ಗ್ಯಾಂಗ್‌ಸ್ಟರ್ ಲುಕ್ ಕೊಟ್ಟ ಮರಿ ರಣಧೀರ:'ಮುಧೋಳ್' ಸಖತ್ ಡೇಂಜರ್

ಕ್ರೇಜಿಸ್ಟಾರ್ ರವಿಚಂದ್ರನ್ ಇಬ್ಬರು ಮಕ್ಕಳೂ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಎರಡನೇ ಪುತ್ರ ವಿಕ್ರಮ್ ರವಿಚಂದ್ರನ್ ಮೊದಲ ಸಿನಿಮಾದಲ್ಲಿ ಭರವಸೆ ಮೂಡಿಸಿದ್ದರು. ಆದರೆ, ಸಿನಿಮಾ ಅಂದ್ಕೊಂಡಷ್ಟು ಸಕ್ಸಸ್ ಕಂಡಿಲ್ಲ. ಹೀಗಾಗಿ ಮಾಸ್ ಲುಕ್ ಕೊಡುತ್ತಾ ಎರಡನೇ ಸಿನಿಮಾಗೆ ಎಂಟ್ರಿ ಕೊಡುತ್ತಿದ್ದಾರೆ.

ಅಂದ್ಹಾಗೆ ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾಗೆ 'ಮಧೋಳ್' ಅನ್ನೋ ಕ್ಯಾಚಿ ಟೈಟಲ್ ಇಡಲಾಗಿದೆ. ಇತ್ತೀಚೆಗೆ ಬೆಂಗಳೂರಿನ ನವರಂಗ್ ಚಿತ್ರಮಂದಿರದಲ್ಲಿ ಅಭಿಮಾನಿಗಳ ಸಮ್ಮುಖದಲ್ಲಿ ವಿಕ್ಕಿಯ ಹೊಸ ಸಿನಿಮಾದ ಟೈಟಲ್ ರಿವೀಲ್ ಆಗಿತ್ತು.

Vikram Ravichandran seen as gangster in his second Movie Mudhol

ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾದಲ್ಲಿ ಕಂಪ್ಲೀಟ್ ಆಗಿ ಬದಲಾಗಿದ್ದಾರೆ. ಗ್ಯಾಂಗ್‌ಸ್ಟರ್ ಲುಕ್ ಕೊಟ್ಟು ಅಭಿಮಾನಿಗಳನ್ನು ರಂಜಿಸೋಕೆ ಪಣತೊಟ್ಟು ನಿಂತಿದ್ದಾರೆ. ವಿಶೇಷ ಅಂದ್ರೆ, ಈ ಸಿನಿಮಾಗೆ 'ಮುಧೋಳ್' ಅಂತ ಟೈಟಲ್ ಕೊಟ್ಟಿದ್ದೇ ಕ್ರೇಜಿಸ್ಟಾರ್ ರವಿಚಂದ್ರನ್.

ಮೊದಲ ಸಿನಿಮಾದಲ್ಲಿ ಪಕ್ಕಾ ಲವರ್‌ಬಾಯ್ ಆಗಿ ಕಂಡಿದ್ದ ವಿಕ್ರಮ್ ರವಿಚಂದ್ರನ್ ಈ ಬಾರಿ ಮಾಸ್ ಆಡಿಯನ್ಸ್ ಅನ್ನು ರಂಜಿಸಲು ಸಜ್ಜಾಗಿದ್ದಾರೆ. ಅಲ್ಲದೆ ಸಿನಿಮಾ ಪೋಸ್ಟರ್ ಹಾಗೂ ಲುಕ್ ಇಂಟ್ರೆಸ್ಟಿಂಗ್ ಆಗಿದೆ. ಇನ್ನು ವಿಕ್ರಮ್ ಈ ಸಿನಿಮಾ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.

"ತ್ರಿವಿಕ್ರಮ ಸಿನಿಮಾ ರಿಲೀಸ್ ಆಗಿದ್ದು ಜೂನ್ 24. ಅದಾದ್ಮೇಲೆ ಏಪ್ರಿಲ್ 26 ರಂದು ನನ್ನ ಎರಡನೇ ಸಿನಿಮಾದ ಟೈಟಲ್ ಲಾಂಚ್ ಮಾಡುತ್ತಿದ್ದೇವೆ. ತುಂಬಾ ಜನ ವಿಕೆಆರ್ ಅಂದ್ರೇನು ಅಂತಾ ಕೇಳುತ್ತಿದ್ರು. 'ವಿಕೆಆರ್' ಅಂದ್ರೆ, ವಿಕ್ರಮ್ ರವಿಚಂದ್ರನ್ ಅನ್ನೋದು ತುಂಬಾ ಜನಕ್ಕೆ ಗೊತ್ತಿದೆ. ವಿಕೆಆರ್‌ನಲ್ಲಿ ವಿಕ್ರಮ್ ರವಿಚಂದ್ರನ್ ಬರುತ್ತದೆ. ವೀರಸ್ವಾಮಿ ರವಿಚಂದ್ರನ್ ಬರುತ್ತೆ. ನಿಮ್ಮ ಫೇವರಿಟ್ ಡಾ. ವಿ ರವಿಚಂದ್ರನ್ ಹೆಸರು ಬರುತ್ತೆ. ಇದರ ಮಧ್ಯೆ ಕನ್ನಡ ಬರುತ್ತದೆ. ಪ್ರಯತ್ನ ಅನ್ನೋದು ನಿರಂತರ. ಪ್ರಯತ್ನ ಮಾಡಿ ಜೀವನದಲ್ಲಿ ಗೆಲುವುದು ಮುಖ್ಯವಲ್ಲ. ಜೀವನವನ್ನೇ ಗೆಲ್ಲಬೇಕು. ಆ ರೀತಿ ಒಂದು ತಂಡ ನಿಮ್ಮ ಮುಂದೆ ಇದೆ. ಇದು ನನ್ನ ಎರಡನೇ ಹೆಜ್ಜೆ " ವಿಕ್ರಮ್ ರವಿಚಂದ್ರನ್ ಹೇಳಿದ್ದಾರೆ.

'ಮುಧೋಳ್' ಸಿನಿಮಾವನ್ನು ನಿರ್ದೇಶಕ ಕಾರ್ತಿಕ್ ರಾಜನ್ ಎಂಬುವವರು ನಿರ್ದೇಶನ ಮಾಡುತ್ತಿದ್ದಾರೆ. ಇದು ಇವರ ಎರಡನೇ ಸಿನಿಮಾ. "ಮುಧೋಳ್‌ಗಾಗಿ ತುಂಬಾ ಕಡೆ ಹುಡುಗಾಡಿದ್ದೇವೆ. ಈ ಟೈಟಲ್ ಟೀಸರ್‌ನಲ್ಲಿ ಶ್ವಾನ ಚಾಕು ಕಚ್ಚಿಕೊಂಡು ಬರುವ ದೃಶ್ಯಕ್ಕಾಗಿ 23 ಟೇಕ್ ತೆಗೆದುಕೊಂಡಿದ್ದೇವೆ" ಎಂದು ಸಿನಿಮಾ ಬಗ್ಗೆ ಮಾಹಿತಿ ನೀಡಿದ್ರು.

ಕಾರ್ತಿಕ್ ರಾಜನ್ ತಮಿಳು, ತೆಲುಗು ಚಿತ್ರರಂಗದಲ್ಲಿ ಸಹ ನಿರ್ದೇಶಕನಾಗಿ, ಸಿನಿಮಾ ಬರಹಗಾರನಾಗಿ ಕೆಲಸ ಮಾಡಿದ್ದಾರೆ. ಕಾರ್ತಿಕ್ ರಾಜನ್‌ಗೆ 'ಮುಧೋಳ್' ಮೊದಲ ಸಿನಿಮಾ. ಇನ್ನು ಎಸ್.ತಮನ್ ಜೊತೆ ಕೆಲಸ ಮಾಡಿ ಅನುಭವ ಇರುವ ಯುವರಾಜ್ ಚಂದ್ರನ್ ಸಿನಿಮಾಗೆ ಟ್ಯೂನ್ ಹಾಕಿದ್ದಾರೆ. 'ಟಗರು', 'ಸಲಗ' ಸಿನಿಮಾಗೆ ಸಂಭಾಷಣೆ ಬರೆದಿರೋ ಮಾಸ್ತಿ ಈ ಸಿನಿಮಾಗೂ ಕೆಲಸ ಮಾಡುತ್ತಿದ್ದಾರೆ.

ಸಂದೀಪ್ ವಲ್ಲೂರಿ ಕ್ಯಾಮರಾ, ಡಾ.ಕೆ.ರವಿವರ್ಮಾ ಆಕ್ಷನ್ ಈ ಸಿನಿಮಾಗಿದೆ. ರಕ್ಷಾ ವಿಜಯಕುಮಾರ್ ಹಾಗೂ ಸಿಲ್ಜು ಕಣ್ಣನ್ ಈ ಸಿನಿಮಾವನ್ನು ನಿರ್ಮಾಣ ಮಾಡುತ್ತಿದ್ದಾರೆ. 'ಮಧೋಳ್' ಚಿತ್ರದಲ್ಲಿ ಲವ್ ಮಾಕ್ಟೇಲ್ ಖ್ಯಾತಿ ಅಭಿಲಾಶ್, ರಘು ಮ್ಯೂಟಂಟ್ ಸೇರಿದಂತೆ ಸಾಕಷ್ಟು ಮಂದಿ ನಟಿಸುತ್ತಿದ್ದಾರೆ. ಸದ್ದಿಲ್ಲದೆ ಈ ಸಿನಿಮಾವನ್ನು ಸುಮಾರು 30 ದಿನಗಳ ಕಾಲ ಶೂಟಿಂಗ್ ಮಾಡಲಾಗಿದೆ.

More from Filmibeat

English summary
Vikram Ravichandran seen as gangster in his second Movie Mudhol. Report is that Ravichandran suggested this title, know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X