ರವಿಚಂದ್ರನ್ ಬರ್ತ್‌ಡೇಗೆ ಪುತ್ರ 'ತ್ರಿ'ವಿಕ್ರಮನ ಸಾಂಗ್ ರಿಲೀಸ್ : ಶಿವಣ್ಣ ಸಾಥ್
ಕ್ರೇಜಿ಼ಸ್ಟಾರ್ ವಿ.ರವಿಚಂದ್ರನ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಮೇ 30ಕ್ಕೆ ರವಿಚಂದ್ರನ್ 61ನೇ ವರ್ಷದ ಬರ್ತ್‌ಡೇ ಖುಷಿಯಲ್ಲಿದ್ದಾರೆ. ಇದೇ ಖುಷಿಯಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ದ್ವಿತೀಯ ಪುತ್ರ ವಿಕ್ರಮ್ ಅಭಿನಯದ 'ತ್ರಿವಿಕ್ರಮ್' ಸಿನಿಮಾದ ಸಾಂಗ್ ಕೂಡ ರಿಲೀಸ್ ಆಗಿದೆ.
'ತ್ರಿವಿಕ್ರಮ್' ದ್ವಿತೀಯ ಪುತ್ರ ವಿಕ್ರಮ್ ನಟಿಸಿರುವ ಮೊದಲ ಸಿನಿಮಾ. ಇದು ಜೂನ್ 24ರಂದು ಅದ್ಧೂರಿಯಾಗಿ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ವಿಕ್ರಮ್ ನಾಯಕ ನಟನಾಗಿ ಗ್ರ್ಯಾಂಡ್ ಎಂಟ್ರಿ ಕೊಡುತ್ತಿರುವ ಚೊಚ್ಚಲ ಸಿನಿಮಾ ಆಗಿದ್ದರಿಂದ ನಿರೀಕ್ಷೆ ದೊಡ್ಡ ಮಟ್ಟದಲ್ಲಿದೆ. ಹಾಗೇ ಚಿತ್ರತಂಡ ಕೂಡ ದೊಡ್ಡ ಮಟ್ಟದಲ್ಲಿಯೇ ಸಿನಿಮಾ ರಿಲೀಸ್ ಮಾಡುವುದಕ್ಕೆ ಸ್ಕೆಚ್ ಹಾಕಿದೆ. ಸಿನಿಮಾ ಶುರುವಾದಲ್ಲಿಂದಲೂ ಈ ಚಿತ್ರಕ್ಕೆ ಸಿನಿಮಾ ತಾರೆಯರು ಸಪೋರ್ಟ್ ಮಾಡುತ್ತಲೇ ಇದ್ದಾರೆ. ಇದೀಗ ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ಸಹ 'ತ್ರಿವಿಕ್ರಮ'ನಿಗೆ ಜೊತೆಯಾಗಿದ್ದಾರೆ.

ಮೇ 30ರಂದು ಕ್ರೇಜಿ಼ಸ್ಟಾರ್ ಹುಟ್ಟುಹಬ್ಬ. ಈ ವಿಶೇಷ ಸಂದರ್ಭದಂದು 'ತ್ರಿವಿಕ್ರಮ' ತಂಡ ಮೊದಲ 'ಪ್ಲೀಸ್ ಮಮ್ಮಿ' ಅನ್ನೋ ವಿಡಿಯೋ ಸಾಂಗ್ ರಿಲೀಸ್ ಮಾಡಿದೆ. ಇದೇ ಹಾಡು ಬಿಡುಗಡೆಗೆ ಸೆಂಚುರಿ ಹೀರೊ ಶಿವರಾಜ್‌ಕುಮಾರ್ ಸಾಥ್ ನೀಡಿದ್ದರು. ಪ್ಲೀಸ್ ಮಮ್ಮಿ ಹಾಡನ್ನು ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ. "ರವಿ ಮತ್ತು ನಾನು ಒಟ್ಟಿಗೆ ಇಂಡಸ್ಟ್ರಿಗೆ ಬಂದವರು. ಆಗಿನಿಂದಲೂ ಒಳ್ಳೆಯ ಸ್ನೇಹಿತರು. ಈಗಾಗಲೇ ಮನು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗ ಹೀರೋ ಆಗಿ ವಿಕ್ಕಿ ಲಾಂಚ್ ಆಗ್ತಿರೋದು ಖುಷಿಯ ವಿಚಾರ" ಎಂದಿದ್ದಾರೆ ಶಿವರಾಜ್‌ಕುಮಾರ್.
ವಿಕ್ರಮ್ ಬಾಲನಟನಾಗಿ ಸಿನಿಮಾದಲ್ಲಿ ನಟಿಸಿದ ಅನುಭವವಿದೆ. ಶಿವಣ್ಣನ ಸಿನಿಮಾದಲ್ಲಿಯೇ ಅವರ ಚಿಕ್ಕ ವಯಸ್ಸಿನ ಪಾತ್ರ ನಿಭಾಯಿಸಿದ್ದಾರೆ. ಈಗ ನಾಯಕನಾಗಿರೋದಕ್ಕೆ ಶಿವಣ್ಣ ಖುಷಿ ಪಟ್ಟದ್ದಾರೆ. "ನಾನು ಹಾಡು ಹಾಗೂ ಕೆಲವು ಸೀನ್ ನೋಡಿದ್ದೀನಿ. ವಿಕ್ಕಿ ಪಕ್ಕಾ ಮಾಸ್ ಲುಕ್ ಮತ್ತು ಚಾರ್ಮ್ ಇರುವಂಥ ನಟ. 'ತ್ರಿವಿಕ್ರಮ' ದೊಡ್ಡ ಮಟ್ಟದಲ್ಲಿ ಯಶಸ್ಸು ಸಾಧಿಸಲಿ" ಎಂದು ಶಿವಣ್ಣ ಹಾರೈಸಿದ್ದಾರೆ.

ಅಂದ್ಹಾಗೆ 'ತ್ರಿವಿಕ್ರಮ' ಸಿನಿಮಾವನ್ನು 'ರೋಸ್', 'ಮಾಸ್ ಲೀಡರ್' ಸಿನಿಮಾಗಳಿಗೆ ಆ್ಯಕ್ಷನ್ ಕಟ್ ಹೇಳಿದ್ದ ಸಹನಾ ಮೂರ್ತಿ ನಿರ್ದೇಶನ ಮಾಡಿದ್ದಾರೆ. ಸೋಮಣ್ಣ ರಾಮ್ಕೋ ಸೋಮಣ್ಣ ಎಂಬುವವರು ಈ ಸಿನಿಮಾಗಾಗಿ ಬಂಡವಾಳ ಹೂಡಿದ್ದಾರೆ. ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಈ ಸಿನಿಮಾಗಾಗಿ ಟ್ಯೂನ್ ಹಾಕಿದ್ದಾರೆ. ಈಗಾಗಲೇ ಬಿಡುಗಡೆಯಾಗಿರುವ 'ಪ್ಲೀಸ್ ಮಮ್ಮಿ' ಲಿರಿಕಲ್ ಸಾಂಗ್ ಮಿಲಿಯನ್'ಗಟ್ಟಲೆ ಹಿಟ್ಸ್ ದಾಖಲಿಸಿ, ಟ್ರೆಂಡಿಂಗ್'ನಲ್ಲಿದೆ. ಡಾ.ವಿ.ನಾಗೇಂದ್ರ ಪ್ರಸಾದ್ ಈ ಹಾಡಿಗೆ ಸಾಹಿತ್ಯ ರಚಿಸಿದ್ದಾರೆ. ಸೂಪರ್ ಹಿಟ್ ಹಾಡುಗಳ ಸರದಾರ ವಿಜಯಪ್ರಕಾಶ್ ಈ ಹಾಡಿಗೆ ಧ್ವನಿ ನೀಡಿದ್ದಾರೆ.
'ತ್ರಿವಿಕ್ರಮ್' ಸಿನಿಮಾದಲ್ಲಿ ವಿಕ್ರಮ್‌ಗೆ ಜೋಡಿಯಾಗಿ ಆಕಾಂಕ್ಷಾ ಶರ್ಮಾ ನಟಿಸಿದ್ದಾರೆ. ತುಳಸಿ, ಸುಚೇಂದ್ರ ಪ್ರಸಾದ್, ಸಾಧುಕೋಕಿಲ, ರೋಹಿತ್ ರಾಯ್, ಜಯಪ್ರಕಾಶ್, ಶಿವಮಣಿ, ಆದಿ ಲೋಕೇಶ್, ನಾಗೇಂದ್ರ ಶಾ, ಚಿಕ್ಕಣ್ಣ ಮೊದಲಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಹೀಗಾಗಿ ಕ್ರೇಜಿಸ್ಟಾರ್‌ಗೆ ಈ ಭಾರಿಯ ಹುಟ್ಟುಹಬ್ಬ ತುಂಬಾನೇ ಸ್ಪೆಷಲ್ ಆಗಿದೆ.


Click it and Unblock the Notifications











