Vikrant Rona Trailer : ಗುಮ್ಮ ಗುಮ್ಮ ಗುಮ್ಮ ಬಂದ: 'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್

ಸ್ಯಾಂಡಲ್‌ವುಡ್‌ನ ಮತ್ತೊಂದು ಸಿನಿಮಾ ವರ್ಲ್ಡ್‌ ಮಾರುಕಟ್ಟೆಗೆ ಲಗ್ಗೆ ಇಡಲು ಸಜ್ಜಾಗಿದೆ. 'ಕೆಜಿಎಫ್ 2' ವಿಶ್ವದಾದ್ಯಂತ ಸದ್ದು ಮಾಡಿದ ಬಳಿಕ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಅಖಾಡಕ್ಕೆ ಇಳಿಯುತ್ತಿದೆ. ಈಗಾಗಲೇ ಕನ್ನಡ ಮತ್ತೊಂದು ಪ್ಯಾನ್ ಇಂಡಿಯಾ ಸಿನಿಮಾ ನೋಡಲು ವಿಶ್ವದಾದ್ಯಂತ ಕಿಚ್ಚನ ಅಭಿಮಾನಿಗಳು ಕಾದು ಕೂತಿದ್ದಾರೆ.

'ವಿಕ್ರಾಂತ್ ರೋಣ' ಸಿನಿಮಾದ ವಿಶೇಷತೆ ಅಂದರೆ, ಇದು 3ಡಿ ಹಾಗೂ 2ಡಿ ಎರಡರಲ್ಲೂ ಬಿಡುಗಡೆಯಾಗುತ್ತಿದೆ. ಇತ್ತೀಚೆಗೆ ಭಾರತದಲ್ಲಿ 3ಡಿಯಲ್ಲಿ ಸಿನಿಮಾ ಬಿಡುಗಡೆಯಾಗಿ ಬಹಳ ವರ್ಷಗಳೇ ಆಗಿವೆ. ಈ ಕಾರಣಕ್ಕೆ 'ವಿಕ್ರಾಂತ್ ರೋಣ' ಕೇವಲ ಸ್ಯಾಂಡಲ್‌ವುಡ್‌ನಲ್ಲಿ ಅಷ್ಟೇ ಅಲ್ಲ. ಭಾರತದಾದ್ಯಂತ ಆರು ಭಾಷೆಗಳಲ್ಲಿ ಬೇಡಿಕೆ ಹೆಚ್ಚಾಗಿದೆ.

Vikrant Rona trailer released; Sudeep, Jacqueline Fernandez starrer movie releasing on July 28

ಇಷ್ಟು ದಿನ ಕುತೂಹಲದಿಂದ ಕಾದು ಕೂತಿದ್ದ ಟ್ರೈಲರ್ ಕೊನೆಗೂ ಬಿಡುಗಡೆಯಾಗಿದೆ. ಕಿಚ್ಚ ಸುದೀಪ್ ಹಾಗೂ ಅನುಪ್ ಭಂಡಾರಿ ಕಾಂಬಿನೇಷನ್‌ನಲ್ಲಿ ಬಂದಿರುವ ಮೊದಲ ಸಿನಿಮಾದ ಟೀಸರ್ ಹೇಗಿದೆ ಎಂದು ನೋಡಲು ಸಿನಿಪ್ರಿಯರು ಕಾದು ಕೂತಿದ್ದರು. ಅದೇ ಟ್ರೈಲರ್ ಈಗ ರಿಲೀಸ್ ಆಗಿದೆ. ಕನ್ನಡ ಫ್ಯಾಂಟಸಿ ಸಿನಿಮಾ 'ವಿಕ್ರಾಂತ್ ರೋಣ' ಟ್ರೈಲರ್ ಆರು ಭಾಷೆಯಲ್ಲಿಯೂ ಬಿಡುಗಡೆಯಾಗಿದೆ. ಹಿಂದಿಯಲ್ಲಿ ಸಲ್ಮಾನ್ ಖಾನ್, ತೆಲುಗಿನಲ್ಲಿ ರಾಮ್‌ಚರಣ್, ತಮಿಳಿನಲ್ಲಿ ಧನುಶ್, ಮಲಯಾಳಂನಲ್ಲಿ ದುಲ್ಖರ್ ಸಲ್ಮಾನ್ ವಿಕ್ರಾಂತ್ ರೋಣ ಟ್ರೈಲರ್‌ ಅನ್ನು ರಿಲೀಸ್ ಮಾಡಿದ್ದಾರೆ.

ಸಲ್ಮಾನ್ ಖಾನ್‌ರಿಂದ ಟ್ರೈಲರ್ ರಿಲೀಸ್

ಮೋಸ್ಟ್ ಎಕ್ಸ್‌ಪೆಕ್ಟೆಡ್ ಸಿನಿಮಾ 'ವಿಕ್ರಾಂತ್ ರೋಣ' ಟ್ರೈಲರ್ ರಿಲೀಸ್ ಆಗಿದೆ. ಈಗಾಗಲೇ ಬಿಡುಗಡೆಯಾಗಿರುವ ಟ್ರೈಲರ್ ಸಿಕ್ಕಾಪಟ್ಟೆ ಕಿಕ್ ಕೊಡುತ್ತಿದೆ. 'ವಿಕ್ರಾಂತ್ ರೋಣ' ಸಿನಿಮಾದ ಹಿಂದಿ ಟ್ರೈಲರ್ ಅನ್ನು ಸಲ್ಮಾನ್ ಖಾನ್ ರಿಲೀಸ್ ಮಾಡಿದ್ದಾರೆ. " ಬ್ರದರ್ ಸುದೀಪ್ ಇಡೀ ಪ್ರಪಂಚ ವಿಕ್ರಾಂತ್ ರೋಣ ಬಗ್ಗೆ ಹೆಮ್ಮೆ ಪಡುತ್ತದೆ. ವಿಕ್ರಾಂತ್ ರೋಣ ಟ್ರೈಲರ್ ನಿಜವಾಗಲೂ ಅತ್ಯದ್ಭುತವಾಗಿದೆ." ಎಂದು ಸಲ್ಮಾನ್ ಖಾನ್ ಬರೆದುಕೊಂಡಿದ್ದಾರೆ.

ಆಕರ್ಷಕ ಟ್ರೈಲರ್ ಎಂದ ರಾಮ್ ಚರಣ್

ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ 'ವಿಕ್ರಾಂತ್ ರೋಣ' ತೆಲುಗು ಟ್ರೈಲರ್ ಅನ್ನು ಮೆಗಾ ಪವರ್‌ಸ್ಟಾರ್ ರಾಮ್‌ ಚರಣ್ ರಿಲೀಸ್ ಮಾಡಿದ್ದಾರೆ. ಟ್ವಿಟರ್‌ನಲ್ಲಿ ರಾಮ್‌ ಚರಣ್ ತೆಲುಗು ಟ್ರೈಲರ್ ಅನ್ನು ರಿಲೀಸ್ ಮಾಡಿದ್ದು, " ವಿಕ್ರಾಂತ್ ರೋಣ ಟ್ರೈಟರ್ ಅತ್ಯಾಕರ್ಷಕವಾಗಿದೆ. ಕಿಚ್ಚ ಸುದೀಪ್ ಅವರಿಗೆ ಶುಭಾಶಯಗಳು" ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.

ಕಿಚ್ಚನಿಗೆ ಧನುಷ್ ಹೇಳಿದ್ದೇನು?

ಇನ್ನು ತಮಿಳಿನಲ್ಲೂ ಕಿಚ್ಚ ಸುದೀಪ್ ಅಭಿನಯಿಸಿದ್ದಾರೆ. ಹೀಗಾಗಿ ಸುದೀಪ್ ತಮಿಳಿಗರಿಗೂ ಪರಿಚಯವಿದೆ. ಈ ಕಾರಣಕ್ಕೆ ತಮಿಳಿನಲ್ಲಿ ವಿಕ್ರಾಂತ್ ರೋಣವನ್ನು ನಿರೀಕ್ಷೆ ಮಾಡಲಾಗುತ್ತಿದೆ. ತಮಿಳಿನ ಟ್ರೈಲರ್‌ ಅನ್ನು ಧನುಷ್ ರಿಲೀಸ್ ಮಾಡಿರುವುದು ಚಿತ್ರತಂಡಕ್ಕೆ ಮತ್ತಷ್ಟು ಬಲ ಬಂದಂತಾಗಿದೆ. " ವಿಕ್ರಾಂತ್ ರೋಣ ಟ್ರೈಲರ್ ವಿಜ್ಯೂವಲ್ ಟ್ರೀಟ್. ಕುತೂಹಲವನ್ನು ಹೆಚ್ಚಿಸಿದ್ದಕ್ಕೆ ಇಡೀ ತಂಡಕ್ಕೆ ಅಭಿನಂದನೆಗಳು. ನೀವು ಅದ್ಭುತವಾಗಿ ಕಾಣಿತ್ತಿದ್ದೀರಿ." ಎಂದು ಧನುಷ್ ಟ್ವೀಟ್ ಮಾಡಿದ್ದಾರೆ.

ಟ್ರೈಲರ್ ನೋಡಿ ದುಲ್ಖರ್ ಫಿದಾ

ಮಾಲಿವುಡ್‌ ಸ್ಟಾರ್ ನಟ ದುಲ್ಖರ್ ಸಲ್ಮಾನ್ ಮಲಯಾಳಂ ಟ್ರೈಲರ್ ಅನ್ನು ಬಿಡುಗಡೆ ಮಾಡಿದ್ದಾರೆ. ಟ್ರೈಲರ್‌ ನೋಡಿದ ಬಳಿಕ ದುಲ್ಖರ್ ಸಲ್ಮಾನ್ ಪ್ರತಿಕ್ರಿಯೆ ಹೀಗಿತ್ತು. " ವಾವ್.. ಜಸ್ಟ್ ವಾವ್.. ಟ್ರೈಲರ್ ತಲೆ ಕೆಡಿಸುವಂತಿದೆ ಕಿಚ್ಚ ಸುದೀಪ್ ಸರ್. ವಿಕ್ರಾಂತ್ ರೋಣ ಟ್ರೈಲರ್ ನಿಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದುಕೊಂಡು ಹೋಗುತ್ತದೆ." ಎಂದು ದುಲ್ಖರ್ ಸಲ್ಮಾನ್ ಟ್ವೀಟ್ ಮಾಡಿದ್ದಾರೆ.

More from Filmibeat

English summary
Vikrant Rona trailer released in Kannada, Tamil, Malayalam, Hindi and Telugu Languages. Kichcha Sudeep, Jacqueline Fernandez starrer Vikrant Rona movie releasing on July 28. Know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X