ಲಾ ಹಂತಗಳಲ್ಲೂ ವಿಜಯಲಕ್ಷ್ಮಿ ಎಲ್ಲೂ ರೇಣುಕಾಸ್ವಾಮಿ ಸಾವಿನ ಬಗ್ಗೆ ಯಾವುದೇ ರೀತಿ ಪ್ರತಿಕ್ರಿಯೆ ನೀಡಲಿಲ್ಲ. ಪತಿ ದರ್ಶನ್‌ಗೆ ಈ ಸಮಸ್ಯೆಯಿಂದ ಹೊರತರುವುದಕ್ಕೆ ಮೌನವಾಗಿಯೇ ಹೋರಾಡಿದ್ದರು. ಹಾಗೇ ಪವಿತ್ರಾ ಗೌಡ ಬಗ್ಗೆನೂ ಎಲ್ಲೂ ನೆಗೆಟಿವ್ ಆಗಿ ಮಾತಾಡಿಲ್ಲ. ಕೊನೆಗೂ ವಿಜಯಲಕ್ಷ್ಮೀ ದರ್ಶನ್ ತಾಳ್ಮೆ ಅವರಿಗೆ ಫಲ ಕೊಟ್ಟಿದೆ. ಸುಮಾರು 7 ತಿಂಗಳ ಬಳಿಕ ದರ್ಶನ್‌ಗೆ ಪೂರ್ಣ ಪ್ರಮಾಣದಲ್ಲಿ ಜಾಮೀನು ಸಿಕ್ಕಿದೆ.
ಈಗ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ರೇಣುಕಾಸ್ವಾಮಿ ಕೇಸ್‌ನಲ್ಲಿ ಜೈಲು ಸೇರಿದ್ದವರಿಗೆ ಜಾಮೀನು ಸಿಕ್ಕಿದೆ. ದರ್ಶನ್ ಜೊತೆ ಪವಿತ್ರಾ ಗೌಡಗೂ ರಿಲೀಫ್ ಸಿಕ್ಕಿದೆ. ಇನ್ಮುಂದೆ ದರ್ಶನ್ ಹಾಗೂ ಪವಿತ್ರಾ ಗೌಡ ಗೆಳೆತನ ಹೇಗಿರುತ್ತೆ? ವಿಜಯಲಕ್ಷ್ಮಿ ಈ ಕೇಸ್ ಬಗ್ಗೆ ಪ್ರತಿಕ್ರಿಯೆ ನೀಡುತ್ತಾರಾ? ಮುಂದಿನ ಕಾನೂನು ಹೋರಾಟ ಹೇಗಿರುತ್ತೆ? ಅನ್ನೋದನ್ನು ಮುಂದಿನ ದಿನಗಳಲ್ಲಿ ಗೊತ್ತಾಗಲಿದೆ.


Click it and Unblock the Notifications











