ದರ್ಶನ್ ಜೊತೆಗಿನ ಮತ್ತೊಂದು ಫೋಟೋ ಹಂಚಿಕೊಂಡ ಪತ್ನಿ ವಿಜಯಲಕ್ಷ್ಮಿ; ಏನು ವಿಶೇಷ?
ದರ್ಶನ್ ಹಾಗೂ ವಿಜಯಲಕ್ಷ್ಮಿ ಕೌಟುಂಬಿಕ ಜೀವನ ಬದಲಾಗಿದೆ. ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ದರ್ಶನ್ ಜೈಲು ಸೇರಿದ ದಿನದಿಂದ ವಿಜಯಲಕ್ಷ್ಮಿ ಬದುಕು ಕೂಡ ಬದಲಾಗಿದೆ. ಇದು ಮೇಲ್ನೋಟಕ್ಕೆ ಅಷ್ಟೇ ಅಲ್ಲ ಅನ್ನೋದು ಈಗೀಗ ಎಲ್ಲರಿಗೂ ಗೊತ್ತಾಗುತ್ತಿದೆ. ದರ್ಶನ್‌ಗೆ ಜಾಮೀನು ಸಿಗುವುದಕ್ಕೆ ಪತ್ನಿ ವಿಜಯಲಕ್ಷ್ಮಿಯ ಪಾತ್ರ ದೊಡ್ಡದಿತ್ತು. ಜಾಮೀನಿಗಾಗಿ ನಿರಂತರ ಹೋರಾಟ ಮಾಡಿದ್ದರು.
ದರ್ಶನ್ ಜಾಮೀನಾಗಿ ಹೋರಾಟ ಮಾಡಿದ್ದು ಒಂದು ಹಂತ. ಆದರೆ, ಜಾಮೀನಿನ ಮೇಲೆ ಹೊರ ಬಂದ್ಮೇಲೆ ದರ್ಶನ್ ಬೆನ್ನ ಹಿಂದೆ ನಿಂತು ಎಲ್ಲವನ್ನೂ ನಿಭಾಯಿಸುತ್ತಿರುವುದು ವಿಜಯಲಕ್ಷ್ಮಿ ಅವರೇ. ಈಗ ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಇಬ್ಬರೂ ಹಲವು ಇವೆಂಟ್‌ಗಳಲ್ಲಿ ಒಟ್ಟಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಪತಿಯೊಂದಿಗೆ ಫೋಟೊಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಈಗ ವಿಜಯಲಕ್ಷ್ಮಿ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ದರ್ಶನ್ ಜೊತೆಗಿನ ಫೋಟೊ ಒಂದನ್ನು ಹಂಚಿಕೊಂಡಿದ್ದಾರೆ. ವಿಜಯಲಕ್ಷ್ಮಿ ಈ ಫೋಟೋವನ್ನು ಹಂಚಿಕೊಳ್ಳುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ದರ್ಶನ್ ಅಭಿಮಾನಿಗಳು ಅಣ್ಣ-ಅತ್ತಿಗೆ ಅಂತ ಫೋಟೋಗಳನ್ನು ಶೇರ್ ಮಾಡುವುದಕ್ಕೆ ಶುರು ಮಾಡಿದ್ದಾರೆ. ಅಷ್ಟಕ್ಕೂ ವಿಜಯಲಕ್ಷ್ಮಿ ದರ್ಶನ್ ಈ ಫೋಟೋವನ್ನು ಹಂಚಿಕೊಂಡಿದ್ದು ಏಕೆ? ವಿಶೇಷತೆ ಏನು? ಎನ್ನುವುದನ್ನು ತಿಳಿಯುವುದಕ್ಕೆ ಮುಂದೆ ಓದಿ.
ವಿಜಯಲಕ್ಷ್ಮಿ ಪತಿಯೊಂದಿಗಿನ ಫೋಟೋಗಳನ್ನು ಹಂಚಿಕೊಳ್ಳುವುದು ಹೊಸ ವಿಷಯವೇನಲ್ಲ. ಕೆಲವು ವಿಶೇಷ ದಿನಗಳ ನೆನಪಿಗಾಗಿಯೋ, ಇಲ್ಲ ಹುಟ್ಟುಹಬ್ಬದಂತಹ ವಿಶೇಷ ದಿನದಂದು ಫೋಟೋಗಳನ್ನು ಹಂಚಿಕೊಂಡಿದ್ದು ಇದೆ. ಇಂದು ವಿಜಯಲಕ್ಷ್ಮಿ ದರ್ಶನ್ ಪತಿಯೊಂದಿಗಿರುವ ಫೋಟೋವನ್ನು ಶೇರ್ ಮಾಡಿಕೊಂಡಿದ್ದಾರೆ. ಈ ಫೋಟೋದಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಕುದುರೆಯನ್ನು ಹಿಡಿದು ಕ್ಯಾಮರಾಗೆ ಪೋಸ್ ಕೊಟ್ಟಿದ್ದಾರೆ.
ಇನ್ನು ವಿಜಯಲಕ್ಷ್ಮಿ ದರ್ಶನ್ ಈ ಫೋಟೊವನ್ನು ಹ್ಯಾಪಿ ಮೂಡ್‌ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಆದರೆ, ಈ ಫೋಟೋವನ್ನು ಹಾಗೇ ಸುಮ್ಮನೆ ಹಂಚಿಕೊಂಡಿದ್ದಾರಾ? ಇಲ್ಲಾ ಏನಾದರೂ ವಿಶೇಷತೆ ಇದೆಯಾ? ಎನ್ನುವ ಬಗ್ಗೆ ಏನೂ ಹೇಳಿಕೊಂಡಿಲ್ಲ. ಆದರೆ, ದರ್ಶನ್ ಅಭಿಮಾನಿಗಳು ಮಾತ್ರ ಈ ಫೋಟೋವನ್ನು ನೋಡಿ ಖುಷಿ ಪಟ್ಟಿದ್ದಾರೆ. ಫೋಟೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಸಂಭ್ರಮಿಸಿದ್ದಾರೆ. ಯಾರ ಕಣ್ಣು ಬೀಳದೆ ಇರಲಿ ಅಂತ ಕಮೆಂಟ್‌ಗಳನ್ನು ಮಾಡುತ್ತಿದ್ದಾರೆ.
ರೇಣುಕಾಸ್ವಾಮಿ ಕೇಸ್‌ನಿಂದ ದರ್ಶನ್‌ಗೆ ಕೊಂಚ ಮಟ್ಟಿಗೆ ನಿರಾಳ ಆಗುವುದಕ್ಕೆ ವಿಜಯಲಕ್ಷ್ಮಿ ಪ್ರಮುಖ ಕಾರಣ. ದರ್ಶನ್ ಕಷ್ಟ ಕಾಲದ ಪ್ರತಿಯೊಂದು ಹಂತದಲ್ಲಿಯೂ ವಿಜಯಲಕ್ಷ್ಮಿ ಹೋರಾಟ ಮಾಡಿದ್ದರು. ಈ ಕೇಸ್‌ನಲ್ಲಿ ಜಾಮೀನು ಕೊಡಿಸುವುದಕ್ಕೆ ಪ್ರಯತ್ನ ಪಟ್ಟಿದ್ದರು. ಸುಮಾರು ಆರೇಳು ತಿಂಗಳುಗಳ ಕಾಲ ವಿಜಯಲಕ್ಷ್ಮಿ ಪತಿ ದರ್ಶನ್ ಫೈಟ್ ಮಾಡಿದ್ದರು. ಒಂದೇ ಒಂದು ಪ್ರತಿಕ್ರಿಯೆ ನೀಡದೆ ಶತ ಪ್ರಯತ್ನ ಮಾಡಿದ್ದರು.
ಇನ್ನು ವಿಜಯಲಕ್ಷ್ಮಿ ದರ್ಶನ್ ನಾಲ್ಕು ವಾರಗಳ ಹಿಂದಷ್ಟೇ ದರ್ಶನ್ ಹಾಗೂ ಪುತ್ರಿ ವಿನೀಶ್ ಜೊತೆಗಿನ ಫೋಟೋವನ್ನು ಹಂಚಿಕೊಂಡಿದ್ದರು. ಆವೇಳೆ ಆನೆಯೊಂದಿಗೆ ನಿಂತು ಕ್ಯಾಮರಾಗೆ ಪೋಸ್ ಕೊಟ್ಟಿದ್ದರು. ಸಾಕಷ್ಟು ಸಂದರ್ಭಗಳಲ್ಲಿ ತೆಗೆಸಿಕೊಂಡ ಫೋಟೋವನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಇತ್ತೀಚೆಗೆ ಡೆವಿಲ್ ಸಿನಿಮಾದ ಶೂಟಿಂಗ್‌ಗಾಗಿ ದರ್ಶನ್ ಜೊತೆ ವಿಜಯಲಕ್ಷ್ಮಿ ಕೂಡ ರಾಜಸ್ಥಾನಕ್ಕೆ ತೆರಳಿದ್ದರು. ಸದ್ಯ ಇಬ್ಬರ ನಡುವಿನ ಅನ್ಯೋನ್ಯತೆ ಕಂಡ ಫ್ಯಾನ್ಸ್ ಅಂತೂ ಫುಲ್ ಹ್ಯಾಪಿಯಾಗಿದ್ದಾರೆ.


Click it and Unblock the Notifications











