ರಣ್‌ವೀರ್ ಸಿಂಗ್ '83' ಸಿನಿಮಾದೊಂದಿಗೆ 3Dಯಲ್ಲಿ ವಿಕ್ರಾಂತ್ ರೋಣ ತುಣುಕುಗಳು ರಿಲೀಸ್

ಒಂದ್ಕಡೆ '83'.. ಇನ್ನೊಂದು ಕಡೆ ವಿಕ್ರಾಂತ್ ರೋಣ 3D.. ಹೌದು.. ಈ ವಾರ ಕಿಚ್ಚ ಸುದೀಪ್ ಅಭಿಮಾನಿಗಳಿಗೆ ಡಬಲ್ ಧಮಾಕಾ. ಭಾರತೀಯ ಕ್ರಿಕೆಟ್ ತಂಡ ಮೊದಲ ವಿಶ್ವಕಪ್ ಅನ್ನು ಮುಡಿಗೇರಿಸಿಕೊಂಡ ಆ ಕ್ಷಣಗಳನ್ನು ತೆರೆಮೇಲೆ ನೋಡಲು ಇಡೀ ಭಾರತವೇ ಕಾದು ಕೂತಿದೆ. ಇನ್ನೊಂದು ಕಡೆ ಕಿಚ್ಚನ ವಿಭಿನ್ನ ಸಿನಿಮಾ ವಿಕ್ರಾಂತ್ ರೋಣದ ಝಲಕ್ 3ಡಿಯಲ್ಲಿ ನೋಡಬಹುದಾಗಿದೆ. ಹೀಗಾಗಿ ಸಿನಿಪ್ರಿಯರಿಗೆ ಒಂದೇ ಸಿನಿಮಾದಲ್ಲಿ ಮತ್ತೊಂದು ಸಿನಿಮಾದ ಝಲಕ್ ನೋಡುವ ಅವಕಾಶ.

'ವಿಕ್ರಾಂತ್ ರೋಣ' ಕಿಚ್ಚ ಸುದೀಪ್ ವಿಭಿನ್ನ ಅವತಾರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ. ಇಂತಹದ್ದೊಂದು ಅಡ್ವೆಂಚರ್ ರೋಲ್‌ನಲ್ಲಿ ಕಿಚ್ಚ ಸುದೀಪ್ ಹಿಂದೆಂದೂ ಕಾಣಿಸಿಕೊಂಡಿರಲಿಲ್ಲ. ಅನೂಪ್ ಭಂಡಾರಿ ಸುದೀಪ್‌ಗಾಗಿ ಇದೇ ಮೊದಲ ಬಾರಿಗೆ ಆಕ್ಷನ್ ಕಟ್ ಹೇಳಿದ್ದು, ತೆರೆಮೇಲೆ ವಿಸ್ಮಯವೊಂದನ್ನು ತೆರೆದಿಡಲಿದ್ದಾರೆ. ಹೀಗಾಗಿ ಕಿಚ್ಚ ಸುದೀಪ್ ನಟನೆಯ 'ವಿಕ್ರಾಂತ್ ರೋಣ' ನೋಡಲು ಸಿನಿಪ್ರಿಯರು ಕಾದು ಕೂತಿದ್ದಾರೆ.

83 ಸಿನಿಮಾದಲ್ಲಿ 3Dಯಲ್ಲಿ ಕಿಚ್ಚನ ವಿಕ್ರಾಂತ್ ರೋಣ

83 ಸಿನಿಮಾದಲ್ಲಿ 3Dಯಲ್ಲಿ ಕಿಚ್ಚನ ವಿಕ್ರಾಂತ್ ರೋಣ

ರಣ್‌ವೀರ್ ಸಿಂಗ್ ನಟನಯೆ '83' ಭಾರತೀಯ ಚಿತ್ರರಂಗಕ್ಕೆ ಒಂದು ವಿಭಿನ್ನ ಅನುಭವ ನೀಡಬಹುದಾದ ಸಿನಿಮಾ. ಅದೇ ಮತ್ತೊಂದು ಕಡೆ ಕಿಚ್ಚನ ಅಭಿಮಾನಿಗಳಿಗೆ ವಿಕ್ರಾಂತ್ ರೋಣ ಕೂಡ ವಿಶಿಷ್ಟ ಸಿನಿಮಾ. ಯಾಕಂದ್ರೆ, ಸುದೀಪ್ ಈ ಹಿಂದೆ ಇಂತಹದೊಂದು ಸಿನಿಮಾದಲ್ಲಿ ಅಭಿನಯಿಸಿರಲಿಲ್ಲ. ಬಹುತೇಕ ಕಾಡಿನಲ್ಲೇ ಸಾಗುವ ಸಾಹಸಮಯ ಸಿನಿಮಾದಲ್ಲಿ ಕಿಚ್ಚ ಕಂಡಿದ್ದೇ ಇಲ್ಲ. ಇದೇ ಕಾರಣಕ್ಕೆ ಸುದೀಪ್ ಫ್ಯಾನ್ಸ್ ಸಿನಿಮಾ ನೋಡುವುದಕ್ಕೆ ಕಾದು ಕೂತಿದ್ದಾರೆ. ಈ ಮಧ್ಯೆ '83' ಎಲ್ಲೆಲ್ಲಿ 3ಡಿಯಲ್ಲಿ ಬಿಡುಗಡೆಯಾಗುತ್ತದೋ ಅಲೆಲ್ಲಾ ವಿಕ್ರಾಂತ್ ರೋಣ ಸಿನಿಮಾ ತುಣುಕುಗಳು 3ಡಿಯಲ್ಲಿಯೇ ಪ್ರದರ್ಶನ ಆಗಲಿದೆ.

3 ಸಾವಿರ ಥಿಯೇಟರ್‌ಗಳಲ್ಲಿ 'ವಿಕ್ರಾಂತ್ ರೋಣ'

3 ಸಾವಿರ ಥಿಯೇಟರ್‌ಗಳಲ್ಲಿ 'ವಿಕ್ರಾಂತ್ ರೋಣ'

ರಣ್‌ವೀರ್ ಸಿಂಗ್ ಹಾಗೂ ದೀಪಿಕಾ ಪಡುಕೋಣೆ ನಟನೆಯ '83' ಭಾರತದಾದ್ಯಂತ ಸುಮಾರು 3 ಸಾವಿರಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಇಷ್ಟೂ ಚಿತ್ರಮಂದಿರಗಳಲ್ಲಿ ಕಿಚ್ಚ ಸುದೀಪ್ 'ವಿಕ್ರಾಂತ್ ರೋಣ' ತುಣುಕುಗಳು ಬಿಡುಗಡೆಯಾಗಲಿದೆ. 3ಡಿ ಹಾಗೂ 2ಡಿಯಲ್ಲಿ ಎರಡರಲ್ಲೂ ತುಣುಕುಗಳು ಬಿಡುಗಡೆಯಾಗಲಿವೆ. ಇದಕ್ಕಾಗಿ ಭರ್ಜರಿ ತಯಾರಿ ನಡೆದಿದ್ದು, ಡಿಸೆಂಬರ್ 24ರಿಂದ ಎಲ್ಲೆಲ್ಲಿ '83' ಸಿನಿಮಾದ 3ಡಿ ಅವತರಣಿಕೆ ಬಿಡುಗಡೆಯಾಗುತ್ತೋ ಅಲ್ಲೆಲ್ಲಾ ವಿಕ್ರಾಂತ್ ರೋಣ ಕೂಡ 3ಡಿಯಲ್ಲಿ ಅಬ್ಬರಿಸಲಿದ್ದಾನೆ.

3Dಯಲ್ಲಿ ವಿಕ್ರಾಂತ್ ರೋಣನ ಪ್ರಪಂಚ

'ವಿಕ್ರಾಂತ್ ರೋಣ' ಒಂದು ಸಸ್ಪೆನ್ಸ್, ಅಡ್ವೆಂಚರ್ ಸಿನಿಮಾ. ಕಾಡಿನಲ್ಲಿಯೇ ಸಾಗುವ ವಿಶಿಷ್ಟ ಕತೆಯಲ್ಲಿ ಕಿಚ್ಚನ ಪಯಣ ಸಾಗಲು ಇನ್ನು ಕೆಲವೇ ತಿಂಗಳುಗಳು ಬಾಕಿಯಿವೆ. ಈ ವಿಭಿನ್ನ ಪ್ರಪಂಚವನ್ನು 3Dಯಲ್ಲಿ ನೋಡುವುದು ಮತ್ತಷ್ಟು ಥ್ರಿಲ್ಲಿಂಗ್ ಆಗಿರುತ್ತೆ. ಫ್ಯಾಂಟಸಿ, ಆಕ್ಷನ್, ಅಡ್ವೆಂಚರ್, ಥ್ರಿಲ್ಲರ್ ಸಿನಿಮಾ ಆಗಿರುವುದರಿಂದ ವಿಕ್ರಾಂತ್ ರೋಣವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡಲಾಗಿದೆ. ಕನ್ನಡ, ತೆಲುಗು, ಹಿಂದಿ, ತಮಿಳು, ಮಲಯಾಳಂ ಭಾಷೆಗಳಲ್ಲಿ ರಿಲೀಸ್ ಮಾಡಲಾಗುತ್ತಿದೆ. ಹೀಗಾಗಿ '83' ಸಿನಿಮಾದೊಂದಿಗೆ ಒಡಂಬಡಿಕೆ ಮಾಡಿಕೊಂಡು 'ವಿಕ್ರಾಂತ್ ರೋಣ' ತುಣುಕುಗಳನ್ನು ಸ್ಕ್ರೀನಿಂಗ್ ಮಾಡಲಾಗುತ್ತಿದೆ.

 'ವಿಕ್ರಾಂತ್ ರೋಣ'ದಲ್ಲಿ ಅದ್ಧೂರಿ ತಾರಾಗಣ

'ವಿಕ್ರಾಂತ್ ರೋಣ'ದಲ್ಲಿ ಅದ್ಧೂರಿ ತಾರಾಗಣ

'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಕಿಚ್ಚ ಸುದೀಪ್ ಜೊತೆಗೆ ನಿರೂಪ್ ಭಂಡಾರಿ, ನೀತಾ ಅಶೋಕ್, ರವಿಶಂಕರ್ ಗೌಡ, ಮಧುಸೂದನ್ ರಾವ್ ಕೂಡ ವಿಭಿನ್ನ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಒಂದು ಐಟಂ ಹಾಡು ಹಾಗೂ ಕೆಲವು ದೃಶ್ಯಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜನೀಶ್ ಲೋಕನಾಥ್ ಸಂಗೀತ ನಿರ್ದೇಶನ ಮಾಡಲಿದ್ದಾರೆ. 'ವಿಕ್ರಾಂತ್ ರೋಣ' 2022ರ ಫೆ.24ರಂದು ಅದ್ದೂರಿಯಾಗಿ 3ಡಿ ಹಾಗೂ 2ಡಿ ಎರಡರಲ್ಲೂ ತೆರೆಕಾಣಲಿದೆ.

More from Filmibeat

English summary
Vikrant Rona Glimpse in 3D and 2D to Premiere in Theatres with 83 Movie across India. Sudeep is presenting Ranveer Singh Deepika Padukone Starrer 83.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X